13 ವರ್ಷಗಳಿಂದ ಕೋಮಾದಲ್ಲಿದ್ದ ಯುವಕನಿಗೆ ‘ನಿಷ್ಕ್ರಿಯ ದಯಾಮರಣ’: ಐತಿಹಾಸಿಕ ತೀರ್ಪು ನೀಡಿದ ಸುಪ್ರೀಂ ಕೋರ್ಟ್

Date:

13 ವರ್ಷಗಳ ಹಿಂದೆ ಕಟ್ಟಡದಿಂದ ಬಿದ್ದು ಗಂಭೀರವಾಗಿ ಗಾಯಗೊಂಡು ಕೋಮಾ ಸ್ಥಿತಿಯಲ್ಲಿದ್ದ 32 ವರ್ಷದ ಹರೀಶ್ ರಾಣಾ ಅವರಿಗೆ ‘ನಿಷ್ಕ್ರಿಯ ದಯಾಮರಣ’ ನೀಡಲು ಸುಪ್ರೀಂ ಕೋರ್ಟ್ ಸಮ್ಮತಿ ಸೂಚಿಸಿದೆ. ಇದು ನ್ಯಾಯಾಲಯದ ಆದೇಶದ ಮೇರೆಗೆ ದೇಶದಲ್ಲಿ ನಡೆಯುತ್ತಿರುವ ಮೊದಲ ದಯಾಮರಣ ಪ್ರಕರಣವಾಗಿ ಇತಿಹಾಸದ ಪುಟ ಸೇರಿದೆ.

​2018ರಲ್ಲಿ ಸುಪ್ರೀಂ ಕೋರ್ಟ್ ನಿಷ್ಕ್ರಿಯ ದಯಾಮರಣದ ಕಾನೂನುಬದ್ಧತೆಯನ್ನು ಮಾನ್ಯ ಮಾಡಿ ನೀಡಿದ್ದ ತೀರ್ಪಿನ ಹಲವು ಅಂಶಗಳನ್ನು ಸ್ಪಷ್ಟಪಡಿಸಿರುವ ನ್ಯಾಯಮೂರ್ತಿಗಳಾದ ಜೆ.ಬಿ. ಪರ್ದಿವಾಲಾ ಹಾಗೂ ಕೆ.ವಿ. ವಿಶ್ವನಾಥನ್ ಅವರನ್ನೊಳಗೊಂಡ ಪೀಠವು ಈ ಭಾವನಾತ್ಮಕ ತೀರ್ಪನ್ನು ಪ್ರಕಟಿಸಿದೆ.

ಇದು 2018ರ ಸುಪ್ರೀಂ ಕೋರ್ಟ್‌ನ ನಿಷ್ಕ್ರಿಯ ದಯಾಮರಣದ ಮಾರ್ಗಸೂಚಿಗಳನ್ನು ಮತ್ತಷ್ಟು ವಿಸ್ತರಿಸುವ ಮಹತ್ವದ ತೀರ್ಪಾಗಿದೆ. ‘ಫೀಡಿಂಗ್ ಟ್ಯೂಬ್’ (ಆಹಾರದ ಕೊಳವೆ) ಮೂಲಕ ಕೃತಕವಾಗಿ ಜೀವಸಾಗಿಸುತ್ತಿರುವಾಗ ರೋಗಿಗೆ ನಿಷ್ಕ್ರಿಯ ದಯಾಮರಣವನ್ನು ಹೇಗೆ ಅನ್ವಯಿಸಬೇಕು ಎಂಬುದನ್ನು ಈ ತೀರ್ಪು ಸ್ಪಷ್ಟಪಡಿಸಿದೆ. ಈ ಅಂಶವನ್ನು ಹಿಂದಿನ ತೀರ್ಪಿನಲ್ಲಿ ನಿಖರವಾಗಿ ವ್ಯಾಖ್ಯಾನಿಸಿರಲಿಲ್ಲ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

​ಹರೀಶ್ ರಾಣಾ ಅವರ ಸ್ಥಿತಿ ಸುಧಾರಿಸಲು ಸಾಧ್ಯವಿಲ್ಲ ಎಂದು ವೈದ್ಯಕೀಯ ವರದಿಗಳು ದೃಢಪಡಿಸಿದ್ದರೂ, ವೈದ್ಯಕೀಯ ಕೊಳವೆಗಳ ಮೂಲಕ ಆಹಾರ ಪೂರೈಸಿ ಅವರ ಜೀವ ಉಳಿಸಿಕೊಳ್ಳಲಾಗುತ್ತಿತ್ತು. 2018ರ ಮಾರ್ಗಸೂಚಿಯಲ್ಲಿ ವೆಂಟಿಲೇಟರ್‌ನಂತಹ ಜೀವರಕ್ಷಕ ಸಾಧನಗಳನ್ನು ಹಿಂಪಡೆಯುವ ಬಗ್ಗೆ ಮಾತ್ರ ಉಲ್ಲೇಖವಿದ್ದ ಕಾರಣ, ಆಸ್ಪತ್ರೆಯ ಹಂತದಲ್ಲಿ ರಾಣಾಗೆ ದಯಾಮರಣ ಕಲ್ಪಿಸಲು ಕಾನೂನಿನ ತೊಡಕಾಗಿತ್ತು. ಈ ಹಿನ್ನೆಲೆಯಲ್ಲಿ ಹರೀಶ್ ರಾಣಾ ಪೋಷಕರು ನ್ಯಾಯಾಲಯದ ಮೆಟ್ಟಿಲೇರಿದ್ದರು. ಇದೀಗ ಸುಪ್ರೀಂ ಕೋರ್ಟ್, ಆಸ್ಪತ್ರೆಯಲ್ಲಿ ಹರೀಶ್ ರಾಣಾಗೆ ನೀಡಲಾಗುತ್ತಿರುವ ಚಿಕಿತ್ಸೆಯನ್ನು ಹಿಂಪಡೆಯಲು ಅನುಮತಿ ನೀಡಿದ್ದು, 32 ವರ್ಷದ ಯುವಕನಿಗೆ ಗೌರವಯುತವಾಗಿ ಮರಣ ಹೊಂದಲು ಅವಕಾಶ ಕಲ್ಪಿಸಿದೆ.

ಜೀವನ ಮತ್ತು ಸಾವಿನ ಬಗ್ಗೆ ನ್ಯಾಯಾಲಯದ ಮಾರ್ಮಿಕ ನುಡಿ
​ತೀರ್ಪಿನ ಆರಂಭದಲ್ಲಿ ಪೀಠವು ಜೀವನ ಮತ್ತು ಸಾವಿನ ಸಂಕೀರ್ಣತೆಯ ಬಗ್ಗೆ ಬೆಳಕು ಚೆಲ್ಲಿದೆ. ಅಮೆರಿಕದ ಪ್ರವಚನಕಾರ ಹೆನ್ರಿ ವಾರ್ಡ್ ಬೀಚರ್ ಅವರ, “ದೇವರು ಯಾವುದೇ ಮನುಷ್ಯನಿಗೆ ಜೀವನವನ್ನು ಸ್ವೀಕರಿಸುತ್ತೀಯಾ ಎಂದು ಕೇಳುವುದಿಲ್ಲ. ಅದೊಂದು ಆಯ್ಕೆಯಲ್ಲ, ನೀವು ಅದನ್ನು ಪಡೆದುಕೊಳ್ಳಲೇಬೇಕು. ಆದರೆ ಅದನ್ನು ಹೇಗೆ ಜೀವಿಸುತ್ತೀರಿ ಎಂಬುದು ಮಾತ್ರ ಪ್ರಶ್ನೆ” ಎಂಬ ಮಾತುಗಳನ್ನು ನ್ಯಾಯಾಲಯ ಉಲ್ಲೇಖಿಸಿದೆ. ಅಂತೆಯೇ, ವಿಲಿಯಂ ಷೇಕ್ಸ್‌ಪಿಯರ್‌ನ ಪ್ರಸಿದ್ಧ ಸಾಲುಗಳಾದ “ಟು ಬಿ ಆರ್ ನಾಟ್ ಟು ಬಿ” (ಇರಬೇಕೋ ಅಥವಾ ಬೇಡವೋ) ಎಂಬುದನ್ನೂ ಪ್ರಸ್ತಾಪಿಸಿದ ನ್ಯಾಯಮೂರ್ತಿಗಳು, ಅಂತ್ಯಕಾಲದ ಪ್ರಕರಣಗಳನ್ನು ನಿರ್ಧರಿಸುವಾಗ ನ್ಯಾಯಾಲಯಗಳು ಇಂತಹ ಕಠಿಣ ಪ್ರಶ್ನೆಗಳನ್ನು ಎದುರಿಸಬೇಕಾಗುತ್ತದೆ ಎಂದರು.

