ಬೆಂಗಳೂರು ದಕ್ಷಿಣ

ಬೆಂಗಳೂರು | ಪತ್ನಿಯ ನಂಬರ್ ಕೇಳಿದ ಸ್ನೇಹಿತನಿಗೆ ಥಳಿಸಿದ ರೌಡಿಶೀಟರ್‌; 10 ಮಂದಿಯಿಂದ ಮನೆಗೆ ದಾಳಿ

ಪತ್ನಿಯ ನಂಬರ್ ಕೇಳಿದ ಸ್ನೇಹಿತನಿಗೆ ರೌಡಿಶೀಟರ್‌ನೊಬ್ಬ ಧಳಿಸಿದ್ದು, ಬಳಿಕ ಹಲ್ಲೆಗೊಳಗಾದ ವ್ಯಕ್ತಿ 10 ಮಂದಿ ಗುಂಪಿನೊಂದಿಗೆ ರೌಡಿಶೀಟರ್ ಮನೆಗೆ ತೆರಳಿ ದಾಳಿ ನಡೆಸಿದ ಘಟನೆ ಬೆಂಗಳೂರಿನ ಹೊಯ್ಸಳ ನಗರದಲ್ಲಿ ನಡೆದಿದೆ. ಬೆಂಗಳೂರಿನ ಚಂದ್ರಾಲೇಔಟ್‌ ಪೊಲೀಸ್‌...

ಕೆಎಸ್‌ಆರ್‌ಟಿಸಿ | ಟಿಕೆಟ್‌ ಪಡೆಯದೆ ಪ್ರಯಾಣ ಬೆಳೆಸಿದ್ದ 3208 ಪ್ರಯಾಣಿಕರಿಗೆ ದಂಡ

ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ(ಕೆಎಸ್‌ಆರ್‌ಟಿಸಿ)ದ ಬಸ್‌ಗಳಲ್ಲಿ ಟಿಕೆಟ್‌ ಪಡೆಯದೆ ಪ್ರಯಾಣ ಬೆಳೆಸಿದ್ದ 3208 ಪ್ರಯಾಣಿಕರಿಗೆ ದಂಡ ವಿಧಿಸಲಾಗಿದೆ ಎಂದು ನಿಗಮ ತಿಳಿಸಿದೆ. ಈ ಬಗ್ಗೆ ಪತ್ರಿಕಾ ಪ್ರಕಟಣೆ ಹೊರಡಿಸಿರುವ ನಿಗಮ, “2023ರ ಆಗಸ್ಟ್‌ನಲ್ಲಿ...

ಬೆಂಗಳೂರು | ಆರ್‌ಟಿಒ ಕಚೇರಿಗಳ ಮೇಲೆ ಲೋಕಾಯುಕ್ತ ಪೊಲೀಸರ ದಾಳಿ

ಬೆಂಗಳೂರಿನಲ್ಲಿರುವ ಹಲವು ಪ್ರಾದೇಶಿಕ ಸಾರಿಗೆ ಅಧಿಕಾರಿಗಳ (ಆರ್‌ಟಿಒ) ಕಚೇರಿಗಳ ಮೇಲೆ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿದ್ದು, ಪರಿಶೀಲನೆ ನಡೆಸುತ್ತಿದ್ದಾರೆ. ಆರ್‌ಟಿಒ ಕಚೇರಿಗಳಲ್ಲಿ ವ್ಯಾಪಕ ಭ್ರಷ್ಟಾಚಾರ ನಡೆಯುತ್ತಿದೆ ಎಂಬ ದೂರುಗಳು ಬಂದ ಹಿನ್ನೆಲೆಯಲ್ಲಿ ಬುಧವಾರ ಏಕಕಾಲದಲ್ಲಿ...

ಬೆಂಗಳೂರು | ಒತ್ತುವರಿ ತೆರವು ವಿಫಲವಾದಲ್ಲಿ ಸಂಬಂಧಪಟ್ಟ ಅಧಿಕಾರಿಗಳ ಮೇಲೆ ಶಿಸ್ತು ಕ್ರಮ: ತುಷಾರ್ ಗಿರಿನಾಥ್

"ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ವ್ಯಾಪ್ತಿಯಲ್ಲಿ ರಾಜಕಾಲುವೆ ಒತ್ತುವರಿ ತೆರವು ವಿಚಾರಕ್ಕೆ ಸಂಬಂಧಿಸಿದಂತೆ, ಕರ್ನಾಟಕ ಉಚ್ಚ ನ್ಯಾಯಾಲಯಕ್ಕೆ ನೀಡಲಾಗಿರುವ ಕಾರ್ಯಸೂಚಿಯಂತೆ, ಬೃಹತ್ ನೀರುಗಾಲುವೆ ವಿಭಾಗದ ಕಾರ್ಯಪಾಲಕ ಅಭಿಯಂತರರು 10 ದಿನಗಳಲ್ಲಿ ಹೊಸ...

