ಬೆಂಗಳೂರು ಜೀವನ ಅಂದ್ರೆ ‘ಸ್ಕ್ವಿಡ್ ಗೇಮ್‌’ ಇದ್ದಂತೆ

Date:

ಬೆಂಗಳೂರು – ಹೆಚ್ಚು ಜನಜಂಗುಳಿ ಇರುವ ನಗರ. ಬೃಹತ್ ಉದ್ಯಮಗಳು, ನಾನಾ ಕಾರ್ಖಾನೆಗಳು, ಆಡಳಿತ ಸೌಧಗಳು ಎಲ್ಲವೂ ಇರುವ ಬೃಹತ್ ಪಟ್ಟಣ. ಜೊತೆಗೆ, ನೂರಾರು ಕಿ.ಮೀ ಉದ್ದದ ರಸ್ತೆಗಳೂ ಇವೆ. ಆ ರಸ್ತೆಗಳು ಮತ್ತು ಫುಟ್‌ಪಾತ್‌ನಗಳಲ್ಲಿ ಡಾಂಬರು/ಕಾಂಕ್ರೀಟ್‌ಗಿಂತ ಗುಂಡಿಗಳೇ ಹೆಚ್ಚಿವೆ ಎಂಬ ಆರೋಪಗಳೂ ನಿರಂತರವಾಗಿ ಕೇಳಿಬರುತ್ತಲೇ ಇವೆ. ರಸ್ತೆ ಗುಂಡಿಗಳಿಂದಾಗಿ ಬೆಂಗಳೂರು ಜೀವನವು ‘ಸ್ಕ್ವಿಡ್‌ ಗೇಮ್‌’ ಇದ್ದಂತಿದೆ ಎಂಬ ಅಭಿಪ್ರಾಯಗಳು ವ್ಯಕ್ತವಾಗುತ್ತಿವೆ.

ಬೆಂಗಳೂರಿನ ರಸ್ತೆಗುಂಡಿಗಳ ಬಗ್ಗೆ ಕಲಾವಿದ ಬಾದಲ್ ನಂಜುಂಡಸ್ವಾಮಿ ಅವರು ಆಗ್ಗಾಗ್ಗೆ ವಿನೂತವಾದ ಪ್ರತಿಭಟನೆಗಳನ್ನು ನಡೆಸಿ, ಅಧಿಕಾರಿಗಳ, ಆಳುವವರ ಹಾಗೂ ಸಾರ್ವಜನಿಕರ ಗಮನ ಸೆಳೆಯುತ್ತಲೇ ಬಂದಿದ್ದಾರೆ. ಇದೀಗ, ಬಾದಲ್ ನಂಜುಂಡಸ್ವಾಮಿ ಮತ್ತು ಕೆಲವು ಪತ್ರಕರ್ತರು ಆನ್‌ಲೈನ್‌ ಆಟ ‘ಸ್ಕ್ವಿಡ್ ಗೇಮ್‌’ನ ಪಾತ್ರಗಳಂತೆ ವೇಷಧರಿಸಿ, ಗುಂಡಿಗಳಿಂದ ತುಂಬಿರುವ ಪಾದಚಾರಿ ಮಾರ್ಗಗಳು ಮತ್ತು ರಸ್ತೆಗಳಲ್ಲಿ ಆಟವಾಡಿದ್ದಾರೆ. ಜನರ ಗಮನ ಸೆಳೆದಿದ್ದಾರೆ.

ನಗರದ ಸೇಂಟ್ ಜಾನ್ಸ್ ಆಸ್ಪತ್ರೆಯ ಬಳಿ ಅವರು ‘ಸ್ಕ್ವಿಡ್ ಗೇಮ್‌‘ ಆಟದ ಪಾತ್ರಗಳಾಗಿ ನಟಿಸಿ, ವಿಡಿಯೋವನ್ನು ಚತ್ರೀಕರಿಸಿದ್ದಾರೆ. ಆ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ಸದ್ದುಮಾಡುತ್ತಿದೆ. ವಿಡಿಯೋದಲ್ಲಿ; ರಸ್ತೆ ಗುಂಡಿಗಳು ಮತ್ತು ಹಾಳಾದ ಪಾದಚಾರಿ ಮಾರ್ಗಗಳಲ್ಲಿ ನಡೆಯಲು, ಕೇಬಲ್‌ಗಳನ್ನು ಹೊಂದಿರುವ ಮಣ್ಣಿನ ದಿಬ್ಬಗಳನ್ನು ಹತ್ತಲು ಹಾಗೂ ಗುಂಡಿಗಳನ್ನು ತಪ್ಪಿಸಲು ಪ್ರಯತ್ನಿಸುವುದು ಕಾಣಿಸುತ್ತದೆ. ವೀಡಿಯೊದ ಒಂದು ಹಂತದಲ್ಲಿ ಕಷ್ಟಕರವಾದ ಹಾದಿಯನ್ನು ದಾಟಲು ಪ್ರಯತ್ನಿಸುವಾಗ ಛಾಯಾಗ್ರಾಹಕ ಅನಂತ ಸುಬ್ರಹ್ಮಣ್ಯಂ ಕೆ ಅವರು ಆಕಸ್ಮಿಕವಾಗಿ ನೆಲಕ್ಕೆ ಬಿದ್ದಂತೆ ಕಾಣಿಸುತ್ತದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ವಿಡಿಯೋಗೆ ಪ್ರತಿಕ್ರಿಯಿಸಿರುವ ನೆಟ್ಟಿಗರು, “ಸರ್ಕಾರವು ತನ್ನ ನಾಗರಿಕರು ಒಂದೇ ದಿನದ ನಡಿಗೆಯಲ್ಲಿ ಜಿಮ್ನಾಸ್ಟಿಕ್ಸ್ ಮತ್ತು ಕಾರ್ಡಿಯೋ ಅಭ್ಯಾಸ ಮಾಡುವುದನ್ನು ಖಾತ್ರಿಪಡಿಸುತ್ತಿದೆ. ಅವರನ್ನು ಯಾಕೆ ಟೀಕಿಸಬೇಕು” ಎಂದು ಹಾಸ್ಯ ಮಾಡಿದ್ದಾರೆ.

ಈ ಲೇಖನ ಓದಿದ್ದೀರಾ?: ಬಿಹಾರ ಚುನಾವಣೆ | ಗೇಮ್ ಚೇಂಜರ್ ಆಗ್ತಾರಾ ಪ್ರಶಾಂತ್ ಕಿಶೋರ್?

“ಪಾದಚಾರಿಗಳು ಹೆಲ್ಮೆಟ್ ಮತ್ತು ಮೊಣಕಾಲು ಪ್ಯಾಡ್‌ಗಳನ್ನು ಧರಿಸಬೇಕೆಂದು ನಾನು ಸಲಹೆ ನೀಡುತ್ತೇವೆ” ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ.

“ಹಾ! ಹಾಸ್ಯಾಸ್ಪದ, ಆದರೆ ನಾಚಿಕೆಗೇಡಿನ ಸಂಗತಿ. ಬಿಬಿಎಂಪಿ ಸರಿಯಾದ ರಸ್ತೆಗಳು ಮತ್ತು ಚರಂಡಿಗಳನ್ನು ನಿರ್ಮಾಣ ಮಾಡಲು ಸಾಧ್ಯವಾಗದಿದ್ದಾಗ ನೀವು ಭೂಗತ ಸುರಂಗಗಳು, ಸ್ಕೈ ಟವರ್ ಹಾಗೂ ಮೂರನೇ ವಿಮಾನ ನಿಲ್ದಾಣ ನಿರ್ಮಾಣದ ಬಗ್ಗೆ ಯೋಜಿಸುತ್ತಿದೆ! ಬಿಬಿಎಂಪಿ ಆದ್ಯತೆಗಳ ಬಗ್ಗೆ ಮಾತನಾಡಬೇಕು!” ಎಂದು ನೆಟ್ಟಿಗರು ಆಗ್ರಹಿಸಿದ್ದಾರೆ.

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ದಾವಣಗೆರೆ | ಸಮರ್ಥ್‌ ನಾಮಪತ್ರ ಸಲ್ಲಿಕೆ; ದೂರ ಉಳಿದ ರಾಜ್ಯ ಮುಸ್ಲಿಂ ಮುಖಂಡರು

ಡಿ.ಕೆ ಶಿವಕುಮಾರ್ ಮತ್ತು ಸಿದ್ದರಾಮಯ್ಯ ಅವರು ದಾವಣಗೆರೆ ಮುಸ್ಲಿಂ ಕಾಂಗ್ರೆಸ್‌ ಟಿಕೆಟ್...

ರಾಜ್ಯದಲ್ಲಿ ʼಎಸ್‌ಐಆರ್ʼ ಪ್ರಕ್ರಿಯೆಯನ್ನು ತರಾತುರಿಯಲ್ಲಿ ನಡೆಸಬೇಡಿ- ಪ್ರಗತಿಪರ ಸಂಘಟನೆ, ಜಾತ್ಯತೀತ ಪಕ್ಷಗಳ ಆಗ್ರಹ

ಕೇಂದ್ರ ಚುನಾವಣಾ ಆಯೋಗ ನಡೆಸುತ್ತಿರುವ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಎಂಬುದು...