ಬೆಂಗಳೂರು | ರಸ್ತೆಯಲ್ಲಿ ಪತ್ನಿಗೆ ಕಿರುಕುಳ ನೀಡಿದ ಬಗ್ಗೆ ಟ್ವೀಟ್ ಮಾಡಿದ ಪತಿ

Date:

ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ರಾತ್ರಿ ವೇಳೆ ಕಾರು ತಡೆದು ಹಣ, ಚಿನ್ನ ಸೇರಿದಂತೆ ಇತರೆ ಬೆಲೆಬಾಳುವ ವಸ್ತುಗಳನ್ನು ದೋಚುವ ಪ್ರಕರಣಗಳು ಇತ್ತೀಚೆಗೆ ಹೆಚ್ಚಳವಾಗಿವೆ. ಬೇಕಂತಲೇ ಕಾರಿಗೆ ಡಿಕ್ಕಿ ಹೊಡೆದು ಜಗಳ ತೆಗೆದು ಹಣ ನೀಡುವಂತೆ ಧಮ್ಕಿ ಹಾಕುವ ಪ್ರಕರಣಗಳೂ ಈಗಾಗಲೇ ನಗರದಲ್ಲಿ ವರದಿಯಾಗಿವೆ.

ಈ ಘಟನೆಗಳಿಗೆ ಸಂಬಂಧಿಸಿದಂತೆ, ಇತ್ತೀಚೆಗೆ ನಗರದಲ್ಲಿ ಮತ್ತೊಂದು ಪ್ರಕರಣ ನಡೆದಿದ್ದು, ಈ ಬಗ್ಗೆ ಸಂತ್ರಸ್ತೆಯ ಪತಿ ಸೃಜನ್ ಆರ್ ಶೆಟ್ಟಿ ಸಾಮಾಜಿಕ ಜಾಲತಾಣವಾದ ಎಕ್ಸ್‌ನಲ್ಲಿ ವಿವರವಾಗಿ ಬರೆದು ಪೋಸ್ಟ್‌ ಮಾಡಿದ್ದಾರೆ.

“ನವೆಂಬರ್‌ 8 ರಂದು ಸರ್ಜಾಪುರದಿಂದ ರಾತ್ರಿ ವೇಳೆ, ಕ್ಯಾಬ್ ಸಿಗುವುದು ಕಷ್ಟವೆಂದು ಭಾವಿಸಿ ನನ್ನ ಪತ್ನಿ ತನ್ನ ಕೆಲವು ಸಹೋದ್ಯೋಗಿಗಳನ್ನು (ಇಬ್ಬರು ಮಹಿಳೆಯರು ಮತ್ತು ಒಬ್ಬ ಪುರುಷ) ಡ್ರಾಪ್ ಮಾಡಲು ಮುಂದಾಗಿದ್ದಾಳೆ. ಈ ವೇಳೆ, ನನ್ನ ಪತ್ನಿಯ ಕಾರನ್ನು ಕೆಲವು ಕಿಲೋ ಮೀಟರುಗಳಷ್ಟು ಪುರುಷರ ಗುಂಪೊಂದು ಹಿಂಬಾಲಿಸಿದೆ” ಎಂದು ಬರೆದುಕೊಂಡಿದ್ದಾರೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

“ಈ ಬಗ್ಗೆ ತಿಳಿದ ನನ್ನ ಪತ್ನಿ ಮುಂದಾಗುವ ಅಪಾಯದ ಮುನ್ಸೂಚನೆ ಮೊದಲೇ ತಿಳಿದು ನಗರದ ಮುಖ್ಯ ರಸ್ತೆಯಲ್ಲಿಯೇ ವಾಹನವನ್ನು ನಿಲ್ಲಿಸಿದ್ದಾಳೆ. ಪೊಲೀಸರಿಗೆ ಈ ಬಗ್ಗೆ ಮಾಹಿತಿ ನೀಡಿದ್ದಾಳೆ” ಎಂದು ಹೇಳಿದ್ದಾರೆ.

