ಎಮರ್ಜೆನ್ಸಿ | ಪ್ರಮಾಣಪತ್ರ ನೀಡಲು ಸಿಬಿಎಫ್‌ಸಿಗೆ ನಿರ್ದೇಶಿಸಲಾಗದು ಎಂದ ಹೈಕೋರ್ಟ್

Date:

ಎಮರ್ಜೆನ್ಸಿ ಚಿತ್ರಕ್ಕೆ ಪ್ರಮಾಣಪತ್ರ ನೀಡುವಂತೆ ಚಲನಚಿತ್ರ ಪ್ರಮಾಣೀಕರಣ ಮಂಡಳಿಗೆ (ಸಿಬಿಎಫ್‌ಸಿ) ನಿರ್ದೇಶಿಸಲಾಗದು ಎಂದು ಬಾಂಬೆ ಹೈಕೋರ್ಟ್ ಹೇಳಿದೆ. ಇದರಿಂದಾಗಿ ಕಂಗನಾ ರಣಾವತ್ ನಟನೆಯ ಎಮರ್ಜೆನ್ಸಿ ಸಿನಿಮಾವು ಸೆಪ್ಟೆಂಬರ್ 6ರಂದು ತೆರೆಕಾಣದು.

ಮಧ್ಯಪ್ರದೇಶ ಹೈಕೋರ್ಟ್ ಈಗಾಗಲೇ ಸೆನ್ಸಾರ್ ಮಂಡಳಿಗೆ ಎಮರ್ಜೆನ್ಸಿ ಚಿತ್ರ ಮತ್ತು ಅದರ ಟ್ರೇಲರ್‌ಗೆ ಆಕ್ಷೇಪ ವ್ಯಕ್ತಪಡಿಸಿರುವ ಜಬಲ್‌ಪುರ್ ಸಿಖ್ ಸಂಗತ್‌ನ ಅಹವಾಲು ಬಗ್ಗೆ ನಿರ್ಧರಿಸಲು ಆದೇಶಿಸಿರುವುದರಿಂದ ಸಿನಿಮಾಗೆ ಪ್ರಮಾಣಪತ್ರವನ್ನು ನೀಡುವಂತೆ ಸಿಬಿಎಫ್‌ಸಿಗೆ ನಿರ್ದೇಶಿಸಲು ಸಾಧ್ಯವಿಲ್ಲ ಎಂದು ಬಾಂಬೆ ಹೈಕೋರ್ಟ್ ಹೇಳಿದೆ.

ಇದನ್ನು ಓದಿದ್ದೀರಾ? ಇಂದಿರಾಗಾಂಧಿಗೆ ಎಮರ್ಜೆನ್ಸಿ ಜೊತೆ ಕೈ ಜೋಡಿಸೋದಾಗಿ ಸಂಘ ಪರಿವಾರದ ಪತ್ರ?

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಇನ್ನು ಜಬಲ್‌ಪುರ್ ಸಿಖ್ ಸಂಗತ್‌ ಅಥವಾ ಬೇರೆಯವರ ಅಹವಾಲು ಬಗ್ಗೆ ಸೆಪ್ಟೆಂಬರ್ 18ರೊಳಗೆ ನಿರ್ಧರಿಸಲು ಸಿಬಿಎಫ್‌ಸಿಗೆ ಹೈಕೋರ್ಟ್ ಆದೇಶಿಸಿದೆ.

ಕಂಗನಾ ರಣಾವತ್ ಅಭಿನಯದ ‘ಎಮರ್ಜೆನ್ಸಿ’ ಚಿತ್ರದ ಬಿಡುಗಡೆಗಾಗಿ ಝೀ ಎಂಟರ್‌ಟೈನ್‌ಮೆಂಟ್‌ ಸಲ್ಲಿಸಿದ ತುರ್ತು ಅರ್ಜಿಯನ್ನು ಆಲಿಸಿದ ಬಾಂಬೆ ಹೈಕೋರ್ಟ್ ಚಲನಚಿತ್ರದ ಆಕ್ಷೇಪಣೆಗಳನ್ನು ತನಿಖೆ ಮಾಡಲು ಮಧ್ಯಪ್ರದೇಶ ಹೈಕೋರ್ಟ್‌ ಸಿಬಿಎಫ್‌ಸಿಗೆ ನೀಡಿದ ಆದೇಶವನ್ನು ಗೌರವಿಸಬೇಕು ಎಂದು ಒತ್ತಿ ಹೇಳಿದೆ.

