ಪೊಲೀಸ್ ಅಧಿಕಾರಿಗಳ ಸೋಗಿನಲ್ಲಿ ನಾಲ್ವರು ಆರೋಪಿಗಳು ವ್ಯಾಪಾರಿಯೊಬ್ಬರ ಮನೆಗೆ ನುಗ್ಗಿ, ಬಂದೂಕು ತೋರಿಸಿ 20 ಲಕ್ಷ ರೂ. ಹಣ ಮತ್ತು ಅರ್ಧ ಕೆ.ಜಿ ಚಿನ್ನಾಭರಣೆಗಳನ್ನು ದರೋಡೆ ಮಾಡಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಘಟನೆಯ ದೃಶ್ಯಾವಳಿಗಳು ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿತ್ತಾದರೂ, ಆರೋಪಿಗಳು ಸಿಸಿಟಿವಿಯ ವಿಡಿಆರ್‌ಅನ್ನು ಹೊತ್ತೊಯ್ದಿದ್ದಾರೆ.
ಘಟನೆಯು ಬೆಂಗಳೂರಿನ ಬ್ಯಾಡರಹಳ್ಳಿಯಲ್ಲಿ ನಡೆದಿದೆ. ಸೋಮವಾರ ಬೆಳಗ್ಗೆ ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ಮತ್ತು ಕ್ರೈಂ ಸೀನ್ ಅಧಿಕಾರಿಗಳ ಸಮವಸ್ತ್ರ ಧರಿಸಿ ರಿಯಲ್ ಎಸ್ಟೇಟ್ ಉದ್ಯಮಿ ಹೊಂಬಾಳೇಗೌಡ ಎಂಬವರ ಮನೆಗೆ ನುಗ್ಗಿದ್ದಾರೆ. ಚಾಕು ಮತ್ತು ಬಂದೂಕು ತೋರಿಸಿ, ಹೊಂಬಾಳೇಗೌಡ ಮತ್ತು ಅವರ ಪತ್ನಿಯನ್ನು ಕಟ್ಟಿಹಾಕಿದ್ದಾರೆ. ಮೊಬೈಲ್ ಫೋನ್‌ಗಳನ್ನು ಕಸಿದುಕೊಂಡಿದ್ದಾರೆ. ಬಳಿಕ, ಹಣ-ಚಿನ್ನಾಭರಣವನ್ನು ದೋಚಿದ್ದಾರೆ. ಮಾತ್ರವಲ್ಲದೆ, ಸಿಸಿಟಿವಿ ಡಿವಿಆರ್‌ಅನ್ನು ತೆಗೆದುಕೊಂಡು ಪರಾರಿಯಾಗಿದ್ದಾರೆ ಎಂದು ವರದಿಯಾಗಿದೆ.
ಈ ಘಟನೆಯು ಹಾಡಹಗಲೇ ನಡೆದಿದ್ದು, ಪ್ರದೇಶದ ಜನರನ್ನು ಬೆಚ್ಚಿಬೀಳಿಸಿದೆ. ಆರೋಪಿಗಳು ಪೊಲೀಸ್ ಸಮವಸ್ತ್ರ ಧರಿಸಿ ಬಂದು ದರೋಡೆ ಮಾಡಿರುವುದು ಜನರಲ್ಲಿ ಆತಂಕ ಮೂಡಿಸಿದೆ.
Men posing as police officers rob a house in Bengaluru. Claiming to be cops, they allegedly threatened a family at gunpoint, tied the couple, looted 20 lakh cash and about half kilo gold jewellery, then fled with the CCTV DVR. Police begin investigation. pic.twitter.com/K9ETvwpMja
— Deepak Bopanna (@dpkBopanna) February 17, 2026
ಸದ್ಯ, ಬ್ಯಾಡರಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ವಿಶೇಷ ತಂಡಗಳನ್ನು ರಚಿಸಿ ತನಿಖೆ ಆರಂಭಿಸಿದ್ದಾರೆ. ಮನೆಯ ಸುತ್ತಮುತ್ತಲಿನ ಸಿಸಿಟಿವಿ ವಿಡಿಯೋಗಳನ್ನು ವಿಶ್ಲೇಷಿಸಿ ಆರೋಪಿಗಳನ್ನು ಗುರುತಿಸುವ ಪ್ರಯತ್ನ ನಡೆಯುತ್ತಿದೆ. ಆರೋಪಿಗಳು ವಾಹನದಲ್ಲಿ ಪರಾರಿಯಾಗಿರುವ ಸಾಧ್ಯತೆ ಇದ್ದು, ಸಂಬಂಧಿತ ವಾಹನಗಳನ್ನು ಹುಡುಕಲಾಗುತ್ತಿದೆ. ಇದು ಯೋಜಿತ ದರೋಡೆ ಎಂದು ಪೊಲೀಸರು ಶಂಕಿಸಿದ್ದಾರೆ.
ಬೆಂಗಳೂರಿನಲ್ಲಿ ಪೊಲೀಸರ ಸೋಗಿನ ಇತ್ತೀಚೆಗೆ ದರೋಡೆಗಳು ಹೆಚ್ಚಾಗುವೆ. ಈ ಹಿಂದೆ, RBI ಅಧಿಕಾರಿಗಳ ಸೋಗಿನಲ್ಲಿ ಕ್ಯಾಶ್ ವ್ಯಾನ್ ದರೋಡೆ ಮಾಡಲಾಗಿತ್ತು. ಅಂತೆಯೇ, ED ಅಧಿಕಾರಿಗಳ ಸೋಗಿನಲ್ಲಿ ಚಿನ್ನಾಭರಣವನ್ನು ದರೋಡೆ ಮಾಡಲಲಾಗಿತ್ತು. ಇಂತಹ ಪ್ರಕರಣಗಳು ಹೆಚ್ಚುತ್ತಿರುವುದರಿಂದ ನಗರದ ಜನರು ಹೆಚ್ಚಿನ ಎಚ್ಚರಿಕೆ ವಹಿಸಬೇಕು ಎಂದು ಪೊಲೀಸರು ಸಲಹೆ ನೀಡಿದ್ದಾರೆ. ಮನೆಗೆ ಬರುವ ಯಾವುದೇ ಅಧಿಕಾರಿಗಳನ್ನು ಗುರುತಿನ ಚೀಟಿ, ಐಡಿ ಕಾರ್ಡ್ ಹಾಗೂ ಅಧಿಕೃತ ವಾಹನಗಳನ್ನು ಪರಿಶೀಲಿಸಬೇಕು ಎಂದು ಹೇಳಿದ್ದಾರೆ.





