ನೆರೆಹೊರೆಯವರ ಹಕ್ಕುಗಳ ರಾಷ್ಟ್ರೀಯ ಮಟ್ಟದ ಅಭಿಯಾನ ನ. 21ರಿಂದ 30ರವರೆಗೆ

Date:

“ಸಮಾಜದ ಮುಂದೆ ನೆರೆಹೊರೆಯವರ ಹಕ್ಕುಗಳ ಅತ್ಯುತ್ತಮ ಮಾದರಿಯನ್ನು ಪ್ರಸ್ತುತಪಡಿಸುವುದು, ಪರಸ್ಪರರ ಬಗ್ಗೆ ಕಾಳಜಿ, ಸಹಕಾರ, ಶಿಸ್ತು, ಶುಚಿತ್ವ ಮತ್ತಿತರ ಸಾಮಾಜಿಕ ಹೊಣೆಗಾರಿಕೆಗಳನ್ನು ನಿರ್ವಹಿಸಲು ಪ್ರೇರೇಪಿಸುವುದು, ಸೌಹಾರ್ದ ಸಂಬಂಧ ಬೆಳೆಯುವಂತೆ ಮಾಡುವುದು, ರಸ್ತೆಯ ನಿಯಮಗಳು, ವಾಹನ ಸಂಚಾರದ ನಿಯಮಗಳ ಬಗ್ಗೆ ಕಾಳಜಿ ಉಳ್ಳವರಾಗಿ ಮಾಡುವುದು… ಮುಂತಾದ ಮಹೋನ್ನತ ಉದ್ದೇಶಗಳನ್ನು ಮುಂದಿಟ್ಟು ಜಮಾಅತೆ ಇಸ್ಲಾಮೀ ಹಿಂದ್ “ಮಾದರಿ ನೆರೆಹೊರೆ, ಮಾದರಿ ಸಮಾಜ” ಎಂಬ ಶೀರ್ಷಿಕೆ ಅಡಿಯಲ್ಲಿ ನೆರೆಹೊರೆಯವರ ಹಕ್ಕುಗಳ ರಾಷ್ಟ್ರೀಯ ಮಟ್ಟದ ಅಭಿಯಾನವನ್ನು ಇದೇ ನವೆಂಬರ್ 21 ರಿಂದ 30ರವರೆಗೆ ಹಮ್ಮಿಕೊಂಡಿದೆ. ಈ ಅಭಿಯಾನದ ಪ್ರಯುಕ್ತ ಪ್ರವಚನ, ಮೊಹಲ್ಲಾ ಸಭೆಗಳು, ಕರಪತ್ರ ವಿತರಣೆ, ಕೌಟುಂಬಿಕ ಭೇಟಿ, ಸಾಂಸ್ಕೃತಿಕ ಕಾರ್ಯಕ್ರಮ, ಟ್ರಾಫಿಕ್ ನಿಯಮಗಳ ಜಾಗೃತಿ ಸಮಾವೇಶ ಹಾಗೂ ವಿದ್ಯಾರ್ಥಿ ಯುವಕರ ರ್ಯಾಲಿ ಮುಂತಾದ ವೈವಿಧ್ಯಮಯ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು” ಎಂದು ʼಜಮಾಅತೆ ಇಸ್ಲಾಮೀ ಹಿಂದ್ ಕರ್ನಾಟಕʼದ ರಾಜ್ಯಾಧ್ಯಕ್ಷರಾದ ಡಾ. ಮುಹಮ್ಮದ್ ಸಾದ್ ಬೆಳ್ಗಾಮಿ ತಿಳಿಸಿದರು.

“ಮನುಷ್ಯನು ಒಬ್ಬ ಸಾಮೂಹಿಕ ಜೀವಿಯಾಗಿದ್ದಾನೆ. ಮನುಷ್ಯನನ್ನು ಇತರೆ ಜೀವಿಗಳಿಗಿಂತ ಭಿನ್ನವಾಗಿಸಿರುವುದು ಅವನಲ್ಲಿ ಇರುವ ಈ ಸಾಮಾಜಿಕ ಪ್ರಜ್ಞೆಯಾಗಿದೆ. ತನ್ನ ಜೊತೆಗಿರುವ ಜನರೊಂದಿಗೆ, ಪರಿಸರದೊಂದಿಗೆ, ಇತರೆ ಸಹಜೀವಿಗಳೊಂದಿಗೆ ಅವನಿಗೆ ಹಲವಾರು ಹೊಣೆಗಾರಿಕೆಗಳಿವೆ. ಒಟ್ಟಿನಲ್ಲಿ ಎಲ್ಲಾ ಮಾನವರ ಬದುಕಿನ ಅಡಿಪಾಯ ‘ಸಂಬಂಧ. ಸಂಬಂಧಗಳಲ್ಲಿ ಅತ್ಯಂತ ಮಹತ್ವದ ಸಂಬಂಧ ನೆರೆಹೊರೆಯವರ ಸಂಬಂಧವಾಗಿದೆ. ಇದೊಂದು ಅಪೂರ್ವ ಮತ್ತು ಪ್ರಬಲವಾದ ಸಂಬಂಧವಾಗಿದೆ. ಮಾನವನು ಒಂಟಿ ಮನೆಯಲ್ಲಿ ಇರುವುದರ ಬದಲು ಮಾನವರು ನೆಲೆಸಿರುವ ಗ್ರಾಮ ಅಥವಾ ಪಟ್ಟಣಗಳಲ್ಲಿ ನೆಲೆಸುವುದನ್ನು ಇಷ್ಟಪಡುತ್ತಾನೆ. ನೆರೆಕರೆಯವರ ಕುಟುಂಬ ಬೇರೆಯಾಗಿರಬಹುದು, ಅವರ ಭಾಷೆ, ಕುಲ, ಗೋತ್ರ ಮತ್ತು ಧರ್ಮ ಎಲ್ಲವೂ ಪರಸ್ಪರ ಭಿನ್ನವಾಗಿರಬಹುದು; ಆದಾಗಿಯೂ ಕೇವಲ ನೆರೆಕರೆಯ ಸಂಬಂಧವೆನ್ನುವುದು ಬಹಳ ನಿಕಟ ಸಂಬಂಧವಾಗಿ ಬಿಡುತ್ತದೆ. ಈ ಸಂಬಂಧದಲ್ಲಿ ಬಹಳ ಅನ್ಯೋನ್ಯತೆ ಮತ್ತು ಪರಸ್ಪರ ವಿಶ್ವಾಸ ಕಂಡು ಬರುತ್ತದೆ. ನೆರೆಹೊರೆಯ ಸಂಬಂಧ ಆರೋಗ್ಯಕರವಾಗಿದ್ದರೆ, ಆ ಸಮಾಜವು ಆರೋಗ್ಯಕರವಾಗಿರುವುದು. ನೆರೆಹೊರೆಯವರು ಪ್ರೀತಿ-ವಿಶ್ವಾಸ, ಸಹಕಾರ, ಸೌಹಾರ್ಧ ಮನೋಭಾವದಿಂದ ವರ್ತಿಸಿದರೆ ಸಮಾಜದಲ್ಲಿ ಸೌಹಾರ್ದ, ಸಹಕಾರಗಳು ನೆಲೆಗೊಳ್ಳುತ್ತವೆ. ನೆರೆಹೊರೆಯವರೊಂದಿಗೆ ಕೋಪ ದ್ವೇಷದಿಂದ ಇರುವುದೆಂದರೆ ಆ ಸಮಾಜದಲ್ಲಿ ಎಂದೂ ಶಾಂತಿ, ಸೌಹಾರ್ದವನ್ನು ಸ್ಥಾಪಿಸಲು ಸಾಧ್ಯವಿಲ್ಲ. ಅಭಿವೃದ್ಧಿಯೂ ಸಾಧ್ಯವಿಲ್ಲ.

ಇದನ್ನೂ ಓದಿ ಭಾರತದಲ್ಲಿ ಮುಸ್ಲಿಂ ದ್ವೇಷ ಹರಡಲು AI ಚಿತ್ರ- ವಿಡಿಯೋಗಳ ವ್ಯಾಪಕ ಬಳಕೆ: ಅಧ್ಯಯನ ವರದಿ

ಇತ್ತೀಚಿನ ದಿನಗಳಲ್ಲಿ ದೊಡ್ಡ ನಗರಗಳಲ್ಲಿ ಖಾಸಗೀತನಕ್ಕೆ ಸಿಕ್ಕಿರುವ ಅತಿಯಾದ ಮಹತ್ವದ ಕಾರಣದಿಂದಾಗಿ ನೆರೆಹೊರೆಯವರು ಮತ್ತು ಅವರ ಹಕ್ಕುಗಳ ಬಗ್ಗೆ ತೀವ್ರ ನಿರ್ಲಕ್ಷ್ಯವನ್ನು ತೋರಲಾಗುತ್ತಿದೆ. ಇದರಿಂದ ಈ ವಿಷಯದಲ್ಲಿ ಜನರ ಮಧ್ಯೆ ಜಾಗೃತಿಯನ್ನು ಮೂಡಿಸಬೇಕಾದ ಅಗತ್ಯವಿದೆ. ಈ ಸಂಬಂಧ ಬಲಿಷ್ಠವಾಗಬೇಕಾದರೆ ನಮ್ಮ ಮಧ್ಯೆ ಇರುವ ಅಡ್ಡ ಗೋಡೆಗಳನ್ನು ಒಡೆದರೆ ಮಾತ್ರ ಸಾಧ್ಯವಾಗುತ್ತದೆ. ಆದರೆ ಇಂದು ಈ ಮಾನವೀಯ ಸಂಬಂಧಗಳು ನಿಧಾನವಾಗಿ ತಮ್ಮ ಮೌಲ್ಯಗಳನ್ನು ಕಳೆದುಕೊಳ್ಳುತ್ತಿದೆ. ಮನುಷ್ಯ ತಾನು, ತನ್ನದು ಎಂಬ ಸಂಕುಚಿತ ಭಾವ ಬೆಳಸಿಕೊಂಡು, ತನ್ನಲ್ಲೇ ಕೇಂದ್ರೀಕೃತನಾಗುತ್ತಿದ್ದಾನೆ” ಎಂದು ಅವರು ಹೇಳಿದರು.

ಜಮಾಅತೆ ಇಸ್ಲಾಮೀ ಹಿಂದ್ ಕರ್ನಾಟಕದ ರಾಜ್ಯ ಕಾರ್ಯದರ್ಶಿಗಳಾದ, ಮೌಲಾನಾ ಅಬ್ದುಲ್ ಗಫ್ಫಾರ್ ಹಾಮಿದ್ ಉಮ್ರಿ, ,
ಮೌಲಾನಾ ವಹೀದುದ್ದೀನ್ ಖಾನ್ ಉಮ್ರಿ ಮದನಿ, ಜನಾಬ್ ಮಹಮ್ಮದ್ ಬಿಲಾಲ್, ಮೌಲಾನಾ ಲಬೀದ್ ಶಾಫಿ, ತಶ್ಕೀಲಾ ಖಾನಂ ಉಪಸ್ಥಿತರಿದ್ದರು.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ದಾವಣಗೆರೆ | ಸಮರ್ಥ್‌ ನಾಮಪತ್ರ ಸಲ್ಲಿಕೆ; ದೂರ ಉಳಿದ ರಾಜ್ಯ ಮುಸ್ಲಿಂ ಮುಖಂಡರು

ಡಿ.ಕೆ ಶಿವಕುಮಾರ್ ಮತ್ತು ಸಿದ್ದರಾಮಯ್ಯ ಅವರು ದಾವಣಗೆರೆ ಮುಸ್ಲಿಂ ಕಾಂಗ್ರೆಸ್‌ ಟಿಕೆಟ್...

ರಾಜ್ಯದಲ್ಲಿ ʼಎಸ್‌ಐಆರ್ʼ ಪ್ರಕ್ರಿಯೆಯನ್ನು ತರಾತುರಿಯಲ್ಲಿ ನಡೆಸಬೇಡಿ- ಪ್ರಗತಿಪರ ಸಂಘಟನೆ, ಜಾತ್ಯತೀತ ಪಕ್ಷಗಳ ಆಗ್ರಹ

ಕೇಂದ್ರ ಚುನಾವಣಾ ಆಯೋಗ ನಡೆಸುತ್ತಿರುವ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಎಂಬುದು...