ಬಾಗಲಕೋಟೆ 

ಬಾಗಲಕೋಟೆ | ಡೆಂಘೀ ನಿಯಂತ್ರಣಕ್ಕೆ ಸಹಕಾರ, ಜಾಗೃತಿ ಅಗತ್ಯ: ಡಿಸಿ ಜಾನಕಿ ಕೆ ಎಂ

ಡೆಂಘೀ ಮಹಾಮಾರಿಯನ್ನು ಸಂಪೂರ್ಣವಾಗಿ ತಡೆಗಟ್ಟಲು ಸಮುದಾಯದಲ್ಲಿ ಸಹಕಾರ ಅತ್ಯಗತ್ಯವಾಗಿದ್ದು, ಡೆಂಘೀ ನಿಯಂತ್ರಣಕ್ಕೆ ಸ್ವಚ್ಛತೆ ಕೈಗೊಳ್ಳಲು ಜಾಗೃತಿ ಮೂಡಿಸುವುದು ಅಗತ್ಯವಾಗಿದೆ ಎಂದು ಬಾಗಲಕೋಟೆ ಜಿಲ್ಲಾಧಿಕಾರಿ ಜಾನಕಿ ಕೆ ಎಂ ಹೇಳಿದರು. ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಡೆಂಘೀ...

ಬಾಗಲಕೋಟೆ | ಮುಧೋಳ ಗ್ರಾಮೀಣ ಠಾಣೆ ಮಂಜೂರಿಗೆ ಮನವಿ

ಬಾಗಲಕೋಟೆ ಜಿಲ್ಲೆಯ ಮುಧೋಳ ತಾಲೂಕು ವೇಗವಾಗಿ ಬೆಳೆಯುತ್ತಿದೆ. ಈ ತಾಲೂಕಿಗೆ ಗ್ರಾಮೀಣ ಠಾಣೆಯ ಅವಶ್ಯಕತೆಯಿದ್ದು, ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ ಉತ್ತರ ವಲಯ ಐಜಿಪಿ ಚೇತನ ಸಿಂಗ್ ರಾಥೋಡ್ ಅವರಿಗೆ ಪಿಎಸ್ಆರ್ ಮಾನವ...

ಬಾಗಲಕೋಟೆ | 625ಕ್ಕೆ 624 ಅಂಕ ಪಡೆದ ಶಫಾ ನಿಂಬಾಳ್ಕರ; ರಾಜ್ಯಕ್ಕೆ ದ್ವಿತೀಯ, ಜಿಲ್ಲೆಗೆ ಪ್ರಥಮ

ಎಸ್​ಎಸ್​ಎಲ್​ಸಿ ಪರೀಕ್ಷೆಯಲ್ಲಿ ಬಾಗಲಕೋಟೆಯ ಆದರ್ಶ ವಿದ್ಯಾಲಯದ ವಿದ್ಯಾರ್ಥಿನಿ ಶಫಾ ಶಾರಿಕ ನಿಂಬಾಳ್ಕರ 625ಕ್ಕೆ 624 ಅಂಕ ಪಡೆದು ರಾಜ್ಯಕ್ಕೆ ದ್ವಿತೀಯ ಸ್ಥಾನ ಹಾಗೂ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದುಕೊಂಡಿದ್ದಾರೆ. ಎಲ್ಲಾ ವಿಷಯಗಳಲ್ಲಿ ನೂರಕ್ಕೆ...

ಬಾಗಲಕೋಟೆ | ಸಿಬ್ಬಂದಿಗಳಿಲ್ಲದ ಬಲಕುಂದಿ ಗ್ರಾಮ ಪಂಚಾಯಿತಿಗೆ ಬೀಗ

ಸಾರ್ವಜನಿಕ ಸೇವೆ ಸಮಯದಲ್ಲಿ ಗ್ರಾಮ ಪಂಚಾಯತ್ ಗೆ ಬೀಗ ಹಾಕಿ ಸಿಬ್ಬಂದಿಗಳು ನಾಪತ್ತೆಯಾಗಿದ್ದಾರೆ. ಸಮಸ್ಯೆಗಳನ್ನು ಕೇಳಲು ಹೋದ ಸಾರ್ವಜನಿಕರಿಗೆ ಬಲಕುಂದಿ ಗ್ರಾಮ ಪಂಚಾಯತಿಯಲ್ಲಿ ಯಾರು ಸಿಬ್ಬಂದಿಗಳು ಇಲ್ಲದ ಕಾರಣ ಗೊಂದಲ ಉಂಟಾಗಿದ್ದು, ಜನರ...

ಬಾಗಲಕೋಟೆ | ಸ್ವಾಮೀಜಿ ಪರ ಮಾತನಾಡಿದ್ದಕ್ಕೆ ಪಂಕ್ಚರ್‌ ಅಂಗಡಿ ಭಸ್ಮ; ಸೂಕ್ತ ಕ್ರಮಕ್ಕೆ ಸಾರ್ವಜನಿಕರ ಆಗ್ರಹ

ಬಾಗಲಕೋಟೆ ಜಿಲ್ಲೆಯ ಇಳಕಲ್ ನಗರದ ಹನುಮಸಾಗರ ರಸ್ತೆಯಲ್ಲಿರುವ ಸಾಮಾಜಿಕ ಕಾರ್ಯಕರ್ತ ಶಾಮೀದ್ ರೇಶ್ಮಿಯವರ ಪಂಕ್ಚರ್‌ ಅಂಗಡಿಗೆ ಅಜ್ಞಾತರು ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾರೆ. ಈ ಘಟನೆಗೆ ಮುಂಚೆ ರೇಶ್ಮಿಯವರು ಸಂಘ ಪರಿವಾರದ ಕಾರ್ಯಕರ್ತ...

ಮುಧೋಳ | ಸೇಬು ಬೆಳೆದ ರೈತ ಶ್ರೀಶೈಲ ತೇಲಿಯವರ ಸಾಧನೆಗೆ ಪ್ರಧಾನಮಂತ್ರಿ ಶ್ಲಾಘನೆ

ಬಾಗಲಕೋಟೆ ಜಿಲ್ಲೆಯ ಮುಧೋಳ ತಾಲೂಕಿನ ಕುಳಲಿ ಗ್ರಾಮದಲ್ಲಿ ಸೇಬು ಬೆಳೆದ ರೈತ ಶ್ರೀಶೈಲ ತೇಲಿಯವರ ಹೆಸರನ್ನು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ‘ಮನ್‌ ಕೀ ಬಾತ್‌’ನಲ್ಲಿ ಉಲ್ಲೇಖಿಸಿದ್ದಾರೆ. "ಗುಡ್ಡಗಾಡು ಪ್ರದೇಶದಲ್ಲಿ ಸೇಬು ಬೆಳೆಬಹುದು ಎನ್ನುವುದನ್ನು ಸುಳ್ಳಾಗಿಸಿ...

ರಾಜ್ಯದ ಕೆಲವೆಡೆ ಭಾರೀ ಮಳೆ; ಸಿಡಿಲು ಬಡಿದು ಮಹಿಳೆ, ಜಾನುವಾರು ಸಾವು

ಬಾಗಲಕೋಟೆ ತಾಲೂಕಿನ ಬೊಡನಾಯಕನದಿನ್ನಿಯಲ್ಲಿ ಶುಕ್ರವಾರ ಸಂಜೆ ಸುರಿದ ಮಳೆಗೆ ಸಿಡಿಲು ಬಡಿದು ಭಾರತಿ(41) ಎಂಬುವವರು ಮೃತಪಟ್ಟಿದ್ದಾರೆ. ಹೊಲದ ಕೆಲಸ ಮುಗಿಸಿ, ಮನೆಗೆ ಮರಳುತ್ತಿದ್ದ ವೇಳೆ ಸಿಡಿಲು ಬಡಿದಿದೆ. ಬಾಗಲಕೋಟೆ ನಗರ ಸೇರಿದಂತೆ ತಾಲೂಕಿನ...

ಬಾಗಲಕೋಟೆ | ಏ.29, 30ರಂದು ಕೂಡಲ ಸಂಗಮದಲ್ಲಿ ಅನುಭವ ಮಂಟಪ ಬಸವಾದಿ ಶರಣರ ವೈಭವ ಕಾರ್ಯಕ್ರಮ

ವಿಶ್ವಗುರು ಬಸವಣ್ಣನವರ ಜಯಂತಿ ಅಂಗವಾಗಿ ಕೂಡಲಸಂಗಮದಲ್ಲಿ ಎರಡು ದಿನಗಳ ಕಾಲ ಅನುಭವ ಮಂಟಪ ಬಸವಾದಿ ಶರಣರ ವೈಭವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಅಬಕಾರಿ ಹಾಗೂ ಬಾಗಲಕೋಟೆ ಜಿಲ್ಲಾ ಉಸ್ತುವಾರಿ ಸಚಿವ ಆರ್ ಬಿ...

ಬಾಗಲಕೋಟೆ | ಅನುಭವ ಮಂಟಪದ ಸ್ಮರಣೆಯಲ್ಲಿ ಶರಣರ ರಥ; ಶಾಸಕರಿಂದ ವಚನ ಮೆರವಣಿಗೆ

ಬಾಗಲಕೋಟೆ ಜಿಲ್ಲೆಯ ಇಳಕಲ್‌ ನಗರವು ಗುರುವಾರ (ಏ.24) ರಾತ್ರಿ ಶರಣ ಸಂಸ್ಕೃತಿಯ ವೈಭವಕ್ಕೆ ಸಾಕ್ಷಿಯಾಯಿತು. ಜಗತ್ತಿನ ಮೊದಲ ಸಂಸತ್ತು ಎಂಬ ಹೆಗ್ಗಳಿಕೆಗೆ ಪಾತ್ರವಾದ ಅನುಭವ ಮಂಟಪದ ಪರಿಕಲ್ಪನೆಯನ್ನು ಪ್ರತಿಬಿಂಬಿಸುವ ಬಸವಾದಿ ಶರಣರ ವೈಭವ...

ಬಾಗಲಕೋಟೆ | ಬಾಕಿ ಕಬ್ಬು ಬಿಲ್ ಪಾವತಿ ವಿಳಂಬ; ಕಾರ್ಖಾನೆ ಮಾಲಿಕರ ಮನೆಗೆ ಮುತ್ತಿಗೆ ಎಚ್ಚರಿಕೆ

ಬಾಕಿ ಉಳಿಸಿಕೊಂಡಿರುವ ಕಬ್ಬಿನ ಬಿಲ್ಲನ್ನು ಪಾವತಿ ಮಾಡದಿದ್ದರೆ ಕಾರ್ಖಾನೆಗಳ ಮಾಲಿಕರ ಮನೆಗೆ ಮುತ್ತಿಗೆ ಹಾಕಲಾಗುವುದು ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಕಬ್ಬು ಬೆಳೆಗಾರರ ಸಂಘದ ರೈತರು ಎಚ್ಚರಿಕೆ ನೀಡಿದರು. ಅಧಿಕಾರಿಗಳ ಗಮನ...

ಬಾಗಲಕೋಟೆ | ಜಾತಿಗಣತಿಯಲ್ಲಿ ನೇಕಾರ ಸಮುದಾಯಕ್ಕೆ ಅನ್ಯಾಯ; ಆರೋಪ

ರಾಜ್ಯ ಸರ್ಕಾರ ಜಾತಿಗಣತಿಯಲ್ಲಿ ನೇಕಾರ ಸಮುದಾಯಕ್ಕೆ ಅನ್ಯಾಯ ಮಾಡುತ್ತಿದೆ ಎಂದು ಬಾಗಲಕೋಟೆ ಜಿಲ್ಲೆಯ ಇಳಕಲ್ ನೇಕಾರ ಸಮುದಾಯಗಳ ಒಕ್ಕೂಟದ ಪದಾಧಿಕಾರಿಗಳು ಆರೋಪಿಸಿದ್ದಾರೆ. ಇಳಕಲ್ ನಗರದಲ್ಲಿ ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, "ತಮ್ಮ ಸಮುದಾಯವನ್ನು ಸರಿಯಾಗಿ...

ಬಾಗಲಕೋಟೆ | ಪಂಚಮಸಾಲಿ ಸಮಾಜದ ಹಿಡಿತಕ್ಕೆ ಎರಡು ಗುಂಪುಗಳ ನಡುವೆ ಸಂಘರ್ಷ

ರಾಜ್ಯದ ಪ್ರಬಲ ಸಮುದಾಯವಾದ ಪಂಚಮಸಾಲಿ ಸಮಾಜದಲ್ಲಿ ಆಂತರಿಕ ಕಲಹಗಳು ತಾರಕಕ್ಕೇರಿದ್ದು, ಕೂಡಲಸಂಗಮ ಪೀಠ ಹಾಗೂ ಸಮಾಜದ ಮೇಲೆ ಹಿಡಿತ ಸಾಧಿಸಲು ಎರಡು ಗುಂಪುಗಳ ನಡುವೆ ತಿಕ್ಕಾಟ ಏರ್ಪಟ್ಟಿದೆ. ಕೂಡಲಸಂಗಮ ಪೀಠದ ಭವಿಷ್ಯ ನಿರ್ಧರಿಸಲು ಬಾಗಲಕೋಟೆಯಲ್ಲಿ...

ಈ ಹೊತ್ತಿನ ಪ್ರಮುಖ ಸುದ್ದಿ