ದಕ್ಷಿಣ ಕನ್ನಡ

ಮಂಗಳೂರು | ವಿವಿ ಕಾಲೇಜಿನ ನಿವೃತ್ತ ಉಪನ್ಯಾಸಕಿ ಪ್ರೊ.ಲೀಲಾ ನಾಯರ್ ನಿಧನ

ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ನಗರದ ಹೃದಯ ಭಾಗವಾದ ಹಂಪನಕಟ್ಟೆಯಲ್ಲಿರುವ ಮಂಗಳೂರು ವಿವಿ ಕಾಲೇಜಿನ ನಿವೃತ್ತ ಇಂಗ್ಲಿಷ್ ಪ್ರಾಧ್ಯಾಪಕಿ ಪ್ರೊ.ಲೀಲಾ ನಾಯರ್ ಮಂಗಳವಾರ ರಾತ್ರಿ ಮಂಗಳೂರಿನ ಸ್ವಗೃಹದಲ್ಲಿ ನಿಧನರಾದರು. ಅವರಿಗೆ 72 ವರ್ಷ...

ಮಂಗಳೂರು | ಡಿವೈಎಫ್ಐ ಹರೇಕಳ ವತಿಯಿಂದ ಸೌಹಾರ್ದ ಇಫ್ತಾರ್ ಕೂಟ

ಡಿವೈಎಫ್ಐ ಹರೇಕಳ ಗ್ರಾಮ ಸಮಿತಿ ವತಿಯಿಂದ ಹರೇಕಳ ಕಚೇರಿಯಲ್ಲಿ ನಿನ್ನೆ ಬೃಹತ್ ಸೌಹಾರ್ದ ಇಫ್ತಾರ್ ಕೂಟ ಏರ್ಪಡಿಸಲಾಗಿತ್ತು. ಸುಮಾರು 450 ಜನರು ಜಾತಿ ಧರ್ಮದ ಭೇದವನ್ನು ಮರೆತು ಈ ಇಫ್ತಾರ್ ಕೂಟದಲ್ಲಿ ಭಾಗವಹಿಸಿದ್ದರು....

ದಕ್ಷಿಣ ಕನ್ನಡ | ಅಪ್ರಾಪ್ತ ದಲಿತ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ: ಬಿಜೆಪಿ ಮುಖಂಡನ ವಿರುದ್ಧ ದೂರು ದಾಖಲು

ಅಪ್ರಾಪ್ತ ದಲಿತ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದ ಮೇಲೆ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದ ಬಿಜೆಪಿ ಮುಖಂಡನ ಮೇಲೆ ಪೊಲೀಸರು ಪೋಕ್ಸೋ ಪ್ರಕರಣ ದಾಖಲಿಸಿದ್ದಾರೆ. ಎಸ್‌ಎಸ್‌ಎಲ್‌ಸಿ ಓದುತ್ತಿದ್ದ ಬಾಲಕಿ ಮೇಲೆ ಲೈಂಗಿಕ...

ಮಂಗಳೂರು | ನಿವೇಶನರಹಿತರ ಕುರಿತು ನಿರ್ಲಕ್ಷ್ಯ; ಶಾಸಕ ಕಾಮತ್ ರಾಜೀನಾಮೆಗೆ ಸುನಿಲ್ ಬಜಾಲ್ ಆಗ್ರಹ

ಬಡವರ ಕಿಂಚಿತ್ತೂ ಕಾಳಜಿ ಇಲ್ಲದ ಶಾಸಕ ವೇದವ್ಯಾಸ ಕಾಮತ್‌ ಕೂಡಲೇ ರಾಜಿನಾಮೆ ನೀಡಬೇಕು ಎಂದು ಭಾರತ ಕಮ್ಯುನಿಸ್ಟ್‌ ಪಕ್ಷ (ಮಾರ್ಕ್ಸ್‌ವಾದ)ದ ದಕ್ಷಿಣ ಕನ್ನಡ ಜಿಲ್ಲಾ ಕಾರ್ಯದರ್ಶಿ ಸುನಿಲ್‌ ಕುಮಾರ್‌ ಬಜಾಲ್‌ ಆಗ್ರಹಿಸಿದರು. ನಿವೇಶನರಹಿತರಿಗೆ ನಿವೇಶನ...

ಉಳ್ಳಾಲ | ನಿರುದ್ಯೋಗ ನಿವಾರಣೆಯಿಂದ ಸೌಹಾರ್ದ ಭಾರತ ನಿರ್ಮಾಣ ಸಾಧ್ಯ: ಡಾ.ಗಣನಾಥ ಶೆಟ್ಟಿ

ಸಾಮಾನ್ಯ ಜನರು ಉದ್ಯೋಗವನ್ನು ಪಡೆಯಲು‌ ಹರಸಾಹಸ ಪಡುತ್ತಿದ್ದಾರೆ. ಸಾಮಾಜಿಕ ಪಿಡುಗಾಗಿರುವ ನಿರುದ್ಯೋಗವನ್ನು ನಿವಾರಿಸುವುದರಿಂದ ಸೌಹಾರ್ದ ಭಾರತವನ್ನು ನಿರ್ಮಾಣ ಮಾಡಲು ಸಾಧ್ಯ ಎಂದು ಜನಪದ ವಿದ್ವಾಂಸ, ಸಾಹಿಗಳಾದ ಡಾ.ಗಣನಾಥ ಶೆಟ್ಟಿ ಎಕ್ಕಾರು ಅಭಿಪ್ರಾಯಪಟ್ಟರು. ಸ್ವಾತಂತ್ರ್ಯ ಚಳುವಳಿಯ...

ಸೌಜನ್ಯ ಪ್ರಕರಣ | ಓದುಗರಿಗೆ ದ್ರೋಹ ಬಗೆಯದಿರಿ: ‘ಉದಯವಾಣಿ’ಗೆ ನಾಗರಿಕ ಸೇವಾ ಟ್ರಸ್ಟ್ ಪತ್ರ

ಸೌಜನ್ಯ ಪ್ರಕರಣ ಮತ್ತು ಧರ್ಮಸ್ಥಳಕ್ಕೆ ಸಂಬಂಧಿಸಿದ ಹಲವಾರು ಸುದ್ದಿಗಳನ್ನು ದಾಖಲೆ ಸಮೇತವಾಗಿ ಕಳುಹಿಸಿದರೂ 'ಉದಯವಾಣಿ' ಪತ್ರಿಕೆ ಒಂದೂ ಸುದ್ದಿಯನ್ನೂ ಪ್ರಕಟಿಸಿಲ್ಲ ಎಂದು ನಾಗರಿಕ ಸೇವಾ ಟ್ರಸ್ಟ್‌ ಆರೋಪಿಸಿದೆ. 'ಉದಯವಾಣಿ' ಪತ್ರಿಕೆಯು ಓದುಗರಿಗೆ ದ್ರೋಹ...

ಸೌಜನ್ಯ ಪ್ರಕರಣ: ಓದುಗರಿಗೆ ದ್ರೋಹ ಬಗೆದ ‘ಹೆಗ್ಗಡೆವಾಣಿ’ಗೆ ನಾಗರಿಕ ಸೇವಾ ಟ್ರಸ್ಟ್ ಪತ್ರ

ಸೌಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ, ಧರ್ಮಸ್ಥಳಕ್ಕೆ ಸಂಬಂಧಿಸಿದಂತೆ ದಾಖಲೆ ಸಮೇತವಾಗಿ ಸುದ್ದಿ ಕಳುಹಿಸಿದರೂ ಕೂಡಾ ಪ್ರಕಟಿಸದೆ ಉದಯವಾಣಿ ಪತ್ರಿಕೆಯು ಓದುಗರಿಗೆ ದ್ರೋಹ ಬರೆಯುತ್ತಿದೆ. ಪತ್ರಿಕೆಯ ಹೆಸರ ಪಕ್ಕದಲ್ಲೇ 'ಹೆಗ್ಗಡೆವಾಣಿ' ಎಂದು ಬರೆಯಬಹುದು ಎಂದು ನಾಗರಿಕ...

ಮಂಗಳೂರು ವಿವಿಯಲ್ಲಿ ಜೈವಿಕ ವಿಜ್ಞಾನದ ಇತ್ತೀಚಿನ ಪ್ರವೃತ್ತಿಗಳ ಕುರಿತ ಕಾರ್ಯಾಗಾರ

ಮಂಗಳೂರು ವಿಶ್ವವಿದ್ಯಾನಿಲಯದ ಅನ್ವಯಿಕ ಪ್ರಾಣಿಶಾಸ್ತ್ರ ವಿಭಾಗ ಇತ್ತೀಚೆಗೆ ವಿಶ್ವವಿದ್ಯಾಲಯದ 'ಜೈವಿಕ ವಿಜ್ಞಾನದ ಇತ್ತೀಚಿನ ಪ್ರವೃತ್ತಿಗಳು (ಎನ್‌ಸಿಟಿಆರ್‌ಬಿಎಸ್‌- 2025)' ಕುರಿತ ಎರಡು ದಿನಗಳ ರಾಷ್ಟ್ರೀಯ ಕಾರ್ಯಾಗಾರವನ್ನು ಆಯೋಜಿಸಿತ್ತು. ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಕೇರಳದ ಕೇಂದ್ರೀಯ ವಿಶ್ವವಿದ್ಯಾಲಯದ...

ಮಂಗಳೂರು | ಸಾರ್ವಜನಿಕರ ಗಮನ ಸೆಳೆಯುತ್ತಿರುವ ಹಾಲಿವುಡ್ ಲ್ಯಾಂಡ್ ಮಾರ್ಕ್ ಮಾದರಿಯ THUMBAY ಲ್ಯಾಂಡ್ ಮಾರ್ಕ್‌

ಅಮೇರಿಕಾದ ಲಾಸ್ ಏಂಜಲೀಸ್‌ನಲ್ಲಿರುವ ಎತ್ತರ ಬೆಟ್ಟದ ಮೇಲೆ ಸ್ಥಾಪಿಸಲಾಗಿರುವ ಹಾಲಿವುಡ್ ಲ್ಯಾಂಡ್ ಮಾರ್ಕ್ ಮಾದರಿಯಲ್ಲೇ ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ಸಮೀಪದಲ್ಲಿರುವ ತುಂಬೆ ಪ್ರದೇಶದಲ್ಲಿ THUMBAY ಲ್ಯಾಂಡ್ ಮಾರ್ಕ್‌ ನಿರ್ಮಿಸಲಾಗಿದ್ದು, ಸಾರ್ವಜನಿಕರ ಗಮನ...

ಮಂಗಳೂರು | ಬಿಜೆಪಿ ನೇತೃತ್ವದ ಭಾರತದಲ್ಲಿ ಯುವಜನರ ಆಶೋತ್ತರ ಕಡೆಗಣನೆ: ಸುನೀಲ್ ಕುಮಾರ್ ಬಜಾಲ್

ಭಾರತ ದೇಶದಲ್ಲಿಂದು ನಿರುದ್ಯೋಗದ ಪ್ರಮಾಣ ವಿಪರೀತವಾಗಿ ಏರಿಕೆಯಾಗಿದೆ. ಬಡತನ, ಹಸಿವು, ಅಸ್ಪ್ರಶ್ಯತೆ, ಮತೀಯವಾದದ ಸಾಗಿರುವಂತಹ ಭಾರತವನ್ನು ಭಗತ್ ಸಿಂಗ್ ಬಯಸಿರಲಿಲ್ಲ. ಕೇಂದ್ರದಲ್ಲಿ ಆಳುವ ಬಿಜೆಪಿ ನೇತೃತ್ವದ ಭಾರತದಲ್ಲಿ ಯುವಜನರ ಆಶೋತ್ತರಗಳನ್ನು ಕಡೆಗಣಿಸಲಾಗಿದೆ ಎಂದು...

ಯುವಜನರು ಭಗತ್ ಸಿಂಗ್ ಆಶಯ ಮೈಗೂಡಿಸಿಕೊಂಡು ಸೌಹಾರ್ದ ಪರಂಪರೆಯ ಎತ್ತಿ ಹಿಡಿಯಬೇಕು: ಸುನೀಲ್ ಕುಮಾರ್ ಬಜಾಲ್

ಭಗತ್ ಸಿಂಗ್ ಆಶಯವನ್ನು ಯುವಜನರು ಮೈಗೂಡಿಸಿಕೊಳ್ಳುವ ಮೂಲಕ ಸೌಹಾರ್ದ ಪರಂಪರೆಯ ಎತ್ತಿ ಹಿಡಿಯಬೇಕು ಎಂದು ಭಾರತ ಪ್ರಜಾಸತಾತ್ಮಕ ಯುವಜನ ಫೆಡರೇಶನ್ (ಡಿವೈಎಫ್‌ಐ) ಮಾಜಿ ರಾಜ್ಯ ಮುಖಂಡ ಸುನೀಲ್ ಕುಮಾರ್ ಬಜಾಲ್ ಹೇಳಿದ್ದಾರೆ. ಡಿವೈಎಫ್‌ಐ ಜಿಲ್ಲಾ...

ಧರ್ಮಸ್ಥಳ | ಕಾಡಿನ ಮಧ್ಯೆ ನಾಲ್ಕು ತಿಂಗಳ ಹೆಣ್ಣುಮಗು ಪತ್ತೆ

ಧರ್ಮಸ್ಥಳ ಪೊಲೀಸ್ ಠಾಣಾ ವ್ಯಾಪ್ತಿಯ ಬೆಳಾಲು ಗ್ರಾಮದ ಕೊಡೋಳುಕೆರೆ ಎಂಬಲ್ಲಿ ಕಾಡಿನ ಮಧ್ಯೆ ನಾಲ್ಕು ತಿಂಗಳ ಹೆಣ್ಣುಮಗು ಪತ್ತೆಯಾಗಿರುವ ಘಟನೆ ಶನಿವಾರ ನಡೆದಿದ್ದು, ಶಿಶು ಆರೋಗ್ಯವಾಗಿದೆ ಎಂದು ತಿಳಿದುಬಂದಿದೆ. ದಕ್ಷಿಣ ಕನ್ನಡ...

ಈ ಹೊತ್ತಿನ ಪ್ರಮುಖ ಸುದ್ದಿ