ಧಾರವಾಡ

ಧಾರವಾಡ | ನ್ಯಾನೊ ರಸಗೊಬ್ಬರ ಬಳಕೆ ಹೆಚ್ಚುತ್ತಿದ್ದು, ಕಾಳುಗೊಬ್ಬರ ಮಿತವಾಗಿ ಬಳಸಿ: ಜಿಲ್ಲಾಧಿಕಾರಿ ಸೂಚನೆ

ಧಾರವಾಡ ಜಿಲ್ಲೆಯಲ್ಲಿ ಮುಂಗಾರು ಪೂರ್ವ ಮತ್ತು ಮುಂಗಾರಿನಲ್ಲಿ ಉತ್ತಮ ಮಳೆಯಾಗಿದ್ದು, ಈವರೆಗೆ 2.81 ಲಕ್ಷ ಹೆಕ್ಟೇ ರ್ ಪ್ರದೇಶದ ಬಿತ್ತನೆ ಗುರಿಗೆ 2.91 ಲಕ್ಷ ಹೆಕ್ಟೇರ್ ಪ್ರದೇಶ (ಶೇ. 103.46ದಲ್ಲಿ) ಬಿತ್ತನೆಯಾಗಿದೆ. ಸಮಪರ್ಕವಾಗಿ...

ಧಾರವಾಡ | ನಿವೃತ್ತಿ ಅನಿವಾರ್ಯವಾಗಿದೆ: ಬಶೀರ್ ಅಹ್ಮದ್ ಜಹಗೀರದಾರ್

ವೃತ್ತಿಯಿಂದ ನಿವೃತ್ತಿ ಅನಿವಾರ್ಯವಾಗಿದ್ದು, ನಿವೃತ್ತಿಯವರೆಗೆ ದುಡಿಯುವದೂ ಅನಿವಾರ್ಯ ಎಂದು ಅಂಜುಮನ್ ಸಂಸ್ಥೆಯ ಉಪಾಧ್ಯಕ್ಷ ಬಶೀರ್ ಅಹ್ಮದ್ ಜಹಗೀರದಾರ್ ಹೇಳಿದರು. ಸಂಖ್ಯಾಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ. ನಾಗರಾಜ ಗುದಗನವರ ಮತ್ತು ಹೆಚ್ ಕೆ ನಾಯಕವಾಡಿ ಜುಲೈ...

ಅರಣ್ಯದಲ್ಲಿ ಸಾಕು ಪ್ರಾಣಿಗಳ ಮೇಯಿಸುವಿಕೆ ನಿರ್ಬಂಧಕ್ಕೆ ವಿರೋಧ; ಕುಂದಗೋಳದಲ್ಲಿ ರೈತ ಸಂಘ ಪ್ರತಿಭಟನೆ

ಎಲ್ಲ ಅರಣ್ಯ ಪ್ರದೇಶದೊಳಗೆ ಸಾಕು ಪ್ರಾಣಿಗಳನ್ನು ಮೇಯಿಸುವುದನ್ನು ನಿರ್ಬಂಧಿಸಿರುವುದು ಮತ್ತು ನಿಷೇಧಿಸಿರುವುದನ್ನು ಖಂಡಿಸಿ ರಾಜ್ಯ ರೈತ ಸಂಘ ಹಾಗೂ ಸಾಂಪ್ರದಾಯಿಕ ಕುರಿಗಾಹಿಗಳ ಹಿತರಕ್ಷಣಾ ಸಮಿತಿ ಪ್ರತಿಭಟನೆ ನಡೆಸಿದವು. ಧಾರವಾಡದ ಕುಂದಗೋಳ ಪಟ್ಟಣದಲ್ಲಿ ಕುರಿಗಳೊಂದಿಗೆ...

ಧಾರವಾಡ | ದೃಶ್ಯಕಲಾ ಸ್ನಾತಕ ಪದವಿ ಪ್ರವೇಶಕ್ಕೆ ಅರ್ಜಿ ಆಹ್ವಾನ

ಮೈಸೂರು ಚಾಮರಾಜೇಂದ್ರ ಸರ್ಕಾರಿ ದೃಶ್ಯಕಲಾ ಕಾಲೇಜು (ಕಾವಾ) ಸಂಸ್ಥೆಯಲ್ಲಿ ಪ್ರಥಮ ಬಿವಿಎ ಸ್ನಾತಕ ಪದವಿಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳಿಂದ ಮಾಸ್ಟರ್ ಆಫ್ ವಿಜ್ಯುಯಲ್ ಆಟ್ಸ್ (ಎಂವಿಎ) ದೃಶ್ಯ ಕಲೆಯಲ್ಲಿ 2025-26ನೇ ಶೈಕ್ಷಣಿಕ ಸಾಲಿಗೆ ಪ್ರಥಮ...

ಧಾರವಾಡ | ಆಗಸ್ಟ್ 1 ರಂದು ವ್ಯಸನಮುಕ್ತ ದಿನಾಚರಣೆ

ಡಾ. ಮಹಾಂತ ಶಿವಯೋಗಿಗಳ ಜನ್ಮದಿನದ ಅಂಗವಾಗಿ ಆಗಸ್ಟ್‌ 1ರಂದು, ಧಾರವಾಡ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಾನಗರ ಪೊಲೀಸ್ ಆಯುಕ್ತಾಲಯ, ಜಿಲ್ಲಾ ಪೊಲೀಸ್ ಇಲಾಖೆ, ಡಿಮ್ಹಾನ್ಸ್ ಹಾಗೂ ವಿವಿಧ ಇಲಾಖೆಗಳ ಸಂಯುಕ್ತ ಆಶ್ರಯದಲ್ಲಿ ಕರ್ನಾಟಕ...

ಧಾರವಾಡ | ಯೂರಿಯಾ ಗೊಬ್ಬರಕ್ಕೆ ಪರ್ಯಾಯವಾಗಿ ‘ನ್ಯಾನೊ ಯೂರಿಯಾ’ ಬಳಸಲು ಜಿಲ್ಲಾಧಿಕಾರಿ ಸೂಚನೆ

ರೈತರಿಗೆ ಶಿಫಾರಸು ಮಾಡಿದ ಪ್ರಮಾಣಕ್ಕಿಂತ ಹೆಚ್ಚಿನ ರಸಗೊಬ್ಬರವನ್ನು ಬಳಸದಂತೆ ಜಾಗೃತಿ ಮೂಡಿಸಲು ಹಾಗೂ ಯೂರಿಯಾ ರಸಗೊಬ್ಬರಕ್ಕೆ ಪರ್ಯಾಯವಾಗಿರುವ ನವೀನ ತಾಂತ್ರಿಕತೆಯಾದ ʼನ್ಯಾನೊ ಯೂರಿಯಾʼ ಬಳಕೆ ಮಾಡುವಂತೆ ರೈತರಲ್ಲಿ ಅರಿವು ಮೂಡಿಸಲು ಹೆಚ್ಚಿನ ಪ್ರಚಾರಕೈಗೊಳ್ಳಲು...

ಧಾರವಾಡ | ಭೂಗೋಳಶಾಸ್ತ್ರ ವಿಷಯದತ್ತ ಎಲ್ಲರ ಚಿತ್ತ ಹೊರಳಬೇಕು: ಡಾ. ಐ ಎ ಮುಲ್ಲಾ

ಭೂಗೋಳಶಾಸ್ತ್ರ ಕೇವಲ ಒಂದು ವಿಷಯವಲ್ಲ, ಅದು ನಿರಂತರವಾದ ಅಭ್ಯಾಸವಾಗಿದೆ. ಭೂಗೋಳಶಾಸ್ತ್ರ ವಿಷಯದತ್ತ ಅನೇಕ ವಿಷಯಗಳ ಜತೆಗೆ ಭೂಗೋಳ ಶಾಸ್ತ್ರದ ನಂಟು ಬೆಳೆದುಕೊಂಡಿರುವುದರಿಂದ ಭೂಗೋಳ ಶಾಸ್ತ್ರಕ್ಕೆ ಹೆಚ್ಚಿನ ಮಹತ್ವವನ್ನು ನೀಡಬೇಕು. ಎಲ್ಲರ ಚಿತ್ತ ಹೊರಳಬೇಕು...

ಧಾರವಾಡ | ಮಕ್ಕಳಲ್ಲಿನ ಪ್ರತಿಭೆ ಅನಾವರಣಕ್ಕೆ ‘ಚಿಗುರು’ ಉತ್ತಮ ವೇದಿಕೆ: ರಾಜು ತಾಳಿಕೋಟೆ

ಇಂದಿನ ಮಕ್ಕಳಲ್ಲಿನ ಪ್ರತಿಭೆ ಹೊರತರುವ ಕಾರ್ಯ ಮಾಡಬೇಕಿರುವುದು ಅತ್ಯವಶ್ಯವಾಗಿದ್ದು, ಆ ಹಿನ್ನೆಲೆಯಲ್ಲಿ ಚಿಗುರು ವೇದಿಕೆ ಈ ಕಾರ್ಯ ಮಾಡುತ್ತಿರುವುದು ಶ್ಲಾಘನೀಯ ಎಂದು ಧಾರವಾಡ ರಂಗಾಯಣ ನಿರ್ದೇಶಕ ಡಾ. ರಾಜು ತಾಳಿಕೋಟೆ ಹೇಳಿದರು. ತಾಲೂಕಿನ ಕಲಕೇರಿ...

ಧಾರವಾಡ ಜಿಲ್ಲಾ ಕೋರ್ಟ್‌ ಸಂಕೀರ್ಣಗಳಲ್ಲಿ ಸ್ವಚ್ಚತಾ ಕಾರ್ಯಕ್ಕೆ ಟೆಂಡರ್‌: ಏಜನ್ಸಿಗಳಿಂದ ಅರ್ಜಿ ಆಹ್ವಾನ

ಧಾರವಾಡ ಜಿಲ್ಲಾ ಕೋರ್ಟ್‌ ಸಂಕೀರ್ಣ ಸೇರಿದಂತೆ ಕುಂದಗೋಳ, ಕಲಘಟಗಿ, ನವಲಗುಂದ ನ್ಯಾಯಾಲಯ ಸಂಕೀರ್ಣಗಳಲ್ಲಿ ಸ್ವಚ್ಚತಾ ಕಾರ್ಯ ನಿರ್ವಹಿಸುವುದಕ್ಕಾಗಿ ಮಾನವ ಸಂಪನ್ಮೂಲ ಒದಗಿಸಲು, ಮಾನವ ಸಂಪನ್ಮೂಲ ಏಜನ್ಸಿಗಳಿಂದ ಟೆಂಡರ್ ಅರ್ಜಿ ಆಹ್ವಾನಿಸಲಾಗಿದೆ. ಸೀಲ್ ಬಂದ್‌ ಮಾಡಿದ...

ಧಾರವಾಡ | ಸರ್ಕಾರದ ನಿರ್ಲಕ್ಷ್ಯದಿಂದ ಅನಾಥವಾದ ಗಂಗೂಬಾಯಿ ಹಾನಗಲ್ ವಾಸವಿದ್ದ ಮನೆ

ಜನಪ್ರಿಯ ಹಿಂದೂಸ್ಥಾನಿ ಸಂಗೀತಗಾರ್ತಿ ಗಂಗೂಬಾಯಿ ಹಾನಗಲ್ ಎಂದೇ ಖ್ಯಾತಿಯಾದ, ಕರ್ನಾಟಕ ವಿಧಾನ ಪರಿಷತ್ತಿಗೆ ನಾಮಕರಣಗೊಂಡು ಸದಸ್ಯೆಯಾಗಿದ್ದ, ಗಂಗೂಬಾಯಿಯವರು ವಾಸವಿದ್ದ ಮನೆ ಈಗ ಸರ್ಕಾರದ ನಿರ್ಲಕ್ಷ್ಯಕ್ಕೆ ಒಳಗಾಗಿರುವುದು ಮೇಲ್ನೋಟಕ್ಕೆ ಎದ್ದುಕಾಣುತ್ತಿದೆ. ಸಂಗೀತ ವಿದ್ಯಾಲಯವನ್ನು ಸ್ಥಾಪನೆ...

ಧಾರವಾಡ | ಕೆಲಸಕ್ಕಾಗಿ ಗ್ರಾಮೀಣ ಕೂಲಿ ಕಾರ್ಮಿಕರ ಪರದಾಟ: ಒಂದು ವರ್ಷದಿಂದ ಕೂಲಿ ಇಲ್ಲದೆ ಅಲೆದಾಟ!

ಉದ್ಯೋಗ ಖಾತರಿ ಯೋಜನೆ ಎಂದೇ ಜನಜನಿತವಾಗಿರುವ ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆ(MGNREGA) ಅಡಿಯಲ್ಲಿ ಗ್ರಾಮೀಣ ಕುಟುಂಬಗಳಿಗೆ ವಾರ್ಷಿಕವಾಗಿ 100 ದಿನಗಳ ಕೂಲಿ ಉದ್ಯೋಗವನ್ನು ಖಾತರಿಪಡಿಸುತ್ತದೆ. ಆದರೆ ಹಲವಾರು ಕಡೆ ಕೆಲಸವಿಲ್ಲದೆ...

ಧಾರವಾಡ | ʼನಮ್ಮ ಕ್ಲಿನಿಕ್‌ʼನಲ್ಲಿ ಉದ್ಯೋಗ: ಗುತ್ತಿಗೆ ಆಧಾರಿತ ಹುದ್ದೆ ಭರ್ತಿಗೆ ಅರ್ಜಿ ಅಹ್ವಾನ

ಧಾರವಾಡ ಜಿಲ್ಲೆಯ 'ನಮ್ಮ ಕ್ಲಿನಿಕ್‍'ಗಳಲ್ಲಿ ಖಾಲಿಯಿರುವ ಹುದ್ದೆಗಳಿಗೆ ಗುತ್ತಿಗೆ ಆಧಾರದ ಮೇಲೆ ಮೆರಿಟ್ ಹಾಗೂ ರೋಸ್ಟರ್ ಆಧಾರದ ಮೇಲೆ ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಅಹ್ವಾನಿಸಲಾಗಿದೆ. ಖಾಲಿಯಿರುವ ಹುದ್ದೆಗಳಿಗೆ ಜುಲೈ 23ರಂದು ಬೆಳಿಗ್ಗೆ...

ಈ ಹೊತ್ತಿನ ಪ್ರಮುಖ ಸುದ್ದಿ