ನಿರಂಜನರ ಕೃತಿಗಳು ಇಂದಿಗೂ ಪ್ರಸ್ತುತ: ಪ್ರೊ. ರಾಜೇಂದ್ರ ಚೆನ್ನಿ

Date:

ಮತ ಭ್ರಾಂತಿ ಮತ್ತು ಮತಿ ಭ್ರಾಂತಿ ಅಂತ ಕುವೆಂಪು ಹೇಳಿದ್ದು ನಮಗೆ ಪ್ರಸ್ತುತ ಅನ್ನಿಸುತ್ತದೆ. ರಾಜಕೀಯವಾಗಿ ಪಕ್ಷ ನಿಷ್ಠೆ ಎನ್ನುವುದು ಇದ್ದರೆ, ಸೃಜನಶೀಲತೆ ಬತ್ತಿ ಹೋಗುತ್ತದೆ. ಪ್ರಗತಿಶೀಲ ಪಂಥದಲ್ಲಿ ನಿರಂಜನರು ಬರೆದ ಅನೇಕ ಕಥೆಗಳು ಇಂದಿಗೂ ಪ್ರಸ್ತುತ ಎನಿಸಿಕೊಂಡಿವೆ ಎಂದು ಹಿರಿಯ ಸಾಹಿತಿ ಪ್ರೊ. ರಾಜೇಂದ್ರ ಚೆನ್ನಿ ಅಭಿಪ್ರಾಯಪಟ್ಟರು.

ಕ್ರಿಯಾ ಮಾಧ್ಯಮ ಹಾಗೂ ಜನ ಶಿಕ್ಷಣ ಟ್ರಸ್ಟ್ ವತಿಯಿಂದ ಆಯೋಜಿಸಲಾಗಿದ್ದ, ನಿರಂಜನ ಶತಮಾನ ಸಮಾರೋಪ – ವಿಚಾರ ಸಂಕಿರಣ ಮತ್ತು ‘ನಿರಂಜನ ಮರು ಓದು’ ಸರಣಿ ಬಿಡುಗಡೆ ಕಾರ್ಯಕ್ರಮದಲ್ಲಿ ನಿರಂಜನರ ನಾಲ್ಕು ಪುಸ್ತಕಗಳನ್ನು ಎಲ್ ಎನ್ ಮುಕುಂದರಾಜ್ ಬಿಡುಗಡೆ ಮಾಡಿದರು.

ಕಾರ್ಯಕ್ರಮದಲ್ಲಿ ಮಾತನಾಡಿದ ಸಾಹಿತಿ ಎನ್ ಗಾಯತ್ರಿ, “1954ರಲ್ಲಿ ನಿರಂಜನರು ಬರೆದ ‘ಬನಶಂಕರಿ’ ಕಾದಂಬರಿಯು ಅವರ ಬದುಕಿನ ಅನುಭವದ ಗಟ್ಟಿ ನೆಲೆ. ಕ್ರೌರ್ಯವನ್ನು ಹೇಗೆ ತಣ್ಣಗೆ ನಿರೂಪಿಸಬಹುದು ಎಂದು ನಿರಂಜನ ತೋರಿಸಿದ್ದಾರೆ. ಒಂದು ರೀತಿಯ ಸಾಂಸ್ಥಿಕ ಕ್ರೌರ್ಯವನ್ನು ಈ ಕಾದಂಬರಿಯಲ್ಲಿ ಚಿತ್ರಿಸಿದ್ದಾರೆ. ಇದು ಮಹಿಳಾ ಲೋಕಕ್ಕೆ ನಿರಂಜನರು ಕೊಟ್ಟ ಅಪರೂಪದ ಕೊಡುಗೆ” ಎಂದು ಅಭಿಪ್ರಾಯಪಟ್ಟರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಮುಂದುವರೆದು, “80ರ ದಶಕದಲ್ಲಿ Personal is political ಎಂಬ ಘೋಷವಾಕ್ಯ ಮಹಿಳಾ ಚಳುವಳಿ ಗಟ್ಟಿಯಾಗಿ ಮೊಳಗುತ್ತಿತ್ತು. ನಿರಂಜನರು ಬರೆದ ಅನೇಕ ಕಥೆಗಳು ಮಹಿಳೆಯರು ಎದುರಿಸುವ ಅನೇಕ ಸಮಸ್ಯೆಗಳ ಬಗ್ಗೆ ಮಾತನಾಡುತ್ತದೆ. ಇಡೀ ಜೀವಮಾನದುದ್ದಕ್ಕೂ ಸುಮಾರು‌ 150 ಕ್ಕೂ ಹೆಚ್ಚು ಕಥೆಗಳನ್ನು ಬರೆದಿದ್ದಾರೆ. ಬಹಿಷ್ಕೃತೆ ಮತ್ತು ಆಜೀವನ ಎಂಬ ಎರಡು ಕಥೆಗಳು ನಿರಂಜನರ ಆತ್ಮ ಕಥನವೇ ಅನಿಸುತ್ತದೆ. ಅವರ ‘ಕೊನೆಯ ಗಿರಾಕಿ’ ಕಥೆಯು ಸಮಾಜವಾದ ತತ್ವದ ಮೂಲವಾದ, ಮಾನವ ಜೀವನದ ಬಗ್ಗೆ ಹೇಳುತ್ತದೆ” ಎಂದರು.

ಕಾರ್ಯಕ್ರಮದಲ್ಲಿ ಸಾಹಿತಿಗಳಾದ ಎಂ.ಜಿ.ಹೆಗಡೆ, ಪತ್ರಕರ್ತರಾದ ನವೀನ್ ಸೂರಿಂಜೆ, ಪ್ರತಿಭಾ ಭಟ್, ಅನಂತ ಶಾಂದ್ರೇಯ, ರಂಗನಾಥ್ ಕುಂಟನಕುಂಟೆ ಹಾಗೂ ನಿರಂಜನ ಅವರ ಮಗಳಾದ ತೇಜಸ್ವಿನಿ ನಿರಂಜನ ಉಪಸ್ಥಿತರಿದ್ದರು.

Manoj
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ದಾವಣಗೆರೆ | ಸಮರ್ಥ್‌ ನಾಮಪತ್ರ ಸಲ್ಲಿಕೆ; ದೂರ ಉಳಿದ ರಾಜ್ಯ ಮುಸ್ಲಿಂ ಮುಖಂಡರು

ಡಿ.ಕೆ ಶಿವಕುಮಾರ್ ಮತ್ತು ಸಿದ್ದರಾಮಯ್ಯ ಅವರು ದಾವಣಗೆರೆ ಮುಸ್ಲಿಂ ಕಾಂಗ್ರೆಸ್‌ ಟಿಕೆಟ್...

ರಾಜ್ಯದಲ್ಲಿ ʼಎಸ್‌ಐಆರ್ʼ ಪ್ರಕ್ರಿಯೆಯನ್ನು ತರಾತುರಿಯಲ್ಲಿ ನಡೆಸಬೇಡಿ- ಪ್ರಗತಿಪರ ಸಂಘಟನೆ, ಜಾತ್ಯತೀತ ಪಕ್ಷಗಳ ಆಗ್ರಹ

ಕೇಂದ್ರ ಚುನಾವಣಾ ಆಯೋಗ ನಡೆಸುತ್ತಿರುವ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಎಂಬುದು...