ಬೆಂಗಳೂರಿನ ‘ದಿ ಬೆಸ್ಟ್‌’ ಪಾದಚಾರಿ ಮಾರ್ಗ ಯಾವುದು ಗೊತ್ತಾ?

Date:

ಬೆಂಗಳೂರಿನ ಥಣಿಸಂದ್ರ ಪ್ರದೇಶದ 7 ಕಿಮೀ ಪಾದಚಾರಿ ಮಾರ್ಗ ಸಂಪೂರ್ಣ ಗುಣಮಟ್ಟದ ಮಾರ್ಗವಾಗಿದೆ. ತ್ಯಾಜ್ಯ ಮುಕ್ತ, ತಡೆ ರಹಿತ, ಸ್ವಚ್ಛ, ಸುಂದರ ಹಾಗೂ ಸರಾಗವಾಗಿ ನಡೆಯಬಹುದಾದ ಉತ್ತಮ ಗುಣಮಟ್ಟವುಳ್ಳ ಪಾದಚಾರಿ ಮಾರ್ಗವಾಗಿದ್ದು, ಇದು ನಾಗರಿಕರ ಅಚ್ಚುಮೆಚ್ಚಿನ ‘ದಿ ಬೆಸ್ಟ್’ ಪಾದಚಾರಿ ಮಾರ್ಗವಾಗಿದೆ.

ಪ್ರಾಜೆಕ್ಟ್ ವಾಕ್‍ಲೂರು 5ನೇ ಫುಟ್ ಪಾತ್ ವಾಕ್ ಶನಿವಾರ ಥಣಿಸಂದ್ರದಲ್ಲಿ ದೊಡ್ಡ ಮಟ್ಟದಲ್ಲಿ ನಡೆಯಿತು. ಸ್ಥಳೀಯ ನಿವಾಸಿಗಳು, ನಾಗರಿಕರು ಹಾಗೂ ಬೆಂಗಳೂರು ಉತ್ತರ ನಗರ ಪಾಲಿಕೆಯ ಅಧಿಕಾರಿ – ಸಿಬ್ಬಂದಿ ಸೇರಿದಂತೆ 100ಕ್ಕೂ ಹೆಚ್ಚು ನಡಿಗೆ ಪ್ರಿಯರು ಪಾಲ್ಗೊಂಡಿದ್ದರು.

ನಗರ ಪಾಲಿಕೆಯ ಆಯುಕ್ತರಾದ ಪೊಮ್ಮಲ ಸುನಿಲ್ ಕುಮಾರ್ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಸಂಪೂರ್ಣ ಮಾರ್ಗವನ್ನು ನಾಗರಿಕರ ಜೊತೆಗೆ ನಡೆದು ಪರಿಶೀಲಿಸಿದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಇಂದಿರಾ ಕ್ಯಾಂಟೀನ್‌ನಿಂದ ಬೆಳ್ಳಹಳ್ಳಿ ಕ್ರಾಸ್‌ವರೆಗೆ ಹಾಗೂ ನಂತರ ಹೆಗಡೆನಗರ ವೃತ್ತದವರೆಗೆ—ಒಟ್ಟು 7 ಕಿಮೀ ಪಾದಚಾರಿ ಮಾರ್ಗದಲ್ಲಿ ನಡೆಯಲಾಯಿತು.

