ಬೆಂಗಳೂರು | ಬಸ್‌ನಲ್ಲಿ ಮಹಿಳೆಯೊಂದಿಗೆ ಅಸಭ್ಯ ವರ್ತನೆ; ವ್ಯಕ್ತಿಯೊಬ್ಬನ ವಿರುದ್ಧ ದೂರು ದಾಖಲು

Date:

  • ಆಡುಗೋಡಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲು
  • ಸಮಸ್ಯೆ ಹೇಳಿದರೂ ಪ್ರತಿಕ್ರಿಯಿಸದ ಬಸ್ ನಿರ್ವಾಹಕ

ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ)ಯ ಬಸ್‌ ಅನ್ನು ನಿತ್ಯದ ಸಂಚಾರಕ್ಕಾಗಿ ನಗರದ ಬಹುಪಾಲು ಜನರು ಬಳಸುತ್ತಾರೆ. ಮಹಿಳೆಯರು ಪ್ರಯಾಣಿಸುವಾಗ ಅನುಭವಿಸುವ ಕೆಲವೊಂದು ಚಿತ್ರಹಿಂಸೆಗಳನ್ನು ಸಹಿಸಿಕೊಂಡು ಸುಮ್ಮನಾಗುತ್ತಾರೆ. ಇಲ್ಲೊಬ್ಬ ಧೈರ್ಯಶಾಲಿ ಎಂಜಿನಿಯರ್‌ವೊಬ್ಬರು ಬಸ್‌ನಲ್ಲಿ ಅಸಭ್ಯವಾಗಿ ವರ್ತಿಸಿದ ವ್ಯಕ್ತಿಯನ್ನು ಹಿಡಿದು, ಪೊಲೀಸರಿಗೆ ಒಪ್ಪಿಸಿದ್ದಾರೆ.

26 ವರ್ಷದ ಎಂಜಿನಿಯರ್‌ ಯುವತಿಯೊಬ್ಬರು ಎಂದಿನಂತೆ ಕೆಲಸಕ್ಕೆ ತೆರಳಲು ಶಿವಾಜಿನಗರದಿಂದ ಕೋರಮಂಗಲದ ಕಡೆಗೆ ಬಸ್‌ ಹತ್ತಿದ್ದರು. ಈ ವೇಳೆ, ಅವರೊಂದಿಗೆ ವ್ಯಕ್ತಿಯೊಬ್ಬ ಬಸ್‌ನಲ್ಲಿ ಅಸಭ್ಯವಾಗಿ ವರ್ತಿಸಿದ್ದಾನೆ ಎಂದು ಆರೋಪಿಸಲಾಗಿದೆ. ಹಾರ್ಡ್‌ವೇರ್ ಅಂಗಡಿಯ ಉದ್ಯೋಗಿ, ಆರೋಪಿ ಅಬ್ದುಲ್ಲಾ(44) ಎಂಬಾತನನ್ನು ಹಿಡಿದು ಯುವತಿ ಪೊಲೀಸರಿಗೆ ಒಪ್ಪಿಸಿದ್ದಾರೆ.

“ಬಸ್ಸಿನಲ್ಲಿ ಹೆಚ್ಚು ಪ್ರಯಾಣಿಕರಿರಲಿಲ್ಲ. ಬಸ್‌ ರಿಚ್‌ಮಂಡ್ ರಸ್ತೆಯನ್ನು ತಲುಪಿದಾಗ ನನ್ನ ಹಿಂದಿನಿಂದ ಯಾರೋ ನನ್ನನ್ನು ಮುಟ್ಟುತ್ತಿರುವ ಹಾಗೇ ಭಾಸವಾಯಿತು. ಹಿಂತಿರುಗಿ ನೋಡಿದಾಗ ನನ್ನ ಹಿಂದೆ (ಮಹಿಳೆಯರಿಗಾಗಿ ಮೀಸಲಿಟ್ಟ ಆಸನದಲ್ಲಿ) ಒಬ್ಬ ಮಧ್ಯವಯಸ್ಕ ವ್ಯಕ್ತಿ ಕುಳಿತಿದ್ದರು. ನನ್ನನ್ನು ಅವರು ಆಕಸ್ಮಿಕವಾಗಿ ಮುಟ್ಟಿರಬಹುದು ಎಂದು ನಿರ್ಲಕ್ಷಿಸಿದೆ” ಎಂದು ಯುವತಿ ವಿವರಿಸಿದ್ದಾಳೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

“ಬಸ್‌ ಮತ್ತೆ ಮುಂದೆ ಚಲಿಸುತ್ತಿದ್ದಂತೆ, ಹಿಂದಿನಿಂದ ಮತ್ತೆ ಯಾರೋ ನನ್ನ ಬೆನ್ನನ್ನು ಮುಟ್ಟಿದ ಅನುಭವವಾಯಿತು. ನಾನು ತಿರುಗಿ ನೋಡಿದೆ. ಈ ಬಗ್ಗೆ ಬಸ್‌ ನಿರ್ವಾಹಕರಿಗೆ ತಿಳಿಸಿದೆ. ಅವರು ಪ್ರತಿಕ್ರಿಯಿಸಲಿಲ್ಲ. ಘಟನೆಯನ್ನು ನೋಡಿದ ಇಬ್ಬರು ಮಹಿಳಾ ಪ್ರಯಾಣಿಕರು ಅಬ್ದುಲ್ಲಾ ಮೇಲೆ ಕ್ರಮ ಕೈಗೊಳ್ಳಬೇಕೆಂದು ನಿರ್ವಾಹಕರನ್ನು ಒತ್ತಾಯಿಸಿದರು. ಆದರೆ, ಅವರು ಮತ್ತೆ ಪ್ರತಿಕ್ರಿಯಿಸಲಿಲ್ಲ. ಲೈಂಗಿಕ ಕಿರುಕುಳ ನೀಡಿದ ವ್ಯಕ್ತಿ ಗಾಬರಿಗೊಂಡು ಮುಂಭಾಗದ ಬಾಗಿಲಿನಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸಿದನು. ಈ ವೇಳೆ, ಅವನನ್ನು ಹಿಡಿದು ಬಸ್‌ ಚಾಲಕನಿಗೆ ಬಾಗಿಲು ಲಾಕ್ ಮಾಡಲು ಒತ್ತಾಯಿಸಿದೆ” ಎಂದು ಆಕೆ ತಿಳಿಸಿದ್ದಾರೆ.

“ಬಸ್ ಚಾಲಕ ಬಸ್‌ನ ಬಾಗಿಲು ಲಾಕ್ ಮಾಡಿದರು. ಇದೇ ವೇಳೆ ನನ್ನ ಮೊಬೈಲ್‌ನಲ್ಲಿ ಅಬ್ದುಲ್ಲಾ ಚಲನವಲನಗಳನ್ನು ಸೆರೆಹಿಡಿಯಲು ಪ್ರಯತ್ನಿಸಿದೆ. ಆತ ಅದನ್ನು ಕಸಿದುಕೊಳ್ಳಲು ಯತ್ನಿಸಿದ. ಅಲ್ಲದೆ, ಕಿಟಕಿಯನ್ನು ತೆರೆಯುತ್ತಿದ್ದಾಗ ಅಜಾಗರೂಕತೆಯಿಂದ ಮುಟ್ಟಿರಬಹುದು ಎಂದು ಸಮಜಾಯಶಿ ನೀಡಿ, ನನ್ನ ಬಳಿ ಕ್ಷಮೆಯಾಚಿಸಿದ. ಆದರೆ, ಆತನ ಮಾತುಗಳು ನಂಬುವಂತಿರಲಿಲ್ಲ” ಎಂದು ಯುವತಿ ಹೇಳಿದ್ದಾರೆ.

“ಬಸ್‌ನಲ್ಲಿದ್ದ ಮೂವರು ಮಹಿಳೆಯರು ಆಡುಗೋಡಿ ಪೊಲೀಸ್ ಠಾಣೆ ಬಳಿ ಬಸ್ ನಿಲ್ಲಿಸುವಂತೆ ಮತ್ತು ಪೊಲೀಸರು ಬರುವವರೆಗೆ ಬಾಗಿಲು ತೆರೆಯದಂತೆ ಚಾಲಕರಿಗೆ ಹೇಳಿದರು. ಅದರಂತೆ ಚಾಲಕ ನಡೆದುಕೊಂಡರು. ಆದರೆ, ಬಸ್‌ನ ನಿರ್ವಾಹಕರ ನಮ್ಮ ಸಮಸ್ಯೆಗಳಿಗೆ ಸ್ಪಂದಿಸಲಿಲ್ಲ. ಅವರ ಧೋರಣೆಯೂ ಮಹಿಳಾ ವಿರೋಧಿ ನಡೆಯಾಗಿತ್ತು. ಅವರ ವಿರುದ್ಧವೂ ಕ್ರಮ ಕೈಗೊಳ್ಳಬೇಕು” ಎಂದು ಯುವತಿ ಒತ್ತಾಯಿದ್ದಾರೆ.

“ಬಸ್‌ನಲ್ಲಿ ಕೇವಲ 10 ಜನರಿದ್ದಾಗ ಹಾಗೂ ಪುರುಷರ ಸಾಲಿನಲ್ಲಿ ಸೀಟುಗಳು ಖಾಲಿ ಇದ್ದಾಗ ಆರೋಪಿ ಏಕೆ ಮಹಿಳೆಯ ಸೀಟಿನಲ್ಲಿ ಕುಳಿತಿದ್ದರು. ಮಹಿಳೆಯರಿಗೆ ಮೀಸಲಾದ ಸೀಟುಗಳಲ್ಲಿ ಪುರುಷರು ಕುಳಿತುಕೊಳ್ಳಲು ನಿರ್ವಾಹಕರು ಅನುಮತಿಸಬಾರದು ಮತ್ತು ಅಂತಹವರಿಗೆ ಟಿಕೆಟ್ ನೀಡಬಾರದು” ಎಂದು ಅವರು ಹೇಳಿದ್ದಾರೆ.

ಈ ಸುದ್ದಿ ಓದಿದ್ದೀರಾ? ಬೆಂಗಳೂರು | ವಿಧಾನಸೌಧದ ಬಳಿ ಡ್ರೋನ್ ಹಾರಾಟಕ್ಕೆ ಯತ್ನ; ಇಬ್ಬರ ವಿರುದ್ಧ ಎಫ್‌ಐಆರ್ ದಾಖಲು

“ಅಬ್ದುಲ್ಲಾ ಅವರನ್ನು ಐಪಿಸಿ ಸೆಕ್ಷನ್ 354 ಎ (ಲೈಂಗಿಕ ಕಿರುಕುಳ) ಅಡಿಯಲ್ಲಿ ಬಂಧಿಸಿ ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿದೆ. ಬಸ್ ನಲ್ಲಿ ಅಳವಡಿಸಿರುವ ಕ್ಯಾಮೆರಾದ ಸಿಸಿಟಿವಿ ದೃಶ್ಯಾವಳಿಗಳನ್ನು ನೀಡುವಂತೆ ಬಿಎಂಟಿಸಿಗೆ ಪತ್ರ ಬರೆದಿದ್ದೇವೆ” ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರಡೆ.

“ಈ ಘಟನೆಯು ದುರದೃಷ್ಟಕರ. ಮಹಿಳೆಗೆ ಪ್ರತಿಕ್ರಿಯಿಸಲು ನಿರ್ವಾಹಕರು ವಿಫಲವಾಗಿದ್ದರೆ, ಅವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳುವಂತೆ ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶಕರಿಗೆ ತಿಳಿಸುವೆ” ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಭರವಸೆ ನೀಡಿದ್ದಾರೆ.

“ಆರೋಪ ಸಾಬೀತಾದರೆ ತನಿಖೆ ನಡೆಸಿ ಕ್ರಮ ಕೈಗೊಳ್ಳಲಾಗುವುದು” ಎಂದು ಬಿಎಂಟಿಸಿ ಪಿಆರ್‌ಒ ಸುನೀತಾ ತಿಳಿಸಿದ್ದಾರೆ.

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಎಸ್‌ಐಆರ್ ವಿರುದ್ಧದ ಹೋರಾಟದಲ್ಲಿ ದೇಶಕ್ಕೆ ಕರ್ನಾಟಕ ದಿಕ್ಸೂಚಿಯಾಗಬೇಕು: ಪ್ರೊ. ಯೋಗೇಂದ್ರ ಯಾದವ್

ಕರ್ನಾಟಕವು ಹಲವು ವಿಷಯಗಳಲ್ಲಿ ದೇಶಕ್ಕೆ ದಿಕ್ಸೂಚಿಯಾಗಿದೆ. ಎಸ್‌ಐಆರ್‍‌ ವಿರುದ್ಧದ ಹೋರಾಟದಲ್ಲಿಯೂ ದೇಶಕ್ಕೆ...

ಶಾಲಾ ಶಿಕ್ಷಣದಲ್ಲಿ ಕಡ್ಡಾಯವಾಗಿ ‘ಹಿಂದಿ’ ತೆಗೆಯಬೇಕು: ಹಿಂದಿ ವಿರೋಧಿ ಕರ್ನಾಟಕ

ಕರ್ನಾಟಕದಲ್ಲಿ ಶೈಕ್ಷಣಿಕವಾಗಿ ಪ್ರತಿ ವರ್ಷ ನಡೆಯುವ ಎಸ್ ಎಸ್ ಎಲ್ ಸಿ...

ಬೇಲಿಯೇ ಎದ್ದು ಹೊಲ ಮೇಯ್ದಂತೆ ಮಾಡಿದ ಮಾಹಿತಿ ಆಯೋಗ; ಕಾಯ್ದೆಯ ವಾರ್ಷಿಕ ವರದಿ ನೀಡಲು ‘ಗೌಪ್ಯತೆ’ಯ ನೆಪ

ಮಾಹಿತಿ ಹಕ್ಕು ಕಾಯ್ದೆ-2005ರಡಿ ಸಾರ್ವಜನಿಕ ಪ್ರಾಧಿಕಾರಗಳು ಪಾರದರ್ಶಕವಾಗಿ ಕೆಲಸ ಮಾಡುತ್ತಿವೆಯೇ ಎಂಬುದನ್ನು...

ಒಳಮೀಸಲಾತಿ: 56,000 ಹುದ್ದೆಗಳ ನೇಮಕಾತಿಗೆ ಹೊರಡಿಸಿದ ಅಧಿಸೂಚನೆ ರದ್ದತಿಗೆ ಸರ್ಕಾರ ಒಪ್ಪಿಗೆ

ಇತ್ತೀಚೆಗೆ 56,432 ಹುದ್ದೆಗಳನ್ನು ಭರ್ತಿ ಮಾಡಲು ಸರ್ಕಾರ ಹೊರಡಿಸಿದ್ದ ಆದೇಶವನ್ನು ಹಿಂಪಡೆಯಲು...