“ಗಾಡಿಯನ್ನು ಚೇಸ್ ಮಾಡುವಾಗ ನನ್ನ ಪತ್ನಿ ಯಾವುದೇ ವಾಹನಗಳಿಗೆ ಹಾನಿ ಮಾಡಿಲ್ಲ. ಆದರೂ, ಪುರುಷರ ಗುಂಪು ಕಾರಿನಿಂದ ಕೆಳಗಡೆ ಇಳಿಯುವಂತೆ ಧಮ್ಕಿ ಹಾಕಿದ್ದಾರೆ. ಕಾರಿನಿಂದ ಹೊರಬರಲು ನನ್ನ ಪತ್ನಿ ಮತ್ತು ಆಕೆಯ ಸಹೋದ್ಯೋಗಿಗಳು ನಿರಾಕರಿಸಿದಾಗ ಕೆಲವು ಟೆಂಪೋ ಡ್ರೈವರ್‌ಗಳು ಆಕೆಯ ಕಾರಿಗೆ ಹಿಂಬದಿಯಿಂದ ಡಿಕ್ಕಿ ಹೊಡೆದಿದ್ದಾರೆ. ಕನ್ನಡ ಮಾತನಾಡಲು ಬಾರದ ಜನರ ಮೇಲೆ ಒತ್ತಡ ಹೇರುವ ಪ್ರಯತ್ನ ಇದಾಗಿದೆ. ಈ ವೇಳೆ, ಕಾರಿನಲ್ಲಿದ್ದ ಮೂವರು ಮಹಿಳೆಯರು ಮತ್ತು ಒಬ್ಬ ವ್ಯಕ್ತಿಗೆ ಯಾರೊಬ್ಬರೂ ಸಹಾಯ ಮಾಡಲು ಮುಂದೆ ಬರಲಿಲ್ಲ” ಎಂದು ಆರೋಪಿಸಿದ್ದಾರೆ.

“ನನ್ನ ಪತ್ನಿ ಪೊಲೀಸರಿಗೆ ಕರೆ ಮಾಡಿ ಮಾಹಿತಿ ನೀಡಿದ್ದಾಳೆ. ಜತೆಗೆ, ಅವಳ 10 ಸ್ನೇಹಿತರನ್ನು ತಕ್ಷಣವೇ ಅವಳು ಇರುವ ಸ್ಥಳಕ್ಕೆ ಕರೆಸಿಕೊಳ್ಳುವ ಬುದ್ಧಿವಂತಿಕೆ ತೋರಿದ್ದಾಳೆ. ಒಂದು ವೇಳೆ ಪೊಲೀಸರಿಗೆ ಕರೆ ಮಾಡದೆ ಇದ್ದಿದ್ದರೆ ಈ ಘಟನೆ ಬೇರೆಯದೇ ತಿರುವು ಪಡೆದುಕೊಳ್ಳಬಹುದಿತ್ತು” ಎಂದಿದ್ದಾರೆ.

“ಸರ್ಜಾಪುರ ಇಂತಹ ಘಟನೆಗಳಿಗೆ ಹಾಟ್‌ಸ್ಪಾಟ್‌ ಆಗಿದೆ. ಬೆಂಗಳೂರು ಪ್ರಶಾಂತವಾದ ನಗರವಾಗಿದೆ. ಆದರೂ ಇಂತಹ ಘಟನೆ ನಡೆದಿದೆ. ನಮಗೆ ಭದ್ರತೆ ಬೇಕು, ಅದರ ಜರೂರತ್ತು ಈಗ ಹೆಚ್ಚಾಗಿದೆ. ಈ ಅಪಾಯಗಳನ್ನು ತಡೆಯಲು ಪರಿಹಾರವನ್ನು ಕಂಡುಹಿಡಿಯಬೇಕಾಗಿದೆ” ಎಂದು ತಿಳಿಸಿದ್ದಾರೆ.

ನಾನು ಬೆಂಗಳೂರಿನಲ್ಲಿ ಎಂದಿಗೂ ಅಸುರಕ್ಷಿತ ಎಂದು ಭಾವಿಸಿಲ್ಲ. ಕನ್ನಡ ಮಾತನಾಡುವ ಪುರುಷ ಎಂಬ ನನ್ನ ವಿಶೇಷತೆ ನನಗೆ ತಿಳಿದಿದೆ. ಆದರೆ, ಕಳೆದ ಗುರುವಾರ ರಾತ್ರಿ ನಾನು ನಗರದ ಕೆಲವು ಭಾಗಗಳು ರಾತ್ರಿ 10 ಗಂಟೆಯ ನಂತರ ಎಷ್ಟು ಅಸುರಕ್ಷಿತವಾಗಿದೆ ಎಂದು ಭಾವಿಸಿದೆ.

“ನಾನು ಸರ್ಜಾಪುರದಲ್ಲಿ ನಕಲಿ ಅಪಘಾತಗಳ ಭಯಾನಕ ವೀಡಿಯೊಗಳನ್ನು ನೋಡಿದ್ದೇನೆ. ಅಲ್ಲಿ ಗೂಂಡಾಗಳು ಕಾರಿನಲ್ಲಿ ಜನರನ್ನು ಬ್ಲಾಕ್‌ಮೇಲ್ ಮಾಡಲು ಪ್ರಯತ್ನಿಸಿದ್ದಾರೆ. 24×7 ಜನರು ಇರುವ ಬೆಂಗಳೂರಿನ ಭಾಗಗಳು ಇಂದಿರಾನಗರ, ಕೋರಮಂಗಲ, ಎಂ.ಜಿ ರಸ್ತೆ ಮುಂತಾದವು ಸುರಕ್ಷಿತವಾಗಿವೆ ಎಂದು ಇನ್ನೂ ಭಾವಿಸುತ್ತೇವೆ. ಜನರು ಹೆಚ್ಚಾಗಿ ಓಡಾಡದ ಸ್ಥಳಗಳಲ್ಲಿ ಉತ್ತಮ ಜಾಗರೂಕತೆಯ ಅಗತ್ಯವಿದೆ” ಎಂದು ಬರೆದುಕೊಂಡಿದ್ದಾರೆ.

ಈ ಸುದ್ದಿ ಓದಿದ್ದೀರಾ? ಬಿಬಿಎಂಪಿ | ಕರಡು ಮತದಾರರ ಪಟ್ಟಿಯಲ್ಲಿ ಹಕ್ಕು ಮತ್ತು ಆಕ್ಷೇಪಣೆ ಸಲ್ಲಿಸಲು ವಿಶೇಷ ಅಭಿಯಾನ

ಸದ್ಯ ಈ ಟ್ವೀಟ್‌ ವೈರಲ್ ಆಗಿದ್ದು, ಹಲವು ಜನ ಪ್ರತಿಕ್ರಿಯೆ ನೀಡಿದ್ದಾರೆ. ಕೆಲವು ಬಳಕೆದಾರರು ಈ ಟ್ವೀಟ್‌ ಅನ್ನು ಬೆಂಗಳೂರು ಪೊಲೀಸರಿಗೆ ಟ್ಯಾಗ್ ಮಾಡಿದ್ದಾರೆ.

“ಈ ಘಟನೆ ನಡೆದ ನಿರ್ದಿಷ್ಟ ಸ್ಥಳದ ವಿವರ ಮತ್ತು ನಿಮ್ಮ ಸಂಪರ್ಕ ವಿವರಗಳನ್ನು ಡಿಎಮ್‌ ಮೂಲಕ ದಯವಿಟ್ಟು ಒದಗಿಸಿ” ಎಂದು ಬೆಂಗಳೂರು ನಗರ ಪೊಲೀಸರು ಎಕ್ಸ್‌ನಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ.

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಉತ್ತರ ಕನ್ನಡ | ಪಡಿತರ ಚೀಟಿದಾರರಿಗೆ ಗುಡ್ ನ್ಯೂಸ್: ಮಾರ್ಚ್‌ನಲ್ಲಿ ಹೆಚ್ಚುವರಿ ಸೀಮೆಎಣ್ಣೆ ವಿತರಣೆ

ಉತ್ತರ ಕನ್ನಡ ಜಿಲ್ಲೆಯ ಗ್ರಾಮಾಂತರ ಪ್ರದೇಶದ ಪಡಿತರ ಚೀಟಿದಾರರಿಗೆ ಕೇಂದ್ರ ಸರ್ಕಾರದಿಂದ...

ಸಿಂಧನೂರು | ರೀಲ್ಸ್ ಮಾಡಲು ಹೋದ ಯುವಕ ನೀರು ಪಾಲು

ರೀಲ್ಸ್ ಮಾಡುವ ಉದ್ದೇಶದಿಂದ ಸ್ನೇಹಿತರಿಗೆ ವಿಡಿಯೋ ಮಾಡಲು ಹೇಳಿ ಈಜಲು ನದಿಗೆ...

ಗದಗ | ಆದ್ಯ ವಚನಕಾರ ದೇವರ ದಾಸಿಮಯ್ಯ: ರಾಘವೇಂದ್ರ ಕೊಪ್ಪಳ

"ಆದ್ಯ ವಚನಕಾರ ನೇಕಾರ ಸಂತ ದೇವರ ದಾಸಿಮಯ್ಯನವರು 10 ನೇ ಶತಮಾನದಲ್ಲಿ...