ದಲಿತರೆಂದರೆ ಹೀಗೆಯೇ ಎಂಬ ಭಂಗಿಗಳು ರಂಗದಲ್ಲಿ ಬದಲಾಗಬೇಕಿದೆ: ಲಕ್ಷ್ಮಣ್ ಕೆ ಪಿ

Date:

“ನಾಟಕಗಳಲ್ಲಿ ದಲಿತರು ಎಂದರೆ ಹಳೆಯ ಬಟ್ಟೆ ಧರಿಸಿರುತ್ತಾರೆ, ಕಪ್ಪಾಗಿರುತ್ತಾರೆ, ಯಾವಾಗಲೂ ಬಗ್ಗಿ ನಿಂತಿರುತ್ತಾರೆ, ಇಂಗ್ಲೀಷ್ ಮಾತನಾಡಲು ಬರಲ್ಲ ಎಂಬಂತೆ ಬಿಂಬಿಸಲಾಗುತ್ತದೆ. ಇದು ನಿಜವಾಗಿಯೂ ಅವರ ಗುರುತಾ? ಹಾಗಿದ್ದಾಗ ನಾವು ಬದಲು ಮಾಡಬೇಕಾಗಿರುವುದು ಏನು? ರಂಗದಲ್ಲಿ ದಲಿತರು ಎಂದರೆ ಹೀಗೆಯೇ ಎಂಬ ಭಂಗಿಗಳೆಲ್ಲವೂ ಬದಲಾಗಬೇಕಿದೆ. ಸಮಾಜ ಕಟ್ಟಿದ ಕೆಟ್ಟ ರಚನೆಯನ್ನೇ ನಾವು ಮುಂದುವರೆಸುತ್ತಿದ್ದೇವೆ” ಎಂದು ರಂಗಭೂಮಿ ನಿರ್ದೇಶಕ, ಬರಹಗಾರ, ಶಂಕರನಾಗ್ ರಂಗಭೂಮಿ ಪ್ರಶಸ್ತಿ ವಿಜೇತ ಲಕ್ಷ್ಮಣ್ ಕೆ ಪಿ ಹೇಳಿದರು.

ಭಾನುವಾರ ಬೆಂಗಳೂರು ನಗರದ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಆವರಣದಲ್ಲಿ ನಡೆದ ಸಮಾಜಮುಖಿ ಸಾಹಿತ್ಯ ಸಮ್ಮೇಳನದ ‘ರಂಗಭೂಮಿ – ಹೊಸ ರಂಗರೂಪದ ಹುಡುಕಾಟ ಅಲಕ್ಷಿತ ಅನುಭವ ಲೋಕ’ ಎಂಬ ಗೋಷ್ಠಿಯಲ್ಲಿ ಮಾತನಾಡಿದ ಅವರು, “ಪರಿಸರದ ವಿಚಾರದಲ್ಲಿ ನಾವು ನೋಡಿದಾಗ ಮರುರಚನೆ, ಮರುಬಳಕೆ ಉತ್ತಮ. ಅದು ಬೇಕೇ ಬೇಕು. ನಾವು ಪ್ಲಾಸ್ಟಿಕ್ ಮೊದಲಾದವುಗಳ ಮರುಬಳಕೆ ಮಾಡಬೇಕಾಗುತ್ತದೆ. ಆದರೆ ಸಾಂಸ್ಕೃತಿಕವಾಗಿ ಮರುಬಳಕೆ ಎಂಬುದು ಕಲೆಯ ಕೊಲೆ” ಎಂದು ತಿಳಿಸಿದರು.

ಇದನ್ನು ಓದಿದ್ದೀರಾ? ದಲಿತ ಸಾಹಿತಿಗಳು ಮಹಿಳಾ ಬರಹಗಾರರಿಗೆ ಬೆಂಬಲ ನೀಡುವುದು ಅಗತ್ಯ: ದು ಸರಸ್ವತಿ

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

“ಕನ್ನಡ ರಂಗಭೂಮಿಯಲ್ಲಿ ಪುರಾಣವನ್ನೇ ಹೇಳಲಾಗುತ್ತದೆ. ಮತ್ತೆ ಮತ್ತೆ ಪುರಾಣಗಳನ್ನು ಎತ್ತಿ ಪ್ರಸ್ತುತಪಡಿಸಲಾಗುತ್ತದೆ. ಕೊಳೆತ ವಸ್ತುಗಳನ್ನೇ ಒಳ್ಳೆಯ ವಸ್ತು ಎಂದು ಪ್ರಸ್ತುತಪಡಿಸಲಾಗುತ್ತಿದೆ. ಪುರಾಣದ ಬಗ್ಗೆಗಿನ ವ್ಯಾಮೋಹ ಬಿಡದಿದ್ದರೆ ಹೊಸ ರಂಗರೂಪಗಳು ರೂಪುಗೊಳ್ಳುವುದು ಬಹಳ ಕಷ್ಟ” ಎಂದು ಅಭಿಪ್ರಾಯಿಸಿದರು.

“ರಾಮನ ನೋವು, ಕರ್ಣನ ನೋವು ನನ್ನ ನೋವು ಅಂದುಕೊಂಡು ಈ ಸಮುದಾಯಗಳಿಗೆ ಸಾಕಾಗಿದೆ. ಇವರುಗಳ ನೋವು ನಮ್ಮ ನೋವುಗಳಲ್ಲ. ಸೀತೆಯ ಮೂಲಕ, ದ್ರೌಪದಿಯ ಮೂಲಕ ಹೆಣ್ಣನ್ನು ನೋಡಬೇಕಾಗಿಲ್ಲ. ನನ್ನ ಮೂಲಕನೇ ನಾನು ಹೆಣ್ಣು ಎಂಬುವುದಿರಬೇಕು” ಎಂದೂ ಹೇಳಿದರು.

ಈ ಗೋಷ್ಠಿಯಲ್ಲೇ ಮಾತನಾಡಿದ ರಂಗಕರ್ಮಿ, ನಾಟಕಕಾರ, ನಟ ಮಹಾದೇವ ಹಡಪದ, “ಬುದ್ಧ, ಬಸವಣ್ಣನ ನಂತರ ಹೊಸ ಜಗತ್ತನ್ನು ಜ್ಯೋತಿ ಬಾ ಫುಲೆ ಅವರು ನಮಗೆ ಹೊಸ ಜಗತ್ತನ್ನು ತೆರೆದು ತೋರಿಸಿದವರು. ಇದಾದ ಬಳಿಕ ಬಾಬಾ ಸಾಹೇಬರು ಹೊಸ ಜಗತ್ತನ್ನು ಇನ್ನೊಂದು ಹಂತಕ್ಕೆ ಕರೆದೊಯ್ದರು. ಅದಾದ ಬಳಿಕ ನಮ್ಮೊಳಗೆ ಅರಿವು ಎಂಬುದು ಬುದ್ಧ, ಬಸವಣ್ಣ, ಜ್ಯೋತಿ ಬಾ ಫುಲೆಯಿಂದ ಒಂದಾಗಿ ಶೈಕ್ಷಣಿಕವಾಗಿ ಬೇರೆ ತರಹದ ಅರಿವು ನಮ್ಮೊಳಗೆ ಬಂದಿದೆ” ಎಂದರು.

