ಬೆಂಗಳೂರು ಚಿತ್ರಸಂತೆ | ಕಲಾವಿದರು, ಕಲಾಸಕ್ತರ ಸಮಾಗಮ

Date:

2025 ಹೊಸ ವರ್ಷ ಆರಂಭವಾಗುತ್ತಿದ್ದಂತೆಯೇ, ಬೆಂಗಳೂರಿನ ಕುಮಾರಕೃಪಾ ರಸ್ತೆ ಚಿತ್ತಾರದಿಂದ ತುಂಬಿದೆ. ಜನವರಿ 5ರಂದು ಚಿತ್ರಸಂತೆ ನಡೆಯುತ್ತಿದ್ದು, ಕಲಾವಿದರು, ಕಲಾಸಕ್ತರು ಸೇರುವ ತಾಣವಾಗಿ ಬದಲಾಗಿದೆ. ಕುಮಾರಕೃಪಾ ಕೃಪಾ ರಸ್ತೆಯಲ್ಲಿ ಲಕ್ಷಾಂತರ ಮಂದಿ ಜಮಾಯಿಸಿದ್ದು, ಚಿತ್ರಕಲೆಗಳ ವ್ಯಾಪಾರ ಭರಾಟೆ ಜೋರಾಗಿದೆ.   

ಕಲಾವಿದರು ಮತ್ತು ಕಲಾಸಕ್ತರ ಸಮಾಗಮವಾಗುವ ಈ ಚಿತ್ರಸಂತೆಯನ್ನು ಕರ್ನಾಟಕ ಚಿತ್ರಕಲಾ ಪರಿಷತ್ತು ಆಯೋಜಿಸಿದೆ. 2004ರಲ್ಲಿ ಆರಂಭವಾದ ಈ ಚಿತ್ರಸಂತೆಯ ಅತ್ಯುತ್ತಮ ಪ್ರದರ್ಶನವು 20 ವರ್ಷಗಳನ್ನು ಪೂರೈಸಿದ್ದು, ಸಂಭ್ರಮ ಮುಂದುವರೆದಿದೆ. ಕಣ್ಮನ ತಣಿಸುವ ಅಪರೂಪದ, ಆಕರ್ಷಕ ಕಲಾಕೃತಿಗಳು ಗ್ರಾಹಕರನ್ನು ಸೆಳೆಯುತ್ತಿವೆ.

ವರ್ಷಕ್ಕೊಮ್ಮೆ ಒಂದೇ ದಿನ ನಡೆಯುವ ಈ ಚಿತ್ರಸಂತೆಯನ್ನು ನೋಡಲು ಕುಮಾರಕೃಪಾ ರಸ್ತೆಯಲ್ಲಿ ಲಕ್ಷಾಂತರ ಜನರು ಸೇರುತ್ತಾರೆ. ಜನವರಿ 5ರ ಭಾನುವಾರ ಬೆಳಿಗ್ಗೆ ಚಿತ್ರಸಂತೆ ಆರಂಭವಾಗುವುದಕ್ಕೂ ಮುನ್ನವೇ, ರಸ್ತೆಯ ತುಂಬೆಲ್ಲಾ ಚಿತ್ತಾರ ತುಂಬಿತ್ತು. ಜನರ ಓಡಾಟ ಹೆಚ್ಚಾಗಿತ್ತು. ಕಲಾವಿದರು ರಸ್ತೆ ಬದಿಯಲ್ಲಿ ತಮ್ಮ ಕಲಾಕೃತಿ ಪ್ರದರ್ಶನ ಮಾಡಿದ್ದರು. ಕಲಾಸಕ್ತರು ಕಲಾವಿದರು ಚಿತ್ರಿಸಿದ್ದ ನಾನಾ ತೆರನಾದ ಪೇಂಟಿಂಗ್‌ಗಳನ್ನು ಮೆಚ್ಚಿಕೊಂಡು ಫೋಟೋ ಕ್ಲಿಕ್ಕಿಸಿಕೊಂಡರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...
WhatsApp Image 2025 01 05 at 7.24.57 PM

ಈ ಬಾರಿಯ ಚಿತ್ರಸಂತೆಯಲ್ಲಿ 1,000 ರೂಪಾಯಿಂದ ಹಿಡಿದು 10 ಲಕ್ಷಕ್ಕೂ ಅಧಿಕ ಬೆಲೆಯ ಪೇಂಟಿಂಗ್‌ಗಳು ಇದ್ದವು. ಕಲಾಸಕ್ತರು ತಮ್ಮ ನೆಚ್ಚಿನ ಪೇಂಟಿಂಗ್‌ಗಳನ್ನು ಖರೀದಿ ಮಾಡಿ ತೆರಳುವುದು ಕಂಡು ಬಂದಿತು. ಹಾಗೆಯೇ, ಕುಂಚ ಅಥವಾ ಪೆನ್ಸಿಲ್‌ಗಳಿಂದ ಕಲಾರಸಿಕರ ಭಾವಚಿತ್ರಗಳನ್ನ ಸ್ಥಳದಲ್ಲಿಯೇ ರಚಿಸಿಕೊಡಲಾಗುತ್ತಿತ್ತು. ಮೈಸೂರು ಸಾಂಪ್ರದಾಯಿಕ ಶೈಲಿ, ರಾಜಸ್ಥಾನಿ ಶೈಲಿ, ಮಧುಬನಿಯ ಶೈಲಿ, ತೈಲ, ಅಕ್ರಲಿಕ್ ಕೊಲಾಜ್ ಲಿಥೋಗ್ರಾಫ್ ಮತ್ತು ಜಲವರ್ಣದ ಕಲಾಕೃತಿಗಳು ಕಲಾರಸಿಕರ ಗಮನ ಸೆಳೆದವು.

ಈ ಬಾರಿಯ ಚಿತ್ರಸಂತೆಯನ್ನ ಹೆಣ್ಣು ಮಗುವಿಗೆ ಸಮರ್ಪಣೆ ಮಾಡಲಾಗಿದೆ. ಚಿತ್ರಕಲಾ ಪರಿಷತ್ತನ ಪ್ರವೇಶ ದ್ವಾರದಲ್ಲಿಯೇ ಬಾಲಕಿಯ ಬೃಹದಾಕಾರದ ಕಲಾಕೃತಿ ನಿರ್ಮಿಸಲಾಗಿದೆ. ಇನ್ನು ದೇಶದ ನಾನಾ ಭಾಗಗಳಿಂದ 1,500 ಕಲಾವಿದರು ಚಿತ್ರಸಂತೆಯಲ್ಲಿ ಭಾಗವಹಿಸಿ, ಕಲಾಕೃತಿಗಳನ್ನು ಪ್ರದರ್ಶನ ಮಾಡಿದ್ದಾರೆ.

ಚಿತ್ರಸಂತೆ

ಕರ್ನಾಟಕದ ಜತೆಗೆ ಕೇರಳ, ತಮಿಳುನಾಡು, ಆಂಧ್ರಪ್ರದೇಶ, ಗೋವಾ, ಮಹಾರಾಷ್ಟ್ರ, ಪಂಜಾಬ್, ಪಶ್ಚಿಮ ಬಂಗಾಳ, ಒಡಿಶಾ ಸೇರಿದಂತೆ ನಾನಾ ರಾಜ್ಯಗಳ ಕಲಾವಿದರು ಪಾಲ್ಗೊಂಡಿದ್ದಾರೆ. ಪರಿಷತ್ತಿನ ಗ್ಯಾಲರಿಗಳಲ್ಲಿ ಹಿರಿಯ ಹಾಗೂ ಹೆಸರಾಂತ ಕಲಾವಿದರು ರಚಿಸಿದ ಕಲಾಕೃತಿಗಳ ಪ್ರದರ್ಶನ ನಡೆದಿದೆ. ಜತೆಗೆ, ಹಿರಿಯ ಕಲಾವಿದರು ಹಾಗೂ ಅಂಗವಿಕಲರಿಗೆ ಆಯ್ದ ಸ್ಥಳದಲ್ಲಿ ಅಗತ್ಯ ಸೌಲಭ್ಯವನ್ನ ಒದಗಿಸಿಕೊಡಲಾಗಿತ್ತು.

ಈ ಚಿತ್ರಸಂತೆಯಲ್ಲಿ ಪ್ರಮುಖವಾಗಿ ಮಲಗಿರುವ ಬುದ್ಧನ ಚಿತ್ರ ಎಲ್ಲರ ಗಮನ ಸೆಳೆಯಿತು. ಈ ಚಿತ್ರವನ್ನ ಜಮಖಂಡಿಯ ಕಲೆಗಾರ ಮಲ್ಲಿಕಾರ್ಜುನ ಹಲಗಲಿ ಚಿತ್ರಿಸಿದ್ದರು. “ಸಮಾಜದಲ್ಲಿ ಶಾಂತತೆ ಇರಬೇಕು. ಮಕ್ಕಳತರ ಮನಸ್ಸಿರಬೇಕು. ಗಲಾಟೆ ಮಧ್ಯೆ ಒಳ್ಳೆತರ ಬದುಕಬೇಕು ಎನ್ನುವ ಕಾನ್ಸೆಪ್ಟ್‌ ಜತೆಗೆ ಈ ಚಿತ್ರವನ್ನ ಬಿಡಸಿದ್ದೇನೆ” ಎಂದು ಅವರು ಈ ದಿನ.ಕಾಮ್‌ಗೆ ತಿಳಿಸಿದರು.

ಬುದ್ದ

ತಮಿಳುನಾಡಿನ ಬ್ಯಾಂಕ್‌ ಉದ್ಯೋಗಿಯಾದ ದಯಾನಿಧಿ ಅವರು ಕಲಾಸಕ್ತರು ಅವರ ಕೆಲಸದ ಜತೆಗೆ ಪೇಂಟಿಂಗ್‌ ಬಿಡಿಸುವ ಕೆಲಸವನ್ನ ಮಾಡುತ್ತಿದ್ದಾರೆ. ಇವರು, ತಮ್ಮ ಮಕ್ಕಳು ಮತ್ತು ಅವರ ತಂದೆಯ ಚಿತ್ರ ಬಿಡಿಸಿದ್ದರು. ಈ ಪೇಂಟಿಂಗ್‌ಗಳು ತೈಲ ವರ್ಣದ ಪೇಂಟಿಂಗ್‌ಗಳಾಗಿವೆ. ಒಂದೊಂದು ಪೇಂಟಿಂಗ್‌ ಬೆಲೆ 2 ಲಕ್ಷ ರೂಪಾಯಿ ಇದೆ.

ಇನ್ನು ಚಿತ್ರಸಂತೆಯ ವೀಕ್ಷಣೆಗೆ ಬಂದಿದ್ದ ಹಲವು ಜನರು ಚಿತ್ರಸಂತೆಯಲ್ಲಿ ಇದ್ದ ನಾನಾ ತೆರನಾದ ಪೇಂಟಿಂಗ್‌ಗಳನ್ನ ಮೆಚ್ಚಿ ಸಂತಸ ವ್ಯಕ್ತಪಡಿಸಿದರು. ಹಾಗೇಯೇ, ಮುಂದಿನ ಬಾರಿ ನಡೆಯುವ ಚಿತ್ರಸಂತೆಗೆ ಕೆಲವೊಂದು ಸಲಹೆ ಟಿಪ್ಪಣಿಗಳನ್ನ ನೀಡಿದರು. “ಚಿತ್ರಸಂತೆಗೆ ಪ್ರತಿವರ್ಷವೂ ಕೂಡ ಲಕ್ಷಾಂತರ ಜನ ಸೇರುತ್ತಾರೆ. ಇದರಿಂದ ಕುಮಾರಕೃಪಾ ರಸ್ತೆಯಲ್ಲಿ ಜನರು ನಡೆದುಕೊಂಡು ಹೋಗುವುದಕ್ಕೆ ಸಮಸ್ಯೆ ಆಗುತ್ತದೆ. ಹೀಗಾಗಿ, ದೊಡ್ಡ ಸ್ಥಳಗಳಲ್ಲಿ ಈ ಚಿತ್ರಸಂತೆ ಆಯೋಜನೆ ಮಾಡಬೇಕು. ನಾನಾ ರಾಜ್ಯಗಳಿಂದ ಜನರು ಚಿತ್ರಸಂತೆ ಕಾಣುವುದಕ್ಕೆ ಬರುವ ಕಾರಣ ವರ್ಷಕ್ಕೊಮ್ಮೆ ಒಂದು ಬಾರಿ ನಡೆಯುವ ಚಿತ್ರಸಂತೆಯ ವ್ಯಾಪ್ತಿಯನ್ನು ಹಿಗ್ಗಿಸಬೇಕು. ಎರಡು ದಿನದ ಮಟ್ಟಿಗಾದರೂ ಚಿತ್ರಸಂತೆ ನಡೆಸಬೇಕು” ಎಂದು ಹೇಳಿದರು.

