ಕಲಬುರಗಿ

ಪಥಸಂಚಲನ ಪಾಲಿಟಿಕ್ಸ್ | ವಾಗ್ವಾದ, ಗೊಂದಲದಲ್ಲೇ ಕಲಬುರಗಿ ಶಾಂತಿ ಸಮಿತಿ ಸಭೆ ಮುಕ್ತಾಯ

ನವೆಂಬರ್ 2 ರಂದು ಚಿತ್ತಾಪುರದಲ್ಲಿ ಆರ್‌ಎಸ್‌ಎಸ್ ತನ್ನ ಪಥ ಸಂಚಲನ ನಡೆಸುವ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಕರೆಯಲಾಗಿದ್ದ ಶಾಂತಿ ಸಮಿತಿ ಸಭೆ ವಾಗ್ವಾದ ಮತ್ತು ಗೊಂದಲದಲ್ಲಿ ಕೊನೆಗೊಂಡಿದೆ. ರಾಜ್ಯದ ಗಮನ ಸೆಳೆದಿರುವ ಕಲಬುರಗಿ ಜಿಲ್ಲೆಯ...

ಚಿತ್ತಾಪುರದಲ್ಲಿ ಪಥಸಂಚಲನ ಕಗ್ಗಂಟು: ವಾಗ್ವಾದ ಉಂಟಾಗಿ ಶಾಂತಿಸಭೆ ಮೊಟಕು

ಚಿತ್ತಾಪುರದಲ್ಲಿ ಆರೆಸ್ಸೆಸ್ ಪಥಸಂಚಲನಕ್ಕೆ ಅವಕಾಶ ನೀಡುವ ವಿಚಾರವಾಗಿ ಕರ್ನಾಟಕ ಹೈಕೋರ್ಟ್ ನಿರ್ದೇಶನದಂತೆ ಇಂದು ಕಲಬುರಗಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಶಾಂತಿ ಸಭೆಯು ಯಾವುದೇ ಒಪ್ಪಂದ ಕಾಣದೇ ಕೊನೆಗೆ ಆರೆಸ್ಸೆಸ್‌ ಪರವಾಗಿ ಮಾತನಾಡಿದ ಬಿಜೆಪಿಯ...

ಚಿತ್ತಾಪುರ | ಪಥಸಂಚಲನಕ್ಕೆ ಅನುಮತಿ ಕೋರಿ 12 ಸಂಘಟನೆಗಳ ಮನವಿ: ಶಾಂತಿಸಭೆಗೆ ಹೈಕೋರ್ಟ್‌ ನಿರ್ದೇಶನ

ಚಿತ್ತಾಪುರದಲ್ಲಿ ಆರೆಸ್ಸೆಸ್‌ ಪಥಸಂಚಲನವನ್ನು ವಿರೋಧಿಸಿ ಸುಮಾರು 12 ಸಂಘಟನೆಗಳು ತಾವೂ ಬೀದಿಗಿಳಿಯುವುದಾಗಿ ಅನುಮತಿ ಕೋರಿದ ಬೆನ್ನಲ್ಲೇ ಸಂಘಟನೆಗಳ ನಡುವೆ ಶಾಂತಿಸಭೆ ನಡೆಸುವಂತೆ ಕಲಬುರಗಿ ಹೈಕೋರ್ಟ್‌ ಜಿಲ್ಲಾಡಳಿತಕ್ಕೆ ಆದೇಶಿಸಿತ್ತು. ಈ ಹಿನ್ನೆಲೆಯಲ್ಲಿ ಇಂದು ಶಾಂತಿಸಭೆ...

ಕಲಬುರಗಿ | ದೇವಸ್ಥಾನದ ಬೀಗ ಮುರಿದು ಚಿನ್ನ ಹಾಗೂ ನಗದು ಹಣ ಕಳ್ಳತನ ; ದೃಶ್ಯ ಸಿಸಿಟಿವಿಯಲ್ಲಿ ಸೆರೆ

ಶಹಾಬಾದ್ ತಾಲೂಕಿನ ಹೊನಗುಂಟಾ ಗ್ರಾಮದ ಚಂದ್ರಲಾಂಬ ದೇವಾಲಯದಲ್ಲಿ ಕಳ್ಳತನ ನಡೆದ ಘಟನೆ ಬೆಳಕಿಗೆ ಬಂದಿದೆ. ನಾಲ್ಕೈದು ಜನರ ತಂಡವು ದೇವಾಲಯದ ಬೀಗ ಮುರಿದು ಒಳನುಗ್ಗಿ ಚಿನ್ನ ಹಾಗೂ ನಗದು ದೋಚಿ ಪರಾರಿಯಾಗಿರುವ ಘಟನೆ...

ಕಲಬುರಗಿ | ಕರ್ನಾಟಕ ಕಬ್ಬು ಬೆಳೆಗಾರರ ಸಂಘ ವತಿಯಿಂದ ರಸ್ತೆ ತಡೆದು ಬೃಹತ್ ಪ್ರತಿಭಟನೆ

ಕರ್ನಾಟಕ ಕಬ್ಬು ಬೆಳೆಗಾರರ ಸಂಘ ನೇತೃತ್ವದಲ್ಲಿ ಅಫಜಲಪುರ ತಾಲೂಕಿನ ಚೌಡಾಪುರ ಕ್ರಾಸ್ ಬಳಿ ಗುರುವಾರ ಭಾರೀ ಪ್ರಮಾಣದ ರಸ್ತೆ ತಡೆ ಚಳವಳಿ ನಡೆಸಿ ಅಫಜಲಪುರ ತಹಶಿಲ್ದಾರರ ರವರ ಮುಖಾಂತರ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು. ಕಬ್ಬು...

ಕಲಬುರಗಿ | ಆರೆಸ್ಸೆಸ್ ವಿರುದ್ಧ ಕ್ರಮಕ್ಕೆ‌ ದಲಿತ ಸೇನೆ ಆಗ್ರಹ

ದೇಶದಲ್ಲಿ ನಡೆಯುತ್ತಿರುವ ನ್ಯಾಯಾಂಗದ ಮೇಲಿನ ದಾಳಿ, ಶೋಷಿತ ಸಮುದಾಯದ ಮೇಲಿನ ಅತ್ಯಾಚಾರ, ಹಿರಿಯ ಪೊಲೀಸ್ ಅಧಿಕಾರಿಗಳ ಮೇಲೆ ಜಾತಿ ತಾರತಮ್ಯ, ಸಚಿವ ಪ್ರಿಯಾಂಕ ಖರ್ಗೆ ತೇಜೋವಧೆ ಮತ್ತು ಸಾರ್ವಜನಿಕವಾಗಿ ನಿಂದನೆ ಮಾಡುತ್ತಿರುವ ರಾ‌ಷ್ಟ್ರೀಯ...

ಕಲಬುರಗಿ | ಬಿಜೆಪಿ ಮುಖಂಡ ಮಣಿಕಂಠ ರಾಠೋಡ್ ವಿರುದ್ಧ ಪ್ರಕರಣ ದಾಖಲು

ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ವಿರುದ್ಧ ಜೀವ ಬೆದರಿಕೆ ನೀಡಲಾಗಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ, ಬಿಜೆಪಿ ಮುಖಂಡ ಮಣಿಕಂಠ ರಾಠೋಡ್ ವಿರುದ್ಧ ಕಲಬುರಗಿಯ ಬ್ರಹ್ಮಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಗುರುವಾರ ಸಾಮಾಜಿಕ...

ಆಳಂದ ಮತಗಳವು | ಮತದಾರರ ಹೆಸರು ಅಳಿಸುವ ಪ್ರತಿ ಅರ್ಜಿಗೆ 80 ರೂ. ಪಾವತಿ: ವರದಿ

2023ರ ವಿಧಾನಸಭಾ ಚುನಾವಣೆಯ ಸಮಯದಲ್ಲಿ ಆಳಂದ ವಿಧಾನಸಭಾ ಕ್ಷೇತ್ರದಲ್ಲಿ ಮತದಾರರ ಹೆಸರು ಅಳಿಸಲು ಅರ್ಜಿ ಸಲ್ಲಿಸಿದ್ದ ಅರ್ಜಿದಾರರಿಗೆ ಪ್ರತಿ ಅರ್ಜಿಗೂ 80 ರೂ. ನೀಡಲಾಗಿದೆ ಎಂಬ ಸಂಗತಿಯನ್ನು ಎಸ್‌ಐಟಿ ಕಂಡುಹಿಡಿದೆ. ಒಟ್ಟು 6,018...

ಯಾದಗಿರಿ | ಬಿಸಿ ಪಾನಕ ಬಿದ್ದು, ವಿದ್ಯಾರ್ಥಿಗೆ ಗಂಭೀರ ಗಾಯ: ಸ್ವಾಮಿ ನಾರಾಯಣ ಗುರುಕುಲ ವಿದ್ಯಾಪೀಠದ ಆಡಳಿತ ನಿರ್ಲಕ್ಷ್ಯ

ವಸತಿಶಾಲೆಯ ಅಡುಗೆ ಮನೆಯಲ್ಲಿ ಕೆಲಸ ಮಾಡುತ್ತಿರುವಾಗ ಮೇಮೇಲೆ ಬಿಸಿ ಪಾನಕ ಬಿದ್ದು, ಮೈ ಸುಟ್ಟಿರುವುದಕ್ಕೆ ಚಿಕಿತ್ಸೆ ನೀಡಲು ₹5 ಲಕ್ಷ ಖರ್ಚಾಗುವುದಾಗಿ ವೈದ್ಯರು ಹೇಳಿದ್ದಾರೆ. ಆದರೆ ಸಂಪೂರ್ಣ ಚಿಕಿತ್ಸೆ ವೆಚ್ಚ ಭರಿಸುವುದಾಗಿ ಹೇಳಿದ್ದ...

ಅಫಜಲಪುರ | ಕಬ್ಬು ಕಟ್ಟಿಂಗ್‌, ಎಫ್‌ಆರ್‌ಪಿ, ಸಾಗಾಣಿಕೆ ವೆಚ್ಚ ನಿಗದಿಗೆ ರೈತರ ಆಗ್ರಹ: ಅ.23ರಂದು ರಸ್ತೆತಡೆ ಚಳವಳಿ

ಕಬ್ಬು ಕಟ್ಟಿಂಗ್‌ ವೆಚ್ಚ, ಎಫ್‌ಆರ್‌ಪಿ ಹಾಗೂ ಸಾಗಾಣಿಕೆ ವೆಚ್ಚ ನಿಗದಿಪಡಿಸಿ ಸಕ್ಕರೆ ಕಾರ್ಖಾನೆಗಳು ಪ್ರಾರಂಭಿಸಬೇಕು. ಅಲ್ಲಿಯವರೆಗೆ ಸಕ್ಕರೆ ಕಾರ್ಖಾನೆಗಳು ಚಾಲು ಮಾಡಬಾರದು ಎಂದು ಆಗ್ರಹಿಸಿ ಕರ್ನಾಟಕ ಪ್ರಾಂತ ರೈತ ಸಂಘ(ಕೆಪಿಆರ್‌ಎಸ್‌) ಅಕ್ಟೋಬರ್‌...

ಚಿತ್ತಾಪುರ | ರ‍್ಯಾಲಿ ನಡೆಸಲು ತ್ರಿಕೋನ ಸ್ಪರ್ಧೆ: ಆರೆಸ್ಸೆಸ್‌ ಬಳಿಕ ದಲಿತ ಪ್ಯಾಂಥರ್ಸ್, ಭೀಮ್ ಆರ್ಮಿ ಮನವಿ

ಕಲಬುರಗಿ ಜಿಲ್ಲೆಯ ಚಿತ್ತಾಪುರದಲ್ಲಿ ನವೆಂಬರ್ 2ರಂದು ʼರೂಟ್ ಮಾರ್ಚ್(ರ‍್ಯಾಲಿ)ʼ ನಡೆಸಲು ಆರೆಸ್ಸೆಸ್‌ ಅನುಮತಿ ಕೋರಿದ ಬಳಿಕ ಭೀಮ್ ಆರ್ಮಿ ಮತ್ತು ದಲಿತ್ ಪ್ಯಾಂಥರ್ಸ್ ಕೂಡ ಅದೇ ದಿನ ರ‍್ಯಾಲಿಗಳನ್ನು ಆಯೋಜಿಸಲು ಅನುಮತಿ ಕೋರಿ...

ಕಲಬುರಗಿ | ಆರ್‌ಎಸ್‌ಎಸ್ ನಿಷೇಧಿಸುವಂತೆ ದಲಿತ ಸಂಘಟನೆಗಳ ಸಮನ್ವಯ ಸಮಿತಿ ಬೃಹತ್ ಪ್ರತಿಭಟನೆ

“ಆರ್‌ಎಸ್‌ಎಸ್ ನಿಷೇಧಿಸಿ, ಪ್ರಜಾಪ್ರಭುತ್ವ ಉಳಿಸಿ” ಎಂದು ಆಗ್ರಹಿಸಿ, ದಲಿತ ಸಂಘಟನೆಗಳ ಸಮನ್ವಯ ಸಮಿತಿಯ ನೇತೃತ್ವದಲ್ಲಿ ಸೋಮವಾರ ಜೇವರ್ಗಿ ಪಟ್ಟಣದ ತಹಶಿಲ್ದಾರರ ಕಚೇರಿ ಎದುರುಗಡೆ ಬೃಹತ್ ಪ್ರತಿಭಟನೆ ನಡೆಯಿತು. ವಿವಿಧ ಸಂಘಟನೆಗಳ ನಾಯಕರು ಮತ್ತು ಸದಸ್ಯರು...

ಈ ಹೊತ್ತಿನ ಪ್ರಮುಖ ಸುದ್ದಿ