ಕಳೆದ 15 ವರ್ಷಗಳಿಂದ ವರ್ಷಗಳಿಂದ ಈ ಶಾಲೆಯಲ್ಲಿ ಗಣಿತ ಶಿಕ್ಷಕಿಯಾಗಿ ಕೆಲಸ ಮಾಡುತ್ತಿರುವ ರಶ್ಮಿ ಎಲ್ ಈ ‘ಗಣಿತ ಲೋಕ’ ರೂಪಿಸಿದವರು. ಆ ಮೂಲಕ ಮಕ್ಕಳು ಗಣಿತವನ್ನೂ ಪ್ರೀತಿಯಿಂದ ಕಲಿಯುವ ಅಗಣಿತ ಸಾಧ್ಯತೆಗಳನ್ನು ಅವರು ತೆರೆದಿಟ್ಟಿದ್ದಾರೆ.
ಕಳೆದ 4 ದಶಕದಿಂದ ಸೋಬಾನೆ ಪದಗಳನ್ನು ಹಾಡಿಕೊಂಡು ಬಂದಿರುವ ಸಿದ್ಧಗಂಗಮ್ಮ ಅವರು ಇಂದಿಗೂ ಸಂಕಷ್ಟದಲ್ಲೇ ಬದುಕು ಸಾಗಿಸುತ್ತಿದ್ದಾರೆ. ತಾವು ಹಾಡುವ ಜೊತೆಗೆ ಬೇರೆಯವರಿಗೂ ಕಲಿಸುವ ಮೂಲಕ ಜಾನಪದ ಸಂಸ್ಕೃತಿ ಉಳಿಸುವ ಕೆಲಸ ಮಾಡುತ್ತಿದ್ದಾರೆ
ಕಲ್ಪತರು ನಾಡು ತುಮಕೂರಿನಲ್ಲಿ ಈಗ ಹುಣಸೆ ಸುಗ್ಗಿ ಜೋರಾಗಿದೆ. ನಗರದ ಎಪಿಎಂಸಿ ಮಾರುಕಟ್ಟೆಯಲ್ಲಿ ಉತ್ತಮ ಗುಣಮಟ್ಟದ ಹುಣಸೆ ಹಣ್ಣು ಕ್ವಿಂಟಲ್ ಕನಿಷ್ಠ ₹13 ಸಾವಿರದಿಂದ ಗರಿಷ್ಠ ₹36 ಸಾವಿರದವರೆಗೂ ಮಾರಾಟವಾಗಿದ್ದು, ರೈತರಲ್ಲಿ ಮಂದಹಾಸ ಮೂಡಿಸಿದೆ. ತೊಗರಿ ಅಭಿವೃದ್ಧಿ ಮಂಡಳಿಯಂತೆ ತುಮಕೂರಿನಲ್ಲಿ ಹುಣಸೆ ಅಭಿವೃದ್ಧಿ ಮಂಡಳಿ ಸ್ಥಾಪಿಸಬೇಕು ಎಂದು ರೈತ ಮುಖಂಡರು ರಾಜ್ಯ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.
'Dear cricket, give me one more chance.' (ಪ್ರೀತಿಯ ಕ್ರಿಕೆಟ್, ನನಗೆ ಇನ್ನೊಂದು ಅವಕಾಶ ಕೊಡು) - 2022ರ ಡಿಸೆಂಬರ್ 10ರಂದು ಕರ್ನಾಟಕದ ಕ್ರಿಕೆಟಿಗ ಕರುಣ್ ನಾಯರ್ ತಮ್ಮ ಎಕ್ಸ್ ಖಾತೆಯಲ್ಲಿ...
ಕೊಪ್ಪಳದ ಗವಿಮಠ ಅಂದ ತಕ್ಷಣ, ತೇರಿನ ಸುತ್ತ ಲಕ್ಷಾಂತರ ಜನರು ಸುತ್ತುವರಿದಿರುವ ವಿಹಂಗಮ ಚಿತ್ರ ಕಣ್ಣ ಮುಂದೆ ಹಾದುಹೋಗುತ್ತದೆ. ನಾಡಿನಲ್ಲಿ ಗವಿಸಿದ್ಧೇಶ್ವರ ಜಾತ್ರಾ ಮಹೋತ್ಸವದ ರಥೋತ್ಸವ ಎಷ್ಟು ಜನಪ್ರಿಯವೋ, ಇಲ್ಲಿನ ದಾಸೋಹ ಕೂಡಾ...