WhatsApp Image 2025 01 05 at 7.24.58 PM 1

ಒಟ್ಟಿನಲ್ಲಿ ಕಲಾಸಕ್ತರು ಮತ್ತು ಕಲಾವಿದರನ್ನು ಒಗ್ಗೂಡಿಸುವ ಕಾರ್ಯವನ್ನು ಕಳೆದ ಹಲವು ವರ್ಷಗಳಿಂದ ಮುನ್ನಡೆಸಿಕೊಂಡು ಬರುತ್ತಿರುವ ಕರ್ನಾಟಕ ಚಿತ್ರಕಲಾ ಪರಿಷತ್ತು ಕೆಲವು ಬದಲಾವಣೆಗಳೊಂದಿಗೆ ಮುಂದಿನ ಚಿತ್ರಸಂತೆ ಆಯೋಜನೆ ಮಾಡಬೇಕಿದೆ.

2025ನೇ ಸಾಲಿನ ಚಿತ್ರಸಂತೆಯ ಮೂಲಕ ಹೆಣ್ಣು ಭ್ರೂಣ ಹತ್ಯೆ, ಬಾಲ್ಯ ವಿವಾಹ ಸೇರಿದಂತೆ ಹೆಣ್ಣು ಮಕ್ಕಳ ರಕ್ಷಣೆ ಕುರಿತು ಜಾಗೃತಿ ಮೂಡಿಸಲು ತೀರ್ಮಾನಿಸಲಾಗಿದೆ.

e057b508e9e1b164fadd3c3edb023f5214f4d0a6d12066a30e302f9e3b0f6f24?s=150&d=mp&r=g
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ದಾವಣಗೆರೆ | ಸಮರ್ಥ್‌ ನಾಮಪತ್ರ ಸಲ್ಲಿಕೆ; ದೂರ ಉಳಿದ ರಾಜ್ಯ ಮುಸ್ಲಿಂ ಮುಖಂಡರು

ಡಿ.ಕೆ ಶಿವಕುಮಾರ್ ಮತ್ತು ಸಿದ್ದರಾಮಯ್ಯ ಅವರು ದಾವಣಗೆರೆ ಮುಸ್ಲಿಂ ಕಾಂಗ್ರೆಸ್‌ ಟಿಕೆಟ್...

ರಾಜ್ಯದಲ್ಲಿ ʼಎಸ್‌ಐಆರ್ʼ ಪ್ರಕ್ರಿಯೆಯನ್ನು ತರಾತುರಿಯಲ್ಲಿ ನಡೆಸಬೇಡಿ- ಪ್ರಗತಿಪರ ಸಂಘಟನೆ, ಜಾತ್ಯತೀತ ಪಕ್ಷಗಳ ಆಗ್ರಹ

ಕೇಂದ್ರ ಚುನಾವಣಾ ಆಯೋಗ ನಡೆಸುತ್ತಿರುವ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಎಂಬುದು...