ಬಿಎಂಟಿಸಿ | ಎಲೆಕ್ಟ್ರಿಕ್ ಪ್ರೊಟೊಟೈಪ್ ಬಸ್‌ಗೆ ಚಾಲನೆ ನೀಡಿದ ಸಚಿವ ರಾಮಲಿಂಗಾರೆಡ್ಡಿ

Date:

  • ನೂತನ ವಿದ್ಯುತ್ ವಾಹನಗಳಲ್ಲಿ ಮಾಲಿನ್ಯ ರಹಿತವಾಗಿ ಬೆಂಗಳೂರಿನ ಜನರ ಪ್ರಯಾಣ
  • ಸರ್ಕಾರದ ಫೇಮ್-2 ಯೋಜನೆಯಡಿಯಲ್ಲಿ ಜಿಸಿಸಿ ಆಧಾರದ ಮೇಲೆ ಕಾರ್ಯಾಚರಣೆ

ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ) 921 ಟಾಟಾ ಎಲೆಕ್ಟ್ರಿಕ್ ಬಸ್‌ಗಳನ್ನು ಸೇರ್ಪಡೆಗೊಳಿಸುತ್ತಿದ್ದು, ಬೆಂಗಳೂರಿನ ಸಾರ್ವಜನಿಕರು ಶೀಘ್ರದಲ್ಲೇ ಆರಾಮದಾಯಕ ಪರಿಸರ ಸ್ನೇಹಿ ಪ್ರಯಾಣ ಮಾಡಬಹುದು.

ಟಾಟಾ ಮೋಟಾರ್ಸ್ ಎಲೆಕ್ಟ್ರಿಕ್ ಪ್ರಥಮ ಪ್ರೊಟೊಟೈಪ್ ಬಸ್‌ಗೆ ಗುರುವಾರ ಸಾರಿಗೆ ಮತ್ತು ಮುಜರಾಯಿ ಸಚಿವ ರಾಮಲಿಂಗಾ ರೆಡ್ಡಿ ಅವರು ಚಾಲನೆ ನೀಡಿದರು.

ಬಳಿಕ ಮಾತನಾಡಿದ ಅವರು, “ಬಿಎಂಟಿಸಿಯ ನೂತನ ವಿದ್ಯುತ್ ವಾಹನಗಳಲ್ಲಿ ಮಾಲಿನ್ಯ ರಹಿತವಾಗಿ ಬೆಂಗಳೂರಿನ ಜನರು ಪ್ರಯಾಣಿಸಬಹುದು. ಸರ್ಕಾರ ಸಾರಿಗೆ ಸಂಸ್ಥೆಗಳಿಗೆ 4,000 ಹೊಸ ವಾಹನಗಳನ್ನು ಒದಗಿಸುವ ಮತ್ತು 13,000 ಸಿಬ್ಬಂದಿ ನೇಮಕಾತಿಗೆ ಅನುಮತಿ ಕೊಡುವ ಜೊತೆಗೆ ಬಜೆಟ್‌‌ನಲ್ಲಿ ₹500 ಕೋಟಿ ನಿಗಮಗಳಿಗೆ ಬಸ್ ಖರೀದಿಗಾಗಿ ವಿಸ್ತರಣೆ ಮಾಡಲಾಗುವುದು” ಎಂದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

“ಸಂಸ್ಥೆಯ ವಿಭಾಗೀಯ ನಿಯಂತ್ರಣಾಧಿಕಾರಿಗಳು ಮತ್ತು ಘಟಕ ವ್ಯವಸ್ಥಾಪಕರುಗಳಿಗೆ ನೂತನ ವಾಹನಗಳನ್ನು ಒದಗಿಸಲಾಗಿದ್ದು, ಇದರಿಂದ ಅವರು ಬಸ್ ನಿಲ್ದಾಣಗಳು, ಮೋಟಾರು ವಾಹನ ಇಲಾಖೆ, ಅಪಘಾತ ಸ್ಥಳಕ್ಕೆ ಹಾಗೂ ಆಸ್ಪತ್ರೆಗೆ ಭೇಟಿ ನೀಡಿ ಪರಿಣಾಮಕಾರಿಯಾಗಿ ಕಾರ್ಯ ನಿರ್ವಹಿಸಬಹುದು. ಈ ನೂತನ 921 ಎಲೆಕ್ಟ್ರಿಕ್ ಬಸ್‌ಗಳನ್ನು ಆರ್ಥಿಕ ವರ್ಷದೊಳಗಾಗಿ ಹಂತ-ಹಂತವಾಗಿ ಸೇರ್ಪಡೆ ಮಾಡುವುದು” ಎಂದು ತಿಳಿಸಿದರು.

