ಕನ್ನಡ ಸಾಹಿತ್ಯ ಎಲ್ಲ ಭಾಷೆಗಳಿಗಿಂತ ಉಜ್ವಲ: ಚಂದ್ರಶೇಖರ್ ಕಂಬಾರ

Date:

  • ವೈಜ್ಞಾನಿಕ ಜ್ಞಾನದ ವಿಚಾರ ಹೊಂದಿರುವ ಸಾಹಿತಿ ಕುವೆಂಪು: ಎಲ್‌.ಎನ್‌ ಮುಕುಂದರಾಜ
  • ಕನ್ನಡ ಜಾಣಜಾಣೆಯರ ವೇದಿಕೆಯಿಂದ ವಿಶ್ವಮಾನವೊತ್ಸವ ಕ್ರಾಂತಿ ಕವಿಗೆ 120

“ಕನ್ನಡ ವಿಶ್ವವಿದ್ಯಾಲಯವನ್ನು ಕುವೆಂಪು ಮತ್ತು ರವೀಂದ್ರ ನಾಥ್ ಠಾಗೋರ್ ಅವರ ವಿಚಾರದಂತೆಯೇ ನಿರ್ಮಾಣ ಮಾಡಿದೆ. ಈ ಬಗ್ಗೆ ಕುವೆಂಪು ಅವರಿಗೆ ತಿಳಿಸಬೇಕು ಎಂದು ತೆರಳುವಷ್ಟರಲ್ಲಿ ಅವರು ನಮ್ಮನ್ನು ಅಗಲಿದ್ದರು. ಬಳಿಕ ಅವರನ್ನು ನೋಡಲಿಕ್ಕೆ ಆಗಲಿಲ್ಲ. ಸದ್ಯ ಕನ್ನಡ ಸಾಹಿತ್ಯ ಎಲ್ಲ ಭಾಷೆಗಳ ಪೈಕಿ ಉಜ್ವಲವಾಗಿದೆ” ಎಂದು ಜ್ಞಾನಪೀಠ ಪ್ರಶಸ್ತಿ ಪುರಸ್ಕ್ರತ ಚಂದ್ರಶೇಖರ್ ಕಂಬಾರ ಹೇಳಿದರು.

ರಾಷ್ಟ್ರಕವಿ ಕುವೆಂಪು ಅವರ ಜನ್ಮದಿನದ ಅಂಗವಾಗಿ ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿ ಮತ್ತು ಕರ್ನಾಟಕ ಕದಂಬ ಪಡೆ ಸಹಯೋಗದಲ್ಲಿ ಕನ್ನಡ ಜಾಣಜಾಣೆಯರ ವೇದಿಕೆ ಬೆಂಗಳೂರಿನಲ್ಲಿ ‘ವಿಶ್ವಮಾನವೊತ್ಸವ – ಕ್ರಾಂತಿ ಕವಿಗೆ 120’ ಕಾರ್ಯಕ್ರಮ ಆಯೋಜಿಸಿದೆ.

ಈ ವೇಳೆ, ಡಾ.ಕೆ.ಎನ್‌.ನಾಗೇಶ್ ಅವರ ತಂಡದಿಂದ ಕುವೆಂಪು ಅವರ ಗೀತೆಗಳ ಗಾಯನ ಕಾರ್ಯಕ್ರಮ ನಡೆಯಿತು. ಕುವೆಂಪು ರೈತ ಗೀತೆ ಹಾಡಿ ನಮನ ಸಲ್ಲಿಸಲಾಯಿತು. ಇನ್ನು ವಿಜಯನಗರ ಶಾಸಕ ಕೃಷ್ಣಪ್ಪ, ಜ್ಞಾನಪೀಠ ಪ್ರಶಸ್ತಿ ಪುರಸ್ಕ್ರತ ಚಂದ್ರಶೇಖರ್ ಕಂಬಾರ ಸೇರಿದಂತೆ ಹಲವು ಗಣ್ಯರು ಕುವೆಂಪು ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು. ಇದೇ ವೇಳೆ, ಕುವೆಂಪು ಕ್ಯಾಲೆಂಡರ್ ಮತ್ತು ಪೋಸ್ಟರ್‌ ಬಿಡುಗಡೆ ಮಾಡಲಾಯಿತು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಕುವೆಂಪು 2

ಈ ವೇಳೆ ಮಾತನಾಡಿದ ಚಿಂತಕರು ಹಾಗೂ ಕವಿ, ನಾಟಕಕಾರರು ಎಲ್‌.ಎನ್‌.ಮುಕುಂದರಾಜ, “ಕನ್ನಡದ ಪ್ರಜ್ಞೆ ಅಂದರೇ, ಅದು ಕುವೆಂಪು ಅವರು. ಇಡೀ ಮೈಸೂರು ವಿಶ್ವವಿದ್ಯಾಲಯವನ್ನು ಮಾನಸ ಗಂಗೋತ್ರಿಯಾಗಿ ಮಾಡಿದ್ದು ಕುವೆಂಪು ಅವರು. ಅವರ ಕಲ್ಪನೆಯಲ್ಲಿಯೇ ಚಂದ್ರಶೇಖರ್ ಕಂಬಾರ ಅವರು ಹಂಪಿ ವಿಶ್ವವಿದ್ಯಾಲಯ ನಿರ್ಮಾಣ ಮಾಡಿದರು. ಅದಕ್ಕೆ, ‘ವಿದ್ಯಾರಣ್ಯ’ ಎಂಬ ಹೆಸರು ಇಟ್ಟರು. ಇದರ ಅರ್ಥ ವಿದ್ಯೆಯ ಅರಣ್ಯ. ಇನ್ನು ಮೊದಲನೇ ಜ್ಞಾನಪೀಠ ಪ್ರಶಸ್ತಿ ಬಂದಿದ್ದು ಕುವೆಂಪು ಅವರಿಗೆ ಎಂಟನೇ ಜ್ಞಾನ ಪೀಠ ಪ್ರಶಸ್ತಿ ಬಂದಿದ್ದು ಚಂದ್ರಶೇಖರ್ ಕುಂಬಾರ ಅವರಿಗೆ” ಎಂದು ಹಳೆಯ ದಿನಗಳನ್ನ ಮೆಲುಕು ಹಾಕಿದರು.

“ಸಾಹಿತಿಗಳು ಸತ್ಯವನ್ನು ಹೇಳುತ್ತಾರೆ. ಕುವೆಂಪು ಅವರ ಚಿಂತನೆಗಳನ್ನು ನಾವು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ನಮ್ಮ ಮನೆಯಲ್ಲಿ ನಮ್ಮ ಮಕ್ಕಳಿಗೆ, ಮಡದಿಗೆ ಕುವೆಂಪು ಅವರ ಚಿಂತನೆಗಳ ಬಗ್ಗೆ ಹೇಳಬೇಕು. ಪ್ರತಿಯೊಬ್ಬರು ಕುವೆಂಪು ವಿಚಾರವನ್ನು ಬಸವಣ್ಣ ಪ್ರಜ್ಞೆಯನ್ನ ಇಟ್ಟುಕೊಳ್ಳಬೇಕು. ಕುವೆಂಪು ಅವರನ್ನು ಪ್ರತಿ ನಿಟ್ಟಿನಲ್ಲಿಯೂ ನೆನೆಯುವ ಕೆಲಸ ನಾವು ಮಾಡಬೇಕಿದೆ” ಎಂದು ಹೇಳಿದರು.

ಕುವೆಂಪು 3

“ಕುವೆಂಪು ಅವರ ಹಾಡುಗಳನ್ನು ಹಾಡುವ ಮೂಲಕ, ಕಥೆ ಕಾದಂಬರಿ ಓದುವ ಮೂಲಕ, ಅವರ ವೈಚಾರಿಕ ಚಿಂತನೆ ಮಾಡಬಹುದು. ನೆಮ್ಮದಿಯಿಂದ ಜೀವನ ಮಾಡಬೇಕೆಂದರೇ ಕುವೆಂಪು ಅವರ ವಿಚಾರ ಮುಖ್ಯ. ಇನ್ನು ಕುವೆಂಪು ಅವರು ಧ್ಯಾನ ಎಂದರೆ ಅದು ಪೂಜೆಯಲ್ಲ. ಮನುಷ್ಯ ತನ್ನನ್ನು ಪರಿಪಕ್ವವಾಗಿ ಇಟ್ಟುಕ್ಕೊಳ್ಳುವುದಕ್ಕೆ ಜ್ಞಾನ ಮುಖ್ಯ. ಕುವೆಂಪು ಅವರು ಒಬ್ಬ ವೈಜ್ಞಾನಿಕ ಜ್ಞಾನದ ವಿಚಾರ ಹೊಂದಿರುವ ಸಾಹಿತಿ” ಎಂದರು.

ಈ ಸುದ್ದಿ ಓದಿದ್ದೀರಾ? ಬೆಂಗಳೂರಿನ ಪ್ರತಿಷ್ಠಿತ ಮಂತ್ರಿ ಮಾಲ್‌ಗೆ ಬೀಗ ಜಡಿದ ಬಿಬಿಎಂಪಿ!

ಯುವ ಲೇಖಕಿ ಫಾತಿಮಾ ರಲಿಯಾ ಮಾತನಾಡಿ, “ನಾನು ಕವಿ, ಸಾಹಿತಿ, ನಾಟಕಕಾರ, ಲೇಖಕಿ ಎಂದು ಹೇಳಿದರೇ ಸ್ವರ್ಗದ ಬಾಗಿಲು ತೆಗೆಯುವುದಿಲ್ಲ. ಅದೇ ನಾನು ಹೇಮಿಯ ಗಂಡ ಎಂದು ಹೇಳಿದ ತಕ್ಷಣ ಸ್ವರ್ಗದ ಬಾಗಿಲು ತೆಗೆಯುತ್ತದೆ ಎಂದು ಕುವೆಂಪು ಅವರು ಬರೆದ ಪದ್ಯದಲ್ಲಿ ತಿಳಿಸಿದ್ದಾರೆ. ಅಂದರೆ, ಹೆಣ್ಣಿಗೆ ಅವರು ಇಲ್ಲಿ ಎಷ್ಟು ಪ್ರಾಮುಖ್ಯತೆ ನೀಡುತ್ತಿದ್ದಾರೆ. ಇಂದಿನ ಪುರುಷ ಪ್ರಧಾನ ವ್ಯವಸ್ಥೆಯಲ್ಲಿ ಹೆಣ್ಣನ್ನು ಸಾರ್ವಜನಿಕ ನಿಂದನೆ, ಮಾಡುಕಟ್ಟೆಯ ಸರಕಾಗಿ ಮಾಡಲಾಗಿದೆ. ಆದರೆ, ಅರ್ಧ ಶತಮಾನಗಳ ಹಿಂದೆಯೇ ಕುವೆಂಪು ಅವರು ಮಹಿಳೆಯರ ಬಗ್ಗೆ ಅಪಾರವಾದ ಕಲ್ಪನೆ ಕಟ್ಟಿಕೊಟ್ಟಿದ್ದಾರೆ. ಕುವೆಂಪು ಅವರ ಮಲೆಗಳಲ್ಲಿ ಮದುಮಗಳು, ಶ್ರೀರಾಮಾಯಣ ದರ್ಶನಂ ಕಥೆಗಳಲ್ಲಿ ಮಹಿಳೆಯರಿಗೆ ಸ್ಥಾನ ನೀಡಿದ್ದಾರೆ. ಹೆಣ್ಣಿಗೆ ಸೀಮಿತ ಮಾಡಲಾಗಿದ್ದ ಚೌಕಟ್ಟನ್ನು ಅವರು ವಿಸ್ತರಿಸಿದ್ದಾರೆ” ಎಂದು ಹೇಳಿದರು.

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಉತ್ತರ ಕನ್ನಡ | ಪಡಿತರ ಚೀಟಿದಾರರಿಗೆ ಗುಡ್ ನ್ಯೂಸ್: ಮಾರ್ಚ್‌ನಲ್ಲಿ ಹೆಚ್ಚುವರಿ ಸೀಮೆಎಣ್ಣೆ ವಿತರಣೆ

ಉತ್ತರ ಕನ್ನಡ ಜಿಲ್ಲೆಯ ಗ್ರಾಮಾಂತರ ಪ್ರದೇಶದ ಪಡಿತರ ಚೀಟಿದಾರರಿಗೆ ಕೇಂದ್ರ ಸರ್ಕಾರದಿಂದ...

ಸಿಂಧನೂರು | ರೀಲ್ಸ್ ಮಾಡಲು ಹೋದ ಯುವಕ ನೀರು ಪಾಲು

ರೀಲ್ಸ್ ಮಾಡುವ ಉದ್ದೇಶದಿಂದ ಸ್ನೇಹಿತರಿಗೆ ವಿಡಿಯೋ ಮಾಡಲು ಹೇಳಿ ಈಜಲು ನದಿಗೆ...

ಗದಗ | ಆದ್ಯ ವಚನಕಾರ ದೇವರ ದಾಸಿಮಯ್ಯ: ರಾಘವೇಂದ್ರ ಕೊಪ್ಪಳ

"ಆದ್ಯ ವಚನಕಾರ ನೇಕಾರ ಸಂತ ದೇವರ ದಾಸಿಮಯ್ಯನವರು 10 ನೇ ಶತಮಾನದಲ್ಲಿ...