ಸಂಚಾರ ನಿಯಮ ಉಲ್ಲಂಘನೆಗಳ ಪೈಕಿ ಹೆಲ್ಮೆಟ್ ಧರಿಸದ ಪ್ರಕರಣಗಳೇ ಅತ್ಯಧಿಕ!

Date:

ರಾಜಧಾನಿ ಬೆಂಗಳೂರಿನಲ್ಲಿ ಸಂಚಾರ ನಿಯಮ ಉಲ್ಲಂಘನೆಗಳ ಪೈಕಿ ಹೆಲ್ಮೆಟ್ ಧರಿಸದ ಪ್ರಕರಣಗಳೇ ಅತ್ಯಧಿಕವಾಗಿವೆ. ದಿನೇದಿನೇ ಹೆಚ್ಚುತ್ತಿರುವ ದ್ವಿಚಕ್ರ ವಾಹನಗಳ ಸಂಖ್ಯೆಯ ಜತೆಗೆ, ಸುರಕ್ಷತಾ ನಿಯಮಗಳ ಪಾಲನೆಯಲ್ಲಿನ ನಿರ್ಲಕ್ಷ್ಯವೂ ಆತಂಕಕಾರಿ ಮಟ್ಟಕ್ಕೆ ಏರಿದೆ. ಸಂಚಾರ ಪೊಲೀಸ್ ಇಲಾಖೆ ಅಂಕಿಅಂಶಗಳ ಪ್ರಕಾರ, ದಾಖಲಾದ ಒಟ್ಟು ಸಂಚಾರ ಅಪರಾಧಗಳಲ್ಲಿ ಹೆಲ್ಮೆಟ್ ಉಲ್ಲಂಘನೆ ಪ್ರಮುಖ ಸ್ಥಾನ ಪಡೆದುಕೊಂಡಿದೆ.

ಬೆಂಗಳೂರು ಸಂಚಾರ ಪೊಲೀಸರ ಪ್ರಕಾರ, ಜನವರಿ – ನವೆಂಬರ್ 2025ರ ನಡುವೆ ದಾಖಲಾದ 58.97ಲಕ್ಷ ಸಂಚಾರ ಉಲ್ಲಂಘನೆ ಪ್ರಕರಣಗಳ ಪೈಕಿ ಸುಮಾರು 46% ಹೆಲ್ಮೆಟ್ ಧರಿಸದ ಪ್ರಕರಣಗಳು ದಾಖಲಾಗಿವೆ. ಹೆಲ್ಮೆಟ್ ಧರಿಸದ ಕಾರಣ 27.4ಲಕ್ಷಕ್ಕೂ ಹೆಚ್ಚು ಸವಾರರು ಮತ್ತು ಹಿಂಬದಿ ಸವಾರರಿಗೆ ದಂಡ ವಿಧಿಸಲಾಗಿದೆ.

ಪ್ರಕರಣಗಳ ಪೈಕಿ, 17,63,020 ಪ್ರಕರಣಗಳು ಮುಂಬದಿ ಸವಾರರು ಹೆಲ್ಮೆಟ್ ಧರಿಸದ ಪ್ರಕರಣಗಳಾಗಿದ್ದರೇ, 9,84,461 ಪ್ರಕರಣಗಳು ಹಿಂಬದಿ ಸವಾರರು ಹೆಲ್ಮೆಟ್ ಧರಿಸದ ಪ್ರಕರಣಗಳಾಗಿವೆ. ನಗರದಲ್ಲಿ ಇಷ್ಟು ದೊಡ್ಡ ಸಂಖ್ಯೆಯಲ್ಲಿ ಹೆಲ್ಮೆಟ್ ಉಲ್ಲಂಘನೆ ಪ್ರಕರಣಗಳು ದಾಖಲಾಗಿವೆ. ಈ ಹೆಲ್ಮೆಟ್ ಉಲ್ಲಂಘನೆ ನಗರ ಸಂಚಾರ ಅಪರಾಧಗಳ ಪೈಕಿ ಏಕೈಕ ಅತಿದೊಡ್ಡ ವರ್ಗವಾಗಿವೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಸಂಚಾರ ಪೊಲೀಸರು ವಾಹನ ಸವಾರರು ಹಲ್ಮೆಟ್ ಧರಿಸುವಂತೆ ಅಭಿಯಾನಗಳನ್ನ ಮಾಡಿದ್ದಾರೆ. ಸಾಮಾಜಿಕ ಮಾಧ್ಯಮಗಳಲ್ಲಿ ಜಾಗೃತಿ ಮೂಡಿಸಿದ್ದಾರೆ. ರಸ್ತೆ ಸುರಕ್ಷತೆ ಬಗ್ಗೆ ಸಾರಿ ಸಾರಿ ಹೇಳಿದ್ದಾರೆ. ಆದರೂ ಕೂಡ ವಾಹನ ಸವಾರರು ತಮ್ಮ ಅಭ್ಯಾಸವನ್ನು ಬದಲಾಯಿಸಿಕೊಂಡಿಲ್ಲ. ಪ್ರಯಾಣಿಕರ ಅಭ್ಯಾಸವನ್ನು ಬದಲಾಯಿಸಲು ಸಾಧ್ಯವಿಲ್ಲ ಎಂದು ಸಂಚಾರ ಪೊಲೀಸರು ಹೇಳುತ್ತಾರೆ.

