ಚಿತ್ರದುರ್ಗ 

ಚಿತ್ರದುರ್ಗ | ಹಬ್ಬಕ್ಕೆ ಗ್ರಾಮ ಸ್ವಚ್ಛಗೊಳಿಸದ ಬಂಡ ಅಧಿಕಾರಿಗಳು, ರೊಚ್ಚಿಗೆದ್ದ ವೃದ್ಧನಿಂದ ಚರಂಡಿ ಸ್ವಚ್ಛತೆ.

ಗ್ರಾಮಗಳಲ್ಲಿ ಹಬ್ಬ ಹರಿದಿನ, ಜಾತ್ರೆಗಳು ಬಂದಿತೆಂದರೆ ಆರಂಭಕ್ಕೆ ಮುನ್ನ ಚರಂಡಿ, ರಸ್ತೆ ಸೇರಿದಂತೆ ಗ್ರಾಮವನ್ನು ವರ್ಷಕ್ಕೆ ಒಂದೆರಡು ಬಾರಿ ಸ್ವಚ್ಛಗೊಳಿಸುವುದು ಮಾಮೂಲಿ. ಆದರೆ ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲೂಕಿನ ಗೋಪನಹಳ್ಳಿ ಗ್ರಾಮದಲ್ಲಿ ಮೂಲಭೂತ...

ಚಳ್ಳಕೆರೆ | ಖಾಸಗಿ ಬಸ್ ನಿಲ್ದಾಣದ ಅನೈರ್ಮಲ್ಯ, ಅವ್ಯವಸ್ಥೆ; ನಗರಸಭೆ ಅಧಿಕಾರಿಗಳ ನಿರ್ಲಕ್ಷ್ಯ

ಚಳ್ಳಕೆರೆ ಖಾಸಗಿ ಬಸ್ ನಿಲ್ದಾಣದಲ್ಲಿ ಅವ್ಯವಸ್ಥೆ, ಅನೈರ್ಮಲ್ಯ ತಾಂಡವವಾಡುತ್ತಿದ್ದು, ಈ ಸಮಸ್ಯೆಯನ್ನು ಯಾರು ಪರಿಹರಿಸುತ್ತಾರೆ ಎನ್ನುವುದೇ ಪ್ರಶ್ನೆಯಾಗಿ ಉಳಿದಿದೆ.‌ ಗಮನಹರಿಸಬೇಕಾಗಿದ್ದ ಸಂಬಧಿತ ಅಧಿಕಾರಿಗಳೂ ಕೂಡ ಕಣ್ಮುಚ್ಚಿ ಕುಳಿತಿರುವುದು ಚಿತ್ರದುರ್ಗ ಜಿಲ್ಲೆಯ ನಾಗರಿಕರ ಆಕ್ರೋಶಕ್ಕೆ...

ಚಿತ್ರದುರ್ಗ | ಸ್ಥಳ ಗೊಂದಲದ ವಿರುದ್ಧ ಆಕ್ರೋಶ, ಮೂಂದೂಡಿದ ಜಿಲ್ಲಾಡಳಿತದ ರೈತಸಭೆ.

ಬೇಸಿಗೆಯಲ್ಲಿ ವಿದ್ಯುತ್ ಸೇರಿದಂತೆ ವಿವಿಧ ಸಮಸ್ಯೆಗಳ ಕುರಿತು ಚರ್ಚಿಸಲು ಚಿತ್ರದುರ್ಗ ಜಿಲ್ಲಾಡಳಿತದಿಂದ ಕರೆದಿದ್ದ ರೈತಸಭೆಯನ್ನು ರೈತರು ಬಹಿಷ್ಕರಿಸಿ ಅಧಿಕಾರಿಗಳ ವಿರುದ್ಧ ಧಿಕ್ಕಾರ ಕೂಗಿ ಹೊರಟು, ಮೂಂದೂಡಿದ ಘಟನೆ ನಡೆದಿದೆ. ರೈತರೊಂದಿಗೆ ವಿದ್ಯುತ್, ಬೆಳೆ ಪರಿಹಾರ...

ಚಿತ್ರದುರ್ಗ | ಅರೆಮಲೆನಾಡು ಹೊಳಲ್ಕೆರೆಯಲ್ಲಿ 17ನೇ ಜಿಲ್ಲಾ ಸಾಹಿತ್ಯ ಸಮ್ಮೇಳನ. ಹಲವು ವಿಷಯಗಳ ಕುರಿತು ಗೋಷ್ಠಿ.

ಅರೆಮಲೆನಾಡು, ಅಡಿಕೆ ಸೆರಗು ಎಂದೇ ಹೆಸರಾಗಿರುವ ಹೊಳಲ್ಕೆರೆಯಲ್ಲಿ ಕನ್ನಡ ಸಾಹಿತ್ಯ ಪರಿಷತ್ ಚಿತ್ರದುರ್ಗ ಜಿಲ್ಲಾ ಘಟಕದ ವತಿಯಿಂದ ಹೊಳಲ್ಕೆರೆಯ ಸಂವಿಧಾನ ಸೌಧದಲ್ಲಿ 17ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಮಾ.27 ಮತ್ತು 28...

ಚಿತ್ರದುರ್ಗ | ಕೃಷಿ ಬೆಲೆ ಆಯೋಗದ ಬೆಂಗಳೂರು ವಿಭಾಗದ ಸಬೆ, ಚಿತ್ರದುರ್ಗದಿಂದ ರೈತ ಪ್ರತಿನಿಧಿಗಳು.

ಕಳೆದ ಎರಡು ವರ್ಷಗಳಿಂದಲೂ ನೆನೆಗುದಿಗೆ ಬಿದ್ದಿದ್ದ ಅಧ್ಯಕ್ಷರಿಲ್ಲದೆ ನಿಂತ ನೀರಾಗಿದ್ದ ಕೃಷಿ ಬೆಲೆ ಆಯೋಗಕ್ಕೆ ನೂತನವಾಗಿ ಅಧ್ಯಕ್ಷರನ್ನು ನೇಮಕ ಮಾಡಿದ್ದು, ಕೃಷಿ ಬೆಲೆ ಆಯೋಗದ ಪ್ರಥಮ ಸಭೆ ಬೆಂಗಳೂರು ವಿಭಾಗ ಮಟ್ಟದ ರೈತ...

ಚಿತ್ರದುರ್ಗ | ರಾತ್ರಿ ವೇಳೆ ಜಮೀನಿನಲ್ಲಿ ರೈತನ ಮೇಲೆ ಕರಡಿ ದಾಳಿ.‌

ಅಡಿಕೆ ತೋಟದಲ್ಲಿ ರಾತ್ರಿ ನೀರು ಹಾಯಿಸಲು ಹೋಗಿದ್ದ ರೈತನ ಮೇಲೆ ಕರಡಿ ದಾಳಿ ನಡೆಸಿದ್ದು, ಗಂಭೀರವಾಗಿ ಗಾಯಗೊಂಡಿರುವ ಘಟನೆ ಚಿತ್ರದುರ್ಗ ತಾಲೂಕಿನ ಅಳಗವಾಡಿಯಲ್ಲಿ ನಡೆದಿದೆ. ಚಿತ್ರದುರ್ಗ ತಾಲೂಕಿನ ಸಿರಿಗೆರೆ ಸಮೀಪದ ಅಳಗವಾಡಿ ಗ್ರಾಮದ ಶಿವಪ್ಪ ಹಾಗೂ ಅವರ ಮಗ...

ಚಿತ್ರದುರ್ಗ | ಭೀಕರ ಅಪಘಾತ; ಬೈಕ್‌ಗೆ ಬಸ್ ಡಿಕ್ಕಿಯಾಗಿ ಇಬ್ಬರು ನರ್ಸಿಂಗ್ ವಿದ್ಯಾರ್ಥಿಗಳು ಸಾವು

ಬೈಕ್‌ಗೆ ಸಾರಿಗೆ ಬಸ್ಸೊಂದು ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ವಿದ್ಯಾರ್ಥಿಗಳು ಸಾವನ್ನಪ್ಪಿರುವ ಘಟನೆ ಚಿತ್ರದುರ್ಗದ ಗ್ರಾಮಾಂತರ ಠಾಣೆ ಬಳಿ ನಡೆದಿದೆ. ಮೃತರನ್ನು ಕೇರಳ ಮೂಲದ ಯಾಸಿನ್ (22) ಹಾಗೂ ಅಲ್ತಾಫ್ (22) ಎಂದು ಗುರುತಿಸಲಾಗಿದೆ....

ಚಿತ್ರದುರ್ಗ | ಖಾಸಗಿ ಬಸ್ ನಿಲ್ದಾಣದಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಲು ಆಗ್ರಹ.

ಚಳ್ಳಕೆರೆಯಲ್ಲಿ ಪ್ರಾಣಿಪಕ್ಷಿಗಳು, ಮನುಷ್ಯರಿಗೆ ಬಿಸಿಲು ಜೋರಾಗಿಯೇ ಬಿಸಿ ಮುಟ್ಟಿಸುತ್ತಿದೆ. ಬಿರು ಬಿಸಿಲಿಗೆ ಇಲ್ಲಿನ ಜನ ಹೈರಾಣಾಗಿದ್ದಾರೆ. ಇಂತಹ ಸಮಯದಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಕುಡಿಯುವ ನೀರಿನ ಸೌಲಭ್ಯ ಕಲ್ಪಿಸಬೇಕಾದ್ದು ಸ್ಥಳಿಯ ಆಡಳಿತದ ಜವಾಬ್ದಾರಿಯವಾಗಿತ್ತು. ಆದರೆ...

ಚಿತ್ರದುರ್ಗ | ಶಾಸಕರಿಗೆ ವೇತನ ಹೆಚ್ಚಳ ಕಾಯ್ದೆ, ತಿರಸ್ಕರಿಸಲು ರೈತ ಸಂಘ ಆಗ್ರಹ.

ವಿಧಾನ ಸಭೆಯಲ್ಲಿ ಚರ್ಚಿಸದೆ ಶಾಸಕರು, ವಿಧಾನ ಪರಿಷತ್ ಸದಸ್ಯರು, ಮಾಜಿ ಶಾಸಕರು, ಮಂತ್ರಿಗಳಿಗೆ ಸಂಬಳ, ಸಾರಿಗೆ ಭತ್ಯೆ, ಸಾರಿಗೆ, ವಿಮಾನ, ವೈದ್ಯಕೀಯ ಅನೇಕ ಸೌಲಭ್ಯಗಳನ್ನು ದುಪ್ಪಟ್ಟು ಸಂಬಳ ( ಈಗಿರುವ ಸಂಬಳಕ್ಕೆ ಎರಡು...

ಚಿತ್ರದುರ್ಗ | ಜಾತಿ ತಾರತಮ್ಯ, ಎಸ್ಡಿಎಂಸಿ ಅಧ್ಯಕ್ಷನಿಂದ ಮುಖ್ಯ ಶಿಕ್ಷಕನ ವಿರುದ್ಧ ದೂರು, ಕ್ರಮಕ್ಕೆ ಆಗ್ರಹ.

ದಲಿತ ಜಾತಿಯವನೆಂಬ ಕಾರಣಕ್ಕೆ ಮುಖ್ಯ ಶಿಕ್ಷಕರು ಎಸ್ಡಿಎಂಸಿ ಅಧ್ಯಕ್ಷನಿಗೆ ಅವಮಾನಕರವಾಗಿ ಮಾತನಾಡುವುದು, ಮಾಹಿತಿ ನೀಡದೇ ತಿರಸ್ಕಾರ, ದಲಿತರ ಮತ್ತು ದಲಿತ ವಿದ್ಯಾರ್ಥಿಗಳ‌ ಬಗ್ಗೆ ತಾರತಮ್ಯ ಹಾಗೂ ಬೆದರಿಕೆಯನ್ನು ಹಾಕಿದ್ದಾರೆ ಎಂದು ಆರೋಪಿಸಿ ಚಿತ್ರದುರ್ಗ...

ಚಿತ್ರದುರ್ಗ | ದೇಗುಲದಲ್ಲಿ ವೈದಿಕ, ಪುರೋಹಿತ ಶಾಹಿ ಆಚರಣೆ; ಸಿಡಿದೆದ್ದ ಮ್ಯಾಸ ನಾಯಕ ಬುಡಕಟ್ಟು ಸಂರಕ್ಷಣ ಸಮಿತಿ.

ಗಾದ್ರಿಪಾಲನಾಯಕ ಸ್ವಾಮಿ ಮ್ಯಾಸ ನಾಯಕರ ಆರಾಧ್ಯ ದೈವವಾಗಿದ್ದು, ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ತಾಲೂಕಿನ ನಾಯಕನಹಟ್ಟಿ ಹೋಬಳಿಯ ರಾಮಸಾಗರ ಗ್ರಾಮದ ಗಾದ್ರಿಪಾಲನಾಯಕ ದೇವಸ್ಥಾನದಲ್ಲಿ ಮಾರ್ಚ್ 23 ರಿಂದ 25 ರವರೆಗೆ ಹಮ್ಮಿಕೊಂಡಿರುವ ವೈದಿಕ, ಪುರೋಹಿತ...

ಚಿತ್ರದುರ್ಗ | ಕೆಲಸದ ವೇಳೆ ಮನರೇಗಾ ಕಾರ್ಮಿಕ ಸಾವು; ದಿನ ಕಳೆದರೂ ಗಮನಹರಿಸದ ಅಧಿಕಾರಿಗಳು

ಉದ್ಯೋಗ ಖಾತ್ರಿ ಕೆಲಸಕ್ಕೆ ತೆರಳಿದ ವೇಳೆ ಕಾರ್ಮಿಕ ಮೃತಪಟ್ಟಿದ್ದು, ಗ್ರಾಮ ಪಂಚಾಯಿತಿ ಅಧಿಕಾರಿಗಳು ಮತ್ತು ಅಲ್ಲಿನ ಸಂಬಂಧಪಟ್ಟವರು ಇದನ್ನು ಮುಚ್ಚಿಡುವ ಪ್ರಯತ್ನ ನಡೆಸಲಾಗಿದೆಯೇ ಎನ್ನುವ ಅನುಮಾನ ಬಂದಿದೆ. ಘಟನೆ ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ...

ಈ ಹೊತ್ತಿನ ಪ್ರಮುಖ ಸುದ್ದಿ