ಚಿಕ್ಕಮಗಳೂರು

ನನ್ನ ವಿರುದ್ಧ ಪ್ರಾಯೋಜಿತ ಅಪಪ್ರಚಾರ ನಡೆಯುತ್ತಿದೆ: ಸಚಿವೆ ಶೋಭಾ ಕರಂದ್ಲಾಜೆ

ಚಿಕ್ಕಮಗಳೂರು-ಉಡುಪಿ ಜಿಲ್ಲೆಗಳಲ್ಲಿ ಅಲ್ಲಿನ ಸಂಸದೆ, ಕೇಂದ್ರ ಕೃಷಿ ಮತ್ತು ರೈತ ಕಲ್ಯಾಣ ಖಾತೆ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ವಿರುದ್ಧ ‘ಗೋ ಬ್ಯಾಕ್ ಶೋಭಾ!’ ಅಭಿಯಾನ ನಡೆಯುತ್ತಿದೆ. ಕರಂದ್ಲಾಜೆ ವಿರುದ್ಧ ಅಸಮಾಧಾನಗೊಂಡಿರುವ ಕ್ಷೇತ್ರದ...

ಶೋಭಾ ಕರಂದ್ಲಾಜೆ ವಿರುದ್ಧ ತಿರುಗಿಬಿದ್ದ ಬಿಜೆಪಿ ಕಾರ್ಯಕರ್ತರು: ಟಿಕೆಟ್ ನೀಡದಂತೆ ಹೈಕಮಾಂಡ್‌ಗೆ ಪತ್ರ

ಲೋಕಸಭಾ ಚುನಾವಣೆಗೆ ಬಿಜೆಪಿ ಟಿಕೆಟ್​ ನೀಡುವ ವಿಚಾರದ ಸಂಬಂಧ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆಗೆ ಸ್ವಕ್ಷೇತ್ರದಲ್ಲೇ ಬಿಜೆಪಿ ಕಾರ್ಯಕರ್ತರಿಂದಲೇ ಭಾರೀ ವಿರೋಧ ವ್ಯಕ್ತವಾಗುತ್ತಿದೆ. ಈ ಬಾರಿ ಚಿಕ್ಕಮಗಳೂರು-ಉಡುಪಿ ಕ್ಷೇತ್ರದಿಂದ ಲೋಕಸಭಾ ಚುನಾವಣೆಯಲ್ಲಿ ಟಿಕೆಟ್ ನೀಡದಂತೆ...

ನಿವೇಶನಕ್ಕಾಗಿ ಎದುರು ನೋಡುತ್ತಿದ್ದಾರೆ ಕಾಫಿನಾಡಿನ ನಿರಾಶ್ರಿತರು

ಕಾಫಿನಾಡು ಚಿಕ್ಕಮಗಳೂರು ಜಿಲ್ಲೆಯಲ್ಲಿ ನೂರಾರು ನಿರಾಶ್ರಿತರು ಬದುಕಲು ಸೂರಿಲ್ಲದೆ, ಸ್ವಂತ ಮನೆಯಿಲ್ಲದೆ ನಾನಾ ಸಮಸ್ಯೆಗಳೊಂದಿಗೆ ಕಷ್ಟದ ಜೀವನ ದೂಡುತ್ತಿದ್ದಾರೆ. ಸರ್ಕಾರ ತಮಗೆ ನಿವೇಶನ ನೀಡಿದರೆ, ಬದುಕು ಕಟ್ಟಿಕೊಂಡು, ಜೀವನ ನಡೆಸುತ್ತೇವೆಂದು ಎದುರು ನೋಡುತ್ತಿದ್ದಾರೆ....

ಚಿಕ್ಕಮಗಳೂರು | ಎದ್ದೇಳು ಕರ್ನಾಟಕ ಸಮಾಲೋಚನಾ ಸಭೆ 

ಚಿಕ್ಕಮಗಳೂರು ತಾಲೂಕಿನ ಅಂಬೇಡ್ಕರ್ ಭವನದಲ್ಲಿ ಬುದ್ಧ, ಬಸವ, ಗಾಂಧಿ, ಅಂಬೇಡ್ಕರ್ ಅವರ ಆಶಯದ ಭಾವೈಕ್ಯತೆಯ ಪ್ರಗತಿಪರ ಸಂಘಟನೆಗಳ ಸಮಾಲೋಚನ ಕಾರ್ಯಕ್ರಮ ನಡೆಯಿತು. ಎದ್ದೇಳು ಕರ್ನಾಟಕ ಗೌಸ್ ಮೊಹಿದ್ದೀನ್ ಮಾತನಾಡಿ, "ಭಾರತದಲ್ಲಿ ಸಮಾನ ಶಿಕ್ಷಣ ಸಮಾನ...

ಬಾಬರ್, ಘಜನಿ, ಘೋರಿ ಮಾನಸಿಕತೆಯಿಂದ ಮುಸ್ಲಿಮರು ಹೊರ ಬರಬೇಕು: ಸಿ.ಟಿ ರವಿ

ದೇಶದ ಮುಸ್ಲಿಮರು ಬಾಬರ್, ಘಜನಿ, ಘೋರಿ ಮಾನಸಿಕತೆಯಿಂದ ಹೊರ ಬರಬೇಕು. ಅವರ ಮಾನಸಿಕತೆ ಬಹಳ ಅಪಾಯಕಾರಿ ಎಂದು ಬಿಜೆಪಿ ಮಾಜಿ ಪ್ರಧಾನ ಕಾರ್ಯದರ್ಶಿ ಸಿಟಿ ರವಿ ಹೇಳಿದ್ದಾರೆ. ಚಿಕ್ಕಮಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, "ಘಜನಿ,...

ಬಾಬಾ ಬುಡನ್‌ಗಿರಿ ಗೋರಿ ಧ್ವಂಸ ಪ್ರಕರಣ; ವಿಚಾರಣೆ ಫೆಬ್ರವರಿ 7ಕ್ಕೆ ಮುಂದೂಡಿಕೆ

ಬಾಬಾ ಬುಡನ್‌ಗಿರಿಯಲ್ಲಿ ಗೋರಿ ಧ್ವಂಸಗೊಳಿಸಿದ ಪ್ರಕರಣ ಸಂಬಂಧ ಹಿಂದುತ್ವ ಕೋಮುವಾದಿ ಕಾರ್ಯಕರ್ತರಿಗೆ ನ್ಯಾಯಾಲಯ ಸಮನ್ಸ್‌ ಜಾರಿ ಮಾಡಿ, ವಿಚಾರಣೆಗೆ ಒಳಪಡಿಸಿದೆ. ಮುಂದಿನ ವಿಚಾರಣೆಯನ್ನು ಫೆಬ್ರವರಿ 7ನೇ ತಾರೀಖಿಗೆ ಮುಂದೂಡಿದೆ. 2017ರ ಡಿಸೆಂಬರ್ 3ರಂದು ಬಾಬಾ...

ಚಿಕ್ಕಮಗಳೂರು | ವಿದ್ಯಾರ್ಥಿನಿ, ಚಾಲಕ ಆತ್ಮಹತ್ಯೆ: ಶಾಲಾಡಳಿತ ಮಂಡಳಿ ವಿರುದ್ಧ ಪೋಕ್ಸೋ ಪ್ರಕರಣ ದಾಖಲು

ರೈಲಿಗೆ ಸಿಲುಕಿ ಆತ್ಮಹತ್ಯೆ ಮಾಡಿಕೊಂಡ ಚಿಕ್ಕಮಗಳೂರಿನ ಶಾಲಾ ಬಸ್ ಚಾಲಕ ಮತ್ತು ವಿದ್ಯಾರ್ಥಿನಿ ಸಾವಿನ ಪ್ರಕರಣದಲ್ಲಿ ಖಾಸಗಿ ಶಾಲೆಯ ಆಡಳಿತ ಮಂಡಳಿ ವಿರುದ್ಧ ಪೋಕ್ಸೋ ಪ್ರಕರಣ ದಾಖಲಾಗಿದೆ. 8ನೇ ತರಗತಿ ವಿದ್ಯಾರ್ಥಿನಿ ಮತ್ತು ಶಾಲಾ...

ಚಿಕ್ಕಮಗಳೂರು | ನಾಗೇನಹಳ್ಳಿ ದರ್ಗಾ ಬಳಿ ದತ್ತಜಯಂತಿ ಹೇಳಿಕೆ, ಶ್ರೀರಾಮಸೇನೆ ಮುಖಂಡ ರಂಜಿತ್ ಶೆಟ್ಟಿ ಬಂಧನ

ಚಿಕ್ಕಮಗಳೂರು ಜಿಲ್ಲೆಯ ನಾಗೇನಹಳ್ಳಿ ದರ್ಗಾದಲ್ಲಿ ದತ್ತಜಯಂತಿ ನಡೆಸುತ್ತೇವೆಂದು ಹಿಂದುತ್ವ ಕೋಮುವಾದಿ ಸಂಘಟನೆಗಳು ಹೇಳಿಕೆ ನೀಡಿವೆ. ಈ ಹಿನ್ನೆಲೆಯಲ್ಲಿ, ನಾಗೇನಹಳ್ಳಿ ದರ್ಗಾದ ಸುತ್ತಮುತ್ತ 144 ಸೆಕ್ಷನ್ ಅಡಿಯಲ್ಲಿ ನಿಷೇಧಾಜ್ಞೆ ಜಾರಿ ಮಾಡಲಾಗಿದೆ. ಮುಂಜಾಗ್ರತಾ ಕ್ರಮವಾಗಿ...

ಚಿಕ್ಕಮಗಳೂರು | ಮಸೀದಿ ಬಳಿ ಕೇಸರಿ ಧ್ವಜ ಕಟ್ಟಲು ವಿರೋಧ; ಗಲಾಟೆ ಆರೋಪ

ಚಿಕ್ಕಮಗಳೂರು ಜಿಲ್ಲೆಯ ಹಾಂದಿ ಗ್ರಾಮದಲ್ಲಿ ಮಸೀದಿ ಬಳಿ ಕೇಸರಿ ಧ್ವಜ ಕಟ್ಟುತ್ತಿದ್ದ ದತ್ತ ಮಾಲಾಧಾರಿಗಳನ್ನು ಮತ್ತೊಂದು ಕೋಮಿನ ಯುವಕರು ತಡೆದಿದ್ದಾರೆ. ಈ ವೇಳೆ ಗಲಾಟೆ ನಡೆದಿದ್ದು, ಹಿಂದುತ್ವ ಕೋಮು ಕಾರ್ಯಕರ್ತರ ಮೇಲೆ ಹಲ್ಲೆ...

ಚಿಕ್ಕಮಗಳೂರು | ಆನೆಗಳ ಹಾವಳಿ; ಸುತ್ತಲಿನ ಗ್ರಾಮಸ್ಥರಲ್ಲಿ ಭೀತಿ

ಚಿಕ್ಕಮಗಳೂರು ಜಿಲ್ಲೆ ನರಸಿಂಹರಾಜಪುರ ತಾಲೂಕು ಸಮೀಪದಲ್ಲಿರುವ ಮುತ್ತಿನಕೊಪ್ಪ ಗ್ರಾಮ ಪಂಚಾಯತಿ ಸುತ್ತ ಮುತ್ತಲಿನ ಗ್ರಾಮಗಳಲ್ಲಿ ಆನೆ ಹಾವಳಿ ಹೆಚ್ಚಾಗಿದೆ. ಕೊರಲುಕೊಪ್ಪ, ಹೊಸೂರು ಹಾಗೂ ಸುತ್ತಮುತ್ತಲಿನ ಗ್ರಾಮಗಳಿಗೆ ಆಜುಬಾಜಿನಲ್ಲಿ ತುಂಗಭದ್ರಾ ನೀರು ಹರಿಯುವುದರಿಂದ ನೀರಿನ ದಡದಲ್ಲಿ...

ಚಿಕ್ಕಮಗಳೂರು | ಬಾಬಾಬುಡನ್‌ ಗಿರಿಯಲ್ಲಿ ದತ್ತ ಜಯಂತಿ; 6 ದಿನ ಪ್ರವಾಸಿಗರಿಗೆ ನಿರ್ಬಂಧ

ಚಿಕ್ಕಮಗಳೂರು ಜಿಲ್ಲೆಯ ಬಾಬಾಬುಡನ್‌ ಗಿರಿ ದರ್ಗಾದಲ್ಲಿ ಹಿಂದುತ್ವ ಕೋಮುವಾದಿ ಸಂಘಟನೆಗಳು ದತ್ತ ಜಯಂತಿ ಆಚರಿಸಲು ಮುಂದಾಗಿವೆ. ಈ ಹಿನ್ನೆಲೆಯಲ್ಲಿ ಡಿಸೆಂಬರ್ 22 ರಿಂದ 27ರವರೆಗೆ ಚಂದ್ರದ್ರೋಣ ಪರ್ವತ ಸಾಲಿನಲ್ಲಿರುವ ಪ್ರವಾಸಿ ತಾಣಗಳಿಗೆ ಪ್ರವಾಸಿಗರಿಗೆ...

ಚಿಕ್ಕಮಗಳೂರು | ವಿವಾಹೇತರ ಸಂಬಂಧಕ್ಕೆ ಅಡ್ಡಿಯಾಗುತ್ತಿದ್ದಾಳೆ ಎಂದು ಪತ್ನಿಯನ್ನೇ ಕೊಂದ ಪತಿ

ವಿವಾಹೇತರ ಸಂಬಂಧಕ್ಕೆ ಅಡ್ಡಿಯಾಗುತ್ತಿದ್ದಾಳೆ ಎಂದು ದುಷ್ಟ ಪತಿಯೊಬ್ಬ ತನ್ನ ಪತ್ನಿಯನ್ನು ಕೊಲೆಗೈದಿರುವ ಘಟನೆ ಚಿಕ್ಕಮಗಳೂರಿನ ಮೂಡಿಗೆರೆ ತಾಲೂಕಿನ ದೇವವೃಂದ ಗ್ರಾಮದಲ್ಲಿ ನಡೆದಿರುವ ಬಗ್ಗೆ ವರದಿಯಾಗಿದೆ. ಶ್ವೇತಾ(31) ಮೃತ ದುರ್ದೈವಿ. ಶ್ವೇತಾ ಪತಿ ಆರೋಪಿ ದರ್ಶನ್....

ಈ ಹೊತ್ತಿನ ಪ್ರಮುಖ ಸುದ್ದಿ