ದಕ್ಷಿಣ ಕನ್ನಡ

ದಕ್ಷಿಣ ಕನ್ನಡ | ಬಾಲ್ಯ ವಿವಾಹ; ಐವರಿಗೆ ಒಂದು ವರ್ಷ ಕಠಿಣ ಜೈಲು ಶಿಕ್ಷೆ

ದಕ್ಷಿಣ ಕನ್ನಡ ಜಿಲ್ಲೆಯ ಉಳ್ಳಾಲ ತಾಲ್ಲೂಕು ವ್ಯಾಪ್ತಿಯಲ್ಲಿ ನಡೆದಿದ್ದ ಬಾಲ್ಯ ವಿವಾಹ ಪ್ರಕರಣ ಒಂದರಲ್ಲಿ ಬಾಲಕಿಯ ಪತಿ, ತಂದೆ-ತಾಯಿ ಮತ್ತು ಅತ್ತೆ-ಮಾವ ಸೇರಿ ಒಟ್ಟು ಐವರಿಗೆ ಒಂದು ವರ್ಷ ಕಠಿಣ ಜೈಲು ಶಿಕ್ಷೆ...

ದಕ್ಷಿಣ ಕನ್ನಡ | ₹10 ಸಾವಿರ ಲಂಚಕ್ಕೆ ಬೇಡಿಕೆ, ಕಡಬ ಪಿಡಿಒಗೆ 3 ವರ್ಷ ಜೈಲು ಶಿಕ್ಷೆ

2019ರಲ್ಲಿ ಭೂಮಿ ದಾಖಲೆ ವರ್ಗಾವಣೆ ಮಾಡುವ ಸಲುವಾಗಿ ಲಂಚ ಸ್ವೀಕರಿಸುತ್ತಿದ್ದ ವೇಳೆ ಭ್ರಷ್ಟಾಚಾರ ನಿಗ್ರಹ ದಳದವರಿಂದ ರೆಡ್‌ಹ್ಯಾಂಡ್ ಆಗಿ ಬಂಧಿಸಲ್ಪಟ್ಟ ದಕ್ಷಿಣ ಕನ್ನಡ ಜಿಲ್ಲೆಯ ಕಡಬ ಗ್ರಾಮ ಪಂಚಾಯತಿ​ ಅಭಿವೃದ್ಧಿ ಅಧಿಕಾರಿಯೊಬ್ಬರಿಗೆ ನ್ಯಾಯಾಲಯ...

ವರ್ಷಗಳ ತಿಕ್ಕಾಟಕ್ಕೆ ಮುಕ್ತಿ: ಮಂಗಳೂರಿನಿಂದ ಕಾರ್ಕಳ, ಮೂಡಬಿದ್ರಿ ಮಾರ್ಗಕ್ಕೆ ಕೆಎಸ್‌ಆರ್‌ಟಿಸಿ ಬಸ್‌ ಸೇವೆ ಆರಂಭ

ಹಲವಾರು ವರ್ಷಗಳ ತಿಕ್ಕಾಟದ ತರುವಾಯ ಕೊನೆಗೂ ಮಂಗಳೂರಿನಿಂದ ಮೂಡಬಿದ್ರೆ ಮಾರ್ಗವಾಗಿ ಕಾರ್ಕಳಕ್ಕೆ ಕೆಎಸ್‌ಆರ್‌ಟಿಸಿ ಬಸ್ಸು ಸಂಚರಿಸಲು ಪ್ರಾರಂಭವಾಗಿದೆ. ಮಂಗಳೂರಿನಿಂದ ಪ್ರಾರಂಭವಾದ ಬಸ್ಸು ಈಗಾಗಲೇ ಪ್ರತಿದಿನವೂ ಐದು ಟ್ರಿಪ್‌ಗಳನ್ನು ಮುಗಿಸುತ್ತಿದ್ದು, ಸಾರ್ವಜನಿಕರ ಸ್ಪಂದನೆಯೂ ಕೂಡ ಉತ್ತಮವಾಗಿದೆ...

ಮಂಗಳೂರು | ಹೈಕೋರ್ಟ್ ಪೀಠ ಸ್ಥಾಪಿಸಲು ಆಗ್ರಹಿಸಿ ವಕೀಲರ ಸಂಘದಿಂದ ಹಕ್ಕೊತ್ತಾಯ

ಕರಾವಳಿ, ಮಲೆನಾಡು ಭಾಗದ ಜನರಿಗೆ ತ್ವರಿತ ನ್ಯಾಯ ಸಿಗಲು ಮಂಗಳೂರಿನಲ್ಲಿ ಹೈಕೋರ್ಟ್ ಪೀಠ ಸ್ಥಾಪಿಸಬೇಕೆಂದು ವಕೀಲರ ಸಂಘ ಹಕ್ಕೊತ್ತಾಯ ಮಾಡಿದೆ. ಮಂಗಳೂರಿನ ವಕೀಲರ ಸಂಘದ ಕಚೇರಿಯಲ್ಲಿ ಮಂಗಳೂರು ಬಾರ್ ಅಸೋಸಿಯೇಷನ್ ಅಧ್ಯಕ್ಷ ಎಚ್.ವಿ.ರಾಘವೇಂದ್ರ ಈ...

ಮಂಗಳೂರು | ಅಸ್ಪೃಶ್ಯತೆ, ಅಸಮಾನತೆ ಜೀವಂತವಾಗಿರಿಸಿರುವುದೇ ಆರ್‌ಎಸ್‌ಎಸ್‌ ಸಾಧನೆ: ಯೋಗೇಶ್ ಜಪ್ಪಿನಮೊಗರು

ಅಸ್ಪೃಶ್ಯತೆ, ಅಸಮಾನತೆ ಜೀವಂತವಾಗಿರಿಸಿರುವುದೇ ಆರ್‌ಎಸ್‌ಎಸ್‌ನ 100 ವರ್ಷದ ಸಾಧನೆ ಎಂದು ದಲಿತ ಹಕ್ಕುಗಳ ಸಮಿತಿಯ ಮಾರ್ಗದರ್ಶಕರಾದ ಯೋಗೇಶ್ ಜಪ್ಪಿನಮೊಗರು ಅಭಿಪ್ರಾಯಿಸಿದರು. ಮಂಗಳೂರು ನಗರದ ತಣ್ಣೀರುಬಾವಿಯಲ್ಲಿ ನಡೆದ ದಲಿತ ಚೈತನ್ಯ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದ ಅವರು,...

ರಾಜ್ಯದ ‘ಗಾಳಿಬೀಡು’ ಗ್ರಾಮ ಪಂಚಾಯಿತಿ & ‘ಉಡುಪಿ’ ಜಿಲ್ಲಾ ಪಂಚಾಯಿತಿಗೆ ರಾಷ್ಟ್ರೀಯ ಪ್ರಶಸ್ತಿ

ಬಡತನ ಮುಕ್ತ ಮತ್ತು ಜೀವನೋಪಾಯ ಅಭಿವೃದ್ಧಿ ವಿಷಯದಲ್ಲಿ ದೇಶಕ್ಕೆ 'ಗಾಳಿಬೀಡು' ಗ್ರಾ.ಪಂ. ಪ್ರಥಮ ಸ್ಥಾನ 9 ವಿಷಯಗಳನ್ನು ಗ್ರಾ.ಪಂ ಮಟ್ಟದಲ್ಲಿ ಅನುಷ್ಠಾನ ಮಾಡಿದ್ದಕ್ಕೆ ಉಡುಪಿ ಜಿಲ್ಲಾ ಪಂಚಾಯಿತಿಗೆ ಮೂರನೇ ಸ್ಥಾನ ಬಡತನ ಮುಕ್ತ ಮತ್ತು ಜೀವನೋಪಾಯ...

ಮಂಗಳೂರು | ಪೊಲೀಸರಿಂದ ನೆಮ್ಮದಿಯೇ ಇಲ್ಲದಾಗ ನಿದ್ದೆ ಎಲ್ಲಿಂದ ಸಭಾಪತಿಗಳೇ – ಸುನೀಲ್ ಕುಮಾರ್ ಬಜಾಲ್

ಮಂಗಳೂರಿನ ಪೊಲೀಸ್ ಕಮೀಷನರ್ ಕಾನೂನುಬಾಹಿರವಾಗಿ ನಡೆಯುತ್ತಿದ್ದರೂ ಅವರನ್ನು ಕಣ್ಣು ಮುಚ್ಚಿ ಸಮರ್ಥಿಸುತ್ತಿರುವ ಮಾನ್ಯ ಸಭಾಪತಿಗಳು ಉತ್ತರಿಸಬೇಕು. ಜಿಲ್ಲೆಯೆಲ್ಲೆಡೆ ಪೊಲೀಸರಿಂದ ನೆಮ್ಮದಿಯೇ ಇಲ್ಲದೇ ಇರುವಾಗ ಇನ್ನು ನಿದ್ದೆ ಎಲ್ಲಿಂದ ಸ್ವಾಮಿ ಎಂದು ಸಿಪಿಐಎಂ ಉಳ್ಳಾಲ...

ಮಂಗಳೂರು | ಪ್ರತಿಭಟನೆಯಲ್ಲಿ ಸಂಘಪರಿವಾರ ಕಾರ್ಯಕರ್ತರ ಪುಂಡಾಟ; ಪತ್ರಕರ್ತರ ಮೇಲೆ ಹಲ್ಲೆ

ಬಾಂಗ್ಲಾದೇಶದಲ್ಲಿ ಹಿಂದುಗಳ ಮೇಲೆ ದೌರ್ಜನ್ಯ ನಡೆಯುತ್ತಿದೆ ಎಂದು ಆರೋಪಿಸಿ ಮಂಗಳೂರಿನಲ್ಲಿ ನಡೆದ ಪ್ರತಿಭಟನೆಯಲ್ಲಿ ಸಂಘಪರಿವಾರದ ಕಾರ್ಯಕರ್ತರು ದಾಂಧಲೆ ನಡೆಸಿದ್ದಾರೆ. ವರದಿಗೆ ತೆರಳಿದ್ದ ಪತ್ರಕರ್ತರ ಮೇಲೆ ಹಲ್ಲೆ ನಡೆಸಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರಿನಲ್ಲಿ...

ದಕ್ಷಿಣ ಕನ್ನಡ | ಕಳಪೆ ಗುಣಮಟ್ಟದ ಫರ್ನಿಚರ್ ಪೂರೈಕೆ; ಕಾರ್ಪೆಂಟರ್‌ಗೆ ₹20,000 ದಂಡ ವಿಧಿಸಿದ ನ್ಯಾಯಾಲಯ

ಗ್ರಾಹಕನಿಗೆ ಕಳಪೆ ಗುಣಮಟ್ಟದ ಫರ್ನಿಚರ್‌ ತಯಾರಿಸಿ ಕೊಟ್ಟು ವಂಚಿಸಿದ ವಿಟ್ಲ ಸಮೀಪದ ಕಲ್ಲಂಗಲದ ಪ್ರೀತಿ ಫರ್ನಿಚರ್‌ ಮಾಲಕ ಸಂಜಯ್‌ ಕುಮಾರ್‌ಗೆ ₹2೦,೦೦೦ ದಂಡ ವಿಧಿಸಿ ದಕ್ಷಿಣ ಕನ್ನಡದ ಮಂಗಳೂರು ಜಿಲ್ಲಾ ಗ್ರಾಹಕರ ನ್ಯಾಯಾಲಯ...

ಮಂಗಳೂರು | ಫೆಂಗಲ್ ಚಂಡಮಾರುತ, ಮಂಗಳವಾರ ಸಂಜೆಯವರೆಗೆ ಮಳೆಯ ಅಬ್ಬರ

ಫೆಂಗಲ್ ಚಂಡಮಾರುತ ರಾತ್ರಿ ವೇಳೆ‌ಗೆ ಪಶ್ಚಿಮ ಭಾಗದಲ್ಲಿ ಕಾಣಿಸಿಕೊಂಡಿದ್ದು, ದ.ಕ ಜಿಲ್ಲೆಯಲ್ಲಿ ಭಾರಿ ಮಳೆ ಸುರಿಯುತ್ತಿದೆ. ಫೆಂಗಲ್ ಚಂಡಮಾರುತ ಸದ್ಯ ಪಶ್ಚಿಮ ಕರಾವಳಿ ಭಾಗದ ಅರಬ್ಬಿ ಸಮುದ್ರದಲ್ಲಿ ಇದ್ದು, ಬಳಿಕ ಇದು ಸಮುದ್ರ ಮಧ್ಯೆಗೆ...

ದಕ್ಷಿಣ ಕನ್ನಡ | ‘ಬಹುಸಂಸ್ಕೃತಿ ಉತ್ಸವ’ ಮುಂದೂಡಿಕೆ

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹಮ್ಮಿಕೊಂಡಿದ್ದ 'ಬಹುಸಂಸ್ಕೃತಿ ಉತ್ಸವ' ಕಾರ್ಯಕ್ರಮವನ್ನು ಮುಂದೂಡಿರುವುದಾಗಿ ಜಿಲ್ಲಾಡಳಿತದ ಪ್ರಕಟಣೆಯಲ್ಲಿ ತಿಳಿಸಿದೆ. "ಮಂಗಳೂರಿನ ಪುರಭವನದಲ್ಲಿ ಡಿಸೆಂಬರ್ 3 ಮತ್ತು 4ರಂದು ಹಮ್ಮಿಕೊಂಡಿದ್ದ "ಬಹುಸಂಸ್ಕೃತಿ ಉತ್ಸವ' ಕಾರ್ಯಕ್ರಮವನ್ನು ಫೆಂಗಲ್‌ ಚಂಡಮಾರುತದಂತಹ ಪ್ರಕೃತಿ ವಿಕೋಪದ...

ಮಂಗಳೂರು ಕಮಿಷನರ್ ಅನುಪಮ್ ಅಗ್ರವಾಲ್ ಹೆದ್ದಾರಿಯ ಗುತ್ತಿಗೆದಾರರೇ: ನಿತಿನ್ ಕುತ್ತಾರ್ ಪ್ರಶ್ನೆ

ಮಂಗಳೂರಿನಲ್ಲಿ ಪ್ರತಿಭಟನೆಗಳಿಗೆ ಅನುಮತಿ ನೀಡಲು ಮಂಗಳೂರು ಪೊಲೀಸ್ ಕಮಿಷನರ್ ಅನುಪಮ್ ಅಗ್ರವಾಲ್ ಯಾಕೆ ಹೆದರುತ್ತಿದ್ದಾರೆ? ಅಗ್ರವಾಲ್ ಏನಾದರೂ ಹೆದ್ದಾರಿಯ ಗುತ್ತಿಗೆ ತೆಗೆದು ಭ್ರಷ್ಟಾಚಾರ ಮಾಡಿದ್ದಾರೆಯೇ ಎಂದು ಡಿವೈಎಫ್ಐ ಉಳ್ಳಾಲ ತಾಲೂಕು ಅಧ್ಯಕ್ಷ, ನ್ಯಾಯವಾದಿ...

ಈ ಹೊತ್ತಿನ ಪ್ರಮುಖ ಸುದ್ದಿ