ಬೆಂಗಳೂರು

ಬೆಂಗಳೂರು | ಸರ್ಕಾರ ಕೂಡಲೇ ನೂತನ ಕನಿಷ್ಠ ವೇತನ ಜಾರಿಗೊಳಿಸಬೇಕು: ಸುಧಾಕರ್

ಕಾರ್ಮಿಕರ ಜೀವನ ನಿರ್ವಹಣೆ ವೆಚ್ಚ ಹೆಚ್ಚಾಗಿದ್ದು ಹಳೆಯ ವೇತನ ಪದ್ಧತಿ ಮುಂದುವರಿಸುವುದು ಸೂಕ್ತವಲ್ಲ. ಆದುದರಿಂದ ರಾಜ್ಯ ಸರಕಾರ ಕೂಡಲೇ ನೂತನವಾಗಿ ಮಂಡನೆಯಾಗಿರುವ ಕನಿಷ್ಠ ವೇತನವನ್ನು ಜಾರಿಗೊಳಿಸಬೇಕು ಎಂದು ಸರಕಾರಿ ಹೊರಗುತ್ತಿಗೆ ನೌಕರರ ಸಂಘದ...

ಬೆಂಗಳೂರು | ಪರಿಸರ ಜಾಗೃತಿ: ಮಂದಿರ, ‌ಮಸೀದಿ, ಚರ್ಚ್, ಪೊಲೀಸ್ ಠಾಣೆಗೆ ತೆರಳಿ ಸಸಿ ನೆಟ್ಟ ಸಿಐಒ ಚಿಣ್ಣರು

"ಮಣ್ಣಲ್ಲಿ ಕೈಗಳು-ಮನಸ್ಸಲ್ಲಿ ಭಾರತ" ಧ್ಯೇಯ ವಾಕ್ಯದೊಂದಿಗೆ ದೇಶಾದ್ಯಂತ 10 ಲಕ್ಷ ಸಸಿಗಳನ್ನು ನೆಡುವ ಗುರಿ ಹೊಂದಿರುವ ಅಭಿಯಾನದ ಅಂಗವಾಗಿ ಚಿಲ್ಡ್ರನ್ ಇಸ್ಲಾಮಿಕ್ ಆರ್ಗನೈಸೇಶನ್ (ಸಿಐಒ) ಜಯನಗರ ಘಟಕದ ವತಿಯಿಂದ ಮಕ್ಕಳು ತಿಲಕನಗರ ವ್ಯಾಪ್ತಿಯಲ್ಲಿ...

ಮೈಸೂರು ಬೆಂಗಳೂರು ಎಕ್ಸ್‌ಪ್ರೆಸ್ ವೇಯಲ್ಲಿ ಕಾರು ಅಪಘಾತ: ಮಂಡ್ಯದ ಮೂವರ ಸಾವು

ಮೈಸೂರಿನಿಂದ ಬೆಂಗಳೂರಿಗೆ ವೇಗವಾಗಿ ಬರುತ್ತಿದ್ದ ಕಾರೊಂದು ರಾಮನಗರದ ಜಯಪುರ ಗೇಟ್ ಬಳಿ ಅಪಘಾತಕ್ಕೀಡಾಗಿದ್ದು ಕಾರಿನಲ್ಲಿದ್ದ ಮೂವರು ಮೃತಪಟ್ಟಿದ್ದು, ಒಬ್ಬರು ಗಾಯಗೊಂಡಿದ್ದಾರೆ. ಮೈಸೂರಿನಿಂದ ಬೆಂಗಳೂರಿಗೆ ಬರುತ್ತಿದ್ದ ಮಾರುತಿ ಸ್ವಿಫ್ಟ್ ಡಿಸೈರ್ ಕಾರು, ಜಯಪುರದ ಬಳಿ...

ಬೆಂಗಳೂರು | ಬಿಜೆಪಿಗರ ಅನೈತಿಕ ಪೊಲೀಸ್‌ಗಿರಿ; ನಿರಾಶ್ರಿತರನ್ನು ಅಕ್ರಮ ವಲಸಿಗರೆಂದು ಆರೋಪಿಸಿ ಕಿರುಕುಳ

ಬೆಂಗಳೂರಿನ ಹೊರವಲಯದಲ್ಲಿರುವ ಮಹದೇವಪುರದ ವಿವಿಧ ಸ್ಥಳಗಳಲ್ಲಿ ಗುಡುಸಲುಗಳನ್ನು ಹಾಕಿಕೊಂಡು ಬದುಕುತ್ತಿರುವ ನಿರಾಶ್ರಿತರ ಮೇಲೆ ಬಿಜೆಪಿಗರು ಅನೈತಿಕ ಪೊಲೀಸ್‌ಗಿರಿ ನಡೆಸುತ್ತಿದ್ದಾರೆ. ರಾಜ್ಯ ಮತ್ತು ದೇಶದ ಇತರ ಭಾಗಗಳಿಂದ ಬಂದು ನೆಲೆಸಿರುವ ನಿರಾಶ್ರಿತರನ್ನುಅಕ್ರಮ ಬಾಂಗ್ಲಾದೇಶಿ ವಲಸಿಗರು...

ಜುಲೈ 12 ರಂದು Monopsony Capitalism ಕುರಿತಾದ 2 ಪುಸ್ತಕಗಳ ಬಿಡುಗಡೆ

Monopsony Capitalism ಕುರಿತಂತೆ ಬರಹಗಾರ ಅಶೋಕ್‌ ಕುಮಾರ್‌ ಅವರು ಬರೆದು ಲೇಖಕರಾದ ನಾ ದಿವಾಕರ್‌ ಅನುವಾದಿಸಿರುವ 'ಏಕಸ್ವಮ್ಯ ಖರೀದಿ ಬಂಡವಾಳಶಾಹಿ' ಹಾಗೂ ಅಶೋಕ್‌ ಕುಮಾರ್‌ ಅವರು ಬರೆದು ಡಾ. ಮಂಜುನಾಥ್ ಬಿ. ಆರ್‌...

ಬೆಂಗಳೂರು | ಬ್ಯಾರಿಸ್ ಸೆಂಟ್ರಲ್ ಕಮಿಟಿಯ ನೂತನ ಅಧ್ಯಕ್ಷರಾಗಿ ಶಬೀರ್ ಬ್ರಿಗೇಡ್ ಮರು ಆಯ್ಕೆ

ಬೆಂಗಳೂರಿನಲ್ಲಿ ಉದ್ಯೋಗ, ವ್ಯಾಪಾರ ಸೇರಿದಂತೆ ತಮ್ಮ ಬದುಕು ಕಟ್ಟಿಕೊಂಡಿರುವ ಕರಾವಳಿ‌ ಭಾಗದ ಬ್ಯಾರಿ ಸಮುದಾಯದ ಯುವಕರೇ ಕಟ್ಟಿಕೊಂಡಿರುವ ಬ್ಯಾರಿಸ್ ಸೆಂಟ್ರಲ್ ಕಮಿಟಿ ಬೆಂಗಳೂರು ಇದರ ವಾರ್ಷಿಕ ವಿಶೇಷ ಮಹಾಸಭೆಯು ಕ್ವೀನ್ಸ್ ರೋಡ್‌ನ ದಾರುಸ್ಸಲಾಂ...

ಬೆಂಗಳೂರು | ಮಹಿಳೆ ಮೇಲೆ ಅತ್ಯಾಚಾರ ಎಸಗಿ, ಫ್ರಿಡ್ಜ್‌-ವಾಷಿಂಗ್‌ ಮಷಿನ್ ಹೊತ್ತೊಯ್ದ ಕಾಮುಕರು

ಮಹಿಳೆಯ ಮೇಲೆ ಆಕೆಯ ಸ್ನೇಹಿತ ಸೇರಿದಂತೆ ಮೂವರು ಕಾಮುಕರು ಅತ್ಯಾಚಾರ ಎಸಗಿದ್ದು, ಆಕೆಯ ಬಳಿ ಹಣವನ್ನೂ ದೋಚಿ, ಫೋನ್, ಫ್ರಿಡ್ಜ್‌ ಹಾಗೂ ವಾಷಿಂಗ್‌ ಮಷಿನ್‌ಗಳನ್ನು ಹೊತ್ತೋಯ್ದಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಬೆಂಗಳೂರಿನ ಸಾಯಿ ಲೇಔಟ್‌ನ...

ಬೆಂಗಳೂರು | ಜುಲೈ 11ರಂದು ಪಾದಚಾರಿ ಮಾರ್ಗ ಒತ್ತುವರಿ ತೆರವು ಕಾರ್ಯಾಚರಣೆ: ಸತೀಶ್ ಬಿ ಸಿ

ಬೆಂಗಳೂರು ನಗರದ ಪಾದಚಾರಿಗಳಿಗೆ ಅಡೆತಡೆಗಳಿಲ್ಲದ ಪಾದಚಾರಿ ಮಾರ್ಗವನ್ನು ಕಲ್ಪಿಸುವ ಸಲುವಾಗಿ ಬಿಬಿಎಂಪಿ ವತಿಯಿಂದ ಪಾದಚಾರಿ ಮಾರ್ಗ ಒತ್ತುವರಿ ತೆರವು ಕಾರ್ಯಾಚರಣೆಯನ್ನು ಹಮ್ಮಿಕೊಳ್ಳಲಾಗಿದೆ ಎಂದು ವಲಯ ಆಯುಕ್ತ ಸತೀಶ್‌ ಬಿ ಸಿ ತಿಳಿಸಿದ್ದಾರೆ. ಈ ಕುರಿತು...