ಬೆಂಗಳೂರು | ವಿಜ್ಞಾನಿಯ ಕಾರಿಗೆ ಕಲ್ಲೆಸೆತ; ಮೂವರ ಬಂಧನ

ವಿಜ್ಞಾನಿಯ ಕಾರಿಗೆ ಕಲ್ಲೆಸೆತ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿಗಳನ್ನು ಮಾದನಾಯಕನಹಳ್ಳಿ ಪೊಲೀಸರು ಬಂಧಿಸಿದ್ದಾರೆ. ಬೆಂಗಳೂರಿನ ಹೊರವಲಯದ ರಾವುತನಹಳ್ಳಿ ಮುಖ್ಯ ರಸ್ತೆಯಲ್ಲಿ ಈ ಘಟನೆ ನಡೆದಿತ್ತು. ಆಗಸ್ಟ್‌ 24ರಂದು ರಾತ್ರಿ 12:45ರ ಸುಮಾರಿಗೆ ಮನೆಗೆ ತೆರಳುತ್ತಿದ್ದ...

ಬೆಂಗಳೂರು | 2030ಕ್ಕೆ ಕೆಐಎನಲ್ಲಿ ಮೂರನೇ ಟರ್ಮಿನಲ್!

ರಾಜ್ಯ ರಾಜಧಾನಿ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಟರ್ಮಿನಲ್ 2ರಲ್ಲಿ ಅಂತಾರಾಷ್ಟ್ರೀಯ ವಿಮಾನ ಕಾರ್ಯಾಚರಣೆ ಆರಂಭವಾಗಿದೆ. ಇದೀಗ, ಕೆಐಎ ಆವರಣದೊಳಗೆ ಮೂರನೇ ಟರ್ಮಿನಲ್ 2030ರಲ್ಲಿ ಆರಂಭವಾಗಲಿದೆ ಎಂಬ ಸುದ್ದಿ ಕೇಳಿಬಂದಿದೆ. ಬೆಂಗಳೂರು ಇಂಟರ್‌ನ್ಯಾಷನಲ್...

ಸಚಿವ ಡಿ.ಸುಧಾಕರ್‌ ವಜಾಗೆ ಮುಖ್ಯಮಂತ್ರಿ ಚಂದ್ರು ಆಗ್ರಹ

ಸಚಿವ ಡಿ.ಸುಧಾಕರ್‌ ಅವರ ಗೂಂಡಾವರ್ತನೆ ಅಕ್ಷಮ್ಯ. ತಕ್ಷಣ ಅವರನ್ನು ಸಂಪುಟದಿಂದ ವಜಾ ಮಾಡಬೇಕು ಎಂದು ಆಮ್‌ ಆದ್ಮಿ ಪಕ್ಷದ ರಾಜ್ಯಾಧ್ಯಕ್ಷ ಡಾ.ಮುಖ್ಯಮಂತ್ರಿ ಚಂದ್ರು ಅವರು ಆಗ್ರಹಿಸಿದ್ದಾರೆ. ಯೋಜನೆ ಮತ್ತು ಸಾಂಖ್ಯಿಕ ಸಚಿವ ಡಿ. ಸುಧಾಕರ್‌...

ಬೆಂಗಳೂರು | ₹12 ಕೋಟಿ ಮೌಲ್ಯದ ಕೊಕೇನ್ ಕಳ್ಳಸಾಗಣೆಗೆ ಯತ್ನ; ಮಹಿಳೆ ಬಂಧನ

ಬೆಂಗಳೂರು ವಿಮಾನ ನಿಲ್ದಾಣದಲ್ಲಿ 1.02 ಕೆಜಿ ಹೈಗ್ರೇಡ್ ಕೊಕೇನ್ ಕಳ್ಳಸಾಗಣೆ ಮಾಡಲು ಯತ್ನಿಸಿದ ಕೀನ್ಯಾ ಮೂಲದ ಮಹಿಳೆಯನ್ನು ಕೇಂದ್ರ ಕೈಗಾರಿಕಾ ಭದ್ರತಾ ಪಡೆ (ಸಿಐಎಸ್‌ಎಫ್) ಬಂಧಿಸಿದೆ. ಆರೋಪಿ ಅಜೆಂಗ್ ಓ ಕ್ಯಾರೋಲಿನ್ ಅಗೋಲಾ ತನ್ನ...

ಬೆಂಗಳೂರು | ಬೇರೆ ಮಾರ್ಗದಲ್ಲಿ ಪ್ರಯಾಣ: ಅನುಮಾನಗೊಂಡು ಆಟೋದಿಂದ ಜಿಗಿದ ಯುವತಿ

ಆಟೋ ರೀಕ್ಷಾ ಚಾಲಕನೊಬ್ಬ ಯುವತಿ ಹೋಗಬೇಕಾಗಿರುವ ಸ್ಥಳಕ್ಕೆ ಗೊತ್ತು ಮಾಡಿದ್ದ ಮಾರ್ಗದಲ್ಲಿ ತೆರಳದೆ ಬೇರೆ ಮಾರ್ಗದಿಂದ ತೆರಳುವಾಗ ಅನುಮಾನಗೊಂಡ ಯುವತಿ ಆಟೋದಿಂದ ಜಿಗಿದು ಗಾಯಗೊಂಡಿರುವ ಘಟನೆ ಮಹದೇವಪುರ ಪೊಲೀಸ್ ಠಾಣಾ ವ್ಯಾಪ್ತಿಯ ಪೈ...

ಸೆ.12 ಸಂಜೆ 4 ಗಂಟೆ ನಂತರ ದ್ವಿತೀಯ ಪಿಯುಸಿ ಪೂರಕ ಪರೀಕ್ಷೆ-2 ಫಲಿತಾಂಶ ಪ್ರಕಟ

ದ್ವಿತೀಯ ಪಿಯುಸಿ ಪೂರಕ ಪರೀಕ್ಷೆ-2 ರ ಪರೀಕ್ಷಾ ಮೌಲ್ಯಮಾಪನ ಪೂರ್ಣಗೊಂಡಿದ್ದು, ಸೆ.12 ರ ಸಂಜೆ 4 ಗಂಟೆಯ ನಂತರ ಫಲಿತಾಂಶ ಪ್ರಕಟವಾಗಲಿದೆ. ಈ ಬಗ್ಗೆ ಪತ್ರಿಕಾ ಪ್ರಕಟಣೆ ಹೊರಡಿಸಿರುವ ಕರ್ನಾಟಕ ಶಾಲಾ ಪರೀಕ್ಷೆ ಮತ್ತು...

ಬೆಂಗಳೂರು | ತಮಿಳುನಾಡು ಸಾರಿಗೆ ಬಸ್‌ ಮೇಲೆ ಕಲ್ಲು ತೂರಾಟ; ಎಫ್‌ಐಆರ್ ದಾಖಲು

ತಮಿಳುನಾಡಿಗೆ ಸೇರಿದ ನಾಲ್ಕು ಸಾರಿಗೆ ಬಸ್‌ಗಳ ಮೇಲೆ ಕಲ್ಲು ತೂರಾಟ ಮಾಡಿದ ಘಟನೆ ಬೆಂಗಳೂರಿನ ಸ್ಯಾಟ್​ಲೈಟ್ ಸಮೀಪ‌ದ ಭಾರತ್ ಪೆಟ್ರೋಲ್ ಬಂಕ್ ಬಳಿ ನಡೆದಿದೆ. ಸೆ.11ರ ಮಧ್ಯರಾತ್ರಿ ತಮಿಳುನಾಡು ಸಾರಿಗೆ ಬಸ್‌ಗಳ ಮೇಲೆ ಕಲ್ಲು...

ಬೆಂಗಳೂರು ಬಂದ್ | ಪ್ರತಿಭಟನಾನಿರತರಿಂದ ಅಹಿತಕರ ಘಟನೆ; 13 ಪ್ರಕರಣ ದಾಖಲು

ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಖಾಸಗಿ ಸಾರಿಗೆ ಒಕ್ಕೂಟ ಸೆ.11 ರಂದು ಬಂದ್‌ಗೆ ಕರೆ ನೀಡಿತ್ತು. ನಗರದ ಫ್ರೀಡಂ ಪಾರ್ಕ್‌ನಲ್ಲಿ ಆಟೋ, ಕ್ಯಾಬ್‌ ಬಸ್‌ ಚಾಲಕರು ಮತ್ತು ಮಾಲೀಕರು ಪ್ರತಿಭಟನೆ ನಡೆಸುತ್ತಿದ್ದರು. ಇತ್ತಕಡೆ ನಗರದೆಲ್ಲೆಡೆ...

ಈ ಹೊತ್ತಿನ ಪ್ರಮುಖ ಸುದ್ದಿ