ಬೆಂಗಳೂರಿನ ಈ ದೇವಸ್ಥಾನದಲ್ಲಿ ಇನ್ನು ಮುಂದೆ ಮದುವೆಗಳಿಲ್ಲ!

Date:

ಈ ದೇವಾಲಯದಲ್ಲಿ ಇಲ್ಲಿಯವರೆಗೂ ಹಲವಾರು ಮದುವೆಗಳನ್ನು ಮಾಡಿಸಲಾಗಿದೆ. ಈ ದೇವಸ್ಥಾನ ಮದುವೆಗಳನ್ನ ಮಾಡಿಸುವುದಕ್ಕೆ ಜನಪ್ರಿಯವಾಗಿತ್ತು. ವಾರಕ್ಕೊಮ್ಮೆ 100ರಿಂದ 150 ಮದುವೆಗಳನ್ನು ನಡೆಸುತ್ತಿದ್ದ ಈ ದೇವಾಲಯ, ಕಳೆದ 6-7 ವರ್ಷಗಳಿಂದ ಈ ಕಾರ್ಯಕ್ರಮಗಳನ್ನು ನಿಲ್ಲಿಸಿದೆ. 

ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿರುವ ಪುರಾತನ ದೇವಸ್ಥಾನವೊಂದರ ಆಡಳಿತ ಮಂಡಳಿಯ ನಿರ್ಧಾರದಿಂದ ದೇವಾಲಯವೂ ಸದ್ಯ ಚರ್ಚೆಯ ಕೇಂದ್ರಬಿಂದುವಾಗಿದೆ. ಇಷ್ಟು ವರ್ಷಗಳ ಕಾಲ ಮದುವೆ ನಡೆಯುತ್ತಿದ್ದ ಈ ದೇವಾಲಯದಲ್ಲಿ ಇನ್ನುಮುಂದೆ ಮದುವೆ ನಡೆಯುವುದಿಲ್ಲ ಎಂಬುದು ಹೊಸ ವಿಷಯವಾಗಿದೆ. 

ಹೌದು, ಬೆಂಗಳೂರಿನಲ್ಲಿರುವ ಅತ್ಯಂತ ಹಳೆಯ ದೇವಾಲಯಗಳಲ್ಲಿ ಒಂದಾಗಿರುವ ಹಲಸೂರು ಸೋಮೇಶ್ವರ ದೇವಸ್ಥಾನ ಚೋಳರ ಕಾಲದಲ್ಲಿ ನಿರ್ಮಾಣವಾಗಿದೆ. ಈ ದೇವಾಲಯವನ್ನು ವಿಜಯನಗರ ಮತ್ತು ಕೆಂಪೇಗೌಡರ ಕಾಲದಲ್ಲಿ ಅಭಿವೃದ್ಧಿಪಡಿಸಲಾಗಿದೆ. ಈ ದೇವಸ್ಥಾನ 12 ಮತ್ತು 13ನೇ ಶತಮಾನಕ್ಕೆ ಸೇರಿದೆ ಎಂದು ನಂಬಲಾಗಿದೆ. ಇಷ್ಟೊಂದು ಹಿನ್ನೆಲೆ ಹೊಂದಿರುವ ಈ ದೇವಸ್ಥಾನದಲ್ಲಿ ಈ ಹಿಂದಿನಿಂದಲೂ ಹಲವಾರು ಮದುವೆಗಳು ನಡೆದಿವೆ. ಆದರೆ, ಕಳೆದ 7 ವರ್ಷಗಳಿಂದ ಈ ದೇವಸ್ಥಾನದಲ್ಲಿ ಯಾವುದೇ ವಿವಾಹಗಳನ್ನು ನೇರವೇರಿಸಲಾಗುತ್ತಿಲ್ಲ. ದೇವಸ್ಥಾನದಲ್ಲಿ ವಿವಾಹಗಳನ್ನು ನಡೆಸದೇ ಇರುವಂತೆ ದೇವಸ್ಥಾನದ ಆಡಳಿತ ಮಂಡಳಿ ನಿರ್ಧರಿಸಿದೆ. 

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ದೇವಸ್ಥಾನದ ಪಾವಿತ್ರ್ಯತೆ, ಖ್ಯಾತಿ ಮತ್ತು ಅರ್ಚಕರನ್ನು ಕಾನೂನಿನಿಂದ ಎದುರಾಗುವ ತೊಡಕುಗಳಿಂದ ಕಾಪಾಡುವ ಉದ್ದೇಶದಿಂದ ದೇವಸ್ಥಾನದ ಆಡಳಿತ ಮಂಡಳಿ ದೇವಸ್ಥಾನದಲ್ಲಿ ಮದುವೆ ನಡೆಸದೇ ಇರುವ ನಿರ್ಧಾರಕ್ಕೆ ಬಂದಿದೆ. 

ಶಿವನಿಗೆ ಸಮರ್ಪಿತವಾದ ಈ ದೇವಾಲಯವೂ ಕರ್ನಾಟಕ ಸರ್ಕಾರದ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ದಾನ ಧರ್ಮಗಳ ಇಲಾಖೆಯ ಅಡಿಯಲ್ಲಿದೆ. ಪುರಾತನ ದೇವಾಲಯವಾದ ಕಾರಣ ಹಲವಾರು ಭಕ್ತರ ಭಕ್ತಿ ಕೇಂದ್ರವಾಗಿದೆ. ಈ ದೇವಾಲಯದಲ್ಲಿ ಇಲ್ಲಿಯವರೆಗೂ ಹಲವಾರು ಮದುವೆಗಳನ್ನು ಮಾಡಿಸಲಾಗಿದೆ. ಈ ದೇವಸ್ಥಾನ ಮದುವೆಗಳನ್ನ ಮಾಡಿಸುವುದಕ್ಕೆ ಜನಪ್ರಿಯವಾಗಿತ್ತು. ವಾರಕ್ಕೊಮ್ಮೆ 100ರಿಂದ 150 ಮದುವೆಗಳನ್ನು ನಡೆಸುತ್ತಿದ್ದ ಈ ದೇವಾಲಯ, ಕಳೆದ 6-7 ವರ್ಷಗಳಿಂದ ಈ ಕಾರ್ಯಕ್ರಮಗಳನ್ನು ನಿಲ್ಲಿಸಿದೆ. 

ದೇವಾಲಯ ಆಡಳಿತ ಮಂಡಳಿಯ ಈ ನಿರ್ಧಾರ ಈ ಹಿಂದೆ ಹೆಚ್ಚು ಚರ್ಚಿತವಾಗಿರಲಿಲ್ಲ. ಆದರೆ, ಇತ್ತೀಚೆಗೆ, ವ್ಯಕ್ತಿಯೊಬ್ಬರು ನಗರದ ಹಲಸೂರು ದೇಗುಲದಲ್ಲಿ ಮದುವೆಗೆ ಅನುಮತಿ ನೀಡುತ್ತಿಲ್ಲ ಎಂದು ಸಿಎಂ ಕಚೇರಿಗೆ ಪತ್ರ ಬರೆದ ಬಳಿಕ ಸಾರ್ವಜನಿಕ ಚರ್ಚೆಗೆ ಗುರಿಯಾಗಿದೆ. 

ಹಲಸೂರು ದೇವಸ್ಥಾನದಲ್ಲಿ ಮದುವೆಯಾಗಲು ಅನುಮತಿ ನೀಡುತ್ತಿಲ್ಲ ಎಂದು ವರನೋರ್ವ ಸಿಎಂಗೆ ಪತ್ರ ಬರೆದಿದ್ದರು. ಈ ವಿಚಾರಕ್ಕೆ ಸಂಬಂಧಿಸಿದಂತೆ, ಸಿಎಂ ವಿಶೇಷ ಕರ್ತವ್ಯಾಧಿಕಾರಿಗಳು ದೇವಸ್ಥಾನಕ್ಕೆ ಕಾರಣ ಕೇಳಿ ನೋಟಿಸ್ ನೀಡಿದ್ದರು. 

ಈ ನೋಟಿಸ್‌ಗೆ ಉತ್ತರಿಸಿದ್ದ ದೇವಸ್ಥಾನದ ಕಾರ್ಯನಿರ್ವಾಹಕ ಅಧಿಕಾರಿ, “ಹಲಸೂರು, ಶ್ರೀ ಸೋಮೇಶ್ವರಸ್ವಾಮಿ ದೇವಾಲಯದಲ್ಲಿ ಮದುವೆಯನ್ನು ಮಾಡದಿರಲು ಕಾರಣವೇನೆಂದರೆ, ದೇವಾಲಯದಲ್ಲಿ ಮದುವೆ ಮಾಡಿಕೊಳ್ಳುತ್ತಿದ್ದ ದಂಪತಿಗಳು ಅವರಿಗೆ ಹೊಂದಾಣಿಕೆಯಾಗದೇ ಇದ್ದಾಗ ಅವರುಗಳು ನ್ಯಾಯಾಲಯಗಳಿಗೆ ಹೋಗಿ ದೇವಾಲಯದಲ್ಲಿ ಮದುವೆ ಮಾಡಿದ ಅರ್ಚಕರನ್ನು ಸಹ ನ್ಯಾಯಾಲಯಗಳಿಗೆ ಹಾಜರುಪಡಿಸುತ್ತಿದ್ದರು. ಅಲ್ಲದೇ, ದೇವಾಲಯದಲ್ಲಿ ಮದುವೆಯಾದ ಜೋಡಿಗಳು ಹೊಂದಾಣಿಕೆ ಇಲ್ಲದ ಪಕ್ಷದಲ್ಲಿ ವಿಚ್ಚೇದನವನ್ನು ಮಾಡಿಕೊಳ್ಳುತ್ತಿದ್ದರು. ಈ ಎಲ್ಲ ಕಾರಣಗಳಿಂದ ಅರ್ಚಕರು ಸಹ ದೇವಾಲಯದಲ್ಲಿ ಮದುವೆ ಮಾಡಲು ನಿರಾಕರಿಸುತ್ತಿದ್ದರು. ಆಕಸ್ಮಿಕವಾಗಿ ಅಹಿತಕರ ಘಟನೆಗಳು ನಡೆಯದಂತೆ ತಡೆಯಲು ಮತ್ತು ದೇವಾಲಯಕ್ಕೆ ಅಪಪ್ರಚಾರ ಕಳಂಕವಾಗುವುದನ್ನು ತಪ್ಪಿಸಲು ಈ ಹಿಂದೆ ಇದ್ದ ಕಾರ್ಯನಿರ್ವಾಹಕ ಅಧಿಕಾರಿಗಳು ಈ ಎಲ್ಲ ಕಾರಣಗಳನ್ನು ಇಲಾಖೆ ಮೇಲಾಧಿಕಾರಿಗಳ ಗಮನಕ್ಕೆ ಮೌಖಿಕವಾಗಿ ತಂದು ಕಳೆದ 6 – 7 ವರ್ಷಗಳಿಂದ ದೇವಾಲಯದಲ್ಲಿ ಮದುವೆ ಕಾರ್ಯ ಮಾಡುವುದನ್ನು ನಿಲ್ಲಿಸಲಾಗಿದೆ ಎಂಬ ವಿಷಯವನ್ನು ತಮಗೆ ತಿಳಿಸಿದೆ” ಎಂದು ಬರೆದಿದ್ದಾರೆ. 

ಈ ಸುದ್ದಿ ಓದಿದ್ದೀರಾ? ನಮ್ಮ ಮೆಟ್ರೋ | ಪ್ಲಾಟ್ ಫಾರ್ಮ್‌ಗಳಲ್ಲಿ ತಲೆ ಸುತ್ತಿ ಬೀಳುತ್ತಿರುವ ಯುವಜನರು!

ಕರ್ನಾಟಕ ಸರ್ಕಾರದ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ದತ್ತಿ ಇಲಾಖೆಯ ಅಡಿಯಲ್ಲಿ ಬರುವ ಹಲಸೂರಿನ ಸೋಮೇಶ್ವರ ದೇವಸ್ಥಾನವು ನವೆಂಬರ್ 25 ರಂದು ನೀಡಿದ ಪ್ರತಿಕ್ರಿಯೆಯಲ್ಲಿ ತನ್ನ ನಿಲುವನ್ನು ಸ್ಪಷ್ಟಪಡಿಸಿದೆ.

ಇನ್ನು ಈ ಕುರಿತು ಮಾತನಾಡಿದ ದೇವಸ್ಥಾನದ ಅರ್ಚಕರು, “ಸೋಮೇಶ್ವರ ದೇವಾಲಯದಲ್ಲಿ ಮದುವೆ ಮಾಡದಂತೆ ನಿರ್ಧಾರ ಮಾಡುವುದಕ್ಕೆ ನಿರ್ದಿಷ್ಟ ಕಾರಣಗಳಿವೆ. ಈ ಹಿಂದೆ ತನ್ನ ಸ್ನೇಹಿತನ ಪತ್ನಿಯನ್ನೇ ಮದುವೆಯಾದ ಆತ ತನ್ನ ಸ್ನೇಹಿತನಿಂದಲೇ ಕೊಲೆಗಿಡಾಗಿದ್ದನು. ಇನ್ನು ಅಪ್ಪ- ಅಮ್ಮ ಇವರೇ ಎಂದು ಸುಳ್ಳು ಹೇಳಿ ಮದುವೆಯಾಗಿ ಬಳಿಕ ನಿಜವಾದ ತಂದೆ – ತಾಯಿ ಕೇಸ್ ಹಾಕಿದ ಘಟನೆಗಳು ನಡೆದಿವೆ. ಮದುವೆಯಾದ ಜೋಡಿಗಳು ವಿಚ್ಛೇದನ ಪಡೆದಾಗ, ವಿವಾಹೇತರ ಸಂಬಂಧ, ಸುಳ್ಳು ದಾಖಲೆ ನೀಡಿ ಮದುವೆ ಇತ್ಯಾದಿ ಸಮಸ್ಯೆಗಳು ಪದೇಪದೆ ಎದುರಾದಾಗ ಅರ್ಚಕರನ್ನು ಸಹ ನ್ಯಾಯಾಲಯದ ಮುಂದೆ ನಿಲ್ಲಿಸುತ್ತಿದ್ದ ಘಟನೆಗಳು ನಡೆದವು. ಹೀಗಾಗಿ, ದೇವಾಲಯದಲ್ಲಿ ಮದುವೆ ಮಾಡಿಸುವುದನ್ನು ನಿಷೇಧಿಸಲಾಗಿದೆ” ಎಂದು ಹೇಳಿದ್ದಾರೆ. 

“ಹಲವು ಜೋಡಿಗಳು ಮನೆಯಿಂದ ಓಡಿಹೋಗಿ ಮದುವೆಯಾಗಲು ನಕಲಿ ದಾಖಲೆಗಳನ್ನು ನೀಡುತ್ತಾರೆ. ಕೆಲವು ದಿನಗಳ ನಂತರ, ಈ ಜೋಡಿಗಳ ಪೋಷಕರು ಬರುತ್ತಾರೆ ಮತ್ತು ಕೆಲವು ಸಂದರ್ಭಗಳಲ್ಲಿ, ನ್ಯಾಯಾಲಯದ ಪ್ರಕರಣಗಳನ್ನು ದಾಖಲಿಸಲಾಗುತ್ತದೆ” ಎಂದು ದೇವಾಲಯ ಸಮಿತಿಯ ಮುಖ್ಯ ಆಡಳಿತ ಅಧಿಕಾರಿ ವಿ ಗೋವಿಂದರಾಜು ತಿಳಿಸಿದ್ದಾರೆ.

“100-150 ಕ್ಕೂ ಹೆಚ್ಚು ವಿವಾಹಗಳನ್ನು ನಡೆಸಿದ್ದರೂ, ದೇವಾಲಯದ ಪ್ರತಿಷ್ಠೆಯ ಮೇಲೆ ಪರಿಣಾಮ ಬೀರುವ ಅಹಿತಕರ ಘಟನೆಗಳನ್ನ ತಡೆಗಟ್ಟಲು 6-7 ವರ್ಷಗಳ ಹಿಂದೆ ಅದನ್ನು ನಿಲ್ಲಿಸಿದ್ದೇವೆ. ಈ ಬಗ್ಗೆ ಇಲಾಖೆಯ ಅಧಿಕಾರಿಗಳಿಗೆ ಮೌಖಿಕವಾಗಿ ತಿಳಿಸಿದ್ದೇವೆ” ಎಂದಿದ್ದಾರೆ.

ಇದನ್ನೂ ಓದಿ ಈ ದಿನ ಸಂಪಾದಕೀಯ | ಬಾಲಕಿಯರಿಗೆ ಲೈಂಗಿಕ ಕಿರುಕುಳ; ಪೋಕ್ಸೋ ಆರೋಪಿಯ ಖುಲಾಸೆ, ಕಾಯ್ದೆಯ ಅಣಕವಲ್ಲವೇ?

11 ವರ್ಷಗಳ ಹಿಂದಿನ ಘಟನೆಯನ್ನು ನೆನಪಿಸಿಕೊಳ್ಳುತ್ತಾ ಮಾತನಾಡಿದ ಗೋವಿಂದರಾಜು ಅವರು, “ವಸಂತ ನಗರದಲ್ಲಿ ಒಬ್ಬ ರೌಡಿ ಇದ್ದ. ಅವನು ಈ ದೇವಸ್ಥಾನಕ್ಕೆ ಒಬ್ಬ ಮಹಿಳೆಯೊಂದಿಗೆ ಬಂದು ಮದುವೆಯಾದನು. ಆದರೆ, ಆ ಮಹಿಳೆಗೆ ಈಗಾಗಲೇ ಮದುವೆಯಾಗಿದ್ದು, ಕಾನೂನು ಪ್ರಕಾರ ವಿಚ್ಚೇದನ ಪಡೆಯದೇ ಇರುವುದು ಎರಡು ದಿನಗಳ ನಂತರ ನಮ್ಮ ಗಮನಕ್ಕೆ ಬಂದಿತು. ಇನ್ನು ಆಕೆಯ ಮೊದಲ ಪತಿ ಎರಡನೇ ಪತಿಯನ್ನು ಕೊಲೆ ಮಾಡಿದನು. ವಿವಾಹ ಸಾಕ್ಷಿಗಳಾಗಿ ಪುರೋಹಿತರು ನ್ಯಾಯಾಲಯಕ್ಕೆ ಹೋಗಬೇಕಾಯಿತು” ಎಂದು ವಿವರಿಸಿದ್ದಾರೆ. 