ಇದನ್ನು ಓದಿದ್ದೀರಾ? ಮೊಜ್ತಬಾ ಖಮೇನಿ | ತೆರೆಯ ಹಿಂದಿದ್ದ ‘ಗೇಟ್‌ಕೀಪರ್’ ಈಗ ಇರಾನ್‌ನ ಪರಮೋಚ್ಚ ನಾಯಕ

​ಆಹಾರದ ಕೊಳವೆಯೂ ಒಂದು ‘ವೈದ್ಯಕೀಯ ಚಿಕಿತ್ಸೆ’
​ಫೀಡಿಂಗ್ ಟ್ಯೂಬ್‌ಗಳ ಮೂಲಕ ಪೂರೈಸುವ ಆಹಾರ ಸೇರಿದಂತೆ, ಪ್ರಾಯೋಗಿಕವಾಗಿ ನೀಡಲಾಗುವ ಪೋಷಣೆ ಮತ್ತು ದ್ರವಗಳು ‘ವೈದ್ಯಕೀಯ ಚಿಕಿತ್ಸೆ’ಯ ವ್ಯಾಪ್ತಿಗೆ ಬರುತ್ತದೆ ಎಂದು ಸುಪ್ರೀಂ ಕೋರ್ಟ್ ಸ್ಪಷ್ಟಪಡಿಸಿದೆ. ಪ್ರಾಥಮಿಕ ಮತ್ತು ದ್ವಿತೀಯ ವೈದ್ಯಕೀಯ ಮಂಡಳಿಗಳು, ರೋಗಿಗೆ ಈ ರೀತಿ ಆಹಾರ ಪೂರೈಸುವುದು ಆತನ ಹಿತದೃಷ್ಟಿಯಿಂದ ಸೂಕ್ತವಲ್ಲ ಎಂದು ತೀರ್ಮಾನಿಸಿದರೆ, ಅದನ್ನು ಹಿಂಪಡೆಯಬಹುದು ಎಂದು ಪೀಠ ತಿಳಿಸಿದೆ.\

​ಏನಿದು ಹರೀಶ್ ರಾಣಾ ಪ್ರಕರಣ?

​ಪಂಜಾಬ್ ವಿಶ್ವವಿದ್ಯಾಲಯದಲ್ಲಿ ಬಿ.ಟೆಕ್ ವಿದ್ಯಾರ್ಥಿಯಾಗಿದ್ದ ಹರೀಶ್ ರಾಣಾ 2013ರಲ್ಲಿ ಚಂಡೀಗಢದಲ್ಲಿ ಪಿಜಿ ವಸತಿಗೃಹದ ನಾಲ್ಕನೇ ಮಹಡಿಯಿಂದ ಆಯತಪ್ಪಿ ಬಿದ್ದಾಗ ರಾಣಾಗೆ ಕೇವಲ 20 ವರ್ಷ ವಯಸ್ಸಾಗಿತ್ತು. ಈ ಅಪಘಾತದಲ್ಲಿ ಅವರ ಮೆದುಳಿಗೆ ತೀವ್ರ ಹಾನಿಯಾಗಿತ್ತು. ​ಅಂದಿನಿಂದ ಅವರು ಶೇ. 100ರಷ್ಟು ಪಾರ್ಶ್ವವಾಯುವಿಗೆ (Quadriplegia) ತುತ್ತಾಗಿ, ಯಾವುದೇ ಪ್ರತಿಕ್ರಿಯೆ ನೀಡಲಾಗದ ಜಡಾವಸ್ಥೆಗೆ (Vegetative state) ಜಾರಿದ್ದರು. ​ನ್ಯಾಯಾಲಯಕ್ಕೆ ಸಲ್ಲಿಸಲಾದ ವೈದ್ಯಕೀಯ ವರದಿಗಳ ಪ್ರಕಾರ, ರಾಣಾ ಅವರು ನಿದ್ರೆ ಮತ್ತು ಎಚ್ಚರದ ಸ್ಥಿತಿಯನ್ನು ಅನುಭವಿಸುತ್ತಾರಾದರೂ, ಯಾವುದೇ ಅರ್ಥಪೂರ್ಣ ಚಲನೆ ಅಥವಾ ಪ್ರತಿಕ್ರಿಯೆಯನ್ನು ತೋರುತ್ತಿಲ್ಲ.

