ಕಲಬುರಗಿ

ಕಲಬುರಗಿ | ಹದಗೆಟ್ಟ ರಸ್ತೆ : ಕೊಳಚೆ ನೀರಿನಲ್ಲಿ ಭತ್ತದ ಸಸಿ ನೆಟ್ಟು ಪ್ರತಿಭಟನೆ

ಚಿತ್ತಾಪುರ ತಾಲೂಕಿನ ಲಾಡ್ಲಾಪುರ ಗ್ರಾಮದಲ್ಲಿ ಹದಗೆಟ್ಟ ರಸ್ತೆ ದುರಸ್ತಿಗೊಳಿಸದ ಅಧಿಕಾರಿಗಳ ಕ್ರಮ ಖಂಡಿಸಿ ಗ್ರಾಮಸ್ಥರು ರಸ್ತೆ ಮಧ್ಯದಲ್ಲಿ ನಿಂತಿದ್ದ ಕೊಳಚೆ ನೀರಿನಲ್ಲಿ ಸಿಸಿ ನೆಟ್ಟು ಆಕ್ರೋಶ ವ್ಯಕ್ತಪಡಿಸಿದರು. ವಿದ್ಯಾರ್ಥಿ ಸಂಘಟನೆ ಎಐಡಿಎಸ್‌ಒ ಹಾಗೂ ರೈತ...

ಕಲಬುರಗಿ | ಪ್ರತಿದಿನವೂ ನೀರಿಗಾಗಿ ಬವಣೆ ಪಡುತ್ತಿರುವ ಭೀಮಳ್ಳಿ ಗ್ರಾಮದ ದಲಿತರು

ಕಲಬುರಗಿ ಜಿಲ್ಲೆಯ ದಕ್ಷಿಣ ಕ್ಷೇತ್ರದ ಭೀಮಳ್ಳಿ ಗ್ರಾಮದ ದಲಿತ ಓಣಿಯಲ್ಲಿ ನೀರಿನ ಸೌಲಭ್ಯ ಸಿಕ್ಕಿಲ್ಲ. ಹಿಂದಿನ ಕಾಲಘಟ್ಟದಂತೆ ಪ್ರಸ್ತುತ ದಿನಗಳಲ್ಲಿಯೂ ಕೂಡ ಬಾವಿ ನೀರು ಸೇದುವ ಅನಿವಾರ್ಯತೆ ಎದುರಾಗಿದೆ. ದಲಿತ(ಮಾದಿಗ ಸಮುದಾಯದ) ಕುಟುಂಬಗಳು ವಾಸವಾಗಿರುವ...

ಕಲಬುರಗಿ | ಕೃಷಿ ಸಾಲ ಬಾಧೆ : ವಿಷ ಸೇವಿಸಿ ರೈತ ಆತ್ಮಹತ್ಯೆ

ಕೃಷಿಗಾಗಿ ಮಾಡಿದ ಸಾಲ ತೀರಿಸಲಾಗದೆ ಮನನೊಂದ ರೈತನೊಬ್ಬ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಜೇವರ್ಗಿ ತಾಲೂಕಿನ ಸೊನ್ನ ಗ್ರಾಮದಲ್ಲಿ ಸೋಮವಾರ ನಡೆದಿದೆ. ಶಿವಲಿಂಗಪ್ಪ ನಾಗಪ್ಪ ಜೇವರ್ಗಿ (60) ಮೃತರು. ರೈತನಿಗೆ 2.36 ಎಕರೆ...

ಕಲಬುರಗಿ | ಸಿಮೆಂಟ್‌ ಕಾರ್ಖಾನೆಯಲ್ಲಿ ಕಾರ್ಮಿಕ ಸಾವು; 2 ತಿಂಗಳಲ್ಲಿ 4ನೇ ದುರಂತ

ಸಿಮೆಂಟ್‌ ಕಾರ್ಖಾನೆಯಲ್ಲಿ ಬೃಹತ್ ಟ್ಯಾಂಕರ್ ಕಟ್ಟಡ ನಿರ್ಮಾಣ ಕಾಮಗಾರಿ ನಡೆಯುತ್ತಿದ್ದ ವೇಳೆ, ಕಬ್ಬಿಣದ ರಾಡ್‌ವೊಂದು ಕಳಚಿ ಬಿಸಿದ್ದು, ಕಾರ್ಮಿಕರೊಬ್ಬರು ಸಾವನ್ನಪ್ಪಿರುವ ಘಟನೆ ಕಲಬುರಗಿ ಜಿಲ್ಲೆಯ ಸೇಡಂನಲ್ಲಿ ನಡೆದಿದೆ. ಮೃತ ಕಾರ್ಮಿಕನನ್ನು ಜಾರ್ಖಂಡ ಮೂಲದ...

ಕಲಬುರಗಿ | ಭೀಮಾ ನದಿ ಕಲುಷಿತ ಮಾಡದಂತೆ ಆಗ್ರಹಿಸಿ ಯುವಜನರಿಂದ ಜಾಗೃತಿ ಜಾಥಾ

ಜೀವನದಿಯಾಗಿರುವ ಭೀಮಾ ನದಿಯನ್ನು ಕಲುಷಿತ ಮಾಡದಂತೆ ಆಗ್ರಹಿಸಿ ಯುವ ಮುನ್ನಡೆ ತಂಡ ಮತ್ತು ಸಂವಾದ ಸಂಸ್ಥೆಯ ಸಹಯೋಗದಲ್ಲಿ ಕಲಬುರಗಿಯಲ್ಲಿ ಕಾಲ್ನಡಿಗೆಯ ಜಾಥಾ ನಡೆಸಲಾಯಿತು. ಪರಿಸರ ರಕ್ಷಣೆಗಾಗಿ ಯುವಧ್ವನಿ ನಮ್ಮ ನಡೆ, ಭೀಮಾ ನದಿಯ ಕಡೆ...

ಕಲಬುರಗಿ | ಸಂಯುಕ್ತ ಕಿಸಾನ್ ಮೋರ್ಚಾದಿಂದ ಸಂಸದ ರಾಧಾಕೃಷ್ಣ ದೊಡ್ಡಮನಿಗೆ ಮನವಿ

ಸಂಯುಕ್ತ ಕಿಸಾನ್ ಮೋರ್ಚಾ(ಎಸ್ ಕೆ ಎಂ) ಕರೆಯ ಮೇರೆಗೆ ದೀರ್ಘಕಾಲದಿಂದ ಉಳಿದಿರುವ ಜ್ವಲಂತ ಸಮಸ್ಯೆಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಅರ್ಥಪೂರ್ಣ ಕ್ರಮಗಳನ್ನು ತಕ್ಷಣವೇ ತೆಗೆದುಕೊಳ್ಳುವಂತೆ ಪ್ರಧಾನಮಂತ್ರಿಗಳ ಮೇಲೆ ಮತ್ತು ಕ್ಯಾಬಿನೆಟ್‌ನ ಮೇಲೆ ಒತ್ತಡ ತರುವಂತೆ...

ಕಲಬುರಗಿ | ರೈತರ ಆತ್ಮಹತ್ಯೆಗಳನ್ನು ತಡೆಗಟ್ಟುವಂತೆ ಆಗ್ರಹಿಸಿ ರೈತ ಸಂಘದಿಂದ ಪ್ರತಿಭಟನೆ

ರಾಜ್ಯ ಸರ್ಕಾರದ ರೈತ ವಿರೋಧಿ ನೀತಿಗಳನ್ನು ಖಂಡಿಸಿ ಹಾಗೂ ರೈತರ ಆತ್ಮಹತ್ಯೆಗಳನ್ನು ತಡೆಗಟ್ಟುವಂತೆ ಒತ್ತಾಯಿಸಿ ಕರ್ನಾಟಕ ರಾಜ್ಯ ರೈತ ಸಂಘದ ಕಲಬುರಗಿ ವತಿಯಿಂದ ಜಿಲ್ಲಾಧಿಕಾರಿಗಳು ಕಚೇರಿ ಎದುರುಗಡೆ ಪ್ರತಿಭಟನೆ ನಡೆಸಿ, ಬಳಿಕ ಜಿಲ್ಲಾಧಿಕಾರಿಗಳ...

ಕಲಬುರಗಿ ಕೇಂದ್ರೀಯ ವಿವಿ ವಿವಾದ: ಆರ್‌ಎಸ್‌ಎಸ್‌ನ ಧ್ಯೇಯಗೀತೆ ಹಾಡಿದರು, ಬೆದರಿಕೆ ಒಡ್ಡಿದರು

ದೇಶದ ಎಲ್ಲ ಶೈಕ್ಷಣಿಕ ಸಂಸ್ಥೆಗಳು ಕೇಸರೀಕರಣಗೊಳ್ಳುತ್ತಿವೆ ಎಂದು ದೇಶಾದ್ಯಂತ ವ್ಯಾಪಕ ಚರ್ಚೆಗೊಳಗಾಗುತ್ತಿರುವ ನಡುವೆಯೇ ಕಲಬುರಗಿ ಕೇಂದ್ರೀಯ ವಿವಿಯ ನಡೆ ಸದ್ಯ ವ್ಯಾಪಕ ವಿವಾದಕ್ಕೆ ಕಾರಣವಾಗಿದೆ. ಕಲಬುರಗಿ ಜಿಲ್ಲೆಯ ಆಳಂದ ತಾಲೂಕಿನ ಕಡಗಂಚಿಯಲ್ಲಿರುವ ಕರ್ನಾಟಕ ಕೇಂದ್ರೀಯ...

ಜೇವರ್ಗಿ | ಅಕ್ರಮಗಳ ತಡೆಗೆ ಆಗ್ರಹಿಸಿ ಶಾಸಕ ಅಜಯ್‌ ಸಿಂಗ್‌ ಕಾರಿಗೆ ಘೇರಾವ್

ಕಲಬುರಗಿ ಜಿಲ್ಲೆಯ ಜೇವರ್ಗಿ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಅಕ್ರಮಗಳನ್ನು ತಡೆಯುವಂತೆ ಒತ್ತಾಯಿಸಿ ದಲಿತ ಹಕ್ಕುಗಳ ಆಂದೋಲನದ ಸಂಘಟಕರು ಶಾಸಕ ಅಜಯ್‌ ಸಿಂಗ್‌ ಕಾರಿಗೆ ಘೇರಾವ್‌ ಹಾಕಿ ಪ್ರತಿಭಟಿಸಿದರು. ಜೇವರ್ಗಿ ಪಟ್ಟಣದ ಬಿಜಾಪುರ ಕ್ರಾಸ್ ಹತ್ತಿರ...

ಸೇಡಂ | ಗ್ರಾಮ ಪಂಚಾಯತಿಗಳಲ್ಲಿ ಸ್ವಚ್ಛತೆ ಕಾರ್ಯ ಕೈಗೊಳ್ಳಲು ಅಂಬೇಡ್ಕರ್ ಯುವ ಸೇನೆ ಒತ್ತಾಯ

ಕಲಬುರಗಿ ಜಿಲ್ಲೆಯ ಸೇಡಂ ತಾಲೂಕಿನಾದ್ಯಂತ ಗ್ರಾಮೀಣ ಪ್ರದೇಶಗಳಲ್ಲಿ ಡೆಂಘೀ, ಕಾಲರಾ, ಮಲೇರಿಯಾ ಹರಡುವ ಭೀತಿ ಎದುರಾಗಿದ್ದು, ಗ್ರಾಮೀಣ ಆಡಳಿತ ಸಂಪೂರ್ಣ ನಿಷ್ಕ್ರಿಯವಾಗಿದೆ. ಕೂಡಲೇ ವಾರಕ್ಕೊಮ್ಮೆ ಸ್ವಚ್ಛತೆ ಕಾರ್ಯ ಕೈಗೊಳ್ಳಬೇಕು ಎಂದು ಒತ್ತಾಯಿಸಿ ಅಂಬೇಡ್ಕರ್...

ಕಲಬುರಗಿ | ಭೀಮಾನದಿ ಸಂರಕ್ಷಣೆಗಾಗಿ ಅರಿವಿನ ಅಭಿಯಾನ

ಕಲಬುರಗಿ ಜಿಲ್ಲೆಗೆ ಜೀವಜಲವಾಗಿರುವ ಭೀಮಾನದಿ ಸಂರಕ್ಷಣೆಗಾಗಿ ಸಂವಾದ ಯುವಸಂಪನ್ಮೂಲ ಕೇಂದ್ರ ಮತ್ತು ಕರ್ನಾಟಕ ಯುವಮುನ್ನಡೆ ತಂಡವು ಜೇವರ್ಗಿ ತಾಲೂಕಿನಾದ್ಯಾಂತ ಭೀಮಾನದಿ ಸಂರಕ್ಷಣೆ ಕುರಿತು ಅಭಿಯಾನ ಮಾಡುತ್ತ ಪರಿಸರ ನ್ಯಾಯದ ಅರಿವು ಮೂಡಿಸುತ್ತಿದ್ದಾರೆ. ಭೀಮಾನದಿ ವರ್ಷದಿಂದ...

ಕಲಬುರಗಿ | ಕುಡಿಯುವ ನೀರಿನ ಸಮಸ್ಯೆ ಪರಿಹಾರಕ್ಕೆ ವೆಲ್ಫೇರ್ ಪಾರ್ಟಿ ಆಗ್ರಹ

ಕಲಬುರಗಿ ನಗರದಲ್ಲಿ ಕುಡಿಯುವ ನೀರು ಸರಬರಾಜು ಅವ್ಯವಸ್ಥೆಯಿಂದ ಕೂಡಿದ್ದು, ಕೂಡಲೇ ಸಮಸ್ಯೆಯನ್ನು ಪರಿಹರಿಸಲು ಸರ್ಕಾರ ಮುಂದಾಗಬೇಕೆಂದು ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾದ  ರಾಜ್ಯ ಕಾರ್ಯದರ್ಶಿ ಮುಬೀನ್ ಆಗ್ರಹಿಸಿದರು. ಕಲಬುರಗಿಯಲ್ಲಿ ಸುದ್ದಿಗೋಷ್ಟಿ ಉದ್ದೇಶಿಸಿ ಮಾತನಾಡಿದ ಅವರು,...

ಈ ಹೊತ್ತಿನ ಪ್ರಮುಖ ಸುದ್ದಿ