ಬಿಎಂಟಿಸಿ | ಡ್ಯೂಟಿ, ರಜೆ ನೀಡಲು ಒಂದೂವರೆ ಕೋಟಿ ರೂ. ಲಂಚ ಪಡೆದಿದ್ದ 7 ಅಧಿಕಾರಿಗಳ ಅಮಾನತು

Date:

ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ) ಭ್ರಷ್ಟಾಚಾರದ ಗೂಡಾಗಿದೆ ಎಂಬ ಆರೋಪಗಳಿವೆ. ಈ ಸಂಸ್ಥೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ನಿರ್ವಾಹಕರು, ಚಾಲಕರಿಗೆ ಒಂದು ದಿನ ರಜೆ ತೆಗೆದುಕೊಳ್ಳಬೇಕಾದರೂ, ಒಂದು ದಿನ ಡ್ಯೂಟಿ ಪಡೆಯಬೇಕಾದರೂ ಅವರ ಮೇಲಾಧಿಕಾರಿಗಳಿಗೆ ಹಣ ನೀಡಬೇಕು. ಹಣ ನೀಡದೆ ಇದ್ದರೇ, ಸಿಬ್ಬಂದಿಗೆ ಮಾನಸಿಕ ಕಿರುಕುಳ ನೀಡಲಾಗುತ್ತದೆ ಎಂದು ಸಿಬ್ಬಂದಿಗಳೇ ಹೇಳುತ್ತಾರೆ. ಕಳೆದ ಹಲವು ವರ್ಷಗಳಿಂದ ಇದರ ವಿರುದ್ಧವಾಗಿ ಬಿಎಂಟಿಸಿ ಸಿಬ್ಬಂದಿ ಪ್ರತಿಭಟಿಸುತ್ತಲೇ ಇದ್ದಾರೆ. ಆದರೂ, ಮೇಲಾಧಿಕಾರಿಗಳ ಧೋರಣೆಗೆ ಕಡಿವಾಣ ಬಿದ್ದಿಲ್ಲ.

ಇದೀಗ, ಬಿಎಂಟಿಸಿ ಅಧಿಕಾರಿಗಳ ಅಕೌಂಟ್‌ನಲ್ಲಿ ಮೊದಲ ಬಾರಿಗೆ ದೊಡ್ಡ ಮೊತ್ತದ ಹಣ ಪತ್ತೆಯಾಗಿದೆ. ಗೂಗಲ್ ಪೇ, ಫೋನ್ ಪೇ ಮೂಲಕ ಅಧಿಕಾರಿಗಳು ₹1.5 ಕೋಟಿಗೂ ಅಧಿಕ ಲಂಚ ಪಡೆದಿದ ವಿಚಾರ ಬೆಳಕಿಗೆ ಬಂದಿದ್ದು, ಬಿಎಂಟಿಸಿಯ ಏಳು ಅಧಿಕಾರಿಗಳನ್ನು ಅಮಾನತು ಮಾಡಲಾಗಿದೆ.

ಡ್ಯೂಟಿ, ವೀಕ್ಲಿ ಆಫ್ ರಜೆ ಹಾಗೂ ಕಂಡಿಷನ್ ಇರುವ ಬಸ್ ಮತ್ತು ಹೆಚ್ಚು ಕಲೆಕ್ಷನ್ ಬರುವ ರೂಟ್‌ ಬೇಕು ಅಂದರೆ ಡಿಪೋ ಮ್ಯಾನೇಜರ್ ಮತ್ತು ಹಿರಿಯ ಅಧಿಕಾರಿಗಳಿಗೆ ನಿರ್ವಾಹಕ ಮತ್ತು ಚಾಲಕ ಹಣ ನೀಡಬೇಕು. ಹಣ ನೀಡಿದರೆ, ಎಲ್ಲ ವ್ಯವಸ್ಥೆಯನ್ನು ಮಾಡಿಕೊಡುತ್ತಾರೆ. ಇಲ್ಲವಾದರೇ, ಅವರಿಗೆ ಮಾನಸಿಕವಾಗಿ ಕಿರುಕುಳ ನೀಡಿ, ಹಿಂಸೆ ನೀಡುತ್ತಾರೆ. ಇದಕ್ಕೆ ಬೇಸತ್ತು ಹಲವು ಬಿಎಂಟಿಸಿ ಸಿಬ್ಬಂದಿ ಆತ್ಮಹತ್ಯೆ ಮಾಡಿಕೊಂಡ ಘಟನೆಗಳು ನಡೆದಿವೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಹಿರಿಯ ಅಧಿಕಾರಿಗಳು ಸಿಬ್ಬಂದಿಗೆ ಕಿರುಕುಳ ನೀಡಿ ಲಂಚ ಪಡೆಯುವತ್ತಿರುವ ಬಗ್ಗೆ ಸಾರಿಗೆ ಸಚಿವ ರಾಮಲಿಂಗ ರೆಡ್ಡಿ ಅವರು ಬಿಎಂಟಿಸಿ ಎಂಡಿ ಜಿ. ಸತ್ಯವತಿ ಅವರಿಗೆ ತನಿಖೆ ಮಾಡಲು ಆದೇಶ ಮಾಡಿದ್ದರು.

ಈ ಹಿನ್ನೆಲೆಯಲ್ಲಿ ತನಿಖೆ ನಡೆಸಿದ ಬಿಎಂಟಿಸಿಯ ಭದ್ರತಾ ಮತ್ತು ಜಾಗೃತದಳದ ಅಧಿಕಾರಿಗಳು, ಏಳು ಅಧಿಕಾರಿಗಳ ಎಲ್ಲ ಬ್ಯಾಂಕ್ ಡಿಟೇಲ್ಸ್ ತನಿಖೆ ನಡೆಸಿದ್ದಾರೆ. ಆಗ, ಪ್ರತಿಯೊಬ್ಬರ ಅಕೌಂಟ್‌ಗೆ ನಿರ್ವಾಹಕ ಮತ್ತು ಚಾಲಕರ ಗೂಗಲ್‌ ಪೇ ಮತ್ತು ಪೋನ್ ಪೇ ಮೂಲಕ ಲಕ್ಷಾಂತರ ರೂಪಾಯಿ ಹಣ ವರ್ಗಾವಣೆ ಮಾಡಿಸಿಕೊಂಡಿರುವುದು ಪತ್ತೆಯಾಗಿದೆ. ಹೀಗಾಗಿ, ಏಳು ಅಧಿಕಾರಿಗಳನ್ನು ಅಮಾನತು ಮಾಡಲಾಗಿದೆ.

ಈ ಸುದ್ದಿ ಓದಿದ್ದೀರಾ? ‘ಹಸಿರು ರಕ್ಷಕ’, ‘ಉದ್ಯಾನ ಮಿತ್ರ’ ಹಾಗೂ ‘ಕೆರೆ ಮಿತ್ರ’ ಎಂಬ ಮೂರು ಮೊಬೈಲ್ ಆಪ್ ಹಾಗೂ ವೆಬ್ ಲಿಂಕ್ ಸಿದ್ದಪಡಿಸಿದ ಬಿಬಿಎಂಪಿ

(ಡಿಪೋ ನಂ-27) ಸಿಬ್ಬಂದಿ ಮೇಲ್ವಿಚಾರಕಿ ಮಂಜುಳಾ.ಆರ್, (ಡಿಪೋ ನಂ-27) ಕಿರಿಯ ಸಹಾಯಕ ಪ್ರೀತಮ್, (ಡಿಪೋ ನಂ-27) ಕಿರಿಯ ಸಹಾಯಕ ಮನೋಜ್ ಕುಮಾರ್ ಎಲ್.ಎಸ್, (ಡಿಪೋ ನಂ-27) ಸಹಾಯಕ ಲೆಕ್ಕಿಗ ಧನಂಜಯ. ವಿ, (ಡಿಪೋ ನಂ-27) ಕಿರಿಯ ಸಹಾಯಕಿ ಸುಮ.ಎ, (ಡಿಪೋ ನಂ-27) ಕಿರಿಯ ಸಹಾಯಕಿ ಶಾಂತವ್ವ, (ಡಿಪೋ ನಂ-27) ಸಹಾಯಕ ಕುಶಲಕರ್ಮಿ ದೇವರಾಜ್.ಜಿ ಅಮಾನತುಗೊಂಡವರು.

ಅಮಾನತುಗೊಂಡ ಒಬ್ಬೊಬ್ಬ ಅಧಿಕಾರಿಗಳ ಬ್ಯಾಂಕ್‌ ಅಕೌಂಟ್‌ ಪರಿಶೀಲನೆ ನಡೆಸಿದಾಗ ಒಬ್ಬೊಬ್ಬರ ಅಕೌಂಟ್‌ನಲ್ಲಿ ಸುಮಾರು ₹20 ರಿಂದ ₹25 ಲಕ್ಷ ಪತ್ತೆಯಾಗಿದೆ. ಏಳು ಅಧಿಕಾರಿಗಳಿಂದ ₹1.5 ಕೋಟಿ ಅಕ್ರಮ ಹಣ ಪತ್ತೆಯಾಗಿದೆ.

ಬಿಎಂಟಿಸಿ ನಿರ್ವಾಹಕ ಮತ್ತು ಚಾಲಕರಿಗೆ ರಜೆ, ಡ್ಯೂಟಿ, ಉತ್ತಮ ಬಸ್‌ ನೀಡಲು ಅವರಿಂದ ಪ್ರತಿ ವಾರ ₹500 ಪ್ರತಿ ತಿಂಗಳಿಗೆ ₹2000 ಹಣ ವಸೂಲಿ ಮಾಡುತ್ತಿದ್ದರು ಎಂದು ತಿಳಿದುಬಂದಿದೆ.

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಉತ್ತರ ಕನ್ನಡ | ಪಡಿತರ ಚೀಟಿದಾರರಿಗೆ ಗುಡ್ ನ್ಯೂಸ್: ಮಾರ್ಚ್‌ನಲ್ಲಿ ಹೆಚ್ಚುವರಿ ಸೀಮೆಎಣ್ಣೆ ವಿತರಣೆ

ಉತ್ತರ ಕನ್ನಡ ಜಿಲ್ಲೆಯ ಗ್ರಾಮಾಂತರ ಪ್ರದೇಶದ ಪಡಿತರ ಚೀಟಿದಾರರಿಗೆ ಕೇಂದ್ರ ಸರ್ಕಾರದಿಂದ...

ಸಿಂಧನೂರು | ರೀಲ್ಸ್ ಮಾಡಲು ಹೋದ ಯುವಕ ನೀರು ಪಾಲು

ರೀಲ್ಸ್ ಮಾಡುವ ಉದ್ದೇಶದಿಂದ ಸ್ನೇಹಿತರಿಗೆ ವಿಡಿಯೋ ಮಾಡಲು ಹೇಳಿ ಈಜಲು ನದಿಗೆ...

ಗದಗ | ಆದ್ಯ ವಚನಕಾರ ದೇವರ ದಾಸಿಮಯ್ಯ: ರಾಘವೇಂದ್ರ ಕೊಪ್ಪಳ

"ಆದ್ಯ ವಚನಕಾರ ನೇಕಾರ ಸಂತ ದೇವರ ದಾಸಿಮಯ್ಯನವರು 10 ನೇ ಶತಮಾನದಲ್ಲಿ...