ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (KSRTC) ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿ ಡಾ. ಲತಾ ಟಿಎಸ್ ಅವರು ಪಬ್ಲಿಕ್ ರಿಲೇಷನ್ಸ್ ಕೌನ್ಸಿಲ್ ಆಫ್ ಇಂಡಿಯಾದ ನೂತನ ಉಪಾಧ್ಯಕ್ಷೆಯಾಗಿ ಇಂದು ಪದಗ್ರಹಣ ಮಾಡಿದರು.
ಬೆಂಗಳೂರು ನಗರದ ಜೆ.ಪಿ.ನಗರ ಸಾಂಸ್ಕೃತಿಕ ಸಂಘದಲ್ಲಿ ಇಂದು (ಜನವರಿ 11) ಪದಗ್ರಹಣ ಹಾಗೂ ಅಧಿಕಾರ ಹಸ್ತಾಂತರ ಸಮಾರಂಭ ನಡೆಯಿತು. ಈ ಕಾರ್ಯಕ್ರಮದಲ್ಲೇ ಆಡಳಿತ ಮಂಡಳಿಯ (ಗವರ್ನಿಂಗ್ ಕೌನ್ಸಿಲ್) ಅಧ್ಯಕ್ಷರಾಗಿ ಡಾ. ಟಿ. ವಿನಯ ಕುಮಾರ್ ಪದಗ್ರಹಣ ಮಾಡಿದರು. ಚಿನ್ಮಯೀ ಪ್ರವೀಣ್ ಅವರು ಕಾರ್ಯದರ್ಶಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು.
ಇದನ್ನು ಓದಿದ್ದೀರಾ? ಗಂಗಾವತಿ | ಕಸಾಪ ತಾಲೂಕು ಘಟಕದ ನೂತನ ಅಧ್ಯಕ್ಷ-ಪದಾಧಿಕಾರಿಗಳ ಪದಗ್ರಹಣ
ಇನ್ನು ಆಡಳಿತ ಮಂಡಳಿಯ ಹೆಚ್ಚುವರಿ ನಿರ್ದೇಶಕರಾಗಿ ಬೆಂಗಳೂರು ವಿಶ್ವವಿದ್ಯಾಲಯದ ಉಪಕುಲಪತಿ ಡಾ. ಬಿ.ಕೆ. ರವಿ, ಸಿ.ಜೆ. ಸಿಂಗ್, ಅರಿಜಿತ್ ಸಿಂಗ್, ಆರ್.ಎನ್. ಮಹಾಪಾತ್ರ ರವೀಂದ್ರನ್ ಅಧಿಕಾರ ಸ್ವೀಕರಿಸಿದರು.
ಯಂಗ್ ಕಮ್ಯುನಿಕೇಟರ್ಸ್ ಕ್ಲಬ್‌ನ ರಾಷ್ಟ್ರೀಯ ಮುಖ್ಯಸ್ಥರಾಗಿ ಡಾ. ಪ್ರಶಾಂತ್ ವೇಣುಗೋಪಾಲ್ ಮತ್ತು ಪಿಆರ್‌ಸಿಐಯ ಪ್ರಧಾನ ಕಾರ್ಯದರ್ಶಿಯಾಗಿ ಪಶುಪತಿ ಶರ್ಮಾ ಅಧಿಕಾರ ಸ್ವೀಕರಿಸಿದರು.





