ಹುಮನಾಬಾದ್

ಬೀದರ್ | ಅಪರಿಚಿತ ವಾಹನ ಡಿಕ್ಕಿ : ಮಹಿಳೆ ಸಾವು

ವೇಗವಾಗಿ ಬಂದ ಅಪರಿಚಿತ ವಾಹನ ಡಿಕ್ಕಿ ಹೊಡೆದ ಪರಿಣಾಮ ಮಹಿಳೆಯೊಬ್ಬಳು ಮೃತಪಟ್ಟ ಘಟನೆ ಹುಮನಾಬಾದ್ ತಾಲೂಕಿನ ಹಂದಿಕೇರಾ ಗ್ರಾಮದಲ್ಲಿ ನಡೆದಿದೆ. ಹಾಲ್ ಗೋರ್ಟಾ ಗ್ರಾಮದ ನಿವಾಸಿ ಸರಿತಾ (31) ಮೃತರು. ಮಹಿಳೆಯು ತವರೂರಾದ ಹಂದಿಕೇರಾ...

ಬೀದರ್‌ | ಮೂಢ ಸಂಪ್ರದಾಯ ತಡೆಗೆ ದಲಿತ ಪ್ಯಾಂಥರ್‌ ಸಂಘಟನೆ ಆಗ್ರಹ

ಹುಮನಾಬಾದ್‌ ತಾಲ್ಲೂಕಿನಲ್ಲಿ ʼಕಾರ್ಯʼ ಎಂಬ ಹೆಸರಿನಲ್ಲಿ ನಡೆಯುತ್ತಿರುವ ಮೂಢ ಸಂಪ್ರದಾಯ ಆಚರಣೆ ತಡೆಯುವಂತೆ ಭಾರತೀಯ ದಲಿತ ಪ್ಯಾಂಥರ್ ಸಂಘಟನೆ ಆಗ್ರಹಿಸಿದೆ. ಈ ಕುರಿತು ಭಾರತೀಯ ದಲಿತ ಪ್ಯಾಂಥರ್ ಸಂಘಟನೆಯ ಪದಾಧಿಕಾರಿಗಳು ಶುಕ್ರವಾರ ಹುಮನಾಬಾದ್‌ ತಹಸೀಲ್ದಾರ್‌...

ಬೀದರ್‌ | ₹3 ಲಕ್ಷ ಮೌಲ್ಯದ ಗುಟ್ಕಾ ಜಪ್ತಿ : ನಾಲ್ವರ ವಿರುದ್ದ ಪ್ರಕರಣ ದಾಖಲು

ಲಾರಿಯೊಂದರಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ ₹3 ಲಕ್ಷ ಮೌಲ್ಯದ ಗುಟ್ಕಾವನ್ನು ಹುಮನಾಬಾದ್‌ ಹೊರವಲಯದ ಹಳೆ ಚೆಕ್ ಪೋಸ್ಟ್ ಹತ್ತಿರದಲ್ಲಿ ಹುಮನಾಬಾದ್‌ ಪೊಲೀಸರು ಗುರುವಾರ ಸಂಜೆ ಜಪ್ತಿ ಮಾಡಿದ್ದಾರೆ. ತೆಲಂಗಾಣದ ಹೈದರಾಬಾದ್ ಕಡೆಯಿಂದ ಹುಮನಾಬಾದ್ ಮಾರ್ಗವಾಗಿ ಕಲಬುರಗಿಗೆ...

ಬೀದರ್‌ | ಗೂಡ್ಸ್‌ ವಾಹನ – ಕಾರು ಡಿಕ್ಕಿ : ಇಬ್ಬರು ಸ್ಥಳದಲ್ಲೇ ಸಾವು

ಮಹಿಂದ್ರಾ ಪಿಕಪ್ ಗೂಡ್ಸ್‌ ವಾಹನ ಹಾಗೂ ಕಾರು ಡಿಕ್ಕಿಯಾಗಿ ಸ್ಥಳದಲ್ಲೇ ಇಬ್ಬರು ಮೃತಪಟ್ಟ ಘಟನೆ ಘಟನೆ ಹುಮನಾಬಾದ್ ತಾಲ್ಲೂಕಿನ ಹಳ್ಳಿಖೇಡ(ಬಿ) ಗ್ರಾಮದ ಬಿಎಸ್‌ಎಸ್‌ಕೆ ಕಾರ್ಖಾನೆ ಬಳಿ ಬುಧವಾರ ಮಧ್ಯಾಹ್ನ ನಡೆದಿದೆ. ಕಾರು ಚಾಲಕ ಹಾಗೂ...

ಬೀದರ್‌ | ಜಲಸಂಗಿ ಗ್ರಾಮದಲ್ಲಿ ನೆಲಕ್ಕೆ ಬಿದ್ದ ಟಿಐಎಫ್‌ಆರ್ ಸಂಸ್ಥೆಯ ಏರ್ ಬಲೂನ್‌

ಹುಮನಾಬಾದ್ ತಾಲೂಕಿನ ಜಲಸಂಗಿ ಗ್ರಾಮದಲ್ಲಿ ಶನಿವಾರ ಬೆಳಿಗ್ಗೆ ಬೃಹತ್‌ ಗಾತ್ರದ ಏರ್ ಬಲೂನ್‌ ನೆಲಕ್ಕೆ ಬಿದ್ದಿತ್ತು. ಇದರಿಂದ ಕೆಲ ಕಾಲ ಗ್ರಾಮಸ್ಥರು ಆತಂಕಗೊಂಡಿದ್ದ ಘಟನೆ ಜರುಗಿದೆ. ಜಲಸಂಗಿ ಗ್ರಾಮದ ಬೇವಿನ ಮರದ ಮೇಲೆ...

ಬೀದರ್‌ | ಡಾ.ಅಂಬೇಡ್ಕರ್‌ ಬಗ್ಗೆ ಅಮಿತ್‌ ಶಾ ಹೇಳಿಕೆ : ಜಿಲ್ಲಾದ್ಯಂತ ಭುಗಿಲೆದ್ದ ಆಕ್ರೋಶ

ರಾಜ್ಯಸಭೆಯಲ್ಲಿ ಸಂವಿಧಾನ ಶಿಲ್ಪಿ ಡಾ.ಬಿ.ಆರ್‌.ಅಂಬೇಡ್ಕರ್‌ ಬಗ್ಗೆ ಕೇಂದ್ರ ಸಚಿವ ಅಮಿತ್‌ ಶಾ ಆಡಿರುವ ಅವಹೇಳನಕಾರಿ ಮಾತುಗಳನ್ನು ಖಂಡಿಸಿ ಜಿಲ್ಲಾದ್ಯಂತ ಅಮಿತ್‌ ಶಾ ವಿರುದ್ಧ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ಡಾ.ಅಂಬೇಡ್ಕರ್ ಕುರಿತು ಕೇಂದ್ರ ಗೃಹ ಸಚಿವ...

ಬೀದರ್‌ | ಅಂಬೇಡ್ಕರ್‌ ಕುರಿತ ಹೇಳಿಕೆ : ಸಂಪುಟದಿಂದ ಅಮಿತ್‌ ಶಾ ವಜಾಕ್ಕೆ ವ್ಯಾಪಕ ಆಗ್ರಹ

ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ರಾಜ್ಯಸಭೆಯಲ್ಲಿ ಡಾ.ಬಿ.ಆರ್.ಅಂಬೇಡ್ಕರ್‌ ಕುರಿತು ಆಡಿದ ಮಾತುಗಳು ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ. ಅಂಬೇಡ್ಕರ್‌ ಕುರಿತ ಅಮಿತ್‌ ಶಾ ಆಡಿದ ಅವಮಾನಕಾರಿ ಮಾತುಗಳನ್ನು ವಾಪಸ್‌ ಪಡೆಯಬೇಕು ಮತ್ತು...

ಬೀದರ್‌ | ದಲಿತರ ಮೇಲೆ ದೌರ್ಜನ್ಯ : ಸಚಿವ ಈಶ್ವರ ಖಂಡ್ರೆ ವಿರುದ್ಧ ಆಕ್ರೋಶ

ಬೀದರ್‌ ತಾಲೂಕಿನ ವಿಳಾಸಪುರ ಗ್ರಾಮದಲ್ಲಿ ಡಿ.12ರಂದು ತಡರಾತ್ರಿ ಡಾ.ಬಿ.ಆರ್.ಅಂಬೇಡ್ಕರ್‌ ಅವರ ಭಾವಚಿತ್ರಕ್ಕೆ ಕಿಡಿಗೇಡಿಗಳು ಚಪ್ಪಲಿ ಹಾರ ಹಾಕಿ ಅವಮಾನಿಸಿರುವ ಘಟನೆಯನ್ನು ದಲಿತ ಸಂಘಟನೆಗಳ ಒಕ್ಕೂಟ ತೀವ್ರವಾಗಿ ಖಂಡಿಸಿ ಪ್ರತಿಭಟನೆ ನಡೆಸಿತು. ಹುಮನಾಬಾದ್ ಪಟ್ಟಣದ ಪ್ರವಾಸಿ...

ಹುಮನಾಬಾದ್‌ | ನರೇಗಾ ಕೂಲಿ ನೀಡದ ಅಧಿಕಾರಿಗಳ ವಿರುದ್ಧ ತಾ.ಪಂ. ಎದುರು ಧರಣಿ

ಉದ್ಯೋಗ ಖಾತರಿ ಯೋಜನೆಯಡಿ ಕಾರ್ಮಿಕರು ಕೆಲಸಕ್ಕಾಗಿ ಅರ್ಜಿ ಸಲ್ಲಿಸಿದರೂ ಅಧಿಕಾರಿಗಳು ಕೆಲಸ ನೀಡದೇ ನಿರ್ಲಕ್ಷ್ಯವಹಿಸುತ್ತಿದ್ದಾರೆ ಎಂದು ಆರೋಪಿಸಿ ಗ್ರಾಮೀಣ ಕೂಲಿ ಕಾರ್ಮಿಕರ ಸಂಘಟನೆ (ಗ್ರಾಕೂಸ) ಕಾರ್ಯಕರ್ತರು ಸೋಮವಾರ ಹುಮನಾಬಾದ್‌ ತಾಲ್ಲೂಕು ಪಂಚಾಯಿತಿ ಎದುರು...

ಬೀದರ್‌ | ಅವೈಜ್ಞಾನಿಕ ಕಸ ವಿಲೇವಾರಿ ಘಟಕ ಸ್ಥಳಾಂತರಕ್ಕೆ ಸಿಂಧನಕೇರಾ ಗ್ರಾಮಸ್ಥರ ಆಗ್ರಹ

ಹುಮನಾಬಾದ್‌ ತಾಲೂಕಿನ ಸಿಂಧನಕೇರಾ ಗ್ರಾಮದಲ್ಲಿ ಅವೈಜ್ಞಾನಿಕವಾಗಿರುವ ಕಸ ವಿಲೇವಾರಿ ಘಟಕದಿಂದ ಗ್ರಾಮಸ್ಥರಲ್ಲಿ ಅನಾರೋಗ್ಯದ ಭೀತಿ ಉಂಟಾಗಿದೆ. ಕೂಡಲೇ ಘಟಕ ಸ್ಥಳಾಂತರಿಸಿ ಆರೋಗ್ಯ ರಕ್ಷಣೆಗೆ ಮುಂದಾಗಬೇಕೆಂದು ಗ್ರಾಮಸ್ಥರು ಆಗ್ರಹಿಸಿದರು. ಈ ಕುರಿತು ಶನಿವಾರ ಹುಮನಾಬಾದ್‌...

ಹುಮನಾಬಾದ್‌ | ಸಮಾಜದ ಗ್ರಹಿಕೆಗೆ ಅಧ್ಯಯನ ಅಗತ್ಯ‌ : ಡಾ.ಭೀಮಾಶಂಕರ ಬಿರಾದಾರ್

ಗಂಭೀರವಾದ ಓದು ಅಧ್ಯಯನದಿಂದ ಬದುಕು ಹಾಗೂ ಸಮಾಜವನ್ನು ಹಲವು ಆಯಾಮಗಳಲ್ಲಿ ಗ್ರಹಿಸಬಹುದು ಎಂದು ಬಸವಕಲ್ಯಾಣದ ಶ್ರೀ ಬಸವೇಶ್ವರ ಪದವಿ ಕಾಲೇಜು ಪ್ರಾಚಾರ್ಯ ಡಾ.ಭೀಮಾಶಂಕರ ಬಿರಾದಾರ ಹೇಳಿದರು. ಹುಮನಾಬಾದ್‌ ಪಟ್ಟಣದ ಎಸ್‌ಬಿಸಿಎಸ್ ಕಲಾ ಮತ್ತು ಎಸ್‌ವಿ...

ಬೀದರ್ ಜಿಲ್ಲೆಯಲ್ಲಿ ಲಘು ಭೂಕಂಪನ; ರಿಕ್ಟರ್‌ ಮಾಪಕದಲ್ಲಿ 2.3 ತೀವ್ರತೆ ದಾಖಲು

ಬೀದರ್ ಜಿಲ್ಲೆಯಲ್ಲಿ ಮುಂಜಾನೆ 2.3 ತೀವ್ರತೆಯ ಲಘು ಭೂಕಂಪನ ಸಂಭವಿಸಿದ್ದು, ಕಡಿಮೆ ತೀವ್ರತೆ ಮತ್ತು ಕನಿಷ್ಠ ಭೂಕಂಪನವಾಗಿರುವ ಕಾರಣ ಯಾವುದೇ ರೀತಿ ಹಾನಿಯಾಗಿಲ್ಲವೆಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಪತ್ತು ಮೇಲ್ವಿಚಾರಣಾ ಕೇಂದ್ರ(ಕೆಎಸ್‌ಎನ್‌ಡಿಎಂಸಿ) ದೃಢಪಡಿಸಿದೆ....

ಈ ಹೊತ್ತಿನ ಪ್ರಮುಖ ಸುದ್ದಿ