“ಎಲ್ಲ ವ್ಯಾಪ್ತಿಗಳಲ್ಲಿ ಹೆಲ್ಮೆಟ್ ಜಾಗೃತಿ ಅಭಿಯಾನ ನಡೆಸಲಾಗುವುದು. ಸರಿಯಾದ ಹೆಲ್ಮೆಟ್ ಧರಿಸದ ಸವಾರರನ್ನು ನೋಡಿದಾಗಲೆಲ್ಲಾ, ಅವರನ್ನು ತಡೆದು ಪೂರ್ಣ ಪ್ರಮಾಣೀಕೃತ ಹೆಲ್ಮೆಟ್ ಧರಿಸುವ ಮಹತ್ವದ ಬಗ್ಗೆ ಅವರಿಗೆ ಅರಿವು ಮೂಡಿಸುತ್ತೇವೆ. ಕ್ಯಾಪ್ ಅಥವಾ ಅರ್ಧ ಹೆಲ್ಮೆಟ್ ನಿಜವಾದ ರಕ್ಷಣೆ ನೀಡುವುದಿಲ್ಲ. ಹೆಲ್ಮೆಟ್ ತಲೆಯನ್ನು ರಕ್ಷಿಸುತ್ತದೆ. ಸುರಕ್ಷತೆ ಮೊದಲು, ಪ್ರತಿಯೊಂದು ಜೀವವೂ ಮುಖ್ಯ ಎಂದು ಹೇಳುತ್ತೇವೆ. ಜಾಗೃತಿ ಪ್ರಯತ್ನಗಳನ್ನ ಪ್ರತಿದಿನ ನಡೆಸಲಾಗುತ್ತದೆ ”ಎಂದು ಸಂಚಾರ ಅಧಿಕಾರಿಯೊಬ್ಬರು ಹೇಳಿದ್ದಾರೆ.

“ಕೆಲವು ಸವಾರರು ಮೇಲ್ನೋಟಕ್ಕೆ ಹೆಲ್ಮೆಟ್ ಧರಿಸುತ್ತಾರೆ. ಇನ್ನು ಕೆಲವರು ಹ್ಯಾಂಡಲ್‌ನಲ್ಲಿ ಹೆಲ್ಮೆಟ್‌ ಹಾಕಿಕೊಳ್ಳುತ್ತಾರೆ. ದಂಡದಿಂದ ತಪ್ಪಿಸಿಕೊಳ್ಳಲು ವಾಹನ ಸವಾರರು ಅರ್ಧದಾರಿಯಷ್ಟು ಹೆಲ್ಮೆಟ್ ಧರಿಸಿ, ಆಮೇಲೆ ತೆಗೆಯುತ್ತಾರೆ. ಇದು ತಪ್ಪು. ಈ ರೀತಿ ಮಾಡುವುದರಿಂದ ಅವರ ಪ್ರಾಣಕ್ಕೆ ಅಪಾಯ ಉಂಟಾಗುತ್ತದೆ. ಅಪಾಯಕಾರಿ ಗಾಯಗಳಿಗೆ ತುತ್ತಾಗಬೇಕಾಗುತ್ತದೆ” ಎಂದು ಸಂಚಾರ ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಭಗವಾನ್ ಮಹಾವೀರ್ ಜೈನ್ ಆಸ್ಪತ್ರೆಯ ನರಶಸ್ತ್ರ ಚಿಕಿತ್ಸಕ ಡಾ. ಶರಣ್ ಶ್ರೀನಿವಾಸನ್ ಮಾತನಾಡಿ, ” ಸರಿಯಾದ ಹೆಲ್ಮೆಟ್ ಧರಿಸದ ವಾಹನ ಸವಾರರು ತೀವ್ರವಾದ ಆಘಾತಕಾರಿ ಮಿದುಳಿನ ಗಾಯಗಳು, ತಲೆಬುರುಡೆ ಮತ್ತು ಮುಖದಲ್ಲಿರುವ ಮೂಳೆಗಳ ಮುರಿತಕ್ಕೆ ಕಾರಣವಾಗುತ್ತದೆ. ಇಂಟ್ರಾಕ್ರೇನಿಯಲ್ ರಕ್ತಸ್ರಾವ, ಕೋಮಾ, ಸಾವು ಅಥವಾ ಜೀವಿತಾವಧಿಯ ಅರಿವಿನ ಮತ್ತು ನಡವಳಿಕೆಯ ಅಂಗವೈಕಲ್ಯವನ್ನು ಅನುಭವಿಸುತ್ತಾರೆ. ಇನ್ನು ಪ್ರಮಾಣಿಕೃತ ಹೆಲ್ಮೆಟ್ ಧರಿಸುವ ವಾಹನ ಸವಾರರು ಬಿದ್ದಾಗ ಮೂಳ ಮುರಿತಗಳು ಮಾರಕ ಮಿದುಳಿನ ಗಾಯ ಉಂಟಾಗುತ್ತದೆ. ವೈದ್ಯಕೀಯವಾಗಿ, ಈ ರೀತಿಯ ಎರಡು ಹೆಲ್ಮೆಟ್ ಧರಿಸುವ ವ್ಯತ್ಯಾಸ ಸ್ಪಷ್ಟವಾಗಿದೆ” ಎಂದಿದ್ದಾರೆ.

“ಹೆಲ್ಮೆಟ್‌ಗಳನ್ನು ಫ್ಯಾಷನ್‌ಗಾಗಿ ಅಥವಾ ಪೊಲೀಸರಿಂದ ದಂಡವನ್ನು ತಪ್ಪಿಸಿಕೊಳ್ಳಲು ಬಳಸುವುದಲ್ಲ. ನಮ್ಮ ರಕ್ಷಣೆಗೆ ಹೆಲ್ಮೆಟ್ ಬಳಸುವುದು ಸೂಕ್ತವಾಗಿದೆ. ಪೂರ್ಣ ಹೊದಿಕೆಯ ಹೆಲ್ಮೆಟ್‌ಗಳು ಪ್ರಮುಖ ಇಂದ್ರಿಯಗಳನ್ನು ವಾಯುಮಾರ್ಗಗಳನ್ನು ರಕ್ಷಿಸುತ್ತವೆ. ಮೆದುಳಿನ ಗಾಯವನ್ನು ಕಡಿಮೆ ಮಾಡುತ್ತವೆ. ಹೆಲ್ಮೆಟ್‌ಗಳು ಅತ್ಯಂತ ಅಮೂಲ್ಯವಾದ ಅಂಗವಾದ ಮಾನವ ಮೆದುಳನ್ನು ರಕ್ಷಿಸಲು ಉದ್ದೇಶಿಸಲಾದ ವೈದ್ಯಕೀಯ ಸಾಧನಗಳಾಗಿವೆ” ಎಂದಿದ್ದಾರೆ.

ಈ ಸುದ್ದಿ ಓದಿದ್ದೀರಾ? ಮುಗಿದ ಅಧಿವೇಶನ; ಮುಗಿಯದ ಪಡಿಪಾಟಲು

ಸಂಚಾರ ಅಧಿಕಾರಿಗಳು ಸಹ ಯುವ ಸವಾರರು ಮತ್ತು ಹಿಂಬದಿ ಪ್ರಯಾಣಿಕರಲ್ಲಿ ನಿಯಮ ಪಾಲಿಸದಿರುವುದು ಹೆಚ್ಚಾಗಿ ಕಂಡುಬರುತ್ತದೆ. ಅವರು ಈ ಅಪಘಾತಗಳ ಬಗ್ಗೆ ತಲೆಗೆ ಗಾಯ ಉಂಟಾಗುವುದರ ಬಗ್ಗೆ ಗಂಭೀರವಾಗಿ ಪರಿಗಣಿಸುವುದಿಲ್ಲ. ಅಸಡ್ಡೆಯಾಗಿ ನಡೆದುಕೊಳ್ಳುತ್ತಾರೆ. ಹೆಲ್ಮೆಟ್‌ಗಳನ್ನು ಸರಿಯಾಗಿ ಧರಿಸದಿದ್ದರೆ ಚಿಕ್ಕ ಸ್ಕಿಡ್‌ಗಳು ಅಥವಾ ಚಿಕ್ಕ ಡಿಕ್ಕಿಗಳು ಸಹ ಜೀವನವನ್ನು ಬದಲಾಯಿಸುವ ಪರಿಣಾಮಗಳಿಗೆ ಕಾರಣವಾಗಬಹುದು” ಎಂದು ಅಧಿಕಾರಿಗಳು ಹೇಳಿದ್ದಾರೆ.

ನಿಮ್ಹಾನ್ಸ್‌ನ ನರಶಸ್ತ್ರಚಿಕಿತ್ಸಾ ಪ್ರಾಧ್ಯಾಪಕ ಧವಲ್ ಶುಕ್ಲಾ, “ಹೆಲ್ಮೆಟ್‌ಗಳು ಬದುಕುಳಿಯಬಹುದಾದ ಅಪಘಾತ ಮತ್ತು ಜೀವಮಾನದ ವಿನಾಶದ ನಡುವಿನ ತಡೆಗೋಡೆಯಾಗಿದೆ” ಎಂದು ಹೇಳಿದ್ದಾರೆ.

ಈ ವರ್ಷ ಈಗಾಗಲೇ, ನಗರದಲ್ಲಿ ಜನವರಿಯಿಂದ ಅಕ್ಟೋಬರ್ ವರೆಗೆ 4,098 ರಸ್ತೆ ಅಪಘಾತಗಳು ದಾಖಲಾಗಿದ್ದು, 700 ಸಾವುಗಳು ಮತ್ತು 3,612 ಗಾಯಗಳಾಗಿವೆ.

ನಗರದ ಬಹುತೇಕ ಪ್ರಮುಖ ರಸ್ತೆಗಳು, ಒಳ ರಸ್ತೆಗಳು ಹಾಗೂ ವಸತಿ ಪ್ರದೇಶಗಳಲ್ಲೂ ದ್ವಿಚಕ್ರ ವಾಹನ ಸವಾರರು ಹೆಲ್ಮೆಟ್ ಇಲ್ಲದೆ ಸಂಚರಿಸುವುದು ಸಾಮಾನ್ಯ ದೃಶ್ಯವಾಗಿದೆ. ಕೆಲವರು ಚಾಲಕ ಮಾತ್ರ ಹೆಲ್ಮೆಟ್ ಧರಿಸಿ, ಹಿಂಬದಿ ಸವಾರರಿಗೆ ಹೆಲ್ಮೆಟ್ ನೀಡದಿರುವುದು ಮತ್ತೊಂದು ಗಂಭೀರ ಉಲ್ಲಂಘನೆಯಾಗಿದೆ. ಸಂಚಾರ ನಿಯಮದಂತೆ ಚಾಲಕ ಮತ್ತು ಹಿಂಬದಿ ಸವಾರ ಇಬ್ಬರೂ ಹೆಲ್ಮೆಟ್ ಧರಿಸುವುದು ಕಡ್ಡಾಯವಾದರೂ, ಈ ನಿಯಮವನ್ನು ಪಾಲಿಸದವರ ಸಂಖ್ಯೆ ಹೆಚ್ಚುತ್ತಿದೆ. ಆದರೆ, ಹೆಚ್ಚಿನ ಅಪಘಾತಗಳಲ್ಲಿ ತಲೆಗೆ ಗಂಭೀರ ಗಾಯವಾಗುವುದಕ್ಕೆ ಹೆಲ್ಮೆಟ್ ಧರಿಸದಿರುವುದೇ ಪ್ರಮುಖ ಕಾರಣವಾಗಿದೆ.

ಒಟ್ಟಾರೆ, ಬೆಂಗಳೂರು ಸಂಚಾರ ಅಪರಾಧಗಳ ಪಟ್ಟಿಯಲ್ಲಿ ಹೆಲ್ಮೆಟ್ ಉಲ್ಲಂಘನೆ ಪ್ರಾಬಲ್ಯ ಹೊಂದಿರುವುದು ಸಾರ್ವಜನಿಕ ಸುರಕ್ಷತೆ ಬಗ್ಗೆ ಇನ್ನಷ್ಟು ಜಾಗೃತಿ ಮೂಡಿಸುವ ಅಗತ್ಯವಿದೆ ಎಂಬುದನ್ನು ಸ್ಪಷ್ಟಪಡಿಸುತ್ತದೆ. ನಿಯಮ ಪಾಲನೆಯೇ ಅಪಘಾತ ಕಡಿಮೆ ಮಾಡುವ ಹಾಗೂ ಅಮೂಲ್ಯ ಜೀವಗಳನ್ನು ಉಳಿಸುವ ಪ್ರಮುಖ ಮಾರ್ಗವಾಗಿದೆ.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಒಳಮೀಸಲಾತಿ ಜಾರಿಗೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಬಿಡುತ್ತಿಲ್ಲ: ಮಂದಕೃಷ್ಣ ಮಾದಿಗ ಆರೋಪ

ಒಳಮೀಸಲಾತಿ ಜಾರಿಗೆ ತರುತ್ತೇವೆಂದು ಹೇಳಿದ್ದ ಕಾಂಗ್ರೆಸ್‌, ಈಗ ಒಳಮೀಸಲಾತಿ ಅನುಷ್ಠಾನದಲ್ಲಿ ಮೀನಾಮೇಷ...

ಒಳಮೀಸಲಾತಿ ಹೋರಾಟ | ಸಿಎಂ ಸಿದ್ದರಾಮಯ್ಯ ನುಡಿದಂತೆ ನಡೆದಿಲ್ಲ: ಮಾರಸಂದ್ರ ಮುನಿಯಪ್ಪ

ಸಿದ್ದರಾಮಯ್ಯ ಅವರು ಸಮಾಜವಾದದ ಬಗ್ಗೆ ಮಾತನಾಡುತ್ತಾರೆ. ನುಡಿದಂತೆ ನಡೆದಂತೆ ಸರ್ಕಾರವೆಂದು ಹೇಳುತ್ತಾರೆ....

ಫ್ರೀಡಂ ಪಾರ್ಕ್‌ನಿಂದ ವಿಧಾನಸೌಧಕ್ಕೆ ಬರಲಿದೆ ಒಳಮೀಸಲಾತಿ ಹೋರಾಟ: ಸರ್ಕಾರಕ್ಕೆ ಮಾದರ ಚೆನ್ನಯ್ಯ ಸ್ವಾಮೀಜಿ ಎಚ್ಚರಿಕೆ

ಕಳೆದ 35 ವರ್ಷಗಳಿಂದ ಹಲವಾರು ಹೋರಾಟಗಾರರು ತಮ್ಮ ಜೀವ-ಜೀವನವನ್ನು ಅರ್ಪಿಸಿ, ಮನೆ-ಮಠವನ್ನು...

ಬೆಂಗಳೂರು | ನೇಮಕಾತಿಯಲ್ಲಿ ಒಳಮೀಸಲಾತಿಗೆ ಆಗ್ರಹಿಸಿ ಮೊಳಗುತ್ತಿದೆ ಘೋಷ

ಸರ್ಕಾರವು ಒಳಮೀಸಲಾತಿಯನ್ನು ತಪ್ಪಿಸುವ ಹುನ್ನಾರದಿಂದ ತರಾತುರಿಯಲ್ಲಿ 56,432 ಹುದ್ದೆಗಳ ನೇಮಕಾತಿಗೆ ಆದೇಶ...