“ಇನ್ನೊಂದು ಸಂದರ್ಭದಲ್ಲಿ, ಹೈದರಾಬಾದ್‌ನಲ್ಲಿ ಪ್ರಕರಣ ದಾಖಲಾಗಿತ್ತು. ಆಗ ಪುರೋಹಿತರು ಅಲ್ಲಿನ ನ್ಯಾಯಾಲಯದ ಪ್ರಕರಣಗಳಿಗೆ ಹಾಜರಾಗಬೇಕಾಯಿತು” ಎಂದು ಹೇಳಿದ್ದಾರೆ. 

ವರನೋರ್ವ ಕರ್ನಾಟಕ ಮುಖ್ಯಮಂತ್ರಿ ಕಚೇರಿಗೆ ಪತ್ರ ಬರೆದ ಬಳಿಕ ಈ ವಿಷಯ ಹೊರಬಿದ್ದಿದೆ. ಹಾಗೆಯೇ, ದೇವಾಲಯದ ಆಡಳಿತ ಮಂಡಳಿಯ ಈ ಪ್ರತಿಕ್ರಿಯೆ ಅನಿರೀಕ್ಷಿತವಾಗಿದೆ.

e057b508e9e1b164fadd3c3edb023f5214f4d0a6d12066a30e302f9e3b0f6f24?s=150&d=mp&r=g
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಒಳಮೀಸಲಾತಿ ಜಾರಿಗೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಬಿಡುತ್ತಿಲ್ಲ: ಮಂದಕೃಷ್ಣ ಮಾದಿಗ ಆರೋಪ

ಒಳಮೀಸಲಾತಿ ಜಾರಿಗೆ ತರುತ್ತೇವೆಂದು ಹೇಳಿದ್ದ ಕಾಂಗ್ರೆಸ್‌, ಈಗ ಒಳಮೀಸಲಾತಿ ಅನುಷ್ಠಾನದಲ್ಲಿ ಮೀನಾಮೇಷ...

ಒಳಮೀಸಲಾತಿ ಹೋರಾಟ | ಸಿಎಂ ಸಿದ್ದರಾಮಯ್ಯ ನುಡಿದಂತೆ ನಡೆದಿಲ್ಲ: ಮಾರಸಂದ್ರ ಮುನಿಯಪ್ಪ

ಸಿದ್ದರಾಮಯ್ಯ ಅವರು ಸಮಾಜವಾದದ ಬಗ್ಗೆ ಮಾತನಾಡುತ್ತಾರೆ. ನುಡಿದಂತೆ ನಡೆದಂತೆ ಸರ್ಕಾರವೆಂದು ಹೇಳುತ್ತಾರೆ....

ಫ್ರೀಡಂ ಪಾರ್ಕ್‌ನಿಂದ ವಿಧಾನಸೌಧಕ್ಕೆ ಬರಲಿದೆ ಒಳಮೀಸಲಾತಿ ಹೋರಾಟ: ಸರ್ಕಾರಕ್ಕೆ ಮಾದರ ಚೆನ್ನಯ್ಯ ಸ್ವಾಮೀಜಿ ಎಚ್ಚರಿಕೆ

ಕಳೆದ 35 ವರ್ಷಗಳಿಂದ ಹಲವಾರು ಹೋರಾಟಗಾರರು ತಮ್ಮ ಜೀವ-ಜೀವನವನ್ನು ಅರ್ಪಿಸಿ, ಮನೆ-ಮಠವನ್ನು...

ಬೆಂಗಳೂರು | ನೇಮಕಾತಿಯಲ್ಲಿ ಒಳಮೀಸಲಾತಿಗೆ ಆಗ್ರಹಿಸಿ ಮೊಳಗುತ್ತಿದೆ ಘೋಷ

ಸರ್ಕಾರವು ಒಳಮೀಸಲಾತಿಯನ್ನು ತಪ್ಪಿಸುವ ಹುನ್ನಾರದಿಂದ ತರಾತುರಿಯಲ್ಲಿ 56,432 ಹುದ್ದೆಗಳ ನೇಮಕಾತಿಗೆ ಆದೇಶ...