ಸಕಲೇಶಪುರ

ಹಾಸನ | ಅರಣ್ಯಾಧಿಕಾರಿಗಳ ಕಾರ್ಯಾಚರಣೆ; 20 ಲಕ್ಷ ರೂ. ಮೌಲ್ಯದ ಬೀಟೆ ಮರ ವಶ

ಅರಣ್ಯಾಧಿಕಾರಿಗಳು ಕಾರ್ಯಾಚರಣೆ ನಡೆಸಿ ಸುಮಾರು 20 ಲಕ್ಷ ರೂ.ಗಳಿಗೂ ಹೆಚ್ಚು ಮೌಲ್ಯದ ಬೀಟೆಮರವನ್ನು ವಾಹನಗಳ ಸಮೇತ ವಶಪಡಿಸಿಕೊಂಡಿರುವ ಘಟನೆ ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನಲ್ಲಿ ನಡೆದಿದೆ. ತಾಲೂಕಿನ ಹೆನ್ನಲಿ ಗ್ರಾಮದ ಗದ್ದೆಬೈಲಿನಲ್ಲಿ ಗುರುವಾರ ರಾತ್ರಿ...

ಹಾಸನ | ಬೆಳೆಗಾರರು ಕೃಷಿ ಮಾಡಿ ಅರಣ್ಯ ಉಳಿಸದಿದ್ದರೆ ಕಾಡು ಉಳಿಯುತ್ತಿರಲಿಲ್ಲ: ಶಾಸಕ ಮಂಜು

ರಾಜ್ಯದಲ್ಲಿ ಅರಣ್ಯ ಉಳಿಸಿದ್ದೆ ಬೆಳೆಗಾರರು. ಬೆಳೆಗಾರರು ಕೃಷಿ ಮಾಡಿ ಅರಣ್ಯ ಉಳಿಸದಿದ್ದರೆ ಇಂದು ಅರಣ್ಯ ಉಳಿಯುತ್ತಲೇ ಇರಲಿಲ್ಲ ಎಂದು ಶಾಸಕ ಸಿಮೆಂಟ್ ಮಂಜು ಹೇಳಿದ್ದಾರೆ. ಹಾಸನ ಜಿಲ್ಲೆಯ ಸಕಲೇಶಪುರದ ಹಾನುಬಾಳುನಲ್ಲಿ ನಡೆದ ಬೆಳಗಾರರ ಸಂಘದ...

ಹಾಸನ | ಸೋಲಾರ್ ಬೇಲಿಗೂ ಕೇರ್‌ ಮಾಡದ ಒಂಟಿಸಲಗ

ಕಾಡಾನೆ ಹಾವಳಿ ತಡೆಯಲು‌ ಹಾಕಿದ್ದ ಸೋಲಾರ್ ಬೇಲಿಯನ್ನು ಮುರಿದು ಒಂಟಿಸಲಗವೊಂದು ಕಾಫಿ ತೋಟ ದಾಟಿರುವ ಘಟನೆ ಹಾಸನ ಜಿಲ್ಲೆ ಸಕಲೇಶಪುರ ತಾಲೂಕಿನ ಹಳೇಬಾಗೆ ಸಮೀಪ‌‌ ನಡೆದಿದೆ. ದಿವಾನ್ ಎಸ್ಟೇಟ್‌ಗೆ ಹಾಕಿದ್ದ ಸೋಲಾರ್ ತಂತಿ ಬೇಲಿಯನ್ನು...

ಹಾಸನ | ಕುಮ್ಮತ ಹಳ್ಳಿಯಲ್ಲಿ ಚಿರತೆ ಪ್ರತ್ಯಕ್ಷ; ಗ್ರಾಮಸ್ಥರಲ್ಲಿ ಆತಂಕ

ಹಾಸನ ಜಿಲ್ಲೆ ಸಕಲೇಶಪುರ ತಾಲೂಕಿನ ಹೆತ್ತೂರು ಬಳಿಯ ಕುಮ್ಮತ ಹಳ್ಳಿಯಲ್ಲಿ ರಾತ್ರಿ ಚಿರತೆ ಪ್ರತ್ಯಕ್ಷವಾಗಿದ್ದು, ಗ್ರಾಮಸ್ಥರಲ್ಲಿ ಆತಂಕ ಸೃಷ್ಟಿಯಾಗಿದೆ. ಗ್ರಾಮದ ಮನೆಯೊಂದರಲ್ಲಿ ಸಾಕು ನಾಯಿಯನ್ನು ಚಿರತೆ ಎಳೆದುಕೊಂಡು ಹೋಗಿರುವ ಘಟನೆ ಭಾನುವಾರ ತಡರಾತ್ರಿ ನಡೆದಿದೆ....

ಹಾಸನ | ಕಂದಕ್ಕೆ ಉರುಳಿದ ಕೆಎಸ್‌ಆರ್‌ಟಿಸಿ ಬಸ್;‌ ಪ್ರಯಾಣಿಕರು ಪಾರು

ಕೆಎಸ್‌ಆರ್‌ಟಿಸಿ ಬಸ್ಸಿನ ಬ್ರೇಕ್ ಫೇಲ್ ಆಗಿ ಕಂದಕಕ್ಕೆ ಉರುಳಿರುವ ಘಟನೆ ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನ ಹೊಂಗಡಹಳ್ಳ ಸಮೀಪದ ಮಂಕನಳ್ಳಿ ಬಳಿ ನಡೆದಿದೆ. ಅದೃಷ್ಟವಶಾತ್ ಬಸ್‌ನಲ್ಲಿದ್ದ 35 ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಅಪಘಾತದಲ್ಲಿ ನಾಲ್ವರಿಗೆ...

ಹಾಸನ | ಆನೆ ದಾಳಿಗೆ ಬಲಿಯಾದ ಶಾರ್ಪ್‌ ಶೂಟರ್‌ ಕುಟುಂಬಕ್ಕೆ ಅರಣ್ಯ ಸಚಿವರ ಸಾಂತ್ವನ

ಪ್ರತಿ ಜೀವವೂ ಅಮೂಲ್ಯ ವನ್ಯಜೀವಿ ಮತ್ತು ಮಾನವ ಸಂಘರ್ಷದಿಂದ ಸಾವು, ನೋವು ಸಂಭವಿಸುತ್ತಿರುವುದು ದುಃಖದ ಸಂಗತಿ. ಅರಣ್ಯ ಪ್ರದೇಶ ಕಡಿಮೆ ಆಗಿದೆ. ಅರಣ್ಯದ ಅಂಚಿನಲ್ಲಿ ಕಲ್ಲು ಗಣಿಗಾರಿಕೆ ಚಟುವಟಿಕೆ ನಡೆಯುತ್ತಿದೆ. ವಿಚಲಿತವಾಗಿ ಆನೆಗಳು...

ಮಂಡ್ಯ | ಅಂಬೇಡ್ಕರ್ ಪುತ್ಥಳಿ ಎದುರು ದಾಂಪತ್ಯ ಜೀವನಕ್ಕೆ ಕಾಲಿಟ್ಟ ಪ್ರೇಮಿಗಳು

ಹಾಸನ ಜಿಲ್ಲೆ ಸಕಲೇಶಪುರ ತಾಲೂಕಿನ ಯುವ ಪ್ರೇಮಿಗಳು, ಪ್ರಜ್ಞಾವಂತರ ವೇದಿಕೆ, ದಸಂಸ, ಬೌದ್ಧ ಮಹಾ ಸಭಾ ಮುಖಂಡರ ನೆರವಿನೊಂದಿಗೆ ಶ್ರೀರಂಗಪಟ್ಟಣದ ಅಂಬೇಡ್ಕರ್ ಪುತ್ಥಳಿ ಎದುರು ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಸಕಲೇಶಪುರ ತಾಲೂಕಿನ ಯುವ...

ಹಾಸನ | ಆನೆ ದಾಳಿ; ಅರಣ್ಯ ಇಲಾಖೆ ಸಿಬ್ಬಂದಿ ಸಾವು

ಆನೆಗೆ ಅರವಳಿಕೆ ನೀಡಲು ತೆರಳಿದ್ದ ಅರಣ್ಯ ಇಲಾಖೆ ಶಾರ್ಪ್‌ ಶೂಟರ್‌ ಒಬ್ಬರು ಆನೆ ದಾಳಿಗೆ ಬಲಿಯಾಗಿರುವ ಘಟನೆ ಹಾಸನ ಜಿಲ್ಲೆಯ ಆಲೂರು ತಾಲೂಕಿನಲ್ಲಿ ನಡೆದಿದೆ. ತಾಲೂಕಿನ ಹಳ್ಳಿಯೂರು ಗ್ರಾಮದಲ್ಲಿ ಗಾಯಗೊಂಡಿದ್ದ ಭೀಮ ಹೆಸರಿನ ಕಾಡಾನೆಗೆ...

ಹಾಸನ | ನಿಲ್ಲದ ಕಾಡಾನೆ ಹಾವಳಿ; ಮಹಿಳೆ ಬಲಿ

ಶುಕ್ರವಾರ ಮುಂಜಾನೆ ಕಾಫಿ ತೋಟಕ್ಕೆ ತೆರಳಿದ್ದ ಮಹಿಳೆ ಮೇಲೆ ಕಾಡಾನೆ ದಾಳಿ ನಡೆಸಿದ್ದು, ಮಹಿಳೆ ಮೃತಪಟ್ಟಿರುವ ಘಟನೆ ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನಲ್ಲಿ ನಡೆದಿದೆ. ತಾಲೂಕಿನ ವಡೂರು ಗ್ರಾಮದಲ್ಲಿ ದುರ್ಘಟನೆ ನಡೆದಿದ್ದು, ಅದೇ...

ಹಾಸನ | ಭಾರೀ ಮಳೆ; ಐಗೂರು ಸೇತುವೆ ಮುಳುಗಡೆ

ನಿರಂತರವಾಗಿ ಸುರಿಯುತ್ತರುವ ಮಳೆಯಿಂದ ಹಾಸನ ಜಿಲ್ಲೆ ಸಕಲೇಶಪುರ ತಾಲೂಕಿನ ಎಲ್ಲ ಹಳ್ಳ ಕೊಳ್ಳಗಳೂ ತುಂಬಿದ್ದು, ಐಗೂರು ಹೊಳೆಯೂ ಭರ್ತಿಯಾಗಿದ್ದು, ಸೇತುವೆ ಮೇಲೆ ನೀರು ಉಕ್ಕಿ ಹರಿಯುತ್ತಿದೆ. ಪರಿಣಾಮ ಸೇತುವೆ ದಾಟಲು ವಾಹನ ಸವಾರರು...

ಹಾಸನ | ರಕ್ಷಿತಾರಣ್ಯ ವ್ಯಾಪ್ತಿಯಲ್ಲಿದ್ದ ರೆಸಾರ್ಟ್‌ಗೆ ಬೀಗ ಜಡಿದ ಅರಣ್ಯ ಇಲಾಖೆ

ಹಾಸನ ಜಿಲ್ಲೆಯ ಸಕಲೇಶಪರ ವ್ಯಾಪ್ತಿಯ ರಕ್ಷಿತಾರಣ್ಯ ಪ್ರದೇಶದಲ್ಲಿ ಅರಣ್ಯ ಅಧಿಕಾರಿಗಳು ಕಾರ್ಯಾಚರಣೆಗೆ ಇಳಿದಿದ್ದಾರೆ. ಇತ್ತೀಚೆಗಷ್ಟೇ ವನಗೂರು ಸಮೀಪ ರೆಸಾರ್ಟ್‌ವೊಂದಕ್ಕೆ ಬೀಗ ಜಡಿದಿದ್ದ ಅಧಿಕಾರಿಗಳು, ಇದೀಗ ಅಚ್ಚನಹಳ್ಳಿ ಬಳಿಕ ರೆಸಾರ್ಟ್‌ಗೆ ಬೀಗ ಹಾಕಿದ್ದಾರೆ. ಮಂಗಳವಾರ ಬೆಂಗಳೂರಿನಿಂದ...

ಹಾಸನ | ಮುಸ್ಲಿಂ ವ್ಯಾಪಾರಿಗಳಿಗೆ ಬೆದರಿಕೆ ಪ್ರಕರಣ | ರಘು ಸಕಲೇಶಪುರ ವಿರುದ್ಧ ಎಫ್‌ಐಆರ್‌ ದಾಖಲು; ಆರೋಪಿಗಾಗಿ ಹುಡುಕಾಟ

ಮುಸ್ಲಿಂ ವ್ಯಾಪಾರಿಗಳ ವಿರುದ್ಧ ಪ್ರಚೋದನಕಾರಿ ಭಾಷಣ ಮಾಡಿದ್ದ ಬಜರಂಗದಳದ ರಾಜ್ಯ ಸಂಚಾಲಕ ರಘು ವಿರುದ್ಧ ಸಕಲೇಶಪುರ ನಗರ ಪೊಲೀಸ್‌ ಠಾಣೆಯಲ್ಲಿ ಎಫ್‌ಐಆರ್‌ ದಾಖಲಾಗಿದ್ದು, ಆರೋಪಿ ತಲೆಮರೆಸಿಕೊಂಡಿದ್ದಾನೆ. "ಸಾರ್ವಜನಿಕ ಸ್ಥಳಗಳಲ್ಲಿ ಪ್ರಚೋದನಕಾರಿಯಾಗಿ ಭಾಷಣ ಮಾಡಿರುವ ವಿಡಿಯೋ...

ಈ ಹೊತ್ತಿನ ಪ್ರಮುಖ ಸುದ್ದಿ