ಬೆಂಗಳೂರು | ಟೆಕ್ ಕಾರಿಡಾರ್‌ನಲ್ಲಿ ವಸತಿ ಬಾಡಿಗೆ ಶೇ. 24 ರಷ್ಟು ಏರಿಕೆ

Date:

  • ಪ್ರಮುಖ ನಗರಗಳಿಗೆ ಹೋಲಿಸಿದರೆ ಬೆಂಗಳೂರಿನಲ್ಲಿ ಶೇ. 4.1ರಷ್ಟು ಹೆಚ್ಚಿನ ಬಾಡಿಗೆ ಇದೆ
  • ಮಾರತಹಳ್ಳಿಯಲ್ಲಿ ₹22,500 ರಿಂದ ₹28,000ರವರೆಗೆ 2ಬಿಹೆಚ್‌ಕೆ ಬಾಡಿಗೆ ದರ ಇದೆ

ರಾಜಧಾನಿ ಬೆಂಗಳೂರಿನಲ್ಲಿ ಬಾಡಿಗೆ ಮನೆಗಳ ದರ ಗಗನಕ್ಕೇರಿದೆ. ಅದರಲ್ಲಿಯೂ ಉತ್ತರ ಮತ್ತು ಪೂರ್ವ ಬೆಂಗಳೂರಿನಲ್ಲಿ 1000 ಚದರ ಅಡಿಯ 2 ಬಿಹೆಚ್‌ಕೆ ಮನೆಗಳಿಗೆ ಸರಾಸರಿ ಮಾಸಿಕ ಬಾಡಿಗೆ ದರ ಶೇ.24ರಷ್ಟು ಏರಿಕೆಯಾಗಿದೆ. ನಗರದಲ್ಲಿ ಬಾಡಿಗೆ ಮನೆ ಹುಡುಕಲು ಜನರು ಪರದಾಟ ನಡೆಸಿದ್ದಾರೆ.

ಪ್ರಾಪರ್ಟಿ ಕನ್ಸಲ್ಟೆಂಟ್ ಅನರಾಕ್ ಗುರುವಾರ ಈ ಬಗ್ಗೆ ವರದಿ ಪ್ರಕಟಿಸಿದೆ. ಬೆಂಗಳೂರಿನ ಥಣಿಸಂದ್ರ ಮುಖ್ಯರಸ್ತೆ, ಮಾನ್ಯತಾ ಟೆಕ್ ಪಾರ್ಕ್ ಬಳಿ ಹಾಗೂ ಮಾರತ್ತಹಳ್ಳಿ-ಹೊರ ವರ್ತುಲ ರಸ್ತೆ ಟೆಕ್ ಕಾರಿಡಾರ್‌ನಲ್ಲಿ ವಸತಿ ಬಾಡಿಗೆ ದರಗಳು ಕಳೆದ ಒಂದು ವರ್ಷದಲ್ಲಿ 24% ಏರಿಕೆ ಕಂಡಿವೆ.

ಬೆಂಗಳೂರಿನ ಪೂರ್ವ ಮತ್ತು ಉತ್ತರ ಭಾಗಗಳಲ್ಲಿ ಬಾಡಿಗೆ ಬೇಡಿಕೆ ಹೆಚ್ಚಿದೆ. ಇನ್ನುಳಿದ ಪ್ರಮುಖ ನಗರಗಳಿಗೆ ಹೋಲಿಸಿದರೆ ಬೆಂಗಳೂರಿನಲ್ಲಿ ಶೇ. 4.1ರಷ್ಟು ಹೆಚ್ಚಿನ ಬಾಡಿಗೆ ಇದೆ. ಮುಂಬೈನಲ್ಲಿ ಶೇ.3.9 ರಷ್ಟಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಥಣಿಸಂದ್ರ ಮುಖ್ಯ ರಸ್ತೆಯಲ್ಲಿ 2022ರಲ್ಲಿ ಸುಮಾರು ₹21,000 ಇದ್ದ ಬಾಡಿಗೆಗಳ ದರ 2023ರಲ್ಲಿ ₹26,000ಕ್ಕೆ ಏರಿಕೆಯಾಗಿದೆ.