ಪ್ರತಿ 1 ಕಿಮೀ ನಂತರ ಅಡೆತಡೆಗಳನ್ನು ದಾಖಲಿಸಿದ ಫಲಿತಾಂಶ ಹೇಗಿದೆ ಎಂದರೆ, ಕಸದ ಸ್ಥಳಗಳಿಲ್ಲ, ತೆರೆದ ಮೂತ್ರ ವಿಸರ್ಜನೆ ಸ್ಥಳಗಳಿಲ್ಲ, ಒಡೆದ ಅಥವಾ ಕಾಣೆಯಾದ ಸ್ಲ್ಯಾಬ್‌ ಒಂದೇ ಒಂದು ಕಂಡುಬಂದಿದೆ. 2-ವೀಲರ್ ಪಾರ್ಕಿಂಗ್ ಅಡ್ಡಿಯಿಲ್ಲ, ಏಳು ಕಿಲೋಮೀಟರ್ ಪಾದಚಾರಿ ಉದ್ದಕ್ಕೂ ಕಾರ್ ಪಾರ್ಕಿಂಗ್ ಅಡೆತಡೆ ಒಂದೇ ಕಡೆ ಇದೆ. ಅಂಗಡಿ/ವ್ಯಾಪಾರಿಗಳ ಅಡೆತಡೆಗಳು ಎರಡು ಕಡೆ ಇದ್ದರೆ, ಕಟ್ಟಡ ಸಾಮಗ್ರಿಗಳ ರಾಶಿ ಕಂಡುಬಂದಿಲ್ಲ.

ಒಟ್ಟು 7 ಕಿ.ಮೀ.ಗಳಲ್ಲಿ 7ಕ್ಕೂ ಕಡಿಮೆ ಪ್ರಮುಖ ಅಡೆತಡೆಗಳು ಮಾತ್ರ ಕಂಡುಬಂದಿದೆ. ಅವುಗಳಲ್ಲಿ ಒಂದು ಕಸ ಅಥವಾ ಮೂತ್ರ ವಿಸರ್ಜನೆ ಸ್ಥಳವಲ್ಲ ಎಂಬುದು ನಿಜಕ್ಕೂ ಮಹತ್ತರ ಸಾಧನೆಯಾಗಿದೆ.

“ಉತ್ತಮ ಪಾದಚಾರಿ ಮಾರ್ಗ ಉತ್ತರ ನಗರ ಪಾಲಿಕೆಯ ಅಧಿಕಾರಿಗಳು, ಸ್ಥಳೀಯರು ಹಾಗೂ ನಾಗರಿಕರ ಸಹಕಾರದ ನೇರ ಪರಿಣಾಮ. ಫುಟ್ ಪಾತ್‌ಗಳು ಸ್ವಚ್ಛವಾಗಿದ್ದು, ಅಗಲವಾಗಿವೆ. ಸುರಕ್ಷಿತವಾಗಿ ನಡೆದುಹೋಗಲು ಅನುಕೂಲವಾಗಿರುವುದು ಹೆಮ್ಮೆಯ ವಿಷಯ. BESCOM ಮೂಲಸೌಕರ್ಯಗಳಿಗೆ ಸಂಬಂಧಿಸಿದಂತೆ ಬದಲಾವಣೆ ಅಗತ್ಯವಿದ್ದು, ತಕ್ಷಣ ಕ್ರಮ ಕೈಗೊಳ್ಳಲಾಗುವುದು” ಎಂದು ಉತ್ತರ ನಗರ ಪಾಲಿಕೆ ಆಯುಕ್ತ ಪೊಮ್ಮಲ ಸುನೀಲ್ ಕುಮಾರ್ ಹೇಳಿದ್ದಾರೆ.

ಈ ಸುದ್ದಿ ಓದಿದ್ದೀರಾ? ಪಾದರಸ ಚುಚ್ಚಿ ಪತ್ನಿಯನ್ನೇ ಕೊಂದ ಪತಿ

ನವೆಂಬರ್ 1ರಂದು ಪ್ರಾರಂಭವಾದ ಪ್ರಾಜೆಕ್ಟ್ ವಾಕಲೂರು ಈಗಾಗಲೇ 33 ಕಿಮೀ ವಾಕಲೂರು ಪೂರ್ಣಗೊಳಿಸಿದೆ. ಶಿವಾಜಿನಗರ: 11K ರಾಜ್ಯೋತ್ಸವ ವಾಕ್, ಕೋರಮಂಗಲ: 5K ವಾಕ್, ಜಯನಗರ: 5K ವಾಕ್, ಬಾಣಸವಾಡಿ: 5K ವಾಕ್, ಈಗ ಥಣಿಸಂದ್ರ 7K ವಾಕ್ ಒಟ್ಟು 33 ಕಿಮೀ ವಾಕ್ ಪೂರ್ಣವಾಗಿದೆ. ಇನ್ನು ಎಲ್ಲ 5 ನಗರಪಾಲಿಕೆಗಳಲ್ಲಿ 100 ಕಿಮೀ ವಾಕ್‌ಥಾನ್ ಗುರಿ ಹೊಂದಿದೆ.