ಇದನ್ನು ಓದಿದ್ದೀರಾ? ಕೇಂದ್ರ ಸರ್ಕಾರ ಕೋಟ್ಯಂತರ ಜನ ಮಾತನಾಡುವ ಭಾಷೆಗಳನ್ನು ತುಳಿದು ಸಂಸ್ಕೃತವನ್ನು ಪೋಷಿಸುತ್ತಿದೆ: ಹಂಪನಾ

“ನಾವು ಮಾಡಿದ ಒಂದು ನಾಟಕದಲ್ಲಿ ಸಲಿಂಗರತಿಯೋರ್ವನ ಪಾತ್ರವಿದೆ. ಈ ನಾಟಕ ಮುಗಿದ ಬಳಿಕ ಒಂದೆರಡು ಮಂದಿ ಕಾದು ತಮ್ಮ ನೋವನ್ನು ಹಂಚಿಕೊಳ್ಳುತ್ತಿದ್ದರು. ಅವರ ನೋವುಗಳನ್ನು ತಿಳಿದಾಗ ಜೋಗತಿಯರ ಸ್ಥಿತಿಯ ಬಗ್ಗೆಯೂ ನನಗೆ ಆಲೋಚನೆ ಮೂಡಿತು. ಆಳವಾಗಿ ಅಧ್ಯಯನ ನಡೆಸಿದಾಗ ಜೋಗತಿಯರ ಸಮುದಾಯದಲ್ಲಿ ನಡೆದ ಮರ್ಯಾದೆ ಹತ್ಯೆಗಳ ಬಗ್ಗೆಯೂ ತಿಳಿಯಿತು” ಎಂದು ತಿಳಿಸಿದರು.

ಈ ಗೋಷ್ಠಿಯಲ್ಲಿ ಮಾತನಾಡಿದ ಕತೆಗಾರ, ನಾಟಕಗಾರ ಮಹಾಂತೇಶ ನವಲ್ಕಲ್, “ಇತಿಹಾಸವನ್ನು, ಪುರಾಣವನ್ನು ಮರುರಚನೆ ಮಾಡುವುದು ತಪ್ಪಲ್ಲ. ಆದರೆ ಅದನ್ನು ಮರುರಚನೆ ಮಾಡುವಾಗ ಎಚ್ಚರದಿಂದಿರಬೇಕು. ಇತಿಹಾಸರವನ್ನು ಪುನರ್ ಶೋಧನೆ ಮಾಡಿ ಮರುರಚನೆ ಮಾಡಬೇಕು, ಪರಾಮರ್ಶಿಸಬೇಕು. ಆದರೆ ಸದ್ಯ ಅದು ನಡೆಯುತ್ತಿಲ್ಲ” ಎಂದರು. ರಂಗಕರ್ಮಿ ಶ್ವೇತಾರಾಣಿ ಗೋಷ್ಠಿಯನ್ನು ಸಂಯೋಜಿಸಿದರು.

WhatsApp Image 2025 11 17 at 3.21.17 PM
ಈ ದಿನ ಡೆಸ್ಕ್
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ದಾವಣಗೆರೆ | ಸಮರ್ಥ್‌ ನಾಮಪತ್ರ ಸಲ್ಲಿಕೆ; ದೂರ ಉಳಿದ ರಾಜ್ಯ ಮುಸ್ಲಿಂ ಮುಖಂಡರು

ಡಿ.ಕೆ ಶಿವಕುಮಾರ್ ಮತ್ತು ಸಿದ್ದರಾಮಯ್ಯ ಅವರು ದಾವಣಗೆರೆ ಮುಸ್ಲಿಂ ಕಾಂಗ್ರೆಸ್‌ ಟಿಕೆಟ್...

ರಾಜ್ಯದಲ್ಲಿ ʼಎಸ್‌ಐಆರ್ʼ ಪ್ರಕ್ರಿಯೆಯನ್ನು ತರಾತುರಿಯಲ್ಲಿ ನಡೆಸಬೇಡಿ- ಪ್ರಗತಿಪರ ಸಂಘಟನೆ, ಜಾತ್ಯತೀತ ಪಕ್ಷಗಳ ಆಗ್ರಹ

ಕೇಂದ್ರ ಚುನಾವಣಾ ಆಯೋಗ ನಡೆಸುತ್ತಿರುವ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಎಂಬುದು...