ಜುಲೈ 22, 1923ರಂದು ಪಂಜಾಬಿನ ಮಧ್ಯಮವರ್ಗದ ಕುಟುಂಬದಲ್ಲಿ ಜನಿಸಿದರು

Wikipedia

ಹತ್ತನೇ ತರಗತಿಯವರೆಗೆ ಓದಿ, ಸಹಾಯಕ ಸರ್ವೇಯರ್ ಕೆಲಸಕ್ಕೆ ಸೇರಿದರು

ಮುಂಬೈಗೆ ತೆರಳಿ ಚಿತ್ರನಟನಾಗುವ ಕನಸು ಕಂಡಿದ್ದರು

ಮುಖೇಶರ ಗಾಯನ ಗಮನಿಸಿದ  ಸುಪ್ರಸಿದ್ಧ ಗಾಯಕ ಕೆ.ಎಲ್ ಸೈಗಲ್, ಚಿತ್ರರಂಗಕ್ಕೆ ಪರಿಚಯಿಸಿದರು

wikipedia

1941ರಲ್ಲಿ ಬಂದ ‘ನಿರ್ದೋಷ್’ ಚಿತ್ರದಲ್ಲಿ ಗಾಯಕ-ನಾಯಕ ಪಾತ್ರ ನಿರ್ವಹಿಸುವ ಮೂಲಕ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದರು

1946ರಲ್ಲಿ ಮುಖೇಶ್, ಶ್ರೀಮಂತ ಕುಟುಂಬದ ಸರಳಾ ತ್ರಿವೇದಿಯವರನ್ನು ಪ್ರೀತಿಸಿ, ಮನೆಯವರ ವಿರೋಧದ ನಡುವೆಯೂ ಸರಳವಾಗಿ ಮದುವೆಯಾದರು

ರಾಜ್ ಕಪೂರ್ ಎಂದರೆ ಮುಖೇಶ್ ಎಂಬಷ್ಟರಮಟ್ಟಿಗೆ, ಅವರ ನಟನೆ-ಇವರ ಗಾಯನ ಜನಪ್ರಿಯ ಜೋಡಿಯಾಗಿ ಮೆರೆಯಿತು

ಮನೋಜ್ ಕುಮಾರ್ಗೆ ಹೆಚ್ಚು ಹಾಡಿದರಲ್ಲದೆ,  ಕಲ್ಯಾಣ್ಜೀ-ಆನಂದ್ಜೀಯವರ ಸಂಗೀತ ನಿರ್ದೇಶನದಲ್ಲಿ ಹೆಚ್ಚಿನ ಅವಕಾಶವನ್ನು ಗಿಟ್ಟಿಸಿಕೊಂಡಿದ್ದರು

ಸುಮಾರು 1,300 ಹಾಡುಗಳ ಬಹಳ ದೊಡ್ಡ ಸ್ವರಸಂಪತ್ತನ್ನು ಕೇಳುಗರಿಗಾಗಿ ಬಿಟ್ಟುಹೋದರು

ಮುಖೇಶರ ದರ್ದ ಭರೇ ಗೀತ್ಗಳನ್ನು ಆಲಿಸುವ ಕೋಟ್ಯಂತರ ಅಭಿಮಾನಿಗಳಿದ್ದಾರೆ. ಆ ಮೂಲಕ ಅವರು ನಮ್ಮೊಂದಿಗಿದ್ದಾರೆ

ಈ ರೀತಿಯ ಇನ್ನಷ್ಟು ಸುದ್ದಿಗಳಿಗಾಗಿ ಈದಿನ.ಕಾಮ್‌ ಫಾಲೋ ಮಾಡಿ