ಬೆಂಗಳೂರಿನ ಮಾರತಹಳ್ಳಿಯಲ್ಲಿ ಹೆಚ್ಚಾಗಿ ಐಟಿ-ಬಿಟಿ ಕಂಪನಿಗಳಿವೆ. ಕಳೆದ ವರ್ಷ ಕೋವಿಡ್‌ ಹಿನ್ನೆಲೆ, ಹಲವಾರು ಕಂಪನಿಗಳು ಉದ್ಯೋಗಿಗಳಿಗೆ ವರ್ಕ್ ಫ್ರಮ್ ಹೋಮ್‌ ಕೆಲಸ ನೀಡಿತ್ತು. ಈಗ ಸಾಂಕ್ರಾಮಿಕ ತಗ್ಗಿದ ನಂತರ ಕಂಪನಿಗಳು ಉದ್ಯೋಗಿಗಳಿಗೆ ಆಫೀಸ್‌ಗೆ ಬರುವಂತೆ ಸೂಚನೆ ನೀಡಿವೆ. ಹಾಗಾಗಿ, ಇಷ್ಟು ತಿಂಗಳು ತೆರವಾಗಿದ್ದ ಮನೆಗಳ ಬಾಡಿಗೆ ದರ ಹೆಚ್ಚಳವಾಗಿವೆ. ಮಾರತಹಳ್ಳಿಯಲ್ಲಿ ₹22,500 ರಿಂದ ₹28,000ರವೆಗೆ 2ಬಿಹೆಚ್‌ಕೆ ಬಾಡಿಗೆ ದರ ಇದೆ.

ವೈಟ್‌ಫೀಲ್ಡ್ ಪ್ರದೇಶದಲ್ಲಿ ಈ ವರ್ಷ ಸರಾಸರಿ ₹26,500ವರೆಗೆ ಬಾಡಿಗೆದರ ಏರಿಕೆಯಾಗಿದೆ. 21% ರಷ್ಟು ದರ ಹೆಚ್ಚಳವನ್ನು ಕಂಡಿದೆ. ಸರ್ಜಾಪುರ ರಸ್ತೆ (ಸರ್ಜಾಪುರ ಗ್ರಾಮವನ್ನು ಹೊರತುಪಡಿಸಿ) 20% ರಷ್ಟು ಏರಿಕೆ ಕಂಡಿದ್ದು, 1000 ಚದರ ಅಡಿ 2 ಬಿಎಚ್‌ಕೆ ಮಾಸಿಕ ಬಾಡಿಗೆ ದರ ಸರಾಸರಿ ₹27,000ಕ್ಕೆ ತಲುಪಿದೆ.

ಈ ಸುದ್ದಿ ಓದಿದ್ದೀರಾ? ಬೆಂಗಳೂರು | ₹30 ಲಕ್ಷ ಮೌಲ್ಯದ ಗಾಂಜಾ ವಶ ; ಓರ್ವನ ಬಂಧನ

ಅನರಾಕ್ ಗ್ರೂಪ್‌ನ ಹಿರಿಯ ನಿರ್ದೇಶಕ ಮತ್ತು ಮುಖ್ಯಸ್ಥ ಪ್ರಶಾಂತ್ ಠಾಕೂರ್ ಪ್ರಕಾರ, ಬಾಡಿಗೆ ಬೇಡಿಕೆ ಮತ್ತು ಏರಿಕೆ ಗಮನಿಸಿದಾಗ ಬೆಂಗಳೂರು ಪ್ರಸ್ತುತ ಟಾಪ್ 7 ನಗರಗಳಲ್ಲಿ ಮೊದಲನೇ ಸ್ಥಾನದಲ್ಲಿದೆ. ಬೆಂಗಳೂರಿನಲ್ಲಿ ಪೂರ್ವ ಮತ್ತು ಉತ್ತರ ಭಾಗಗಳಲ್ಲಿ ಬಾಡಿಗೆ ದರ ಹೆಚ್ಚಳವಾಗಿದೆ.