  • ಬಿಎಂಟಿಸಿಯ ಈ ನೂತನ 921 ಟಾಟಾ ವಿದ್ಯುತ್ ವಾಹನಗಳು ಭಾರತ ಸರ್ಕಾರದ ಫೇಮ್-2 ಯೋಜನೆಯಡಿಯಲ್ಲಿ ಜಿಸಿಸಿ ಆಧಾರದ ಮೇಲೆ ಕಾರ್ಯಾಚರಣೆ ಮಾಡಲಿವೆ.
  • ಈ ಬಸ್‌ಗಳು 12 ಮೀಟರ್ ಉದ್ದ, 400 ಎಮ್‌ ಎಮ್‌ ಎತ್ತರದ ಕೆಳ-ಮಹಡಿ ಎಲೆಕ್ಟ್ರಿಕ್ ಬಸ್‌ಗಳಾಗಿವೆ.
  • ಈ ಬಸ್ 35 ಪ್ರಯಾಣಿಕರಿಗೆ ಆರಾಮದಾಯಕ ಆಸನ ಮತ್ತು ಕೆಳ-ಮಹಡಿ ಸಂರಚನೆಯೊಂದಿಗೆ ಸುಲಭ ಪ್ರವೇಶ ಮತ್ತು ಹೊರಹೋಗುವಿಕೆಯಂತಹ ವೈಶಿಷ್ಟ್ಯ ಹೊಂದಿದೆ.
  • ಬಿಎಂಟಿಸಿಯ 1500 ಎಲೆಕ್ಟ್ರಿಕ್ ಬಸ್‌ಗಳನ್ನು ತನ್ನ ವಾಹನ ಬಲಕ್ಕೆ ಸೇರ್ಪಡೆಗೊಳಿಸಲು ಗ್ರ್ಯಾಂಡ್ ಚಾಲೆಂಜ್‌ನಲ್ಲಿ ಭಾಗವಹಿಸಿದೆ.
  • ಜಿಸಿಸಿ ಆಧಾರದಲ್ಲಿ ಈ ಬಸ್‌ಗಳ ಪ್ರತಿ ಕಿ.ಮೀ ಕಾರ್ಯಾಚರಣೆಯ ದರ ₹41.01 ಮೊತ್ತವಾಗಿದೆ.
  • ಭಾರಿ ಕೈಗಾರಿಕ ಸಚಿವಾಲಯ, ಕೇಂದ್ರ ಸರ್ಕಾರ ವತಿಯಿಂದ 921 ಟಾಟಾ ಎಲೆಕ್ಟ್ರಿಕ್ ಬಸ್‌ಗಳಿಗೆ ಸಹಾಯಧನ ಒದಗಿಸಲಾಗಿದೆ.
  • ಈ ಸಹಾಯಧನದ ಅನ್ವಯ ಬಿಎಂಟಿಸಿ ಒಟ್ಟು 921 ಎಲೆಕ್ಟ್ರಿಕ್ ಬಸ್‌ಗಳನ್ನು ಜಿಸಿಸಿ ಮಾಡೆಲ್ ಆಧಾರದ ಮೇಲೆ ಕಾರ್ಯಾಚರಣೆ ಮಾಡಬಹುದಾಗಿದೆ.
  • ಪ್ರತಿ ಬಸ್‌ ಅನ್ನು 45 ನಿಮಿಷ ಚಾರ್ಜಿಂಗ್ ಮಾಡಲಾಗುತ್ತದೆ.
  • ಶಾಂತಿನಗರ, ಜಯನಗರ,  ಹೆಣ್ಣೂರು, ದೀಪಾಂಜಲಿನಗರ, ರಾಜರಾಜೇಶ್ವರಿನಗರ, ಪೀಣ್ಯ 2ನೇ ಹಂತ, ಜಿಗಣಿ, ಕೆ.ಆರ್.ಪುರಂ, ಸೀಗೇಹಳ್ಳಿ, ಹೊಸಕೋಟೆ ಸೇರಿದಂತೆ 10 ಘಟಕಗಳಲ್ಲಿ ಈ ಎಲೆಕ್ಟ್ರಿಕ್ ಬಸ್‌ಗಳು ಕಾರ್ಯಾಚರಣೆ ನಡೆಸಲಿವೆ.
  • ಕೆಂಪೇಗೌಡ ಬಸ್ ನಿಲ್ದಾಣ, ಸುಜಾತ ಟಾಕೀಸ್, ಇಂಡಸ್ಟ್ರಿಯಲ್ ಟೌನ್ ರಾಜಾಜಿನಗರ, ಹಾವನೂರು ವೃತ್ತ, ಮೋದಿ ಆಸ್ಪತ್ರೆ, ಹರಿಶ್ಚಂದ್ರ ಘಾಟ್, ಸೆಂಟ್ರಲ್, ಕೆಂಪೇಗೌಡ ಬಸ್ ನಿಲ್ದಾಣದಲ್ಲಿ ಪ್ರಾಯೋಗಿಕವಾಗಿ ಕಾರ್ಯಚರಣೆ ನಡೆಸಲಿದೆ.

