ಬೆಂಗಳೂರು ನಗರ

ಬೆಂಗಳೂರು | ಕೇರಳ ಪ್ರವಾಸೋದ್ಯಮ; ಅಖಿಲ ಭಾರತ ಅಭಿಯಾನಕ್ಕೆ ಚಾಲನೆ

"ಬೇಸಿಗೆ ರಜಾ ಋತುವು ವೇಗವಾಗಿ ಬರುತ್ತಿದೆ. ಪ್ರವಾಸೋದ್ಯಮವನ್ನು ಉತ್ತೇಜಿಸುವ ನಿಟ್ಟಿನಲ್ಲಿ ಶಾಲಾ ರಜಾದಿನಗಳ ಸಂದರ್ಭದಲ್ಲಿ ಕುಟುಂಬಗಳಿಗಾಗಿ ಹೊಸ ಯೋಜನೆಗಳನ್ನು ಆರಂಭಿಸಿದ್ದೇವೆ" ಎಂದು ಕೇರಳ ಸರ್ಕಾರದ ಪ್ರವಾಸೋದ್ಯಮ ಇಲಾಖೆಯ ನಿರ್ದೇಶಕಿ ಶ್ರೀಮತಿ ಸಿಖಾ ಸುರೇಂದ್ರನ್...

ಸುಪ್ರೀಂ ನಿರ್ದೇಶನ ಉಲ್ಲಂಘಿಸಿ ಮಾಹಿತಿ ಆಯೋಗಕ್ಕೆ ಆಯ್ಕೆ ಪ್ರಕ್ರಿಯೆ : ರಾಜ್ಯಪಾಲರಿಗೆ ನೈಜ ಹೋರಾಟಗಾರರ ವೇದಿಕೆ ದೂರು

ಕರ್ನಾಟಕ ರಾಜ್ಯ ಮಾಹಿತಿ ಆಯೋಗದ ಖಾಲಿ ಇರುವ ಮಾಹಿತಿ ಆಯುಕ್ತರ ಹುದ್ದೆಗೆ ಆಯ್ಕೆ ಮಾಡುವಲ್ಲಿ ರಾಜ್ಯ ಸರ್ಕಾರವು ಸುಪ್ರೀಂ ಕೋರ್ಟ್ ಆದೇಶ, ನಿರ್ದೇಶನವನ್ನು ಉಲ್ಲಂಘಿಸಿರುವುದಾಗಿ ಆರೋಪಿಸಿ ನೈಜ ಹೋರಾಟಗಾರರ ವೇದಿಕೆಯು ರಾಜ್ಯಪಾಲರಿಗೆ ದೂರು...

ನೇಮಕಾತಿ ಪ್ರಕ್ರಿಯೆಗಾಗಿ ಕೆಇಎನಲ್ಲಿ ಪ್ರತ್ಯೇಕ ಸರ್ವರ್: ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ್

"ಕರ್ನಾಟಕ ಪರೀಕ್ಷಾ ಪ್ರಾಧಿಕಾರದಲ್ಲಿ ಪ್ರವೇಶ ಮತ್ತು ನೇಮಕಾತಿ ಪ್ರಕ್ರಿಯೆಗಳು ನಿರಂತರವಾಗಿ ನಡೆಯುತ್ತಿರುವ ಕಾರಣ ಸರ್ವರ್‌ ಮೇಲೆ ಒತ್ತಡ ಹೆಚ್ಚಿದೆ. ಹೀಗಾಗಿ ಪ್ರತ್ಯೇಕವಾದಂತಹ ಸರ್ವರ್‌ ಹೊಂದುವ ಬಗ್ಗೆಯೂ ಚಿಂತನೆ ನಡೆದಿದೆ. ಹಾಗೆಯೇ ಮುಂದಿನ ದಿನಗಳಲ್ಲಿ...

ಬೆಂಗಳೂರು | ನಮ್ಮ ಮೂಲ ಸಂಸ್ಕೃತಿಯನ್ನು ಉಳಿಸಿ‌ ಮುಂದಿನ ಪೀಳಿಗೆಗೆ ದಾಟಿಸುವುದೇ ಸುಗ್ಗಿ-ಹುಗ್ಗಿಯ ಉದ್ದೇಶ: ಕೃಷ್ಣ ಬೈರೇಗೌಡ

ಭೂಮಿ-ಪ್ರಕೃತಿಯನ್ನು ಆರಾಧಿಸುವ ಮತ್ತು ನಮ್ಮ ಮೂಲ ಸಂಸ್ಕೃತಿಯನ್ನು ಉಳಿಸಿ ಮುಂದಿನ ಪೀಳಿಗೆಗೆ ದಾಟಿಸುವ ಸಲುವಾಗಿಯೇ ಸುಗ್ಗಿ-ಹುಗ್ಗಿ 2025 ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದು ಸಚಿವ ಕೃಷ್ಣ ಬೈರೇಗೌಡ ತಿಳಿಸಿದರು. ಬೆಂಗಳೂರು ನಗರದ ಜಕ್ಕೂರು ಕ್ರೀಡಾಂಗಣದಲ್ಲಿ ಎರಡು...

ಬೆಂಗಳೂರು | ಅಂಧ ಮಕ್ಕಳೊಂದಿಗೆ ಸ್ವಾಮಿ ವಿವೇಕಾನಂದ ಜಯಂತಿ ಆಚರಣೆ

ಸ್ವಾಮಿ ವಿವೇಕಾನಂದರ 162ನೇ ಜನ್ಮದಿನಾಚರಣೆ ಹಾಗೂ ರಾಷ್ಟ್ರೀಯ ಯುವ ದಿನಾಚರಣೆ ಅಂಗವಾಗಿ ಮತ್ತು ಸಂಸದೆ ಪ್ರಿಯಾಂಕ ಗಾಂಧಿಯವರ ಜನ್ಮದಿನವನ್ನು ಕಾಂಗ್ರೆಸ್ ಕಾರ್ಯಕರ್ತರು ಅಂಧರ ಶಾಲೆಯಲ್ಲಿ ಅಂಧ ಮಕ್ಕಳೊಂದಿಗೆ ಆಚರಿಸಿಕೊಂಡರು. ಸ್ವಾಮಿ ವಿವೇಕಾನಂದರ ಜನ್ಮದಿನವನ್ನು ಅಂದಿನ...

ಬೆಂಗಳೂರು | ನಗರಗಳಲ್ಲಿ ಸಮಾನ ಪಾಲುದಾರಿಕೆ ಕಣ್ಮರೆ: ಬಂಜಗೆರೆ ಜಯಪ್ರಕಾಶ್

"ನಗರ ಕೇಂದ್ರಿತವಾದ ಉದ್ಯಮೀಕರಣ ನಗರಗಳಲ್ಲಿ ಸಮಾನ ಪಾಲುದಾರಿಕೆಯನ್ನು ಕಣ್ಮರೆ ಮಾಡಿದೆ. ನಗರೀಕರಣಕ್ಕೆ ವಿಪುಲವಾದ ಅವಕಾಶ ನೀಡಿದೆ. ಲಾಭಕ್ಕಾಗಿ ಮಾರುಕಟ್ಟೆ ವ್ಯವಸ್ಥೆಯ ವಿಸ್ತರಣೆ ಮಾಡಿ ತಮ್ಮ ಉತ್ಪಾದನೆಗೆ ಜನ ಸಮೂಹವನ್ನು ಗ್ರಾಹಕರನ್ನಾಗಿಸುವ ನಾಗರಿಕತೆಯನ್ನು ಪ್ರೋತ್ಸಾಹಿಸುತ್ತದೆ....