ಪುಣೆಯ ಹಿಂಜೇವಾಡಿ ಮತ್ತು ವಾಘೋಲಿಯಲ್ಲಿ ಕ್ರಮವಾಗಿ ಶೇ. 19 ಮತ್ತು ಶೇ. 13 ಬಾಡಿಗೆ ಏರಿಕೆ ಆಗಿದೆ. ಚೆನ್ನೈನಲ್ಲಿ ಪಲ್ಲವರಂ, ಪೆರಂಬೂರ್ ಮತ್ತು ಒರಗಡಂನಲ್ಲಿ ಕ್ರಮವಾಗಿ ಶೇ.16, ಶೇ.10 ಹಾಗೂ ಶೇ. 11 ರಷ್ಟು ಬಾಡಿಗೆ ದರಗಳು ಏರಿಕೆ ಆಗಿವೆ. ದೆಹಲಿಯ ದ್ವಾರಕಾದಲ್ಲಿ ಶೇ. 10ರಷ್ಟು ಏರಿಕೆ ಆಗಿದೆ.

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಎಸ್‌ಐಆರ್ ವಿರುದ್ಧದ ಹೋರಾಟದಲ್ಲಿ ದೇಶಕ್ಕೆ ಕರ್ನಾಟಕ ದಿಕ್ಸೂಚಿಯಾಗಬೇಕು: ಪ್ರೊ. ಯೋಗೇಂದ್ರ ಯಾದವ್

ಕರ್ನಾಟಕವು ಹಲವು ವಿಷಯಗಳಲ್ಲಿ ದೇಶಕ್ಕೆ ದಿಕ್ಸೂಚಿಯಾಗಿದೆ. ಎಸ್‌ಐಆರ್‍‌ ವಿರುದ್ಧದ ಹೋರಾಟದಲ್ಲಿಯೂ ದೇಶಕ್ಕೆ...

ಶಾಲಾ ಶಿಕ್ಷಣದಲ್ಲಿ ಕಡ್ಡಾಯವಾಗಿ ‘ಹಿಂದಿ’ ತೆಗೆಯಬೇಕು: ಹಿಂದಿ ವಿರೋಧಿ ಕರ್ನಾಟಕ

ಕರ್ನಾಟಕದಲ್ಲಿ ಶೈಕ್ಷಣಿಕವಾಗಿ ಪ್ರತಿ ವರ್ಷ ನಡೆಯುವ ಎಸ್ ಎಸ್ ಎಲ್ ಸಿ...

ಬೇಲಿಯೇ ಎದ್ದು ಹೊಲ ಮೇಯ್ದಂತೆ ಮಾಡಿದ ಮಾಹಿತಿ ಆಯೋಗ; ಕಾಯ್ದೆಯ ವಾರ್ಷಿಕ ವರದಿ ನೀಡಲು ‘ಗೌಪ್ಯತೆ’ಯ ನೆಪ

ಮಾಹಿತಿ ಹಕ್ಕು ಕಾಯ್ದೆ-2005ರಡಿ ಸಾರ್ವಜನಿಕ ಪ್ರಾಧಿಕಾರಗಳು ಪಾರದರ್ಶಕವಾಗಿ ಕೆಲಸ ಮಾಡುತ್ತಿವೆಯೇ ಎಂಬುದನ್ನು...

ಒಳಮೀಸಲಾತಿ: 56,000 ಹುದ್ದೆಗಳ ನೇಮಕಾತಿಗೆ ಹೊರಡಿಸಿದ ಅಧಿಸೂಚನೆ ರದ್ದತಿಗೆ ಸರ್ಕಾರ ಒಪ್ಪಿಗೆ

ಇತ್ತೀಚೆಗೆ 56,432 ಹುದ್ದೆಗಳನ್ನು ಭರ್ತಿ ಮಾಡಲು ಸರ್ಕಾರ ಹೊರಡಿಸಿದ್ದ ಆದೇಶವನ್ನು ಹಿಂಪಡೆಯಲು...