“ಚಿತ್ರವನ್ನು ನೋಡದೆಯೇ ಕೆಲವರಿಗೆ ಅಸಮಾಧಾನವಾಗಿದೆ ಎಂದು ಈ ಗುಂಪುಗಳು (ಸಿಖ್ ಗುಂಪುಗಳು) ಹೇಗೆ ನಿರ್ಧರಿಸುತ್ತದೆ? ಬಹುಶಃ ಇದು ಟ್ರೇಲರ್ ಅನ್ನು ಆಧರಿಸಿರಬಹುದು. ಮಧ್ಯಪ್ರದೇಶ ಹೈಕೋರ್ಟ್ ಇದರ ಗೊಂದಲ ಪರಿಹಾರಕ್ಕೆ ಸಿಬಿಎಫ್‌ಸಿಗೆ ಸೂಚನೆ ನೀಡಿದೆ. ನಾವು (ಬಾಂಬೆ ಹೈಕೋರ್ಟ್) ಅವರಿಗೆ ಪ್ರಮಾಣಪತ್ರವನ್ನು ನೀಡಲು ನಿರ್ದೇಶಿಸಿದರೆ ನಾವು ಮತ್ತೊಂದು ಹೈಕೋರ್ಟ್‌ನ ತೀರ್ಪನ್ನು ಉಲ್ಲಂಘಿಸಿದಂತಾಗುತ್ತದೆ. ನಾವು ಮಧ್ಯಪ್ರದೇಶ ಹೈಕೋರ್ಟ್‌ನ ಆದೇಶವನ್ನು ಅನುಸರಿಸಬೇಕು” ಎಂದು ಕೋರ್ಟ್ ಹೇಳಿದೆ.

WhatsApp Image 2025 11 17 at 3.21.17 PM
ಈ ದಿನ ಡೆಸ್ಕ್
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಟಿ20 ವಿಶ್ವಕಪ್ ಸೆಮಿಫೈನಲ್ | ಸಂಜು ಸ್ಯಾಮ್ಸನ್‌ ಸ್ಫೋಟಕ ಆಟ; ಭಾರತ 253/7 ಬೃಹತ್ ಮೊತ್ತ

ಐಸಿಸಿ ಪುರುಷರ ಟಿ20 ವಿಶ್ವಕಪ್ ಟೂರ್ನಿಯ ಇಂಗ್ಲೆಂಡ್ ಎದುರಿನ ಎರಡನೇ ಸೆಮಿಫೈನಲ್...

ಟಿ20 ವಿಶ್ವಕಪ್ ಸೆಮಿಫೈನಲ್ | ಟಾಸ್ ಗೆದ್ದ ಇಂಗ್ಲೆಂಡ್; ಟೀಂ ಇಂಡಿಯಾ ಬ್ಯಾಟಿಂಗ್

ಮುಂಬೈನ ಐತಿಹಾಸಿಕ ವಾಂಖೆಡೆ ಕ್ರೀಡಾಂಗಣದಲ್ಲಿ ಇಂದು ನಡೆಯುತ್ತಿರುವ 2026ರ ಐಸಿಸಿ ಪುರುಷರ...

ಟಿ20 ವಿಶ್ವಕಪ್ ಸೆಮಿಫೈನಲ್: ನ್ಯೂಜಿಲೆಂಡ್‌ಗೆ 170 ರನ್‌ಗಳ ಸವಾಲು ನೀಡಿದ ದಕ್ಷಿಣ ಆಫ್ರಿಕಾ

ಐಸಿಸಿ ಪುರುಷರ ಟಿ20 ವಿಶ್ವಕಪ್ 2026ರ ಮೊದಲ ಸೆಮಿಫೈನಲ್ ಪಂದ್ಯದಲ್ಲಿ ನ್ಯೂಜಿಲೆಂಡ್...