ಬೆಂಗಳೂರು | ಮೆಡಿಕಲ್ ಸ್ಟೋರ್‌ಗಳಲ್ಲಿ ಕಳ್ಳತನ ಎಸಗುತ್ತಿರುವ ‘ಮಂಕಿ ಕ್ಯಾಪ್ ಗ್ಯಾಂಗ್’

Date:

ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಇಷ್ಟು ದಿನ ‘ಚಡ್ಡಿ ಗ್ಯಾಂಗ್‌’ ಮನೆಗಳನ್ನು ಟಾರ್ಗೆಟ್‌ ಮಾಡಿ ಕಳ್ಳತನ ಮಾಡುತ್ತಿತ್ತು. ಇದರ ಜತೆಗೆ ಇದೀಗ, ‘ಮಂಕಿ ಕ್ಯಾಪ್‌ ಗ್ಯಾಂಗ್‌’ ಬಂದು ಸೇರಿದೆ. ಆದರೆ, ಈ ಗ್ಯಾಂಗ್‌ ಮನೆಗಳಲ್ಲದೇ, ಮೆಡಿಕಲ್ ಸ್ಟೋರ್ಸ್‌, ಅಪೋಲೋ ಫಾರ್ಮಸಿಗಳಲ್ಲಿ ಕಳ್ಳತನ ಮಾಡುತ್ತಿದೆ.

ಕಳೆದ ಹದಿನೈದು ದಿನಗಳಲ್ಲಿ ಕೊತ್ತನೂರು, ಹೆಚ್​ಎಸ್​ಆರ್ ಲೇಔಟ್, ಮಾರತ್ತಹಳ್ಳಿಯ ಅಪೋಲೋ ಫಾರ್ಮಸಿಗಳಲ್ಲಿ ಕಳ್ಳತನ ನಡೆದಿದೆ.  

ಈ ಮಂಕಿ ಕ್ಯಾಪ್‌ ಗ್ಯಾಂಗ್‌ ತಮ್ಮ ಮುಖವನ್ನು ಮಂಕಿ ಕ್ಯಾಪ್‌ ಮೂಲಕ ಮುಚ್ಚಿಕೊಂಡು ಔಷಧಿ ಖರೀದಿ ಮಾಡುವ ನೆಪದಲ್ಲಿ ಮೆಡಿಕಲ್‌ ಸ್ಟೋರ್‌ಗೆ ತೆರಳುತ್ತಾರೆ. ಬಳಿಕ ಒಂದು ವಸ್ತುವನ್ನು ಖರೀದಿ ಮಾಡಿ, ಹಣ ನೀಡುತ್ತಾರೆ. ಬಳಿಕ ಆ ವಸ್ತು ಬೇಡವೆಂದು ಹಣ ವಾಪಾಸ್‌ ಕೇಳುತ್ತಾರೆ. ಬಳಿಕ ಮೆಡಿಕಲ್ ಸಿಬ್ಬಂದಿ ಹಣ ನೀಡಲು ಗಲ್ಲಾಪೆಟ್ಟಿಗೆ ತೆರೆದಾಗ ಚಾಕು ತೋರಿಸಿ ರಾಬರಿ ಮಾಡಲು ಮುಂದಾಗುತ್ತಾರೆ. ಇದಕ್ಕೆ ನಿರಾಕರಿಸಿದ ಸಿಬ್ಬಂದಿಗೆ ಚಾಕವಿನಿಂದ ಇರಿದು ಪರಾರಿಯಾಗುತ್ತಾರೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಮಧ್ಯರಾತ್ರಿ ಮೆಡಿಕಲ್ ಅಂಗಡಿಗಳನ್ನು ಟಾರ್ಗೆಟ್‌ ಮಾಡಿ ಕಳ್ಳತನ ಮಾಡಲು ಮುಂದಾಗುತ್ತಾರೆ. ಈ ವೇಳೆ, ಸ್ಟೋರ್‌ ಬಳಿ ಯಾರಾದರೂ ಬರುತ್ತಿದ್ದಾರಾ? ಎಂದು ನೋಡಿಕೊಳ್ಳಲು ಹೊರಗಡೆ ಒಬ್ಬ ನಿಂತಿರುತ್ತಾನೆ. ಮತ್ತೊಬ್ಬ ಶೆಟರ್ಸ್​ ಮುರಿದು ಅಂಗಡಿಯೊಳಗಿರುವ ಹಣವನ್ನು ಕದಿಯುತ್ತಾನೆ.

ಈ ಸುದ್ದಿ ಓದಿದ್ದೀರಾ? ಬೆಂಗಳೂರು | ತಾಯಿ, ಮಗನ ಬರ್ಬರ ಹತ್ಯೆ; ಆರೋಪಿ ಪತ್ತೆಗೆ ತಂಡ ರಚನೆ

ಮುಖವನ್ನು ಮಂಕಿ ಕ್ಯಾಪ್​ನಲ್ಲಿ ಮುಚ್ಚಿಕೊಂಡು ಕೈಯಲ್ಲಿ ಕಬ್ಬಿಣದ ಸಲಾಕೆಗಳನ್ನು ಹಿಡಿದು ಬರುವ ಖದೀಮರು ಮೆಡಿಕಲ್ ಸ್ಟೋರ್​ಗಳ ಶೆಟರ್ಸ್​ ಮುರಿದು ಕಳ್ಳತನ ಮಾಡುತ್ತಿದ್ದಾರೆ. ಈ ಘಟನೆಗಳು ಹೆಚ್ಚಾಗಿ ನಗರದ ವಿಜಯನಗರದ ಸುತ್ತಮುತ್ತ ಮರುಕಳಿಸುತ್ತಿವೆ‌.

ಕಳೆದ ಆಗಸ್ಟ್ 31 ರಂದು ಮಧ್ಯರಾತ್ರಿ ವಿಜಯನಗರದ ಮೆಡಿಕಲ್ ಸ್ಟೋರ್ ಒಂದಕ್ಕೆ ಖದೀಮರು ನುಗ್ಗಿದ್ದರು. ಬಳಿಕ, ಅಂಗಡಿ ಸಿಬ್ಬಂದಿ ಇರುವುದನ್ನು ನೋಡಿ ಸ್ಥಳದಿಂದ ಪರಾರಿಯಾಗಿದ್ದರು. ಕಳ್ಳರ ದೃಶ್ಯ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ.

ಈ ಕುರಿತು ಮಾರತ್ತಹಳ್ಳಿ, ಎಚ್‌ಎಸ್‌ಆರ್‌ ಲೇಔಟ್, ಕೊತ್ತನೂರು ಹಾಗೂ ಗೋವಿಂದರಾಜನಗರ ಠಾಣೆಗಳಲ್ಲಿ ಪ್ರತ್ಯೇಕ ದೂರು ದಾಖಲಾಗಿದೆ.

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಎಸ್‌ಐಆರ್ ವಿರುದ್ಧದ ಹೋರಾಟದಲ್ಲಿ ದೇಶಕ್ಕೆ ಕರ್ನಾಟಕ ದಿಕ್ಸೂಚಿಯಾಗಬೇಕು: ಪ್ರೊ. ಯೋಗೇಂದ್ರ ಯಾದವ್

ಕರ್ನಾಟಕವು ಹಲವು ವಿಷಯಗಳಲ್ಲಿ ದೇಶಕ್ಕೆ ದಿಕ್ಸೂಚಿಯಾಗಿದೆ. ಎಸ್‌ಐಆರ್‍‌ ವಿರುದ್ಧದ ಹೋರಾಟದಲ್ಲಿಯೂ ದೇಶಕ್ಕೆ...

ಶಾಲಾ ಶಿಕ್ಷಣದಲ್ಲಿ ಕಡ್ಡಾಯವಾಗಿ ‘ಹಿಂದಿ’ ತೆಗೆಯಬೇಕು: ಹಿಂದಿ ವಿರೋಧಿ ಕರ್ನಾಟಕ

ಕರ್ನಾಟಕದಲ್ಲಿ ಶೈಕ್ಷಣಿಕವಾಗಿ ಪ್ರತಿ ವರ್ಷ ನಡೆಯುವ ಎಸ್ ಎಸ್ ಎಲ್ ಸಿ...

ಬೇಲಿಯೇ ಎದ್ದು ಹೊಲ ಮೇಯ್ದಂತೆ ಮಾಡಿದ ಮಾಹಿತಿ ಆಯೋಗ; ಕಾಯ್ದೆಯ ವಾರ್ಷಿಕ ವರದಿ ನೀಡಲು ‘ಗೌಪ್ಯತೆ’ಯ ನೆಪ

ಮಾಹಿತಿ ಹಕ್ಕು ಕಾಯ್ದೆ-2005ರಡಿ ಸಾರ್ವಜನಿಕ ಪ್ರಾಧಿಕಾರಗಳು ಪಾರದರ್ಶಕವಾಗಿ ಕೆಲಸ ಮಾಡುತ್ತಿವೆಯೇ ಎಂಬುದನ್ನು...

ಒಳಮೀಸಲಾತಿ: 56,000 ಹುದ್ದೆಗಳ ನೇಮಕಾತಿಗೆ ಹೊರಡಿಸಿದ ಅಧಿಸೂಚನೆ ರದ್ದತಿಗೆ ಸರ್ಕಾರ ಒಪ್ಪಿಗೆ

ಇತ್ತೀಚೆಗೆ 56,432 ಹುದ್ದೆಗಳನ್ನು ಭರ್ತಿ ಮಾಡಲು ಸರ್ಕಾರ ಹೊರಡಿಸಿದ್ದ ಆದೇಶವನ್ನು ಹಿಂಪಡೆಯಲು...