ಬೆಂಗಳೂರು | ಈ ರಸ್ತೆಯಲ್ಲಿ 4 ದಿನ ಸಂಚಾರ ನಿರ್ಬಂಧ; ಪರ್ಯಾಯ ಮಾರ್ಗ ಪ್ರಕಟ

Date:

ಬೆಂಗಳೂರಿನ ವೈಟ್​ ಫೀಲ್ಡ್​​ನ ಪಣತ್ತೂರು ದಿಣ್ಣೆಯಿಂದ ಪಣತ್ತೂರು ರೈಲ್ವೆ ಬ್ರಿಡ್ಜ್‌ವರೆಗಿನ ರಸ್ತೆಯಲ್ಲಿ ಜುಲೈ 9ರಿಂದ ಜುಲೈ 12ರವರೆಗೆ ನಾಲ್ಕು ದಿನಗಳ ಕಾಲ ಎಲ್ಲ ರೀತಿಯ ವಾಹನಗಳ ಸಂಚಾರ ನಿರ್ಬಂಧವಾಗಿದೆ.

ಈ ಸಂಬಂಧ ಬೆಂಗಳೂರು ಸಂಚಾರ ಪೊಲೀಸ್​ ಇಲಾಖೆ ಮಾಧ್ಯಮ ಪ್ರಕಟಣೆ ಹೊರಡಿಸಿದ್ದು ಈ ಮಾರ್ಗದಲ್ಲಿ ಸಾಗುವವರಿಗೆ ಪರ್ಯಾಯ ಮಾರ್ಗವನ್ನು ಕೂಡ ಪ್ರಕಟಿಸಿದೆ.

ಪಣತ್ತೂರು ರೈಲ್ವೇಬ್ರಿಡ್ಜ್​​ ಬಳಿ ಅಂಡರ್​ಪಾಸ್​ ನಿರ್ಮಾಣ ಕಾಮಗಾರಿ ನಡೆಯುತ್ತಿರುವುದರಿಂದ ಪಣತ್ತೂರು ದಿಣ್ಣೆಯಿಂದ ಪಣತ್ತೂರು ರೈಲ್ವೆ ಬ್ರಿಡ್ಜ್​​ವರೆಗಿನ ರಸ್ತೆಯನ್ನು ಬಂದ್ ಮಾಡಲಾಗಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಇದನ್ನು ಓದಿದ್ದೀರಾ?  ತುಮಕೂರಿಗೆ ಹೆಚ್ಚುವರಿ ರೈಲು ಸಂಚಾರಕ್ಕೆ ಆಗ್ರಹಿಸಿ ಕೇಂದ್ರ ಸಚಿವ ವಿ ಸೋಮಣ್ಣಗೆ ಮನವಿ

ಪಣತ್ತೂರು ದಿಣ್ಣೆ ಕಡೆಯಿಂದ ಪಣತ್ತೂರು ಮತ್ತು ಕುಂದಲಹಳ್ಳಿ ಕಡೆಗೆ ಸಾಗುವ ವಾಹನಗಳಿಗೆ ಗುಂಜೂರು ಪಾಳ್ಯ ರಸ್ತೆಯಿಂದ ಸಿಲ್ವರ್ ಓಕ್ ರಸ್ತೆ ಮೂಲಕ ಸಾಗಿ ಬಳಗೆರೆ ಮುಖ್ಯರಸ್ತೆಯಿಂದ ಪಣತ್ತೂರು ಹಾಗೂ ಕುಂದಲಹಳ್ಳಿ ಕಡೆಗೆ ಸಂಚಾರ ಮಾಡಲು ತಿಳಿಸಲಾಗಿದೆ.

ಇನ್ನು ಪಣತ್ತೂರು ಕಡೆಯಿಂದ ಪಣತ್ತೂರು ದಿಣ್ಣೆ ಕಡೆಗೆ ಹೋಗುವುದಾದರೆ ಬಳಗೆರೆ ಮುಖ್ಯರಸ್ತೆಯಿಂದ ಸಿಲ್ವರ್ ಓಕ್ ಮೂಲಕ ಗುಂಜೂರು ಪಾಳ್ಯ ರಸ್ತೆಯಲ್ಲಿ ಪಣತ್ತೂರು ದಿಣ್ಣೆ ಕಡೆಗೆ ಸಂಚಾರ ಮಾಡಬಹುದಾಗಿದೆ.

?s=150&d=mp&r=g
ಈ ದಿನ ಡೆಸ್ಕ್
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಒಳಮೀಸಲಾತಿ ಜಾರಿಗೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಬಿಡುತ್ತಿಲ್ಲ: ಮಂದಕೃಷ್ಣ ಮಾದಿಗ ಆರೋಪ

ಒಳಮೀಸಲಾತಿ ಜಾರಿಗೆ ತರುತ್ತೇವೆಂದು ಹೇಳಿದ್ದ ಕಾಂಗ್ರೆಸ್‌, ಈಗ ಒಳಮೀಸಲಾತಿ ಅನುಷ್ಠಾನದಲ್ಲಿ ಮೀನಾಮೇಷ...

ಒಳಮೀಸಲಾತಿ ಹೋರಾಟ | ಸಿಎಂ ಸಿದ್ದರಾಮಯ್ಯ ನುಡಿದಂತೆ ನಡೆದಿಲ್ಲ: ಮಾರಸಂದ್ರ ಮುನಿಯಪ್ಪ

ಸಿದ್ದರಾಮಯ್ಯ ಅವರು ಸಮಾಜವಾದದ ಬಗ್ಗೆ ಮಾತನಾಡುತ್ತಾರೆ. ನುಡಿದಂತೆ ನಡೆದಂತೆ ಸರ್ಕಾರವೆಂದು ಹೇಳುತ್ತಾರೆ....

ಫ್ರೀಡಂ ಪಾರ್ಕ್‌ನಿಂದ ವಿಧಾನಸೌಧಕ್ಕೆ ಬರಲಿದೆ ಒಳಮೀಸಲಾತಿ ಹೋರಾಟ: ಸರ್ಕಾರಕ್ಕೆ ಮಾದರ ಚೆನ್ನಯ್ಯ ಸ್ವಾಮೀಜಿ ಎಚ್ಚರಿಕೆ

ಕಳೆದ 35 ವರ್ಷಗಳಿಂದ ಹಲವಾರು ಹೋರಾಟಗಾರರು ತಮ್ಮ ಜೀವ-ಜೀವನವನ್ನು ಅರ್ಪಿಸಿ, ಮನೆ-ಮಠವನ್ನು...

ಬೆಂಗಳೂರು | ನೇಮಕಾತಿಯಲ್ಲಿ ಒಳಮೀಸಲಾತಿಗೆ ಆಗ್ರಹಿಸಿ ಮೊಳಗುತ್ತಿದೆ ಘೋಷ

ಸರ್ಕಾರವು ಒಳಮೀಸಲಾತಿಯನ್ನು ತಪ್ಪಿಸುವ ಹುನ್ನಾರದಿಂದ ತರಾತುರಿಯಲ್ಲಿ 56,432 ಹುದ್ದೆಗಳ ನೇಮಕಾತಿಗೆ ಆದೇಶ...