ಆನ್‌ಲೈನ್‌ ಗೇಮಿಂಗ್‌ | ಬೆಂಗಳೂರಿನ ಸಾಫ್ಟ್ ವೇರ್ ಎಂಜಿನಿಯರ್ 90 ಲಕ್ಷ ರೂ. ಕಳೆದುಕೊಂಡಿದ್ದು ಹೇಗೆ?

Date:

ಇತ್ತೀಚೆಗೆ ಆನ್‌ಲೈನ್‌ ಗೇಮಿಂಗ್‌ನ ಚಟಕ್ಕೆ ಸಿಲುಕಿ, ಕಳೆದುಕೊಂಡ ಹಣವನ್ನು ಮರಳಿ ಪಡುವ ಹಪಾಹಪಿಯಲ್ಲಿ ಬೆಂಗಳೂರಿನ ಸಾಪ್ಟ್‌ ವೇರ್ ಎಂಜಿನಿಯರ್ ಬರೋಬ್ಬರಿ 90 ಲಕ್ಷ ರೂಪಾಯಿಯನ್ನು ಕಳೆದುಕೊಂಡಿದ್ದಾರೆ. ತಾನು ಯಾವುದೇ ಲಾಭ ಗಳಿಸದೆ ನಿರಂತರವಾಗಿ ಹಣ ಕಳೆದುಕೊಂಡು ಸಾಲದಲ್ಲಿ ಮುಳುಗುತ್ತಿರುವುದನ್ನು ಗಮನಿಸಿದ ಬಳಿಕ ಟೆಕ್ಕಿ ಪೊಲೀಸರ ಮೊರೆ ಹೋಗಿದ್ದಾರೆ.

ಆನ್‌ಲೈನ್ ಗೇಮಿಂಗ್ ಜಾಲ ಭಾರತದಲ್ಲಿ ವಿಸ್ತಾರವಾಗಿ ಬೆಳೆಯುತ್ತಿದೆ. ಅದೆಷ್ಟೋ ಯುವಕರು ಈ ಗೇಮಿಂಗ್ ಲೋಕದಲ್ಲಿ ಸಿಲುಕಿ, ಹಣ ಕಳೆದುಕೊಂಡು ಒದ್ದಾಡುತ್ತಿದ್ದಾರೆ. ಅದರಲ್ಲೂ ಇತ್ತೀಚೆಗೆ ರಾಜ್ಯದ ಹಲವು ಯುವಕರು, ವಿದ್ಯಾರ್ಥಿಗಳು ಆನ್‌ಲೈನ್ ಗೇಮಿಂಗ್‌ನಲ್ಲಿ ನಷ್ಟ ಹೊಂದಿ ಆತ್ಮಹತ್ಯೆಯಂತಹ ಕಠಿಣ ನಿರ್ಧಾರವನ್ನು ತೆಗೆದುಕೊಂಡಿದ್ದಾರೆ. ಹೆಚ್ಚಾಗಿ ವಿದ್ಯಾವಂತರು ಗೇಮಿಂಗ್ ಚಟದಲ್ಲಿ ಸಿಲುಕುತ್ತಿರುವುದು ವಿಷಾದನೀಯ.

ಇದನ್ನು ಓದಿದ್ದೀರಾ? ಆನ್‌ಲೈನ್ ಗೇಮ್ಸ್ | ತಂದೆ-ತಾಯಿ, ಸಹೋದರಿಯನ್ನು ಕೊಂದ 21 ವರ್ಷದ ಯುವಕ

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಬೆಂಗಳೂರಿನ 37 ವರ್ಷದ ಟೆಕ್ಕಿ ಕಳೆದ ಎರಡು ವರ್ಷಗಳಿಂದ ಆನ್‌ಲೈನ್‌ ಗೇಮಿಂಗ್ ಆ್ಯಪ್‌ ಒಂದರಲ್ಲಿ ಹೂಡಿಕೆ ಮಾಡಿ ಆನ್‌ಲೈನ್ ಗೇಮ್ ಆಡುತ್ತಿದ್ದು, ಈವರೆಗೆ ಬರೋಬ್ಬರಿ 90 ಲಕ್ಷ ರೂಪಾಯಿಯನ್ನು ಕಳೆದುಕೊಂಡಿದ್ದಾರೆ. ಉಳಿತಾಯ ಕಳೆದುಕೊಂಡು, ತನ್ನ ಮೇಲಿರುವ ಸಾಲದ ಹೊರೆ ಹೆಚ್ಚಾಗುತ್ತಿದ್ದಂತೆ ಸೈಬರ್ ಕ್ರೈಮ್ ಪೊಲೀಸ್ ಠಾಣೆಯಲ್ಲಿ ಟೆಕ್ಕಿ ದೂರು ದಾಖಲಿಸಿದ್ದಾರೆ.

