ಈ ದಿನ ಸಂಪಾದಕೀಯ | ಸೆಣಸಾಟ ಸೇನೆಯದು, ಮೆರೆದಾಟ ಮೋದಿಯದು!

Date:

'ಸಿಂಧೂರ'ದಲ್ಲೂ ರಾಜಕಾರಣ ಹುಡುಕುವ, ಸೇನಾ ಕಾರ್ಯಾಚರಣೆಯನ್ನೂ ರಾಜಕೀಯಗೊಳಿಸುವ, ಮತಗಳನ್ನಾಗಿ ಪರಿವರ್ತಿಸಲು ತವಕಿಸುವ, ಅಧಿಕಾರದ ಹಪಾಹಪಿ ಎದ್ದು ಕಾಣುತ್ತಿದೆ.

ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಮೇ 26 ಮತ್ತು 27ರಂದು ತವರು ರಾಜ್ಯ ಗುಜರಾತ್‌ನ ನಾಲ್ಕು ನಗರಗಳಲ್ಲಿ- ವಡೋದರ, ಭುಜ್, ಅಹಮದಾಬಾದ್ ಮತ್ತು ಗಾಂಧಿನಗರಗಳಲ್ಲಿ ಭರ್ಜರಿ ರೋಡ್‌ ಶೋ ನಡೆಸಿದ್ದಾರೆ.

ಗುಜರಾತ್ ರೋಡ್ ಶೋಗಳನ್ನು ಪಹಲ್ಗಾಮ್‌ ಭಯೋತ್ಪಾದಕ ದಾಳಿಗೆ ಪ್ರತೀಕಾರವಾಗಿ ನಡೆದ ‘ಆಪರೇಷನ್‌ ಸಿಂಧೂರ’ ಸೇನಾ ಕಾರ್ಯಾಚರಣೆ ಯಶಸ್ಸಿನ ಹಿನ್ನೆಲೆಯಲ್ಲಿ ಆಯೋಜಿಸಲಾಗಿದೆ ಎಂದು ಭಾರತೀಯ ಜನತಾ ಪಕ್ಷ ಹೇಳಿಕೊಂಡಿದೆ.

ಸಾಮಾನ್ಯವಾಗಿ ರೋಡ್ ಶೋಗಳನ್ನು ರಾಜಕೀಯ ಪ್ರಚಾರಕ್ಕಾಗಿ, ಚುನಾವಣೆಯಲ್ಲಿ ಮತ ಗಳಿಕೆಗಾಗಿ, ಸಾರ್ವಜನಿಕ ಕಾರ್ಯಕ್ರಮಗಳ ಭಾಗವಾಗಿ ಆಯೋಜಿಸಲಾಗುತ್ತದೆ. ಈ ರೋಡ್ ಶೋಗಳು ಜನರೊಂದಿಗೆ ಸಂಪರ್ಕ ಸಾಧಿಸಲು, ಸರ್ಕಾರದ ಸಾಧನೆಗಳನ್ನು ತಿಳಿಸಲು ಮತ್ತು ರಾಜಕೀಯ ಬೆಂಬಲವನ್ನು ಗಳಿಸಲು ಒಂದು ವೇದಿಕೆಯಾಗಿ ಕೂಡ ಬಳಕೆಯಾಗುತ್ತಿರುವುದನ್ನು ದೇಶದ ಜನ ಕಂಡಿದ್ದಾರೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಇದೇನು ಹೊಸ ವಿದ್ಯಮಾನವಲ್ಲ, ಮೋದಿಯವರೇ ಮೊದಲಿಗರೂ ಅಲ್ಲ. ಪ್ರಶ್ನೆ ಅದಲ್ಲ. ಪಹಲ್ಗಾಮ್ ಭಯೋತ್ಪಾದಕ ದಾಳಿಗೆ ಪ್ರತೀಕಾರವಾಗಿ ನಡೆದ ‘ಆಪರೇಷನ್ ಸಿಂಧೂರ’ ಸೇನಾ ಕಾರ್ಯಾಚರಣೆ ಯಶಸ್ಸಿನ ಹಿನ್ನೆಲೆಯಲ್ಲಿ ಆಯೋಜಿಸಲಾಗಿದೆ ಎನ್ನುವುದರ ಕುರಿತು.

ಇದನ್ನು ಓದಿದ್ದೀರಾ?: ಇಸ್ರೇಲಿ ರಾಜದೂತೆಯ ಭೇಟಿಯಾಗಿ ಸಮ್ಮಾನಿಸಿದ ಡಿಕೆಶಿ ವರ್ತನೆ ಅನುಚಿತ ಅಕ್ಷಮ್ಯ

‘ಆಪರೇಷನ್ ಸಿಂಧೂರ’ ಎನ್ನುವುದು ಸೇನಾ ಕಾರ್ಯಾಚರಣೆ. ಭಾರತೀಯ ಸೇನೆ ಅದನ್ನು ನಿರ್ವಹಿಸಿದೆ. ಅಂದರೆ ಅದರ ಯಶಸ್ಸು ಸಲ್ಲಬೇಕಾದ್ದು ಸೇನಾ ಯೋಧರಿಗೆ. ಆದರೆ, ಗುಜರಾತ್‌ನ ರೋಡ್ ಶೋಗಳಲ್ಲಿ ಕಂಡಿದ್ದೂ ಬೇರೆ, ಆಗಿದ್ದೂ ಬೇರೆ.

ಪ್ರಧಾನಮಂತ್ರಿ ಮೋದಿಯವರು ಸಾಗುವ ರಸ್ತೆಯುದ್ದಕ್ಕೂ ನೂರಾರು ಅಡಿ ಎತ್ತರದ ಭಾರೀ ಕಟೌಟ್‌ಗಳು, ಫ್ಲೆಕ್ಸ್‌ಗಳಲ್ಲಿ ಸೇನಾ ಯೋಧರ ಡ್ರೆಸ್‌ನಲ್ಲಿ ಮೋದಿಯವರ ಚಿತ್ರಗಳು ರಾರಾಜಿಸುತ್ತಿದ್ದವು. ಮೋದಿಯವರು ಸಾಗುವ ರಸ್ತೆಯುದ್ದಕ್ಕೂ ಭಾರೀ ಭದ್ರತೆಗಾಗಿ ಸಾವಿರಾರು ಪೊಲೀಸರನ್ನು, ಸೇನಾ ತುಕಡಿಗಳನ್ನು ನಿಯೋಜಿಸಲಾಗಿತ್ತು. ಜನರಿಗೂ ಪ್ರಧಾನಿಗೂ ಅಂತರ ಕಾಪಾಡಲು ಬ್ಯಾರಿಕೇಡ್‌ಗಳನ್ನು ಹಾಕಲಾಗಿತ್ತು. ತೆರೆದ ವಾಹನದ ಮೇಲೆ ನಿಂತ ಮೋದಿಯವರು ಜನಸಮೂಹದತ್ತ ಕೈ ಬೀಸುತ್ತ ಹೋಗುತ್ತಿದ್ದರೆ, ರಸ್ತೆಯ ಅಕ್ಕಪಕ್ಕ ನಿಂತ ಜನ ಅವರ ಮೇಲೆ ಹೂವಿನ ಮಳೆಗರೆಯುತ್ತಿದ್ದರು. ಮೋದಿಯವರೇ ಯುದ್ಧಭೂಮಿಗೆ ಹೋಗಿ ಗೆದ್ದುಬಂದವರೆಂಬಂತೆ ಜೈಕಾರ ಕೂಗುತ್ತಿದ್ದರು.

ಇದು ಸೇನೆಗೆ ಮತ್ತು ಯೋಧರಿಗೆ ಮಾಡುವ ಅವಮಾನವಲ್ಲವೇ?

ಪ್ರಧಾನಮಂತ್ರಿ ಮೋದಿಯವರ ಸೂಚನೆಯ ಮೇರೆಗೆ ಪಾಕಿಸ್ತಾನದ ಉಗ್ರ ನೆಲೆಗಳ ಮೇಲೆ ದಾಳಿ ನಡೆಸಿದ್ದರೂ, ಅದು ರಕ್ಷಣಾ ಸಚಿವರು, ಸಚಿವಾಲಯ ಮತ್ತು ಸೇನೆಗಳಿಗೆ ಸೇರಿದ ಸಂಗತಿ. ‘ಆಪರೇಷನ್ ಸಿಂಧೂರ’ ಸೇನಾ ಕಾರ್ಯಾಚರಣೆ ಯಶಸ್ವಿಯಾಗಿದೆ ಎಂದು ಘೋಷಿಸಬೇಕಾದವರು, ರಕ್ಷಣಾ ಸಚಿವರು ಮತ್ತು ಸೇನಾ ಮುಖ್ಯಸ್ಥರು. ಭಾರತ-ಪಾಕಿಸ್ತಾನಗಳ ನಡುವಿನ ಯುದ್ಧ ಎಂದಾಗ, ದಾಳಿ ಮತ್ತು ಪ್ರತಿದಾಳಿ ಕೂಡ ಸಹಜ. ಹಾಗೆಯೇ ನಮ್ಮ ಯೋಧರು ಹುತಾತ್ಮರಾಗುವುದೂ ಉಂಟು.

ಪ್ರಧಾನಿ ಮೋದಿಯವರು ಸೇನೆ ಮತ್ತು ಯೋಧರನ್ನು ಗೌರವದಿಂದ ಕಾಣುತ್ತಾರೆಂದರೆ- ಅವರು ಮೊದಲು ಮಾಡಬೇಕಾದ ಕೆಲಸವೆಂದರೆ- ‘ಆಪರೇಷನ್ ಸಿಂಧೂರ’ ಸೇನಾ ಕಾರ್ಯಾಚರಣೆಯಲ್ಲಿ ಹುತಾತ್ಮರಾದ ಭಾರತೀಯ ಯೋಧರ ಕುಟುಂಬಗಳನ್ನು ಕಂಡು ಸಾಂತ್ವನ ಹೇಳುವುದು. ದೇಶಕ್ಕಾಗಿ ಪ್ರಾಣ ತೆತ್ತ ಯೋಧರ ಕುಟುಂಬಗಳ ಭವಿಷ್ಯದ ಬದುಕಿಗೆ ಭದ್ರತೆಯೊದಗಿಸುವುದು.

ಇದಕ್ಕೆ ವ್ಯತಿರಿಕ್ತವಾಗಿ, ಗುಜರಾತ್‌ನ ವಡೋದರದಲ್ಲಿ ಕರ್ನಲ್ ಸೋಫಿಯಾ ಖುರೇಷಿ ಅವರ ತಂದೆ, ತಾಯಿ, ಸಹೋದರ ಮತ್ತು ಸಹೋದರಿಯನ್ನು ರಸ್ತೆಯ ಪಕ್ಕದಲ್ಲಿ ನಿಲ್ಲಿಸಲಾಗಿತ್ತು. ಅವರ ಕೈಗೆ ಹೂ ಪಕಳೆಗಳು ತುಂಬಿದ ತಟ್ಟೆಗಳನ್ನು ಕೊಡಲಾಗಿತ್ತು. ಮೋದಿಯವರು ಸಾಗುತ್ತಿದ್ದರೆ, ಅವರ ಮೇಲೆ ಹೂವಿನ ಮಳೆಗರೆಯಲು ಮೊದಲೇ ಹೇಳಲಾಗಿತ್ತು.

ಸೇನಾ ಅಧಿಕಾರಿಯ ಕುಟುಂಬವನ್ನು ಕರೆದು, ‘ಇಲ್ಲಿ ನಿಂತು, ಹೂವು ಸುರಿಸಿ’ ಎಂದು ಹೇಳಿದ್ದು ಯಾರು? ಹಾಗೆ ಮಾಡಿಸಿದ್ದು ಎಷ್ಟು ಸರಿ? ಅಷ್ಟಕ್ಕೂ ಆ ಪತ್ರಿಕಾಗೋಷ್ಠಿಯಲ್ಲಿ ಇದ್ದ ಇನ್ನೆರಡು ಸೇನಾಧಿಕಾರಿಗಳನ್ನು ಬಿಟ್ಟು, ಮುಸ್ಲಿಂ ಕುಟುಂಬವನ್ನೇ ಯಾಕೆ ಇಲ್ಲಿ ನಿಲ್ಲಿಸಲಾಗಿತ್ತು? ಇದರ ಹಿಂದಿನ ಷಡ್ಯಂತ್ರವೇನು? ಇದು ದೇಶದ ಜನತೆಗೆ ಯಾವ ಸಂದೇಶವನ್ನು ರವಾನಿಸುತ್ತದೆ?

‘ಆಪರೇಷನ್‌ ಸಿಂಧೂರ’ ಸೇನಾ ಕಾರ್ಯಾಚರಣೆ ಯಶಸ್ವಿಗೊಂಡಿದೆ ಎನ್ನುವ ಮೋದಿಯವರು, ಈಗ ಮಾತನಾಡುವ ಶೈಲಿಯನ್ನೂ ಬದಲಿಸಿಕೊಂಡಿದ್ದಾರೆ. ‘ಶೋಲೆ’ ಸಿನಿಮಾದ ಖಳನಾಯಕ ಗಬ್ಬರ್ ಸಿಂಗ್ ಸಂಭಾಷಣೆಯನ್ನು ಚಾಲ್ತಿಗೆ ತಂದಿದ್ದಾರೆ. ‘ರೋಟಿ ಖಾವೋ, ನಹೀಂ ತೋ ಗೋಲಿ ಖಾವೋ’ ಎಂದಿದ್ದಾರೆ. ಪಾಕಿಸ್ತಾನ ಸೇನಾ ದಾಳಿಗೆ ಪೂಂಚ್‌ನಲ್ಲಿ ನಮ್ಮ 16 ಸೇನಾ ಯೋಧರು ಹುತಾತ್ಮರಾದರಲ್ಲ, ಅವರಿಗೂ ಇದೇ ಭಾಷೆ ಬಳಸುತ್ತಾರ? ಇದು ಪ್ರಧಾನಿ ಹುದ್ದೆಗೆ ಶೋಭೆ ತರುತ್ತದೆಯೇ?

ಒಟ್ಟಿನಲ್ಲಿ, ‘ಸಿಂಧೂರ’ದಲ್ಲೂ ರಾಜಕಾರಣ ಹುಡುಕುವ, ಸೇನಾ ಕಾರ್ಯಾಚರಣೆಯನ್ನೂ ರಾಜಕೀಯಗೊಳಿಸುವ, ಮತಗಳನ್ನಾಗಿ ಪರಿವರ್ತಿಸಲು ತವಕಿಸುವ, ಅಧಿಕಾರದ ಹಪಾಹಪಿ ಎದ್ದು ಕಾಣುತ್ತಿದೆ.

ಇದನ್ನು ಓದಿದ್ದೀರಾ?: ಮೋದಿ ಆಡಳಿತಕ್ಕೆ 11 ವರ್ಷ; ದೇಶ ಉದ್ಧಾರವಾಯಿತೇ?

ಆದರೆ, ಕಳೆದ ಎರಡು ವರ್ಷಗಳಿಂದ ಬೆಂಕಿಯಲ್ಲಿ ಬೇಯುತ್ತಿರುವ ಮಣಿಪುರದಲ್ಲಿ ಮೋದಿಯವರು ರೋಡ್ ಶೋ ಮಾಡುವುದಿಲ್ಲ. 60 ಸಾವಿರ ಜನ ಅನಾಥರಾದರೂ, 400 ಚರ್ಚುಗಳು ಬೆಂಕಿಗೆ ಆಹುತಿಯಾದರೂ, 300ಕ್ಕೂ ಹೆಚ್ಚು ಜನರ ಹತ್ಯೆಯಾದರೂ ಮೋದಿಯವರು ಮಾತನಾಡುವುದಿಲ್ಲ. ವಿರೋಧ ಪಕ್ಷಗಳ ಪ್ರಶ್ನೆಗೆ ಉತ್ತರಿಸುವುದಿಲ್ಲ. ಸಂಸತ್ ಕರೆದು ಗಂಭೀರ ಚರ್ಚೆಗೆ ಅವಕಾಶ ಮಾಡಿಕೊಡುವುದೂ ಇಲ್ಲ.

ಇದು ಭಾರತ, ವಿಶ್ವಗುರುವಿನತ್ತ ಸಾಗುತ್ತಿರುವ ವಿಕಸಿತ ಭಾರತ, ಆರ್ಥಿಕತೆಯಲ್ಲಿ ಜಪಾನನ್ನು ಹಿಂದಿಕ್ಕಿ ನಾಲ್ಕನೇ ಸ್ಥಾನಕ್ಕೇರಿದ ಮೋದಿ ಭಾರತ!

WhatsApp Image 2025 11 17 at 3.23.18 PM
ಈ ದಿನ ಸಂಪಾದಕೀಯ
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಈ ದಿನ ಸಂಪಾದಕೀಯ|ಗುಜರಾತಿನ ದಲಿತರಿಗೆ ಗಗನ ಕುಸುಮವಾಗೇ ಉಳಿದ ನ್ಯಾಯ

ಗುಜರಾತಿನ ಜನಸಂಖ್ಯೆಯಲ್ಲಿ ದಲಿತರ ಪ್ರಮಾಣ ಕಡಿಮೆ. ಶೇ.6.34 ಮಾತ್ರ. ಇಲ್ಲಿ ದಲಿತರಿಗಿಂತ...

ಈ ದಿನ ಸಂಪಾದಕೀಯ | ಮೋದಿಯ ಸಣ್ಣತನವನ್ನು ದೊಡ್ಡತನದಿಂದ ಸೋಲಿಸಿದ ಇರಾನ್‌!

ಇಂಧನ ಭದ್ರತೆಯನ್ನು ಕಾಪಾಡಿಕೊಳ್ಳಲು ಭಾರತದ ಹಡಗುಗಳು ಹಾರ್ಮುಜ್ ಜಲಸಂಧಿಯಿಂದ ಹಾದುಹೋಗಲು ಅವಕಾಶ...

ಈ ದಿನ ಸಂಪಾದಕೀಯ | SIR ಹೆಸರಲ್ಲಿ ಮಹಿಳೆಯರ ಮತದಾನದ ಹಕ್ಕಿನ ಹರಣ ಅಕ್ಷಮ್ಯ

ಕರ್ನಾಟಕದಲ್ಲಿ ಮಹಿಳೆಯರ ಹಕ್ಕುಗಳನ್ನು ರಕ್ಷಿಸುವ ಕೆಲಸ ಆಗಬೇಕಿದೆ. ಎಸ್‌ಐಆರ್‌ ನಡೆಯುವ ಸಮಯದಲ್ಲಿ...

ಈ ದಿನ ಸಂಪಾದಕೀಯ | ಕಾಂಗ್ರೆಸ್ಸಿಗರಿಗೆ ಇಂದಿರಾ ಬೇಕು, ಬಡವರ ಕ್ಯಾಂಟೀನ್ ಬೇಡ

ಶಾಸಕರು, ಸಚಿವರು, ಅಧಿಕಾರಿಗಳು ವಾರಕ್ಕೊಂದು ಸಲವಾದರೂ ಇಂದಿರಾ ಕ್ಯಾಂಟೀನ್‌ನಲ್ಲಿ ಊಟ-ತಿಂಡಿ ಮಾಡಬೇಕಿದೆ....