ಈ ಹಿಂದೆ ನಮ್ಮ ಮೆಟ್ರೋ ಟಿಕೆಟ್ ದರವನ್ನು ತೀವ್ರ ಪ್ರಮಾಣದಲ್ಲಿ ಏರಿಸಿದ್ದ ಬೆಂಗಳೂರು ಮೆಟ್ರೋ ರೈಲು ನಿಗಮ (ಬಿಎಂಆರ್‌ಸಿಎಲ್) ಇದೀಗ ಮತ್ತೆ ದರವನ್ನು ಹೆಚ್ಚಳ ಮಾಡಲು ಮುಂದಾಗಿದೆ. ಈ ಸಂಬಂಧ ಸರ್ಕಾರಕ್ಕೆ ಈಗಾಗಲೇ BMRCL ಪ್ರಸ್ತಾವನೆ ಸಲ್ಲಿಸಿದ್ದು, ಅನುಮೋದನೆಗಾಗಿ ಕಾಯುತ್ತಿದೆ.
ಪ್ರತಿ ವರ್ಷ ಮೆಟ್ರೋ ಟಿಕೆಟ್ ದರಗಳನ್ನು ಪರಿಷ್ಕರಿಸಬೇಕೆಂದು ಸೂಚಿಸಿದ್ದ ದರ ನಿಗದಿ ಸಮಿತಿಯ (FFC) ಶಿಫಾರಸಿನ ಆಧಾರದಲ್ಲಿ ಪರಿಷ್ಕರಣೆ ನಡೆಯಲಿದೆ. ಕಳೆದ ವರ್ಷ ಫೆಬ್ರವರಿಯಲ್ಲಿ ದರ ಏರಿಕೆ ಜಾರಿ ಮಾಡಲಾಗಿದೆ. ಇದೀಗ ಒಂದು ವರ್ಷ ಪೂರ್ಣಗೊಂಡಿರುವುದರಿಂದ ಮತ್ತೆ ದರ ಪರಿಷ್ಕರಣೆಗೆ ಮುಂದಾಗಿದೆ.
ಇದನ್ನು ಓದಿದ್ದೀರಾ? ಶೀಘ್ರವೇ ನಮ್ಮ ಮೆಟ್ರೋ ಟಿಕೆಟ್ ದರ ಮತ್ತೆ ಏರಿಕೆ: ಎಷ್ಟು, ಯಾವಾಗ?
2025ರಲ್ಲಿ ಬಿಎಂಆರ್‌ಸಿಎಲ್ ಶೇ. 71ರಷ್ಟು ದರ ಏರಿಕೆಯನ್ನು ಜಾರಿಗೆ ತಂದಿತ್ತು. ಇದರಿಂದಾಗಿ ತೀವ್ರ ಟೀಕೆಗೆ ಗುರಿಯಾಗಿತ್ತು, ಪ್ರತಿಭಟನೆ ನಡೆದಿತ್ತು. ಮೆಟ್ರೋ ಟಿಕೆಟ್ ದರ ಶೇಕಡ 60 ರೂಪಾಯಿಯಿಂದ 90 ರೂಪಾಯಿಗೆ ಏರಿಕೆಯಾಗಿತ್ತು. ಬಡ, ಮಧ್ಯಮ ವರ್ಗದ ಆರ್ಥಿಕ ಸಂಕಷ್ಟ ಉಂಟಾಗಿ ಮೆಟ್ರೋದಿಂದ ದೂರ ಉಳಿದಿದ್ದರು.
ಇದಾದ ಬಳಿಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸಲಹೆಯ ಮೇರೆಗೆ ಶೇ.30ರಷ್ಟು ಅಂದರೆ 8-9 ರೂಪಾಯಿ ಟಿಕೆಟ್ ದರ ಇಳಿಸಲಾಗಿತ್ತು. ಈಗ ಒಂದು ವರ್ಷವಾಗುತ್ತಿದ್ದಂತೆ ಮತ್ತೆ ದರ ಏರಿಕೆಗೆ ಸಿದ್ಧತೆ ನಡೆಯುತ್ತಿದೆ.





