ಭಾರತದಲ್ಲಿ ನಿರುದ್ಯೋಗ ಸಮಸ್ಯೆ- ಒಂದು ಅವಲೋಕನ

Date:

ಟಿ ಎಸ್ ವೇಣುಗೋಪಾಲ್

ಒಂದು ದೇಶದ ನಿರುದ್ಯೋಗದ ಸ್ಥಿತಿ ಆ ದೇಶದ ಆರ್ಥಿಕತೆಯ ನೈಜ ಸ್ಥಿತಿಗೆ ಕನ್ನಡಿ ಇದ್ದ ಹಾಗೆ. ಯಾವುದೇ ದೇಶದಲ್ಲಿ ನಿರುದ್ಯೋಗ, ಅಸಮಾನತೆ, ಬಡತನ, ಹಸಿವು ವ್ಯಾಪಕವಾಗಿದ್ದರೆ ಅಲ್ಲೇನೋ ಮೂಲಭೂತ ಸಮಸ್ಯೆ ಇದೆ ಅಂತಲೇ ಅರ್ಥ. ಅವೆಲ್ಲಾ ಹೆಚ್ಚುತ್ತಾ ಹೋಗುತ್ತಿದ್ದರಂತೂ ಆ ದೇಶ ಗಂಡಾಂತರದಲ್ಲಿ ಎನ್ನುವುದು ಸ್ಪಷ್ಟ. ಇದನ್ನು ಮನಗಂಡೇ ಪ್ರತಿಯೊಬ್ಬ ಆರ್ಥಿಕತಜ್ಞ, ಚಿಂತಕ, ನಾಯಕನಿಗೂ ಅದು ಪ್ರಮುಖ ಕಾಳಜಿಯಾಗಿರುತ್ತದೆ. ಪ್ರತಿಯೊಂದು ದೇಶವೂ ತನ್ನ ದೇಶದಲ್ಲಿ ಸ್ಥಿತಿ ಹೇಗಿದೆ ಎಂದು ತಿಳಿದುಕೊಳ್ಳಲು ಉತ್ಸುಕವಾಗಿರುತ್ತದೆ. ನಿರಂತರವಾಗಿ ಸಮೀಕ್ಷೆಗಳನ್ನು, ಅಧ್ಯಯನಗಳನ್ನು ನಡೆಸುತ್ತಿರುತ್ತವೆ. ಅದಕ್ಕೆ ತಕ್ಕಂತೆ ನೀತಿ ನಿಯಮಗಳನ್ನು ರೂಪಿಸುತ್ತಿರುತ್ತವೆ ಅಥವಾ ರೂಪಿಸಬೇಕು.


ಭಾರತದಲ್ಲಿ ಕೂಡ ನಿರುದ್ಯೋಗ ಹಾಗೂ ಉದ್ಯೋಗದ ಸ್ಥಿತಿಗತಿಯನ್ನು ಅಂದಾಜು ಮಾಡಲು ರಾಷ್ಟ್ರೀಯ ಸ್ಯಾಂಪಲ್ ಸಮೀಕ್ಷೆ ಕಛೇರಿಯು (ಎನ್‌ಎಸ್‌ಎಸ್‌ಒ) ಸಮೀಕ್ಷೆ ನಡೆಸುತ್ತದೆ. ಹೀಗೆ ನಡೆಸುವ ಸಮೀಕ್ಷೆಗಳಿಗೆ ಒಂದು ಬಲವಾದ ಪರಿಕಲ್ಪನಾತ್ಮಕ ಚೌಕಟ್ಟು ಇರಬೇಕು. ಅಂತಹ ಒಂದು ಚೌಕಟ್ಟನ್ನು ರೂಪಿಸುವ ಸಲುವಾಗಿ 1970ರಲ್ಲಿ ಯೋಜನಾ ಆಯೋಗವು “ನಿರುದ್ಯೋಗದ ಅಂದಾಜಿಗಾಗಿ ಪರಿಣ ತರ ಸಮಿತಿ”ಯನ್ನು ನೇಮಿಸಿತ್ತು. ಅದು ‘ದಂಟವಾಲ ಸಮಿತಿ’ ಎಂದೇ ಪ್ರಖ್ಯಾತವಾಗಿದೆ. ಆ ಸಮಿತಿಯು ಸೂಚಿಸಿದ ಪರಿಕಲ್ಪನೆಗಳು ಹಾಗೂ ವ್ಯಾಖ್ಯೆಗಳನ್ನು ಆಧರಿಸಿಯೇ ಮೊದಲ ಪಂಚವಾರ್ಷಿಕ ಉದ್ಯೋಗ ಹಾಗೂ ನಿರುದ್ಯೋಗ ಸಮೀಕ್ಷೆಯನ್ನು (1972-73) ನಡೆಸಲಾಯಿತು. ಅಲ್ಲಿಂದೀಚೆಗೆ ಅಂತಹ ಎಂಟು ಸಮೀಕ್ಷೆಗಳು ನಡೆದಿವೆ. ಈಗ ಸರ್ಕಾರ ಪಂಚವಾರ್ಷಿಕ ಸಮೀಕ್ಷಾ ಕ್ರಮವನ್ನು ಕೈಬಿಟ್ಟಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...


ಉದ್ಯೋಗಕ್ಕೆ ಸಂಬಂಧಿಸಿದಂತೆ ಐದು ವರ್ಷಕ್ಕೊಮ್ಮೆ ಮಾಹಿತಿಯನ್ನು ಸಂಗ್ರಹಿಸಿದರೆ ಸಾಲದು ವರ್ಷಕ್ಕೊಮ್ಮೆ, ಮೂರು ತಿಂಗಳಿಗೊಮ್ಮೆ ಸಂಗ್ರಹಿಸುವುದು ಸೂಕ್ತ ಅಂತ ರಾಷ್ಟ್ರೀಯ ಸಾಂಖ್ಯಿಕ ಆಯೋಗವು (ನಾಷನಲ್ ಸ್ಟಾಟಿಸ್ಟಿಕಲ್ ಕಮಿಷನ್) ಅಭಿಪ್ರಾಯಪಟ್ಟಿತು. ಹಾಗಾಗಿ ಉದ್ಯೋಗದ ಸ್ಥಿತಿಯನ್ನು ಕುರಿತು ನಿಯತಕಾಲಿಕ ಸಮೀಕ್ಷೆಯನ್ನು (ಪಿಎಲ್‌ಎಫ್‌ಎಸ್- ಪಿರಿಯಾಡಿಕ್ ಲೇಬರ್ ಫೋರ್ಸ್ ಸರ್ವೆ) ನಡೆಸಲಾಗುತ್ತಿದೆ. ಈಗ ವಾರ್ಷಿಕವಾಗಿ, ಮೂರು ತಿಂಗಳಿಗೊಮ್ಮೆ ಅಷ್ಟೇ ಅಲ್ಲ ಸಾಪ್ತಾಹಿಕವಾಗಿಯೂ ಮಾಹಿತಿಯನ್ನು ಸಂಗ್ರಹಿಸಲಾಗುತ್ತಿದೆ.


ನಿರಂತರತೆಯನ್ನು ಕಾಪಾಡಿಕೊಳ್ಳಲು, ಪಂಚವರ್ಷೀಯ ಸಮೀಕ್ಷೆಯಲ್ಲಿ ಬಳಸಿದ ಸಾಂಖ್ಯಿಕ ಕ್ರಮವನ್ನೇ ಇಲ್ಲೂ ಬಳಸಲಾಗಿದೆ. ಅಲ್ಲಿ ಬಳಸಿರುವ ಸ್ಯಾಂಪಲ್ ಗಾತ್ರ, ಅವುಗಳ ಆಯ್ಕೆಯ ಕ್ರಮ, ಪ್ರಶ್ನಾವಳಿಗಳು, ಜನಸಂಖ್ಯೆಯನ್ನು ವಿಂಗಡಿಸಿಕೊಂಡಿರುವ ಕ್ರಮವನ್ನೇ ಇಲ್ಲೂ ಬಳಸಲಾಗಿದೆ. ಹಿಂದಿನ ಅಧ್ಯಯನಗಳೊಂದಿಗಿನ ಹೋಲಿಕೆಗೆ ಇದು ಅನಿವಾರ್ಯ. ಈ ಎಚ್ಚರಿಕೆಯನ್ನು ಈ ಸಮೀಕ್ಷೆಯಲ್ಲಿ ತೆಗೆದುಕೊಳ್ಳಲಾಗಿದೆ. ಜೊತೆಗೆ ಇಲ್ಲಿ ಬಳಸಿರುವ ಕ್ರಮ ಜಗತ್ತಿನಾದ್ಯಂತ ಪರಿಣತರು ಮಾನ್ಯ ಮಾಡಿರುವ ಕ್ರಮವೇ. ಹಾಗಾಗಿ ಇಲ್ಲಿ ಬಳಸಿರುವ ವಿಧಾನದ ಬಗ್ಗೆಯಾಗಲಿ, ಇದರ ವಿಶ್ವಾಸಾರ್ಹತೆಯ ಬಗ್ಗೆಯಾಗಲಿ ಅನುಮಾನ ಪಡುವುದಕ್ಕಾಗುವುದಿಲ್ಲ.

ಉದ್ಯೋಗದ ವ್ಯಾಖ್ಯೆ

ಎನ್‌ಎಸ್‌ಎಸ್‌ಒ ತನ್ನ ಸಮೀಕ್ಷೆಗೆ ಹಿಂದಿನ ಒಂದು ನಿರ್ದಿಷ್ಟ ಆವಧಿಯಲ್ಲಿ ಜನರು ಎಷ್ಟು ದಿನ ಉದ್ಯೋಗದಲ್ಲಿದ್ದರು ಅನ್ನುವುದನ್ನು ಆಧರಿಸಿ ಅವರ ಉದ್ಯೋಗದ ಸ್ಥಿತಿಯನ್ನು ಅಂದರೆ, ಅವರು ಉದ್ಯೋಗಿಯೋ ಅಲ್ಲವೋ ಎಂದು ನಿರ್ಧರಿಸುತ್ತಿದೆ. ಸಮೀಕ್ಷೆಗೆ ಹಿಂದಿನ365 ದಿನಗಳಲ್ಲಿ ಹೆಚ್ಚು ಕಾಲ ಅಂದರೆ 182 ದಿನಗಳಿಗಿಂತ ಹೆಚ್ಚು ದಿನಗಳು ಅವರು ಉದ್ಯೋಗದಲ್ಲಿದ್ದರೆ ಅದು ಅವರ ಪ್ರಧಾನ ಸ್ಥಿತಿಯಾಗುತ್ತದೆ. ಅದನ್ನು ಅವರ ಪ್ರಿನ್ಸಿಪಲ್ ಯೂಷುಯಲ್ ಸ್ಟೇಟಸ್ (ಪಿಎಸ್) ಎಂದು ಕರೆಯಲಾಗುತ್ತದೆ. ಹಾಗಿಲ್ಲದೆ ವರ್ಷದಲ್ಲಿ ಕನಿಷ್ಠ ಮೂರು ತಿಂಗಳು ಅವರು ಯಾವುದಾದರೂ ಆರ್ಥಿಕ ಚಟುವಟಿಕೆಯಲ್ಲಿ ತೊಡಗಿಕೊಂಡಿದ್ದರೆ ಅದು ಅವರ ಸಬ್ಸಿಡಿಯರಿ ಅಥವಾ ಪೂರಕಸ್ಥಿತಿ (ಎಸ್‌ಎಸ್) ಆಗುತ್ತದೆ. ಅವೆರಡನ್ನು ಒಟ್ಟಾರೆಯಾಗಿ ಸಾಮಾನ್ಯ ಸ್ಥಿತಿ ಎಂದು ಸಮೀಕ್ಷೆ ಪರಿಗಣಿಸುತ್ತದೆ. ಸಾಮಾನ್ಯವಾಗಿ ಈ ದರವನ್ನು ಒಟ್ಟಾರೆ ನಿರುದ್ಯೋಗಿಗಳ/ಉದ್ಯೋಗಿಗಳ ಸಂಖ್ಯೆಯನ್ನು ಲೆಕ್ಕ ಹಾಕಲು ಬಳಸಲಾಗುತ್ತದೆ.

ವರ್ಷಗ್ರಾಮೀಣನಗರ ಪ್ರದೇಶ
 ಪುರುಷರುಮಹಿಳೆಯರುಪುರುಷರುಮಹಿಳೆಯರು
 ಯುಎಸ್‌ಸಿಡಬ್ಲ್ಯುಎಸ್‌ಯುಎಸ್‌ಸಿಡಬ್ಲ್ಯುಎಸ್‌ಯುಎಸ್‌ಸಿಡಬ್ಲ್ಯುಎಸ್‌ಯುಎಸ್‌ಸಿಡಬ್ಲ್ಯುಎಸ್‌
2017-18 2011-12 2009-10 2004-05 1999-00 1993-94 1987-88 1983 1977-78 1972-735.8
1.7
1.6
1.6
1.7
1.4
1.8
1.4
1.3
1.2
8.8
3.3
3.2
3.8
3.9
3.1
4.2
3.7
3.6
3.0
3.8
1.7
1.6
1.8
1.0
0.9
2.4
0.7
2.0
0.5
7.7
3.5
3.7
4.2
3.7
2.9
4.4
4.3
4.1
5.5
7.1
3.0
2.8
3.8
4.5
4.1
5.2
5.1
5.4
4.8
8.8
3.8
3.6
5.2
5.6
5.2
6.6
6.7
7.1
6.0
10.8
5.2
5.7
6.9
5.7
6.1
6.2
4.9
12.4
6.0
12.8
6.7
7.2
9.0
7.3
7.9
9.2
7.2
10.9
9.2

ಹಾಗೆಯೇ ಸಮೀಕ್ಷೆಯಲ್ಲಿ ಬಳಸುವ ಇನ್ನೊಂದು ಪರಿಕಲ್ಪನೆ ಅಂದರೆ ಪ್ರಸ್ತುತ ಸಾಪ್ತಾಹಿಕ ಸ್ಥಿತಿ – ಕರೆಂಟ್ ವೀಕ್ಲಿ ಸ್ಟೇಟಸ್. ಸಮೀಕ್ಷೆಯ ಹಿಂದಿನ ಏಳು ದಿನಗಳಲ್ಲಿ ಕನಿಷ್ಠ ಒಂದು ಗಂಟೆಯಾದರೂ ಅವರು ಉದ್ಯೋಗದಲ್ಲಿ ತೊಡಗಿಕೊಂಡಿದ್ದರೇ ಅನ್ನುವುದನ್ನು ಆಧರಿಸಿ ಈ ಪ್ರಸ್ತುತ ಸಾಪ್ತಾಹಿಕ ಸ್ಥಿತಿಯನ್ನು ನಿರ್ಧರಿಸಲಾಗುತ್ತದೆ. ಇದನ್ನು ಸಿಡಬ್ಲ್ಯುಸಿ ಎಂದು ಸೂಚಿಸಲಾಗುತ್ತದೆ. ಹೀಗೆ ಸಮೀಕ್ಷೆ ನಡೆಸುವಾಗ ಅವರ ವಯಸ್ಸು, ಲಿಂಗ, ಆರ್ಥಿಕತೆ, ಮತ್ತು ಇತ್ತೀಚಿನ ದಿನಗಳಲ್ಲಿ ಅವರ ವಿದ್ಯಾಭ್ಯಾಸದ ಮಟ್ಟವನ್ನು ಪರಿಗಣಿಸಲಾಗುತ್ತದೆ.

ಪಿಎಲ್‌ಎಫ್‌ಎಸ್ ವರದಿ 2017-18

2017-18ರ ಪಿಎಲ್‌ಎಫ್‌ಎಸ್ ವರದಿ ಸಿದ್ಧವಾಗಿ ಹಲವು ತಿಂಗಳುಗಳಾದ ಮೇಲೆ ಒತ್ತಡಕ್ಕೆ ಮಣಿದು ಸರ್ಕಾರ ಅದನ್ನು ಬಿಡುಗಡೆ ಮಾಡಿತು. ಚುನಾವಣೆ ಮುಗಿದು, ಅದು ಗೆದ್ದ ಮೇಲೆ ಅದನ್ನು ಬಿಡುಗಡೆ ಮಾಡಿತು. ಅದರಲ್ಲಿ ದಾಖಲಾಗಿದ್ದ ಮಾಹಿತಿ ಸರ್ಕಾರಕ್ಕೆ ಪ್ರತಿಕೂಲವಾಗಿತ್ತು ಅನ್ನುವುದು ಸರ್ಕಾರದ ಈ ನಿಲುವಿಗೆ ಕಾರಣವಾಗಿತ್ತು. ಸರ್ಕಾರದ ಈ ಧೋರಣೆಯನ್ನು ವಿರೋಧಿಸಿ ಅಧ್ಯಕ್ಷರೂ ಸೇ ರಿದಂತೆ ಇಬ್ಬರೂ ಸಮಿತಿಗೆ ರಾಜೀನಾಮೆ ನೀಡಿದರು. ಆದರೆ ಸರ್ಕಾರ ವರದಿಯನ್ನು ಬಿಡುಗಡೆ ಮಾಡುವ ವೇಳೆಗೆ ಅದರ ಮುಖ್ಯಾಂಶಗಳು ಹಲವು ಪತ್ರಿಕೆಗಳಲ್ಲಿ ವರದಿಯಾಗಿದ್ದವು. ಅದರ ಮುಖ್ಯ ಅಂಶಗಳನ್ನು ಗಮನಿಸೋಣ. ಪುರುಷರು ಮತ್ತು ಮಹಿಳೆಯರ ನಿರುದ್ಯೋಗದ ದರ ಹಿಂದಿನ ವರ್ಷಗಳಿಗೆ ಹೋಲಿಸಿದರೆ 2017-18ರಲ್ಲಿ ಹಲವು ಪಟ್ಟು ಹೆಚ್ಚಾಗಿದೆ. ಪುರುಷರಲ್ಲಿ ನಿರುದ್ಯೋಗದ ಪ್ರಮಾಣ ಶೇಕಡ 5.8ರಷ್ಟು ಮತ್ತು ಮಹಿಳೆಯರಲ್ಲಿ ಅದು 3.8ರಷ್ಟು ಹೆಚ್ಚಾಗಿದೆ. ಉದ್ಯೋಗ ಸೃಷ್ಟಿಯಾಗುವುದಿರಲಿ, ಉದ್ಯೋಗ ನಾಶವಾಗುತ್ತಿದೆ ಅನ್ನುವ ಸುದ್ಧಿ ಮಿಲಿಯನ್ ಉದ್ಯೋಗ ಸೃಷ್ಟಿ ಮಾಡುತ್ತೇವೆ ಎಂದು ಘೋಷಿಸಿಕೊಂಡಿದ್ದ ಸರ್ಕಾರಕ್ಕೆ ಸಹಜವಾಗಿಯೇ ಆಘಾತಕಾರಿಯಾದ ವಿಷಯ. ಸಹಜವಾಗಿಯೇ ಸರ್ಕಾರ ಇದರ ಸಮಂಜತೆಯ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿತು.
1.ಸರ್ಕಾರದ ಮೊದಲನೆಯ ತಕರಾರು 2017-18ರ ಅಂಕಿ ಅಂಶಗಳನ್ನು ಹಿಂದಿನ ಪಂಚವರ್ಷೀಯ ಮಾಹಿತಿಗಳೊಂದಿಗೆ ಹೋಲಿಸುವುದಕ್ಕೆ ಆಗುವುದಿಲ್ಲ ಅನ್ನುವುದು. ಇದು ಸರಿಯಾದ ವಾದವಲ್ಲ ಅನ್ನುವುದನ್ನು ನಾವು ಈಗಾಗಲೇ ಗಮನಿಸಿದ್ದೇವೆ. ಒಂದೇ ವ್ಯತ್ಯಾಸ ಅಂದರೆ ಪಿಎಲ್‌ಎಫ್‌ಎಸ್ ಸಮೀಕ್ಷೆಯಲ್ಲಿ ಹಿಂದಿನ ವರ್ಷಗಳಲ್ಲಿ ಮಾಡುವಂತೆ ಮಾಹಿತಿ ಸಂಗ್ರಹಿಸುವಾಗ ಆರ್ಥಿಕ ಸ್ಥಿತಿಯ ಬದಲು ಶಿಕ್ಷಣ ಮಟ್ಟವನ್ನು ಪರಿಗಣನೆಗೆ ತೆಗೆದುಕೊಳ್ಳಲಾಗಿದೆ. ಇದು ನಿರುದ್ಯೋಗದ ದರದ ಮೇಲೆ ಯಾವ ಪರಿಣಾಮವನ್ನು ಮಾಡುವುದಿಲ್ಲ. ಹಿಂದಿನ ವರ್ಷಗಳ ನಿರುದ್ಯೋಗಿಗಳ ವಿದ್ಯಾಭ್ಯಾಸದ ಮಟ್ಟದೊಂದಿಗೆ ಹೋಲಿಕೆ ಸಾಧ್ಯವಾಗುವುದಿಲ್ಲ. ಯಾಕೆಂದರೆ ಆಗ ಅಂತಹ ಮಾಹಿತಿಯನ್ನು ಸಂಗ್ರಹಿಸುತ್ತಿರಲಿಲ್ಲ.
2. ಹಾಗೆಯೇ ಈ ವರದಿಯಲ್ಲಿರುವ ದೇಶದ ಜನಸಂಖ್ಯೆಯ ಅಂದಾಜು ಸರಿ ಇಲ್ಲ ಅನ್ನುವುದು ಮತ್ತೊಂದು ತಕರಾರು. ಇದು ಕುಟುಂಬವನ್ನು ಘಟಕವಾಗಿ ತೆಗೆದುಕೊಂಡ ಮಾಡಿದ ಸಮೀಕ್ಷೆ. ಕುಟುಂಬದ ಗಾತ್ರ ಕಡಿಮೆಯಾದೊಡನೆ ಜನಸಂಖ್ಯೆಯ ಪ್ರಮಾಣವೂ ಕಮ್ಮಿಯಾಗುತ್ತದೆ. ಇದು ಎಲ್ಲಾ ಕುಟುಂಬವನ್ನು ಘಟಕಗಳನ್ನಾಗಿ ಮಾಡಿಕೊಂಡ ಸಮೀಕ್ಷೆಯ ಸಮಸ್ಯೆ. ಹಾಗಾಗಿ ಇಂತಹ ಸಮೀಕ್ಷೆಯನ್ನು ಜನಸಂಖ್ಯೆಯ ಲೆಕ್ಕಾಚಾರಕ್ಕೆ ಬಳಸಿಕೊಳ್ಳುವುದಕ್ಕಾಗುವುದಿಲ್ಲ ಎಂದಷ್ಟೇ ಅರ್ಥಮಾಡಿಕೊಳ್ಳಬೇಕು. ಅದೇನೆ ಇರಲಿ, ಒಟ್ಟಾರೆ ಉದ್ಯೋಗಿಗಳ ನಿರುದ್ಯೋಗಿಗಳ ಸಂಖ್ಯೆಯನ್ನು ಲೆಕ್ಕಹಾಕುವುದಕ್ಕೆ ಎನ್‌ಎಸ್‌ಎಸ್‌ಒ ಮಾಡಿರುವ ಅಂದಾಜನ್ನೇ ಎಲ್ಲರೂ ಸಾಮಾನ್ಯವಾಗಿ ಬಳಸಿಕೊಳ್ಳುತ್ತಾರೆ. ಸರ್ಕಾರ ನೇಮಿಸಿರುವ ಸಮಿತಿ ಬಳಸಿರುವುದೂ ಎನ್‌ಎಸ್‌ಎಸ್‌ಒ ಮಾಡಿರುವ ಅಂದಾಜನ್ನೇ. ಮೊದಲಿಗೆ ನಿರುದ್ಯೋಗಕ್ಕೆ ಸಂಬಂಧಿಸಿದಂತೆ ಸಮೀಕ್ಷೆ ನೀಡಿರುವ ಮಾಹಿತಿಯನ್ನು ಗಮನಿಸೋಣ. ಇಲ್ಲಿ ಶೇಕಡವಾರು ಬೆಳವಣಿಗೆ ದರವನ್ನು ನೀಡಲಾಗಿದೆ. ಇದನ್ನು ಗಮನಿಸಿದರೆ 2017-18ರಲ್ಲಿ ದಿಢೀರನೆ ನಿರುದ್ಯೋಗದ ದರ ಹಲವು ಪಟ್ಟು ಹೆಚ್ಚಿರುವುದು ಕಾಣುತ್ತದೆ.


ಸಾಮಾನ್ಯವಾಗಿ ಧೀರ್ಘಕಾಲೀನ ನಿರುದ್ಯೋಗ ದರ ಅಷ್ಟೊಂದು ಹೆಚ್ಚಿರುವುದಿಲ್ಲ. ಅದು ಸಾಮಾನ್ಯವಾಗಿ ಎರಡಕ್ಕಿಂತ ಕಡಿಮೆ ಇರುತ್ತದೆ. ಆದರೆ 2017-18ರಲ್ಲಿ ಅದು ಶೇಕಡ 6.1ನ್ನು ದಾಟಿರುವುದು ನಿಜಕ್ಕೂ ಆತಂಕದ ವಿಷಯ. ಹಾಗಾಗಿಯೇ ಅದು ಹಲವು ಚರ್ಚೆಗಳಿಗೆ ಕಾರಣವಾಗಿದೆ.
ಉದ್ಯೋಗಿಗಳ ಪ್ರಾವಿಡೆಂಟ್ ಫಂಡ್ ಸಂಘಟನೆಯ (ಇಪಿ- ಎಫ್‌ಒ) ಅಂಕಿಅಂಶವನ್ನು ಮತ್ತು ಮುದ್ರ ಸಾಲದಿಂದ ಸೃಷ್ಟಿಯಾದ ಉದ್ಯೋಗವನ್ನು ಪರಿಗಣಿಸಬೇಕೆಂಬ ವಾದವು ಇತ್ತೀಚೆಗೆ ಕೇಳಿಬರುತ್ತಿದೆ. ಆದರೆ ಇಪಿಎಫ್‌ಒ ವ್ಯಕ್ತಿಯ ಉದ್ಯೋಗದ ಸ್ಥಿತಿಯನ್ನು ತಿಳಿಸುವುದಿಲ್ಲ. ಹಾಗೆಯೇ ಮುದ್ರ (MUDRA-Mirco Units Development & Refinance Agency Ltd) ಸಾಲವನ್ನು ತೆಗೆದುಕೊಂಡವರು ಅದನ್ನು ಉದ್ದಿಮೆಯಲ್ಲಿ ಹೂಡಿದ್ದಾರೆ ಅನ್ನುವುದನ್ನು ಒಪ್ಪಿಕೊಳ್ಳುವುದಕ್ಕೆ ಬೇಕಾದ ಮಾಹಿತಿ ನಮ್ಮಲ್ಲಿ ಇಲ್ಲ. ಇದನ್ನು ಹಲವು ಕಡೆ ಪ್ರಮುಖ ಸಂಖ್ಯಾಶಾಸ್ತ್ರ ತಜ್ಞ ಪ್ರೊಣಬ್ ಸೇನ್ ಸ್ಪಷ್ಟಪಡಿಸಿದ್ದಾರೆ. ಅದು ಸರಿ ಕೂಡ.


ಹಾಗಾಗಿ ಸಧ್ಯಕ್ಕೆ ಎನ್‌ಎಸ್‌ಎಸ್‌ಒಗಿಂತ ವಿಶ್ವಾಸಾರ್ಹವಾದ ಮಾಹಿತಿ ಉದ್ಯೋಗದ ಸ್ಥಿತಿಗತಿಗೆ ಸಂಬಂಧಿಸಿದಂತೆ ಇಲ್ಲ. ಇದರಲ್ಲಿ ನಮಗೆ ಒಟ್ಟಾರೆ ಕೆಲಸಗಾರರ, ಉದ್ಯೋಗಿಗಳ ಮತ್ತು ನಿರುದ್ಯೋಗಿಗಳ ಪ್ರಮಾಣ ಏರುತ್ತಿರುವ/ಇಳಿಯುತ್ತಿರುವ ದರ ತಿಳಿಯುತ್ತದೆ. ಒಟ್ಟಾರೆ ಜನಸಂಖ್ಯೆಗೆ ಸಂಬಂಧಿಸಿದ ಮಾಹಿತಿಯನ್ನು ಬಳಸಿಕೊಂಡು ಉದ್ಯೋಗಿಗಳ, ನಿರುದ್ಯೋಗಿಗಳ ಸಂಖ್ಯೆಯನ್ನು ಅಂದಾಜು ಮಾಡಲಾಗುತ್ತದೆ. ಅಂದಾಜು ಜನಸಂಖ್ಯೆಯನ್ನು ಭಾರತದ ರಿಜಿಸ್ಟ್ರಾರ್ ಜನರಲ್ ಕಛೇರಿಯು ಸಾಮಾನ್ಯವಾಗಿ ಪ್ರಕಟಿಸುತ್ತಿತ್ತು. 2016ರಲ್ಲಿ ಸರ್ಕಾರ ಅಂತಹ ಜನಸಂಖ್ಯಾ ಮಾಹಿತಿಯನ್ನು ಪ್ರಕಟಿಸಬೇಕಿತ್ತು. ಆದರೆ ಈವರೆಗೂ ರಿಜಿಸ್ಟ್ರಾರ್ ಕಛೇರಿಯಿಂದ ಅಂತಹ ಮಾಹಿತಿ ಪ್ರಕಟಗೊಂಡಿಲ್ಲ. ಅದರಿಂದ ಹಲವು ಸಂಶೋಧಕರು, ರೂಢಿಯಲ್ಲಿರುವ ಕ್ರಮವನ್ನು ಬಳಸಿಕೊಂಡು ಜನಸಂಖ್ಯೆಯ ಅಂದಾಜು ಮಾಡಿದ್ದಾರೆ. ಆ ಅಂದಾಜನ್ನು ಬಳಸಿಕೊಂಡು ಒಟ್ಟಾರೆ ಉದ್ಯೋಗಿಗಳ ಸಂಖ್ಯೆಯನ್ನು ಲೆಕ್ಕ ಮಾಡಿದ್ದಾರೆ. ಹಾಗೆ ಮೂರು ಅಂದಾಜುಗಳು ನಮ್ಮ ಮುಂದಿವೆ. ಒಂದು ಭಂಡಾರಿ ಹಾಗೂ ದುಬೆ ಅವರು ಮಾಡಿರುವ ಅಧ್ಯಯನ. ಇದು ಸರ್ಕಾರ ನೇಮಿಸಿದ ಸಮಿತಿ. ಹಾಗೆಯೇ ಎರಡನೆಯದು ಅಜೀಂ ಪ್ರೇಂಜಿ ಸಂಸ್ಥೆಯಿಂದ ಮೆಹರೋತ್ರ ಮತ್ತು ಪರಿದಾ ಅವರ ಅಧ್ಯಯನ. ಮತ್ತೊಂದು ಹಿಮಾಂಶು ಅವರು ಮಾಡಿರುವ ಅಂದಾಜು. ಮೂರು ವರದಿಗಳ ಫಲಿತಾಂಶವನ್ನು ಕೆಳಕಂಡಂತೆ ಕ್ರೋಢೀಕರಿಸಬಹುದು.

ಒಟ್ಟಾರೆ ಉದ್ಯೋಗ
(ಮಿಲಿಯನ್)‌
2004-052011-122017-18
ಭಂಡಾರಿ ಮತ್ತು ದುಬೆ421433457
ಮೆಹೋತ್ರ ಮತ್ತು ಪರಿದಾ459474465
ಹಿಮಾಂಶು460473457

ಎಲ್ಲರೂ ಉದ್ಯೋಗಿಗಳ ಸಂಖ್ಯೆಯನ್ನು ಲೆಕ್ಕ ಮಾಡುವುದಕ್ಕೆ ಎನ್ ಎಸ್‌ಎಸ್‌ಒ ಅಂದಾಜನ್ನೇ ಬಳಸಿಕೊಂಡಿದ್ದರೂ ಅವರ ಅಂದಾಜಿನಲ್ಲಿ ಸಾಕಷ್ಟು ವ್ಯತ್ಯಾಸ ಕಾಣುತ್ತಿದೆ. ಇದರಲ್ಲಿ ಕೊನೆಯ ಎರಡು ವರದಿಗಳ ಅಂದಾಜು ಸುಮಾರಾಗಿ ಒಂದೇ ರೀತಿ ಇದೆ. ಆದರೆ 2017-18ಕ್ಕೆ ಸಂಬಂಧಿಸಿದಂತೆ ಎರಡರ ನಡುವೆ ವ್ಯತ್ಯಾಸವಿದೆ. ಅದಕ್ಕೆ ಅವೆರಡೂ ಬಳಸಿರುವ ಜನಸಂಖ್ಯೆಯ ಅಂದಾಜು ಬೇರೆಯಾಗಿರುವುದು ಕಾರಣ. ಹಿಮಾಂಶು ಅವರು 2017-18ರ ಜನಸಂಖ್ಯೆಯನ್ನು 1.33 ಬಿಲಿಯನ್ ಎಂದು ಅಂದಾಜು ಮಾಡಿದ್ದಾರೆ. ಅಜೀಂ ಪ್ರೇಮ್‌ಜೀ ವಿಶ್ವವಿದ್ಯಾನಿಲಯದ ಸುಸ್ಥಿರ ಉದ್ಯೋಗ ಕೇಂದ್ರ ವತಿಯಿಂದ ಸಂತೋಷ್ ಮೆಹರೋತ್ರ ಮತ್ತು ಜಜಾತಿ ಕೆ ಪರಿದಾ ಅವರು 1.345 ಬಿಲಿಯನ್ ಎಂದು ಅಂದಾಜು ಮಾಡಿದ್ದಾರೆ. ಹಾಗಾಗಿ ಅವರ ಒಟ್ಟಾರೆ ಉದ್ಯೋಗಿಗಳ ಸಂಖ್ಯೆಯ ಅಂದಾಜಿನಲ್ಲೂ ವ್ಯತ್ಯಾಸ ಕಾಣುತ್ತಿದೆ. ಇನ್ನು ಭಂಡಾರಿ ಹಾಗೂ ದುಬೆಯವರ ಲೆಕ್ಕಾಚಾರಕ್ಕೆ ಬಂದರೆ ಅವರು 2011-12ರಿಂದ 2017-18ವರೆಗಿನ ಜನಸಂಖ್ಯೆಯ ಬೆಳವಣಿಗೆಯ ದರವನ್ನು1.7ರಷ್ಟು ಎಂದು ಇಟ್ಟುಕೊಂಡು ಭಾರತದ ಜನಸಂಖ್ಯೆ ೧.೩೬ ಬಿಲಿಯನ್ ಅಂತ ಅಂದಾಜು ಮಾಡಿದ್ದಾರೆ. ಇದು ಯಾವುದೇ ಲೆಕ್ಕಾಚಾರದಲ್ಲೂ ಜಾಸ್ತಿಯೇ. ಜೊತೆಗೆ ಅದು ತನ್ನ ಲೆಕ್ಕಾಚಾರದಲ್ಲಿ ಸಬ್ಸಿಡಿಯಿರಿ ಅಂದರೆ ಪೂರಕ ಉದ್ಯೋಗದಲ್ಲಿ ತೊಡಗಿಕೊಂಡವರನ್ನು ಪರಿಗಣಿಸಿಲ್ಲ. ಹಾಗಾಗಿ ಉದ್ಯೋಗಕ್ಕೆ ಸಂಬಂಧಿಸಿದಂತೆ ಸಂಪೂರ್ಣ ಚಿತ್ರ ಸಿಗುವುದಿಲ್ಲ. ಇವೆರಡು ಅಂಶಗಳನ್ನು ಪರಿಗಣನೆಗೆ ತೆಗೆದುಕೊಂಡು ಲೆಕ್ಕ ಹಾಕಿದರೆ ಉಳಿದ ವರದಿಗಳ ಫಲಿತವೇ ಇಲ್ಲೂ ಸಿಗುತ್ತದೆ. ಮೆಹರೋತ್ರ-ಪರಿದ ಹಾಗೂ ಹಿಮಾಂಶು ವರದಿಗಳೆರಡೂ ಉದ್ಯೋಗದಲ್ಲಿ ಭಾರಿ ಕಡಿತವಾಗಿರುವುದನ್ನು ಸೂಚಿಸುತ್ತದೆ. ಸಿಎಂಐಇ ಸಂಸ್ಥೆಯ ವರದಿಯೂ ಇದನ್ನೇ ಹೇಳುತ್ತಿದೆ. ವಿವಿಧ ಅಧ್ಯಯನಗಳು ಉದ್ಯೋಗದಲ್ಲಿ ಆಗಿರುವ ನಷ್ಟವನ್ನು 6.6 ಮಿಲಿಯನ್ ಹಾಗೂ 15.5 ಮಿಲಿಯನ್ ನಡುವೆ ಅಂದಾಜು ಮಾಡಿವೆ (ಇವು ಅವರು ಮಾಡಿಕೊಂಡಿರುವ ಜನಸಂಖ್ಯೆಯ ಅಂದಾಜನ್ನು ಆಧರಿಸಿವೆ). ಇದೊಂದು ಕಳವಳಕಾರಿ ಅಂಶ.

ನಗದು ಅಮಾನ್ಯೀಕರಣದ ಪಾತ್ರ

ಪಿಎಲ್‌ಎಫ್ ಸಮೀಕ್ಷೆಯ ಪ್ರಕಾರ 2017-18ರಲ್ಲಿ ನಿರುದ್ಯೋಗಿಗಳ ಸಂಖ್ಯೆ 2.7ಪಟ್ಟು ಹೆಚ್ಚಾಗಿದೆ. ಇದಕ್ಕೆ ಕಾರಣವೇನಿರಬಹುದು? ಅದಕ್ಕೆ ಪೂರ್ವದಲ್ಲಿ ನಡೆದ ಎರಡು ಘಟನೆಗಳ ಕಡೆ ಸ್ವಾಭಾವಿಕವಾಗಿಯೇ ನಮ್ಮ ಗಮನ ಹೋಗುತ್ತದೆ. ಒಂದು ನಗದು ಅಮಾನ್ಯೀಕರಣ, ಮತ್ತೊಂದು ಜಿಎಸ್‌ಟಿ. ನೇರವಾಗಿ ಇದೇ ಕಾರಣ ಅಂತ ಹೇಳುವುದಕ್ಕೆ ಸಾಧ್ಯವಿಲ್ಲದೇ ಹೋದರೂ ಆಗ ಅಂತಹ ಬೇರೆ ಯಾವುದೇ ಘಟನೆಗಳೂ ನಡೆದಿಲ್ಲ. ಜೊತೆಗೆ ನೋಟು ಅಮಾನ್ಯೀಕರಣ ಗ್ರಾಮೀಣ ಅರ್ಥಿಕತೆಗೆ, ಸಣ್ಣ ಹಾಗೂ ಮಧ್ಯಮ ಗಾತ್ರದ ಉದ್ದಿಮೆಗಳಿಗೆ ಹೊಡೆತಕೊಟ್ಟಿರುವುದನ್ನು ಬಹುಪಾಲು ಅಧ್ಯಯನಗಳು ತಿಳಿಸಿವೆ. ಹಾಗೆಯೇ ಜಿಎಸ್‌ಟಿಯಿಂದ ಪೆಟ್ಟು ಬಿದ್ದಿರುವುದೂ ಈ ಕ್ಷೇತ್ರಗಳಿಗೇ.
ಹಾಗಾಗಿ ಬಹುಪಾಲು ಅರ್ಥಶಾಸ್ತ್ರಜ್ಞರು ಉದ್ಯೋಗ ನಾಶಕ್ಕೆ ಇವುಗಳು ಬಹುಮಟ್ಟಿಗೆ ಕಾರಣ ಎಂದು ಹೇಳುತ್ತಿದ್ದಾರೆ. ಆದರೆ ಇಡೀ ಬಿಕ್ಕಟ್ಟಿಗೆ ಇವೆರಡೇ ಕಾರಣ ಎಂದು ಆರೋಪಿಸುವುದು ಸರಿಯಲ್ಲ. ಯಾಕೆಂದರೆ ಹಲವು ವರ್ಷಗಳಿಂದ ಈ ಪ್ರವೃತ್ತಿ ನಿಧಾನವಾಗಿ ಪ್ರಕಟವಾಗುತ್ತಿತ್ತು. ಮೇಲಿನ ಎರಡೂ ಅಂಶಗಳು ಪರಿಸ್ಥಿತಿಯನ್ನು ಉಲ್ಬಣಗೊಳಿಸಿತು. ಹಾಗಾಗಿ ಸ್ವಲ್ಪ ಹಿಂದಕ್ಕೆ ಹೋಗಿ ಈ ಉದ್ಯೋಗ ನಷ್ಟದ ಪ್ರವೃತ್ತಿಯನ್ನು ಅರ್ಥಮಾಡಿಕೊಳ್ಳುವುದು ಸೂಕ್ತ. ಇದಕ್ಕೆ ಸಂಬಂಧಿಸಿದಂತೆ ಎನ್ ಎಸ್‌ಎಸ್ ಮಾಹಿತಿಯನ್ನು ಆಧರಿಸಿ ತಯಾರಿಸಿದ ಅಂಕಿ ಅಂಶವನ್ನು ಗಮನಿಸೋಣ (ಕೆ ಪಿ ಕಣ್ಣನ್ ಮತ್ತು ಜಿ ರವೀಂದ್ರನ್, ಇಪಿಡಬ್ಲ್ಯು, ನವೆಂಬರ್ 9, 2019). ಇದು 15 ವರ್ಷಕ್ಕೆ ಮೀರಿದ ಉದ್ಯೋಗಕ್ಕೆ ಸೂಕ್ತವಾದ ಜನರ ಮಾಹಿತಿಯನ್ನು ನೀಡುತ್ತದೆ.
ಡಬ್ಲ್ಯುಎಪಿ-ಉದ್ಯೋಗ ವಯೋಮಾನದವರ ಜನಸಂಖ್ಯೆ 2005ರಿಂದ ಉದ್ಯೋದ ಬೆಳವಣಿಗೆಯ ದರದಲ್ಲಿ ಕಡಿಮೆಯಾಗುತ್ತಾ ಹೋಗಿದೆ. ಆದರೆ ಆಗ ಭಾರತದ ಆರ್ಥಿಕತೆ ಹಿಂದೆಂದಿಗಿಂತ ಚೆನ್ನಾಗಿಯೇ ಬೆಳೆಯುತ್ತಿತ್ತು. ಅಂದರೆ ಈ ಆವಧಿಯಲ್ಲಿ ಆರ್ಥಿಕ ಪ್ರಗತಿಯೊಂದಿಗೆ ಉದ್ಯೋಗದ ಬೆಳವಣಿಗೆ ಆಗಲಿಲ್ಲ. ಅಂದರೆ ಉದ್ಯೋಗದ ದರ ಆರ್ಥಿಕ ಪ್ರಗತಿಗೆ ಸ್ಪಂಧಿಸುತ್ತಿಲ್ಲ. ಇದನ್ನು ತಾಂತ್ರಿಕ ಪರಿಭಾಷಿಯಲ್ಲಿ ಎಂಪ್ಲಾಯ್‌ಮೆಂಟ್ ಎಲಾಸ್ಟಿಸಿಟಿ ಆಫ್ ಗ್ರೋತ್ ಕಡಿಮೆಯಾಗಿದೆ ಅನ್ನುತ್ತಾರೆ. 2011-12ರ ವೇಳೆಗೆ ಉದ್ಯೋಗದ ಬೆಳವಣೆಗೆ ದರ ಸೊನ್ನೆ ಆಗಿಬಿಟ್ಟಿತು. ಅದನ್ನು ಉದ್ಯೋಗರಹಿತ ಬೆಳವಣಿಗೆ ಎಂದು ಕರೆಯುವ ವಾಡಿಕೆ ಇದೆ. ಅಲ್ಲಿಂದ ಮುಂದಕ್ಕೆ ಅದು ಋಣಾತ್ಮಕವಾಯಿತು. ಅಂದರೆ ಈಗಿರುವ ಉದ್ಯೋಗವೂ ನಷ್ಟವಾಗತೊಡಗಿತು. ಈಗ ಆರ್ಥಿಕ ಪ್ರಗತಿಯೂ ಮಂದವಾಗುತ್ತಿದೆ. ಇದು ಆರ್ಥಿಕತೆಯ ಮೇಲೆ ಹಲವು ರೀತಿಯಲ್ಲಿ ಋಣಾತ್ಮಕ ಪರಿಣಾಮ ಬೀರುತ್ತಿದೆ.

ಯಾರ ಮೇಲೆ ಎಷ್ಟು ಪರಿಣಾಮ?
ಮೇಲಿನ ಪಟ್ಟಿಯನ್ನು ನೋಡಿದರೆ ಒಟ್ಟಾರೆ ಉದ್ಯೋಗದಲ್ಲಿ ತೊಡಗಿಕೊಂಡಿದ್ದವರ ಸಂಖ್ಯೆ 2011-12ರಲ್ಲಿ 474.2 ಮಿಲಿಯನ್ ಇತ್ತು. ಅದು 2017-18ರಲ್ಲಿ 465.1ಕ್ಕೆ ಇಳಿದಿದೆ. ಅಂದರೆ ಈ ಆವಧಿಯಲ್ಲಿ 9.1 ಮಿಲಿಯನ್ ಉದ್ಯೋಗ ನಷ್ಟವಾಗಿದೆ. ಕೃಷಿಯಲ್ಲಿ 2011-12ರಲ್ಲಿ 232.9 ಮಿಲಿಯನ್ ಜನರು ಕೃಷಿಯಲ್ಲಿ ತೊಡಗಿಕೊಂಡಿದ್ದರು. 2017-18ರಲ್ಲಿ ಅವರ ಸಂಖ್ಯೆ 205.3 ಮಿಲಿಯನ್ನಿಗೆ ಇಳಿದಿದೆ. ಅಂದರೆ ಸುಮಾರು ೨೭ ಮಿಲಿಯನ್ನಷ್ಟು ಕಮ್ಮಿಯಾಗಿದೆ. ಹಾಗೆಯೇ ಉತ್ಪಾದನಾ ಕ್ಷೇತ್ರದಲ್ಲೂ ಉದ್ಯೋಗಿಗಳ ಸಂಖ್ಯೆ 59.8 ಮಿಲಿಯನ್ನಿನಿಂದ 56.4 ಮಿಲಿಯನ್ನಿಗೆ ಇಳಿದಿದೆ. ಅಂದರೆ 3.5 ಮಿಲಿಯನ್ ಉದ್ಯೋಗಗಳು ಕಡಿಮೆಯಾಗಿವೆ. ಈ ಆವಧಿಯಲ್ಲಿ ಉದ್ಯೋಗ ಹೆಚ್ಚಿರುವುದು ಸೇವಾ ಕ್ಷೇತ್ರದಲ್ಲಿ ಮಾತ್ರ. ಅದು 127.3 ಮಿಲಿಯನ್ನಿಂದ 144.4 ಮಿಲಿಯನ್ನಿಗೆ ಏರಿದೆ.
ಇನ್ನು ಯುವಕರಲ್ಲಿ ಅಂದರೆ 15 ರಿಂದ 29ರ ವಯೋಮಾನದವರ ಸ್ಥಿತಿಯನ್ನು ನೋಡಿದಾಗ ಒಟ್ಟಾರೆಯಾಗಿ ಉದ್ಯೋಗಿಗಳ ಸಂಖ್ಯೆ 138 ಮಿಲಿಯನ್ನಿಂದ 115.7ಕ್ಕೆ ಇಳಿದಿದೆ. ಅಂದರೆ12.3 ಮಿಲಿಯನ್ನಷ್ಟು ಕಡಿಮೆಯಾಗಿದೆ. ಇವರಲ್ಲಿ ಕೆಲಸ ಹುಡುಕುತ್ತಿರುವವರ ಶೇಕಡವಾರು ಪ್ರಮಾಣ ಸಂಖ್ಯೆ ಯುವಕರಲ್ಲಿ ಶೇಕಡ 44.6ರಿಂದ ಶೇಕಡ 38.3ಕ್ಕೆ ಇಳಿದಿದೆ. ಇದು ಒಟ್ಟಾರೆ ಜನಸಂಖ್ಯೆಯಲ್ಲೂ ಅದು ಶೇಕಡ 39.5 ರಿಂದ 36.5ಕ್ಕೆ ಇಳಿದಿದೆ. ಅಂದರೆ ಕೆಲಸ ಹುಡುಕಿ ಸಿಗುವುದಿಲ್ಲ ಅಂದುಕೊಂಡ ಭ್ರಮನಿರಸನಗೊಳ್ಳುತ್ತಿರುವ ಪ್ರವೃತ್ತಿಯನ್ನು ಸೂಚಿಸುತ್ತದೆ. ಅನ್ನುವುದು ಹಲವು ಸಂಶೋಧಕರ ಅನಿಸಿಕೆ. ಹೀಗೆ ಕೆಲಸ ಹುಡುಕುತ್ತಿರುವವರಲ್ಲಿ ಭ್ರಮನಿರಸನಗೊಂಡವರು ಎಷ್ಟು ಪ್ರಮಾಣದಲ್ಲಿ ಇದ್ದಾರೆ ಅನ್ನುವುದು ಹೇಳುವುದಕ್ಕೆ ಕಷ್ಟವಾದರೂ ಇದು ಆತಂಕಕಾರಿ ಬೆಳವಣಿಗೆ ಅನ್ನುವುದರಲ್ಲಿ ಅನುಮಾನವಿಲ್ಲ.

ಕ್ಷೇತ್ರಒಟ್ಟು ಸಂಖ್ಯೆ – ಮಿಲಿಯನ್‌ನಲ್ಲಿ
ಒಟ್ಟು ಜನಸಂಖ್ಯೆ15ರಿಂದ 29 ವರ್ಷದ ಯುವಕರು
 2011–122017–182011–122017–18
ಕೃಷಿ231.9205.360.741.8
ಉತ್ಪಾದನೆ59.856.422.118.5
ಉತ್ಪದನೆಯೇತರ55.358.919.417.8
ಸೇವೆ127.3144.435.737.6
ಒಟ್ಟು ಉದ್ಯೋಗ474.2465.1138.0115.7
ಶ್ರಮಿಕರ ಸಂಖ್ಯೆ484.8495.1147.0140.7
ಶಿಕ್ಷಣದಲ್ಲಿ ತೊಡಗಿಸಿಕೊಂಡವರು  99127
WPR%38.634.741.931.4
LFPR%39.536.944.638.3
UR(%) as per usual status2.26.16.117.8
UR(%) as per weekly status3.08.86.821.4
Source: CSE Working paper

ಮತ್ತೊಂದು ಕುತೂಹಲಕಾರಿ ಅಂಶವೆಂದರೆ ಈ ಆವಧಿಯಲ್ಲಿ ಶ್ರಮಿಕರ ಸಂಖ್ಯೆ ಅಂದರೆ ಕೆಲಸ ಹುಡುಕುತ್ತಿರುವವರ ಸಂಖ್ಯೆ ಕೇವಲ 10 ಮಿಲಿಯನ್ ಮಾತ್ರ ಹೆಚ್ಚಾಗಿರುವುದು. ಜೊತೆಗೆ 15ರಿಂದ 29ರ ವಯೋಮಾನದವರಲ್ಲಿ ಕೆಲಸವನ್ನು ಹುಡುಕುತ್ತಿರುವವರ ಶೇಕಡವಾರು ಪ್ರಮಾಣದಲ್ಲಿ ಕುಸಿತವನ್ನು ಕಾಣಬಹುದು. ಅದು ಒಟ್ಟಾರೆ ಜನಸಂಖ್ಯೆಯಲ್ಲಿ ಅದರ ಪ್ರಮಾಣ 39.5ರಿಂದ ಶೇಕಡ 36.9ಕ್ಕೆ ಕುಸಿದಿದೆ. ಯುವಕರಲ್ಲಿ ವಿಷಯದಲ್ಲಿ ಅದು ಶೇಕಡ 44.6ರಿಂದ ಶೇಕಡ 38.3ಕ್ಕೆ ಕುಸಿದಿದೆ. ಅದು ಮಹಿಳೆಯರ ವಿಷಯದಲ್ಲಿ ಶೇಕಡ 29 ರಿಂದ 22ಕ್ಕೆ ಕುಸಿದಿದೆ. ಅಂದರೆ ಕೆಲಸ ಹುಡುಕುತ್ತಿರುವವರ ಸಂಖ್ಯೆಯಲ್ಲಿ ಗಣನೀಯವಾಗಿ ಇಳಿಮುಖವಾಗಿದೆ. ಅಂದರೆ ಅವರು ಕೆಲಸ ಸಿಗುತ್ತದೆ ಎಂಬ ಭರವಸೆಯನ್ನೇ ಕಳೆದುಕೊಂಡಿದ್ದಾರೆ. ಹಾಗಾಗಿ ಅದಕ್ಕಾಗಿ ಪ್ರಯತ್ನಿಸುತ್ತಿಲ್ಲ. ಇವರನ್ನು ವರದಿ ಭ್ರಮನಿರಸನಗೊಂಡ ಕೆಲಸಗಾರರು ಎಂದು ಕರೆಯುತ್ತದೆ. ಹಾಗಾಗಿ ಉದ್ಯೋಗಕ್ಕೆ ಸಂಬಂಧಿಸಿದಂತೆ ಎರಡು ಪ್ರವೃತ್ತಿಗಳು ಸ್ಪಷ್ಟವಾಗಿ ಕಾಣುತ್ತಿದೆ. ಒಂದು ಒಟ್ಟಾರೆ ಉದ್ಯೋಗ ನಾಶವಾಗುತ್ತಿದೆ, ಅಷ್ಟೇ ಅಲ್ಲ ಉದ್ಯೋಗ ಸಿಗುತ್ತದೆ ಅನ್ನುವ ಭರವಸೆಯೂ ಕಮ್ಮಿಯಾಗುತ್ತಿದೆ. ಇದರ ಪರಿಣಾಮ ಮಹಿಳೆಯರ ಮೇಲೆ ಹೆಚ್ಚಾಗುತ್ತಿದೆ. ಒಟ್ಟಾರೆ ಶ್ರಮಿಕರಲ್ಲಿ ಮಹಿಳೆಯರ ಸಂಖ್ಯೆ ಕಡಿಮೆಯಾಗುತ್ತಿರುವುದನ್ನು ಗಮನಿಸಬಹುದು. ಇದು ಕುಸಿಯುತ್ತಿರುವ ಆರ್ಥಿಕತೆ ಮಹಿಳೆಯರನ್ನು ಹೆಚ್ಚಾಗಿ ಬಾಧಿಸುತ್ತಿರುವುದನ್ನು ಸೂಚಿಸುತ್ತದೆ. ಹಾಗೆಯೇ ಇನ್ನೊಂದು ಗಮನಿಸಬೇಕಾದ ಅಂಶವೆಂದರೆ ಶಿಕ್ಷಣ ಪಡೆದವರಲ್ಲಿ ನಿರುದ್ಯೋಗ ದುಪ್ಪಟ್ಟು ಆಗಿರುವುದು. ಐಎಸ್‌ಎಸ್‌ಒ ಸಮೀಕ್ಷೆ ಗಮನಿಸಿರುವ ಇನ್ನೊಂದು ಅಂಶ ಅಷ್ಟೇ ಮುಖ್ಯವಾದದ್ದು. ಕೂಲಿಯ ದರ ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿ ಸ್ಥಗಿತಗೊಂಡಿದೆ, ಇಲ್ಲ ಕಡಿಮೆಯಾಗಿದೆ. ಅಂದರೆ ಉದ್ಯೋಗಾವಕಾಶಗಳ ಜೊತೆಗೆ ಕೂಲಿಯೂ ಕಡಿಮೆಯಾಗುತ್ತಿರುವುದ ರಿಂದ ಗ್ರಾಹಕರ ಬಳಕೆ ಶಕ್ತಿ ಹಾಗೂ ಹೂಡಿಕೆಯ ಪ್ರಮಾಣ ಕಡಿಮೆಯಾಗುತ್ತದೆ. ಗ್ರಾಹಕರ ಬಳಕೆಗೆ ಸಂಬಂಧಿಸಿದಂತೆ ಇನ್ನೂ ಬಿಡುಗಡೆಯಾಗದ ವರದಿಯೂ -ಸುದ್ದಿಯ ಪ್ರಕಾರ- ಇದನ್ನೇ ಹೇಳುತ್ತಿದೆ. ಇದು ಕಳೆದ ನಲವತ್ತು ವರ್ಷಗಳಲ್ಲಿ ಭಾರತದಲ್ಲಿ ಎಂದೂ ಆಗಿರಲಿಲ್ಲ. ಜಿಡಿಪಿಯ ಕುಸಿತ, ಉದ್ಯೋಗ ನಾಶ, ಗ್ರಾಹಕರ ಬೇಡಿಕೆಯಲ್ಲಿ ಕುಸಿತ, ಹಾಗಾಗಿ ಬಡತನ ಇವೆಲ್ಲವುಗಳು ತಡೆಯಿಲ್ಲದೆ ಏರುತ್ತಿವೆ. ಇದು ಗಂಭೀರ ಬಿಕ್ಕಟ್ಟನ್ನು ಸೂಚಿಸುತ್ತಿದೆ. ಬಹುಶಃ ಮನಮೋಹನ್ ಸಿಂಗ್ ಅಂತಹವರು ಆತಂಕಗೊAಡಿರುವ ಆರ್ಥಿಕ ಸ್ಥಗಿತತೆಯ ಅಪಾಯದಲ್ಲಿ ನಾವು ಇದ್ದೇವೆ.

ಮಹಿಳೆಯರ ಮೇಲೆ ನಿರುದ್ಯೋಗದ ಪರಿಣಾಮ

ಪರಿಹಾರ: ಸುಮಾರು ವರ್ಷಗಳಿಂದ ಭಾರತದ ಆರ್ಥಿಕತೆಯಲ್ಲಿ ಕುಸಿತ ಪ್ರಾರಂಭವಾಗಿದೆ. ನಗದು ಅಮಾನ್ಯೀಕರಣ, ಜಿಎಸ್‌ಟಿ ಇವೆಲ್ಲಾ ಪರಿಸ್ಥಿತಿಯನ್ನು ಇನ್ನಷ್ಟು ಹದಗೆಡಿಸಿವೆ. ಅದರಲ್ಲೂ ವಿಶೇಷವಾಗಿ ಗ್ರಾಮೀಣ ವಲಯದಲ್ಲಿ, ಹಾಗೂ ಸಣ್ಣ ಹಾಗೂ ಮಧ್ಯಮ ಉದ್ದಿಮೆಗಳಲ್ಲಿ ಇದರ ಪರಿಣಾಮ ತೀವ್ರವಾಗಿದೆ. ಇದ ರಿಂದ ಒಟ್ಟಾರೆಯಾಗಿ ಬೇಡಿಕೆ ಕುಸಿಯುತ್ತಾ ಹೋಗುತ್ತಿದೆ. ಜಾಗತಿಕ ಮಟ್ಟದಲ್ಲೂ ಆರ್ಥಿಕತೆ ಕುಸಿಯುತ್ತಿರುವುದರಿಂದ ಬೇಡಿಕೆಯನ್ನು ರಫ್ತಿನ ಮೂಲಕ ಹೆಚ್ಚಿಸಿಕೊಳ್ಳಲೂ ಆಗುತ್ತಿಲ್ಲ.

ಅವಧಿಡಬ್ಲ್ಯುಎಪಿಗೆ ಸೇರ್ಪಡೆ ಮಿಲಿಯನ್ನಿನಲ್ಲಿಡಬ್ಲ್ಯುಎಪಿಗೆ ಸೇರ್ಪಡೆಗೊಂಡ ಶ್ರಮಿಕ, ಉದ್ಯೋಗಸ್ಥರ, ವಿದ್ಯಾವಂತರ ಗುಂಪಿಗೆ ಸೇರ್ಪಡೆ ಶೇಕಡವಾರು
ಮಹಿಳೆಯರು ಮತ್ತು ಪುರುಷರು ಶ್ರಮಿಕರುಉದ್ಯೋಗಸ್ಥರುವಿದ್ಯಾವಂತರುಶಿಕ್ಷಣ ಹಾಗೂ ಉದ್ಯೋಗದಿಂದ ಹೊರಗುಳಿದವರು
1983-94
1994-2005 2005-12
2012-18
140.68
152.05
137.63
128.34
58.2
60.2
14.5
10.3
56.9
57.9
14.7
-4.8
13
12.4
30.3
22.1
30.1
29.7
55
82.7
ಪುರುರುಷರು ಮಾತ್ರ
1983-94 1994-2005 2005-12 2012-1872.82
78.65
65.66
64.97
80.8
77.7
56.3
48.8
79.4
75.7
55.7
24.1
15.2
12.2
35.5
23
5.4
12.1
8.8
52.9
ಮಹಿಳೆಯರು ಮಾತ್ರ
1983-94 1994-2005 2005-12 2012-1867.85
73.4
71.96
63.36
34
41.4
-23.7
-29.1
32.8
38.8
-22.7
-34.4
10.6
12.6
25.7
21.2
56.6
48.6
97
113.2


ಸರ್ಕಾರ ಉದ್ಯೋಗ ಸೃಷ್ಟಿಸಬಲ್ಲ ಕ್ಷೇತ್ರಗಳಲ್ಲಿ ಹಣವನ್ನು ಹೂಡಬೇಕಾಗಿದೆ. ಶಿಕ್ಷಣ, ಆರೋಗ್ಯ, ಮೂಲಸೌಕರ್ಯ ತುರ್ತಾಗಿ ಸುಧಾರಿಸಬೇಕಾಗಿದೆ. ಆದರಲ್ಲಿ ಹಣ ಹೂಡುವುದರಿಂದ ಉದ್ಯೋಗ ಸೃಷ್ಟಿಯಾಗುತ್ತದೆ, ಬೇಡಿಕೆಯೂ ಹೆಚ್ಚುತ್ತದೆ. ನರೇಗಾದಂತಹ ಯೋಜನೆಗಳು ಹೆಚ್ಚು ಪರಿಣಾಮಕಾರಿಯಾಗಿ ಜಾರಿಗೊಳ್ಳಬೇಕಾಗಿವೆ. ಪ್ರಧಾನಮಂತ್ರಿ ಕಿಸಾನ್ ಯೋಜನೆಯನ್ನು ಘೋಷಿಸಲಾಯಿತು. ಆದರೆ ಅದಕ್ಕೆ ನಿಗದಿಯಾದ ಹಣವನ್ನು ಬಳಸಿಕೊಂಡೇ ಇಲ್ಲ. ಸರ್ಕಾರ ಭಾವನಾತ್ಮಕ ವಿಷಯಗಳ ಕಡೆ ಕೊಟ್ಟಷ್ಟು ಗಮನವನ್ನು ಆರ್ಥಿಕ ವಿಷಯಗಳ ಕಡೆ ಕೊಡುತ್ತಿಲ್ಲ. ಜೊತೆಗೆ ಇತ್ತೀಚೆಗೆ ಸರ್ಕಾರ ತೆಗೆದುಕೊಳ್ಳುತ್ತಿರುವ ಎಷ್ಟೋ ಕ್ರಮಗಳು ಸಮಾಜದಲ್ಲಿನ ಸಾಮರಸ್ಯಕ್ಕೆ ಧಕ್ಕೆ ತರುತ್ತಿವೆ. ಅದರ ಪರಿಣಾಮ ಆರ್ಥಿಕತೆಯ ಮೇಲೂ ಆಗುತ್ತಿದೆ ಆರ್ಥಿಕತೆಯಲ್ಲಿ ಜನರಿಗೆ ವಿಶ್ವಾಸ ಕಮ್ಮಿಯಾಗುತ್ತಿದೆ. ತೀರಾ ಗಂಭೀರವಾಗಿ ಆರ್ಥಿಕ ಸಮಸ್ಯೆಯನ್ನು ಬಗೆಹರಿಸಿಕೊಳ್ಳುವುದರ ಜೊತೆಯಲ್ಲೇ, ಜನರ ಯೋಗಕ್ಷೇಮಕ್ಕಾಗಿ ಯೋಜನೆಗಳನ್ನು ರೂಪಿಸಿಕೊಳ್ಳುತ್ತಾ, ಸಮಾಜದಲ್ಲಿ ಸಾಮರಸ್ಯವನ್ನು, ನೆಮ್ಮದಿಯನ್ನು ತರುವ ಕ್ರಮಗಳು ಜರೂರಾಗಿ ಬೇಕಾಗಿದೆ.

ChatGPT Image Jan 14 2026 05 19 46 PM 2

ಆರ್ಥಿಕತೆಯ ಕುರಿತು, ಅರ್ಥಶಾಸ್ತ್ರದ ಕುರಿತು ಮತ್ತು ಈ ವಿಷಯದಲ್ಲಿ ಜಗತ್ತಿನಲ್ಲಿ ನಡೆಯುವ ಹಲವಾರು ವಿದ್ಯಮಾನಗಳ ಕುರಿತು ಈದಿನ.ಕಾಮ್‌ನಲ್ಲಿ ಪ್ರಕಟವಾಗುತ್ತಿರುವ ಬರೆಹಗಳು ಮೂಲದಲ್ಲಿ ಡಾ.ಟಿ.ಎಸ್.ವೇಣುಗೋಪಾಲ್‌ ಮತ್ತು ಡಾ.ಶೈಲಜಾ ಅವರು ಹೊರತರುತ್ತಿರುವ ʼಅರ್ಥʼ ಎಂಬ ಇ-ಮ್ಯಾಗಜೀನ್‌ನಲ್ಲಿ ಪ್ರಕಟವಾದಂಥವು. ಇವುಗಳನ್ನು ನಮ್ಮಲ್ಲಿ ಪ್ರಕಟಿಸಲು ಅನುಮತಿ ಕೊಟ್ಟಿರುವ ಅವರಿಗೆ ಹೃತ್ಪೂರ್ವಕ ಧನ್ಯವಾದಗಳು. ಮೂಲ ಲೇಖನಗಳ ಜೊತೆಗೆ ಅವರ ಕೆಲವು ಪುಸ್ತಕಗಳನ್ನು ನೇರವಾಗಿ ಓದಲು ಬಯಸುವವರು ಇಲ್ಲಿ ಕ್ಲಿಕ್ ಮಾಡಿ.

https://Lokayatha.com

8db2fc6d00bc451e2e85cd416d2604eb
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಭಾರತ ಎಂಬ ಕಲ್ಪನೆಯನ್ನು ರಕ್ಷಿಸೋಣ

ಕೇಡಿನ ಕಾರ್ಮೋಡ ಭಾರತವನ್ನು ಆವರಿಸಿಕೊಂಡಿದೆ. ವಿಭಜನೆ ಹಾಗೂ  ದ್ವೇಷದ ನೆರಳು ಕವಿದುಕೊಂಡಿದೆ....

ಭಾರತದ ಆರ್ಥಿಕ ಸ್ಥಿತಿ-ಸಮಸ್ಯೆ, ಕಾರಣ ಮತ್ತು ಪರಿಹಾರ

ಭಾರತದ ಆರ್ಥಿಕತೆಯ ಸ್ಥಿತಿ ಚೆನ್ನಾಗಿಲ್ಲ, ಬಿಕ್ಕಟ್ಟು ತೀವ್ರವಾಗುತ್ತಿದೆ ಎಂದು ಬಹುಪಾಲು  ಅರ್ಥಶಾಸ್ತ್ರಜ್ಙರು...

ನೋಡಲು ಇಷ್ಟಪಡದೇ ಇರುವರಿಗಿಂತ ದೊಡ್ಡ ಕುರುಡರಿಲ್ಲ | ಪ್ರೋನಬ್ ಸೆನ್

ಭಾರತದ ಆರ್ಥಿಕತೆಯನ್ನು ಕುರಿತಂತೆ ಸೆಪ್ಟೆಂಬರ್ 22 2019 ರಂದು ಪ್ರಧಾನಮಂತ್ರಿಯವರು ಅಮೇರಿಕೆಯಲ್ಲಿ...

ಅನ್ವೇಷಣೆಯ ಸಂಸ್ಕೃತಿ: ಆರ್ಥಿಕ ಪ್ರಗತಿಯ ಇಂಜಿನ್‌

ಈ ಬಾರಿ ನೋಬೆಲ್ ಬಹುಮಾನ ಜೋಯೆಲ್ ಮೊಕಿರ್, ಫಿಲಿಪ್ ಅಘಿಯಾನ್ ಮತ್ತು...