ಸದ್ಯ ದೂರಿನ ಆಧಾರದಲ್ಲಿ ಅಪರಿಚಿತ ವ್ಯಕ್ತಿಗಳ ವಿರುದ್ಧ ಪೊಲೀಸರು ಐಟಿ ಕಾಯ್ದೆ ಮತ್ತು ಬಿಎನ್‌ಎಸ್‌ನ ಸೆಕ್ಷನ್ 318 (4) ಅಡಿಯಲ್ಲಿ ದೂರು ದಾಖಲಿಸಿದ್ದಾರೆ. ಈ ಹಿಂದೆಯೂ ಹೀಗೆಯೇ ಅದೆಷ್ಟೋ ಪ್ರಕರಣಗಳು ದಾಖಲಾಗಿವೆ. ಆದರೆ ಈವರೆಗೂ ಆನ್‌ಲೈನ್ ಗೇಮಿಂಗ್ ಆ್ಯಪ್‌ಗಳ ಮೋಸದ ಬಗ್ಗೆ ಆಳವಾದ ತನಿಖೆಯಾಗಿಲ್ಲ, ಯಾರ ಬಂಧನವಾಗಿಲ್ಲ, ಕ್ರಮವೂ ತೆಗೆದುಕೊಂಡಿಲ್ಲ.

ಟೆಕ್ಕಿ 2023ರ ಜೂನ್‌ನಲ್ಲಿ ತನ್ನ ಸ್ನೇಹಿತ ತಿಳಿಸಿದಂತೆ ಲಿಂಕ್ ಒಂದನ್ನು ಕ್ಲಿಕ್ ಮಾಡಿ ‘ನಮ್ಮ ಎಕ್ಸ್‌ಚೇಂಜ್’ ಎಂಬ ವೆಬ್‌ಸೈಟ್ ಮೂಲಕ ಗೇಮಿಂಗ್ ಆ್ಯಪ್‌ ಅನ್ನು ಡೌನ್‌ಲೋಡ್ ಮಾಡಿಕೊಂಡಿದ್ದಾರೆ. ಆರಂಭದಲ್ಲಿ ಹತ್ತು ಸಾವಿರ ರೂಪಾಯಿ ಹೂಡಿಕೆ ಮಾಡಿ ಆಟವಾಡಿದ್ದು, ಇದರಿಂದ 40 ಸಾವಿರ ರೂಪಾಯಿ ಪಡೆದಿದ್ದಾರೆ. ಆ ಹಣ ಟೆಕ್ಕಿ ಖಾತೆಗೂ ಜಮೆಯಾಗಿದೆ.

ಇದನ್ನು ಓದಿದ್ದೀರಾ? ಆನ್‌ಲೈನ್‌ ಗೇಮಿಂಗ್ ಚಟ | 96 ಲಕ್ಷ ರೂ. ಸಾಲ ಮಾಡಿದ ವಿದ್ಯಾರ್ಥಿ; ಪತ್ರಕರ್ತನ ಮುಂದೆ ಕಣ್ಣೀರು!

ಇದರಿಂದ ಅತಿ ಉತ್ಸಾಹಕ್ಕೆ ಒಳಗಾದ ಟೆಕ್ಕಿ ಮತ್ತೆ ಹೂಡಿಕೆ ಮಾಡಿ ಆಟವಾಡಿದ್ದಾರೆ. ಆದರೆ ಹತ್ತು ಲಕ್ಷ ರೂಪಾಯಿ ನಷ್ಟವಾಗುತ್ತಿದ್ದಂತೆ ತನಗೆ ಈ ಗೇಮ್ ಪರಿಚಯಿಸಿದ ಸ್ನೇಹಿತನನ್ನು ಭೇಟಿಯಾಗಿ ತಿಳಿಸಿದ್ದಾರೆ. “ಆರಂಭದಲ್ಲಿ ನಷ್ಟವಾಗುವುದು ಸಹಜ, ಬಳಿಕ ಹೆಚ್ಚು ಲಾಭ ಪಡೆಯಬಹುದು. ಹೂಡಿಕೆ ಮಾಡಿ ಆಡು” ಎಂಬ ತನ್ನ ಸ್ನೇಹಿತನ ಮಾತು ಕೇಳಿ ಟೆಕ್ಕಿ ಹತ್ತು ಲಕ್ಷ ನಷ್ಟವನ್ನು ಸರಿದೂಗಿಸಲು 50 ಲಕ್ಷ ರೂಪಾಯಿ ಹೂಡಿಕೆ ಮಾಡಿದ್ದಾರೆ. ಬಳಿಕ 40 ಲಕ್ಷ ರೂಪಾಯಿ ಸಾಲ ಪಡೆದು ಹೂಡಿಕೆ ಮಾಡಿ ಗೇಮ್ ಆಡಿದ್ದಾರೆ. ಹೀಗೆ ಸುಮಾರು ಎರಡು ವರ್ಷಗಳ ಕಾಲ ಗೇಮಿಂಗ್ ಚಟ ಮತ್ತು ನಷ್ಟವಾದ ಹಣವನ್ನು ಹಿಂಪಡೆಯುವ ನಿರೀಕ್ಷೆಯಲ್ಲಿ ಹೂಡಿಕೆ ಮಾಡಿ ಬೆಂಗಳೂರಿನ ಈ ಟೆಕ್ಕಿ ಬರೋಬ್ಬರಿ 90 ಲಕ್ಷ ರೂಪಾಯಿ (ಒಂದು ಕೋಟಿ ರೂಪಾಯಿಗಿಂತ ಹತ್ತು ಲಕ್ಷ ರೂ. ಕಡಿಮೆ) ಕಳೆದುಕೊಂಡಿದ್ದಾರೆ.

ಸಾಫ್ಟ್‌ ವೇರ್ ಎಂಜಿನಿಯರ್ 2023ರ ಜೂನ್‌ನಿಂದ ಆನ್‌ಲೈನ್ ಗೇಮಿಂಗ್ ಆ್ಯಪ್‌ನಲ್ಲಿ ಆಟವಾಡಲು ಶುರು ಮಾಡಿದ್ದು, 2025ರ ಮಾರ್ಚ್‌ 6ರವರೆಗೆ ಆಡಿ ತನ್ನ ಎಲ್ಲಾ ಹಣವನ್ನು ಕಳೆದುಕೊಂಡಿದ್ದಾರೆ. ಸದ್ಯ ಸಾಲದ ಹೊರೆಯಲ್ಲಿ ಮುಳುಗಿ ಸೈಬರ್ ಕ್ರೈಮ್ ಮೊರೆ ಹೋಗಿದ್ದಾರೆ.

ಇದನ್ನು ಓದಿದ್ದೀರಾ? ಹಾಸನ | ಆನ್‌ಲೈನ್ ಗೇಮಿಂಗ್; ಲಕ್ಷಾಂತರ ಹಣ ಕಳೆದುಕೊಂಡ ಯುವಕ ಅತ್ಮಹತ್ಯೆ 

ಆನ್‌ಲೈನ್‌ ಗೇಮಿಂಗ್‌ನ ಚಟದಿಂದಾಗಿ ಯುವಕರು, ವಿದ್ಯಾರ್ಥಿಗಳು ಲಕ್ಷಾಂತರ ರೂಪಾಯಿ ಕಳೆದುಕೊಳ್ಳುವುದು ಇದು ಮೊದಲೇನಲ್ಲ. ರಾಜ್ಯದಲ್ಲಿ ಅದೆಷ್ಟೋ ಪ್ರಕರಣಗಳು ದಾಖಲಾಗಿವೆ. ಕಲಬುರಗಿಯಲ್ಲಿ 80 ಲಕ್ಷ ರೂಪಾಯಿ ಕಳೆದುಕೊಂಡು ವಿದ್ಯಾರ್ಥಿ ಆತ್ಮಹತ್ಯೆ ಮಾಡಿಕೊಂಡರೆ, ಬೀದರ್‌ನಲ್ಲಿ ಆನ್‌ಲೈನ್ ಜೂಜಲ್ಲಿ ಸಿಲುಕಿ 15 ಲಕ್ಷ ರೂ. ಕಳೆದುಕೊಂಡು ಯುವಕ ಆತ್ಮಹತ್ಯೆಗೆ ಶರಣಾಗಿದ್ದಾನೆ. ಹಾಸನದಲ್ಲಿಯೂ ಇದೇ ರೀತಿಯ ಘಟನೆ ನಡೆದಿದೆ. ಇವೆಲ್ಲವೂ ಮುನ್ನಲೆಗೆ ಬಂದ ಘಟನೆಗಳಾದರೆ, ಇನ್ನೂ ಕೆಲವು ಪ್ರಕರಣಗಳು ಕುಟುಂಬಸ್ಥರ ಭಯ, ಸಮಾಜದ ಆತಂಕದಲ್ಲಿ ಮುಚ್ಚಿ ಹೋಗಿದೆ. ಮದ್ಯ, ಡ್ರಗ್ಸ್, ಮೊದಲಾದವು ಜನರಿಗೆ ಹೇಗೆ ವ್ಯಸನವಾಗುತ್ತದೆಯೋ ಹಾಗೆಯೇ ಗೇಮಿಂಗ್ ಕೂಡಾ ಒಂದು ವ್ಯಸನ. ಈ ಚಟದಿಂದ ಹೊರಬರಲು ಅದೆಷ್ಟೋ ಯುವಕರು ಇಂದಿಗೂ ಒದ್ದಾಡುತ್ತಿದ್ದಾರೆ.

ಇಂತಹ ಗೇಮಿಂಗ್ ಆ್ಯಪ್‌ಗಳಿಗೆ ಸರ್ಕಾರ ಕಡಿವಾಣ ಹಾಕುವುದು ಅತ್ಯಗತ್ಯ. ಹಾಗೆಯೇ ಪೋಷಕರು ಕೂಡಾ ತಮ್ಮ ಮಕ್ಕಳಿಗೆ ಮೊಬೈಲ್ ಕೊಡಿಸಿದರೆ ಸಾಲದು, ಮಕ್ಕಳ ಮೇಲೆ ನಿಗಾ ವಹಿಸುವುದು ಮುಖ್ಯ. ಆನ್‌ಲೈನ್‌ ಗೇಮಿಂಗ್‌ಗೆ ಸರ್ಕಾರ ಕಡಿವಾಣ ಹಾಕುವುದರ ಜೊತೆಗೆ ಇಂತಹ ಜಾಲಕ್ಕೆ ಸಿಲುಕುವುದರಿಂದ ನಮ್ಮನ್ನು ನಾವು ತಪ್ಪಿಸಿಕೊಳ್ಳುವ ಅಗತ್ಯವೂ ಇದೆ.

WhatsApp Image 2025 11 17 at 3.21.17 PM
ಈ ದಿನ ಡೆಸ್ಕ್
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಒಳಮೀಸಲಾತಿ ಜಾರಿಗೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಬಿಡುತ್ತಿಲ್ಲ: ಮಂದಕೃಷ್ಣ ಮಾದಿಗ ಆರೋಪ

ಒಳಮೀಸಲಾತಿ ಜಾರಿಗೆ ತರುತ್ತೇವೆಂದು ಹೇಳಿದ್ದ ಕಾಂಗ್ರೆಸ್‌, ಈಗ ಒಳಮೀಸಲಾತಿ ಅನುಷ್ಠಾನದಲ್ಲಿ ಮೀನಾಮೇಷ...

ಒಳಮೀಸಲಾತಿ ಹೋರಾಟ | ಸಿಎಂ ಸಿದ್ದರಾಮಯ್ಯ ನುಡಿದಂತೆ ನಡೆದಿಲ್ಲ: ಮಾರಸಂದ್ರ ಮುನಿಯಪ್ಪ

ಸಿದ್ದರಾಮಯ್ಯ ಅವರು ಸಮಾಜವಾದದ ಬಗ್ಗೆ ಮಾತನಾಡುತ್ತಾರೆ. ನುಡಿದಂತೆ ನಡೆದಂತೆ ಸರ್ಕಾರವೆಂದು ಹೇಳುತ್ತಾರೆ....

ಫ್ರೀಡಂ ಪಾರ್ಕ್‌ನಿಂದ ವಿಧಾನಸೌಧಕ್ಕೆ ಬರಲಿದೆ ಒಳಮೀಸಲಾತಿ ಹೋರಾಟ: ಸರ್ಕಾರಕ್ಕೆ ಮಾದರ ಚೆನ್ನಯ್ಯ ಸ್ವಾಮೀಜಿ ಎಚ್ಚರಿಕೆ

ಕಳೆದ 35 ವರ್ಷಗಳಿಂದ ಹಲವಾರು ಹೋರಾಟಗಾರರು ತಮ್ಮ ಜೀವ-ಜೀವನವನ್ನು ಅರ್ಪಿಸಿ, ಮನೆ-ಮಠವನ್ನು...

ಬೆಂಗಳೂರು | ನೇಮಕಾತಿಯಲ್ಲಿ ಒಳಮೀಸಲಾತಿಗೆ ಆಗ್ರಹಿಸಿ ಮೊಳಗುತ್ತಿದೆ ಘೋಷ

ಸರ್ಕಾರವು ಒಳಮೀಸಲಾತಿಯನ್ನು ತಪ್ಪಿಸುವ ಹುನ್ನಾರದಿಂದ ತರಾತುರಿಯಲ್ಲಿ 56,432 ಹುದ್ದೆಗಳ ನೇಮಕಾತಿಗೆ ಆದೇಶ...