​ಅಪಘಾತದ ನಂತರ, ಅವರಿಗೆ ಶಸ್ತ್ರಚಿಕಿತ್ಸೆಯ ಮೂಲಕ ಅಳವಡಿಸಲಾದ ಪಿಇಜಿ (PEG) ಫೀಡಿಂಗ್ ಟ್ಯೂಬ್ ಮೂಲಕವೇ ಪೋಷಕಾಂಶಗಳನ್ನು ನೀಡಲಾಗುತ್ತಿತ್ತು. ​ಎಷ್ಟೇ ವರ್ಷಗಳು ಕಳೆದರೂ ಅವರ ಸ್ಥಿತಿಯಲ್ಲಿ ಯಾವುದೇ ಸುಧಾರಣೆ ಕಾಣದಿದ್ದಾಗ, ತಮ್ಮ ಮಗನನ್ನು ಕೃತಕವಾಗಿ ಬದುಕಿಸಲಾಗಿದೆ ಮತ್ತು ಚಿಕಿತ್ಸೆಯನ್ನು ಮುಂದುವರಿಸುವುದರಿಂದ ಯಾವುದೇ ವೈದ್ಯಕೀಯ ಪ್ರಯೋಜನವಿಲ್ಲ ಎಂದು ಪೋಷಕರು ನ್ಯಾಯಾಲಯದ ಮೊರೆ ಹೋಗಿದ್ದರು.

​ಇಂತಹ ಪ್ರಕರಣಗಳಲ್ಲಿ ಸಾವು ರೋಗಿಯ ಹಿತದೃಷ್ಟಿಯಿಂದ ಒಳ್ಳೆಯದೇ ಎಂಬುದು ಪ್ರಶ್ನೆಯಲ್ಲ, ಬದಲಿಗೆ ವೈದ್ಯಕೀಯ ಚಿಕಿತ್ಸೆಯನ್ನು ಮುಂದುವರಿಸುವುದು ರೋಗಿಗೆ ಒಳಿತೇ ಎಂಬುದೇ ಮುಖ್ಯ ಎಂದು ಕೋರ್ಟ್ ಪ್ರತಿಪಾದಿಸಿದೆ. ಚೇತರಿಕೆಯ ಯಾವುದೇ ಭರವಸೆ ಇಲ್ಲದೆ, ಕೇವಲ ಜೈವಿಕ ಜೀವನವನ್ನು ವಿಸ್ತರಿಸುವ ಸ್ಥಿತಿಯಲ್ಲಿ ಚಿಕಿತ್ಸೆ ಮುಂದುವರಿಸುವ ಬಾಧ್ಯತೆ ವೈದ್ಯರಿಗಿಲ್ಲ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.

ರಾಣಾ ಕುಟುಂಬದಲ್ಲಿ ತಂದೆ ಆಶೋಕ್, ತಾಯಿ ನಿರ್ಮಲಾ, ತಮ್ಮ ಮತ್ತು ಅಕ್ಕರಿದ್ದು, ಮೂಲತಃ ದೆಹಲಿಯವರಾದರೂ ವೈದ್ಯಕೀಯ ಸೌಲಭ್ಯಕ್ಕಾಗಿ ಗಾಜಿಯಾಬಾದ್‌ಗೆ ಸ್ಥಳಾಂತರಗೊಂಡಿದ್ದರು.

blank profile picture 973460 640
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ ರಾಷ್ಟ್ರೀಯವಾದ?

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ...

ಅಸ್ಸಾಂ ಚುನಾವಣೆ: ಕಾಂಗ್ರೆಸ್ ಸೇರಿದ ಮಾಜಿ ಸಚಿವೆ ನಂದಿತಾ ಗೋರ್ಲೋಸಾ ಯಾರು?

ಅಸ್ಸಾಂ ವಿಧಾನಸಭಾ ಚುನಾವಣೆಗೆ (ಏಪ್ರಿಲ್ 9 ರಂದು ಒಂದೇ ಹಂತದಲ್ಲಿ ಮತದಾನ)...

ಡಾಲರ್ V/s ಯುವಾನ್: ಕೊಲ್ಲಿ ಯುದ್ಧ ಕರೆನ್ಸಿ ಯುದ್ಧವಾಗಿ ಮಾರ್ಪಾಡಾಗುತ್ತಿದೆಯೇ?

ಅಕಸ್ಮಾತ್ ಈ ಯುದ್ಧ ಮುಂದುವರೆದರೆ, ಕೆಲವು ದೇಶಗಳು ಡಾಲರ್ ಬದಲಿಗೆ ಯುವಾನ್...

ರಾಜ್ಯಸಭೆಗೆ ಸದಾನಂದಗೌಡರ ಪರ ಬಿಎಸ್‌ವೈ ; ದೇವೇಗೌಡರ ಪರ ಹೆಚ್‌ಡಿಕೆ ಲಾಬಿ

ಕೇಂದ್ರ ಉಕ್ಕು ಮತ್ತು ಭಾರಿ ಕೈಗಾರಿಕೆ ಸಚಿವ ಹೆಚ್‌.ಡಿ ಕುಮಾರಸ್ವಾಮಿ ನವದೆಹಲಿಯಲ್ಲಿ...