ಈ ಸುದ್ದಿ ಓದಿದ್ದೀರಾ? ಬೆಂಗಳೂರು | ಸ್ವಾವಲಂಬಿ ಜೀವನ ಸಾಗಿಸಲು ಅರ್ಹ ಫಲಾನುಭವಿಗಳಿಗೆ ಉಚಿತ ಹೊಲಿಗೆ ಯಂತ್ರ ವಿತರಣೆ

ಈ‌ ಸಂದರ್ಭದಲ್ಲಿ ಸರ್ಕಾರದ ಕಾರ್ಯದರ್ಶಿ ಡಾ. ಎನ್.ವಿ. ಪ್ರಸಾದ್, ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶಕಿ ಜಿ ಸತ್ಯವತಿ, ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ವ್ಯವಸ್ಥಾಪಕ ನಿರ್ದೇಶಕ ವಿ. ಅನ್ಬುಕುಮಾರ್‌ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಎಸ್‌ಐಆರ್ ವಿರುದ್ಧದ ಹೋರಾಟದಲ್ಲಿ ದೇಶಕ್ಕೆ ಕರ್ನಾಟಕ ದಿಕ್ಸೂಚಿಯಾಗಬೇಕು: ಪ್ರೊ. ಯೋಗೇಂದ್ರ ಯಾದವ್

ಕರ್ನಾಟಕವು ಹಲವು ವಿಷಯಗಳಲ್ಲಿ ದೇಶಕ್ಕೆ ದಿಕ್ಸೂಚಿಯಾಗಿದೆ. ಎಸ್‌ಐಆರ್‍‌ ವಿರುದ್ಧದ ಹೋರಾಟದಲ್ಲಿಯೂ ದೇಶಕ್ಕೆ...

ಶಾಲಾ ಶಿಕ್ಷಣದಲ್ಲಿ ಕಡ್ಡಾಯವಾಗಿ ‘ಹಿಂದಿ’ ತೆಗೆಯಬೇಕು: ಹಿಂದಿ ವಿರೋಧಿ ಕರ್ನಾಟಕ

ಕರ್ನಾಟಕದಲ್ಲಿ ಶೈಕ್ಷಣಿಕವಾಗಿ ಪ್ರತಿ ವರ್ಷ ನಡೆಯುವ ಎಸ್ ಎಸ್ ಎಲ್ ಸಿ...

ಬೇಲಿಯೇ ಎದ್ದು ಹೊಲ ಮೇಯ್ದಂತೆ ಮಾಡಿದ ಮಾಹಿತಿ ಆಯೋಗ; ಕಾಯ್ದೆಯ ವಾರ್ಷಿಕ ವರದಿ ನೀಡಲು ‘ಗೌಪ್ಯತೆ’ಯ ನೆಪ

ಮಾಹಿತಿ ಹಕ್ಕು ಕಾಯ್ದೆ-2005ರಡಿ ಸಾರ್ವಜನಿಕ ಪ್ರಾಧಿಕಾರಗಳು ಪಾರದರ್ಶಕವಾಗಿ ಕೆಲಸ ಮಾಡುತ್ತಿವೆಯೇ ಎಂಬುದನ್ನು...

ಒಳಮೀಸಲಾತಿ: 56,000 ಹುದ್ದೆಗಳ ನೇಮಕಾತಿಗೆ ಹೊರಡಿಸಿದ ಅಧಿಸೂಚನೆ ರದ್ದತಿಗೆ ಸರ್ಕಾರ ಒಪ್ಪಿಗೆ

ಇತ್ತೀಚೆಗೆ 56,432 ಹುದ್ದೆಗಳನ್ನು ಭರ್ತಿ ಮಾಡಲು ಸರ್ಕಾರ ಹೊರಡಿಸಿದ್ದ ಆದೇಶವನ್ನು ಹಿಂಪಡೆಯಲು...