ಬೆಂಗಳೂರು | ನಗರಗಳಲ್ಲಿ ಸಮಾನ ಪಾಲುದಾರಿಕೆ ಕಣ್ಮರೆ : ಬಂಜಗೆರೆ ಜಯಪ್ರಕಾಶ್ 

 ನಗರಗಳಲ್ಲಿ ಸಮಾನ ಪಾಲುದಾರಿಕೆಯ ಕಣ್ಮರೆ ಮಾಡಿ ನಗರೀಕರಣಕ್ಕೆ ವಿಪುಲವಾದ ಅವಕಾಶ ನೀಡಿ ಒಟ್ಟಾರೆ ಲಾಭಕ್ಕಾಗಿ ಹೆಚ್ಚಿನ ಜನರ ಸಮೂಹಕ್ಕೆ ಮಾರುಕಟ್ಟೆ ವ್ಯವಸ್ಥೆಯ ವಿಸ್ತರಣೆ ಮಾಡಿ ತಮ್ಮ ಉತ್ಪಾದನೆಗೆ ಗ್ರಾಹಕರನ್ನಾಗಿಸುವ ನಾಗರೀಕತೆಯನ್ನು ಪ್ರೋತ್ಸಾಹಿಸುತ್ತದೆ. ಇದಕ್ಕೆ...

ಬೆಂ.ಗ್ರಾಮಾಂತರ | ಕುವೆಂಪು ಹಾಗೂ ಅಮರಶಿಲ್ಪಿ ಜಕಣಾಚಾರಿ ಅವರ ಸಾಮಾಜಿಕ ಕೊಡುಗೆ ಅಪಾರ; ಡಿ.ಸಿ

ರಾಷ್ಟ್ರಕವಿ ಕುವೆಂಪು ಅವರು ಸಾಹಿತ್ಯ ಕ್ಷೇತ್ರದಲ್ಲಿ ಸಮಾಜಕ್ಕೆ ಕೊಡುಗೆಯಾದರೆ, ಅಮರ ಶಿಲ್ಪಿ ಜಕಣಾಚಾರಿ ಅವರು ವಾಸ್ತು ಶಿಲ್ಪದ ಮೂಲಕ ಸಮಾಜಕ್ಕೆ ಕೊಡುಗೆಯಾಗಿದ್ದಾರೆ. ಅವರ ಆಚಾರ, ವಿಚಾರ, ಕಲೆ, ಕಾಯಕ ನಿಷ್ಠೆಯನ್ನು ಅರಿತು ಅವರ...

ಕರ್ನಾಟಕ ಪ್ರಾಂತ ರೈತ ಸಂಘದ ರಾಜ್ಯಾಧ್ಯಕ್ಷ ಜಿ‌ ಸಿ ಬಯ್ಯಾರೆಡ್ಡಿ ಇನ್ನಿಲ್ಲ

ರಾಜ್ಯದಲ್ಲಿ ಪ್ರಗತಿಪರ ಹೋರಾಟಗಳಲ್ಲಿ ಗುರುತಿಸಿಕೊಂಡಿದ್ದ ಸಿಪಿಐ(ಎಂ) ರಾಜ್ಯ ಕಾರ್ಯದರ್ಶಿ ಮಂಡಳಿ ಸದಸ್ಯ, ಕರ್ನಾಟಕ ಪ್ರಾಂತ ರೈತ ಸಂಘದ ರಾಜ್ಯಾಧ್ಯಕ್ಷರೂ ಆಗಿದ್ದ ಕಾಮ್ರೆಡ್ ಜಿ.ಸಿ.ಬಯ್ಯಾರೆಡ್ಡಿ ಅವರು ನಿಧನರಾಗಿದ್ದಾರೆ. ಶನಿವಾರ ಮುಂಜಾನೆ 3 ಗಂಟೆಗೆ ಜಯನಗರ 3ನೇ...

ಆನೇಕಲ್‌ | ಜಿಗಣಿ ಕೆರೆಯಲ್ಲಿ ಮೊಸಳೆ ಪ್ರತ್ಯಕ್ಷ; ಮೀನುಗಾರರಿಗೆ ಎಚ್ಚರಿಕೆ ನೀಡಿದ ಪುರಸಭೆ

ಆನೇಕಲ್‌ ತಾಲೂಕಿನ ಜಿಗಣಿ ಕೆರೆಯಲ್ಲಿ ಮೊಸಳೆ ಪ್ರತ್ಯಕ್ಷವಾಗಿದ್ದು, ಕೆರೆ ಸುತ್ತಮುತ್ತಲಿನ ಪ್ರದೇಶದ ನಿವಾಸಿಗಳಲ್ಲಿ, ಸಾರ್ವಜನಿಕರಲ್ಲಿ ಆತಂಕ ಮೂಡಿಸಿದೆ.  ತಾಲೂಕಿನ ಜಿಗಣಿ ಕೆರೆಯಲ್ಲಿ ಕಳೆದ ಎರಡು ದಿನಗಳಿಂದ ಮೊಸಳೆ ಕಾಣಿಸಿಕೊಳ್ಳುತ್ತಿದೆ. ಕೆರೆ ದಡದ ಮೇಲೆ ಮೊಸಳೆ...

ಬೆಂಗಳೂರು | ಕೆರೆಯಲ್ಲಿ ಮಹಿಳೆಯ ಮೃತದೇಹ ಪತ್ತೆ; ಆತ್ಮಹತ್ಯೆ ಶಂಕೆ

ಬೆಂಗಳೂರು ನಗರ ಜಿಲ್ಲೆಯ ಆನೇಕಲ್ ತಾಲೂಕಿನ ಜಿಗಣಿ ಪೊಲೀಸ್‌ ಠಾಣೆ ವ್ಯಾಪ್ತಿಯ ಬೊಮ್ಮಂಡನಹಳ್ಳಿ ಕೆರೆಯಲ್ಲಿ ಮಹಿಳೆಯ ಮೃತದೇಹ ಪತ್ತೆಯಾಗಿದೆ. ಮೃತ ಮಹಿಳೆಯನ್ನು ನೊಸೇನೂರು ಗ್ರಾಮದ ಕಾಂತಮ್ಮ(35) ಎಂದು ಗುರುತಿಸಲಾಗಿದೆ. ಕೌಟುಂಬಿಕ ಕಲಹದಿಂದ ಮನನೊಂದಿದ್ದ ಈಕೆ...

ಕೋಲಾರ | ಮನಮೋಹನ್ ಸಿಂಗ್‌ ನಿಧನದ ಹಿನ್ನೆಲೆ ಶಾಲೆ ಕಾಲೇಜುಗಳಿಗೆ ರಜೆ; ಬೆಂಗಳೂರು ಉತ್ತರ ವಿವಿಯಲ್ಲಿ ಪರೀಕ್ಷೆ!

ಮಾಜಿ ಪ್ರಧಾನಿ ಮನಮೋಹನ್ ಸಿಂಗ್‌ ನಿಧನದ ಹಿನ್ನೆಲೆಯಲ್ಲಿ ಶುಕ್ರವಾರ ರಾಜ್ಯ ಸರ್ಕಾರವು ಶಾಲೆ ಕಾಲೇಜು, ಕಚೇರಿಗಳಿಗೆ ರಜೆ ಘೋಷಿಸಿದ್ದರೂ ಬೆಂಗಳೂರು ಉತ್ತರ ವಿಶ್ವವಿದ್ಯಾಲಯದಲ್ಲಿ ಪರೀಕ್ಷೆ ನಡೆಸಲಾಗಿದೆ. ಉತ್ತರ ವಿಶ್ವವಿದ್ಯಾಲಯ ವ್ಯಾಪ್ತಿಯ ಬೆಂಗಳೂರಿನ ಕೆ ಆರ್‌...

ಈ ಹೊತ್ತಿನ ಪ್ರಮುಖ ಸುದ್ದಿ