ಇನ್ನು ರ್‍ಯಾಪಿಡೋ, ರೆಡ್ ಬಸ್‌ ಸೇರಿದಂತೆ 9 ಡಿಜಿಟಲ್ ಕಾಮರ್ಸ್ ಆ್ಯಪ್‌ಗಳಲ್ಲೂ ಮೆಟ್ರೋ ಟಿಕೆಟ್ ಲಭ್ಯ

ಡಿಜಿಟಲ್ ತಂತ್ರಜ್ಞಾನವನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳುವ ದೃಷ್ಟಿಯಿಂದ, ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ (ಬಿಎಂಆರ್‌ಸಿಎಲ್) ತನ್ನ ಸೇವೆಗಳಲ್ಲಿ ಮಹತ್ವಪೂರ್ಣ ನಿರ್ಧಾರ ಕೈಗೊಂಡಿದ್ದು, ಓಪನ್ ನೆಟ್ವರ್ಕ್ ಫಾರ್ ಡಿಜಿಟಲ್ ಕಾಮರ್ಸ್ (ಓಎನ್‌ಡಿಸಿ) ಮೂಲಕ ಕ್ಯೂಆರ್...

ಬೆಂಗಳೂರು | ರೇಬಿಸ್‌ ನಿರ್ಮೂಲನೆಗಾಗಿ ಜನಜಾಗೃತಿ ಅಭಿಯಾನಕ್ಕೆ ಚಾಲನೆ

ಬಿಬಿಎಂಪಿ ವ್ಯಾಪ್ತಿಯಲ್ಲಿ ರೇಬೀಸ್ ನಿರ್ಮೂಲನೆಗಾಗಿ ಬೆಂಗಳೂರು ನಗರದಾದ್ಯಂತ ಮೀಸಲು ವಾಹನದ ಮೂಲಕ ಸಾಮೂಹಿಕ ರೇಬಿಸ್ ಜಾಗೃತಿ ಮೂಡಿಸಲಾಗುವುದೆಂದು ಆರೋಗ್ಯ ವಿಭಾಗದ ವಿಶೇಷ ಆಯುಕ್ತ ಸುರೋಳ್ಕರ್ ವಿಕಾಸ್ ಕಿಶೋರ್ ತಿಳಿಸಿದರು. ಬಿಬಿಎಂಪಿ ವ್ಯಾಪ್ತಿಯಲ್ಲಿ ವಿಶ್ವ ಝೂನೋಸಿಸ್...

ಆಟೋಗಳಿಗೆ ಸೂಕ್ತ ಪರ್ಮಿಟ್ ನೀಡದೆ ಸರ್ಕಾರವೇ ದಂಡವನ್ನು ವಿಧಿಸುತ್ತಿರುವುದು ಸರಿಯಲ್ಲ: ಎಎಪಿ

ಕೋವಿಡ್‌ ಅವಧಿಯ 2019 / 2020 ರ ಎರಡು ವರ್ಷಗಳಲ್ಲಿ ಪ್ರಪಂಚದಾದ್ಯಂತ ಲಕ್ಷಾಂತರ ಸಾವು ನೋವುಗಳಿಂದ ತತ್ತರಿಸಿದ ಸಂದರ್ಭದಲ್ಲಿ ಸಂಚಾರಕ್ಕೆ ಬಿಡುಗಡೆಯಾದ ಸಾವಿರಾರು ಬಿಎಸ್ 6 ( BS 6 ) ಆಟೋಗಳಿಗೆ...

ಬೆಂಗಳೂರು | ಪತ್ನಿಗೆ ಕಿರುಕುಳ; ಡಿವೈಎಸ್‌ಪಿ ವಿರುದ್ಧ ಎಫ್‌ಐಆರ್‌

ಪತ್ನಿಗೆ ಕಿರುಕುಳ ನೀಡಿ ಹಲ್ಲೆ ನಡೆಸಿದ ಆರೋಪದ ಮೇಲೆ ಬೆಂಗಳೂರಿನ ಆಂತರಿಕ ಭದ್ರತಾ ವಿಭಾಗದ ಡಿವೈಎಸ್‍ಪಿಯೊಬ್ಬರ ಮೇಲೆ ಎಫ್‍ಐಆರ್ ದಾಖಲಾಗಿದೆ. ಡಿವೈಎಸ್‍ಪಿ ಶಂಕರಪ್ಪ ವಿರುದ್ಧ ಅವರ ಪತ್ನಿ ದೂರು ನೀಡಿದ್ದು, ನಗರದ ಈಶಾನ್ಯ ಮಹಿಳಾ...

ಈ ಹೊತ್ತಿನ ಪ್ರಮುಖ ಸುದ್ದಿ