ನಾಗರಿಕರು ಮತ್ತು ಸರ್ಕಾರವು ಒಟ್ಟಾಗಿ ಕೆಲಸ ಮಾಡಿದಾಗ ಫಲಿತಾಂಶ ಹೇಗೆ ಅದ್ಭುತವಾಗಬಹುದು ಎಂಬುದಕ್ಕೆ ಇದು ಉದಾಹರಣೆಯಾಗಿದೆ. ಇದು ಪ್ರದೇಶಕ್ಕೆ, ನಗರಕ್ಕೆ ಹೆಮ್ಮೆ ತರುವ ಸಾಧನೆ ಎಂದು ಪ್ರಾಜೆಕ್ಟ್ ವಾಕಲೂರು ಸಂಯೋಜಕರಾದ ಅರುಣ್ ಪೈ ತಿಳಿಸಿದರು.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಒಳಮೀಸಲಾತಿ ಜಾರಿಗೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಬಿಡುತ್ತಿಲ್ಲ: ಮಂದಕೃಷ್ಣ ಮಾದಿಗ ಆರೋಪ

ಒಳಮೀಸಲಾತಿ ಜಾರಿಗೆ ತರುತ್ತೇವೆಂದು ಹೇಳಿದ್ದ ಕಾಂಗ್ರೆಸ್‌, ಈಗ ಒಳಮೀಸಲಾತಿ ಅನುಷ್ಠಾನದಲ್ಲಿ ಮೀನಾಮೇಷ...

ಒಳಮೀಸಲಾತಿ ಹೋರಾಟ | ಸಿಎಂ ಸಿದ್ದರಾಮಯ್ಯ ನುಡಿದಂತೆ ನಡೆದಿಲ್ಲ: ಮಾರಸಂದ್ರ ಮುನಿಯಪ್ಪ

ಸಿದ್ದರಾಮಯ್ಯ ಅವರು ಸಮಾಜವಾದದ ಬಗ್ಗೆ ಮಾತನಾಡುತ್ತಾರೆ. ನುಡಿದಂತೆ ನಡೆದಂತೆ ಸರ್ಕಾರವೆಂದು ಹೇಳುತ್ತಾರೆ....

ಫ್ರೀಡಂ ಪಾರ್ಕ್‌ನಿಂದ ವಿಧಾನಸೌಧಕ್ಕೆ ಬರಲಿದೆ ಒಳಮೀಸಲಾತಿ ಹೋರಾಟ: ಸರ್ಕಾರಕ್ಕೆ ಮಾದರ ಚೆನ್ನಯ್ಯ ಸ್ವಾಮೀಜಿ ಎಚ್ಚರಿಕೆ

ಕಳೆದ 35 ವರ್ಷಗಳಿಂದ ಹಲವಾರು ಹೋರಾಟಗಾರರು ತಮ್ಮ ಜೀವ-ಜೀವನವನ್ನು ಅರ್ಪಿಸಿ, ಮನೆ-ಮಠವನ್ನು...

ಬೆಂಗಳೂರು | ನೇಮಕಾತಿಯಲ್ಲಿ ಒಳಮೀಸಲಾತಿಗೆ ಆಗ್ರಹಿಸಿ ಮೊಳಗುತ್ತಿದೆ ಘೋಷ

ಸರ್ಕಾರವು ಒಳಮೀಸಲಾತಿಯನ್ನು ತಪ್ಪಿಸುವ ಹುನ್ನಾರದಿಂದ ತರಾತುರಿಯಲ್ಲಿ 56,432 ಹುದ್ದೆಗಳ ನೇಮಕಾತಿಗೆ ಆದೇಶ...