ಜಿಲ್ಲೆಗಳು

ತುಮಕೂರು | ಪೌರಕಾರ್ಮಿಕ ಅಯ್ಯಪ್ಪನ ಮನೆ ಬೆಂಕಿಗೆ ಆಹುತಿ : ಪರಿಹಾರಕ್ಕೆ ಸಿಪಿಎಂ ಒತ್ತಾಯ

ತುಮಕೂರು ಮಹಾನಗರದಲ್ಲಿ ವಾಸವಾಗಿರುವ ಪೌರಕಾರ್ಮಿಕರಾದ ಅಯ್ಯಪ್ಪ ಅವರ ಮನೆಯಲ್ಲಿ ಸಂಭವಿಸಿದ ಅಗ್ನಿ ಅವಘಡದಲ್ಲಿ ಅವರ ಮನೆ ಸಂಪೂರ್ಣವಾಗಿ ಬೆಂಕಿಗೆ ಆಹುತಿಯಾಗಿದೆ.ಮನೆಯಲ್ಲಿದ್ದ ಎಲ್ಲಾ ವಸ್ತುಗಳು ಸುಟ್ಟು ಕರಕಲಾಗಿದ್ದು, ಕುಟುಂಬ ತೀವ್ರ ಸಂಕಷ್ಟಕ್ಕೆ ಸಿಲುಕಿದೆ.ಜೀವನೋಪಾಯಕ್ಕಾಗಿ ದುಡಿಯುತ್ತಿರುವ...

ಗುಬ್ಬಿ | ಎಲ್ಲಾ ವರ್ಗಕ್ಕೂ ದಕ್ಕಿದ ಬಜೆಟ್ : ಶಾಸಕ ಎಸ್.ಆರ್.ಶ್ರೀನಿವಾಸ್

ಅಹಿಂದ ವರ್ಗ ಸೇರಿದಂತೆ ಎಲ್ಲಾ ವರ್ಗದ ಜನರಿಗೂ ಒಪ್ಪಿಗೆಯಾದ ಬಜೆಟ್ ಈ ಬಾರಿ ಎಲ್ಲಾ ಕ್ಷೇತ್ರಕ್ಕೂ ಸಂದಿವೆ. ಜನಮನ್ನಣೆಯ ಬಜೆಟ್ ದಾಖಲೆಯಲ್ಲಿ ಮುಖ್ಯಮಂತ್ರಿಗಳು ಮಂಡಿಸಿದ್ದಾರೆ ಎಂದು ಶಾಸಕ ಎಸ್.ಆರ್.ಶ್ರೀನಿವಾಸ್ ಮೆಚ್ಚುಗೆ ವ್ಯಕ್ತಪಡಿಸಿದರು. ಗುಬ್ಬಿ ತಾಲ್ಲೂಕಿನ...

ಕೋಲಾರದಲ್ಲಿ ಕೆ ಪಿ ಆರ್ ಎಸ್ ನ 18ನೇ ರಾಜ್ಯ ಸಮ್ಮೇಳನ

ಮುಳಬಾಗಿಲು : ಕೇಂದ್ರ ಮತ್ತು ರಾಜ್ಯ ಸರ್ಕಾರದ ರೈತ ವಿರೋಧಿ ನೀತಿಗಳನ್ನು ವಿರೋಧಿಸಿ ಜಿಲ್ಲೆಗೆ ಶಾಶ್ವತವಾದ ನೀರಾವರಿ ಯೋಜನೆ ಕೃಷಿ ಆಧಾರಿತ ಕೈಗಾರಿಕೆಗಳು ಸ್ಥಾಪನೆ ಹಾಗೂ ಕೆ.ಸಿ. ವ್ಯಾಲಿ ನೀರು ಮೂರನೇ ಹಂತ...

ಬೆಳಗಾವಿ | ಬಸ್‌ ಹತ್ತುವ ವೇಳೆ ಚಿನ್ನಾಭರಣ ಕಳವು: ಆರೋಪಿ ಬಂಧನ, ₹3.64 ಲಕ್ಷ ಮೌಲ್ಯದ ಆಭರಣ ವಶ

ಬಸ್ ಹತ್ತುವ ಸಂದರ್ಭದಲ್ಲಿ ಮಹಿಳೆಯೊಬ್ಬರ ಬ್ಯಾಗಿನಲ್ಲಿದ್ದ ಚಿನ್ನಾಭರಣ ಕಳವು ಮಾಡಿದ ಪ್ರಕರಣವನ್ನು ಬೆಳಗಾವಿ ನಗರದ ಕ್ಯಾಂಪ್ ಪೊಲೀಸ್ ಠಾಣೆ ಪೊಲೀಸರು ಭೇದಿಸಿ ಆರೋಪಿಯನ್ನು ಬಂಧಿಸಿ ₹3.64 ಲಕ್ಷ ಮೌಲ್ಯದ ಬಂಗಾರದ ಆಭರಣಗಳನ್ನು ವಶಪಡಿಸಿಕೊಂಡಿದ್ದಾರೆ. ಬಂಧಿತ...

ಹಾವೇರಿ | 12ನೇ ಶತಮಾನದ ಚಳುವಳಿಗಳಲ್ಲಿ ಶರಣೆಯರು ಜಾಗೃತಿ ಮೂಡಿಸಿದ್ದರು: ಶಾಸಕ ಶ್ರೀನಿವಾಸ ಮಾನೆ

"ಬಸವಣ್ಣನವರ ಚಳುವಳಿ ಜೊತಗೆ ಅಕ್ಕಮಹಾದೇವಿ, ಲಕ್ಕವ್ವ ಸೇರಿದಂತೆ ಮೂವತ್ಐದಕ್ಕೂ ಹೆಚ್ಚು ಶರಣೆಯರು (ಮಹಿಳೆಯರು) 12ನೇ ಶತಮಾನದ ಚಳುವಳಿ ಹೋರಾಟಗಳಲ್ಲಿ ಭಾಗವಿಹಿಸಿ ಮಹಿಳೆಯರಿಗೆ ಜಾಗೃತಿ ಮೂಡಿಸುತ್ತಿದ್ದರು" ಎಂದು ಶಾಸಕ ಶ್ರೀನಿವಾಸ ಮಾನೆ ಹೇಳಿದರು. ಹಾವೇರಿ ಜಿಲ್ಲೆಯ...

ದಾವಣಗೆರೆ | ಶಿಕ್ಷಣ ಕ್ಷೇತ್ರದಲ್ಲಿ ಮಾನಸಿಕ ಆರೋಗ್ಯ ಸುಧಾರಣೆಗೆ ಸಲಹೆಗಾರರ ನೇಮಕ ಉತ್ತಮ ನಿರ್ಧಾರ

ಕರ್ನಾಟಕ ರಾಜ್ಯ ಸರ್ಕಾರದ 2026 27ನೇ ಸಾಲಿನ ಬಜೆಟ್ ನಲ್ಲಿ ಶಿಕ್ಷಣ ಕ್ಷೇತ್ರದಲ್ಲಿ ವಿದ್ಯಾರ್ಥಿಗಳ ಒತ್ತಡ ನಿವಾರಿಸಿ ಅವರ ಮಾನಸಿಕ ಆರೋಗ್ಯ ಸುಧಾರಿಸಲು ಮಾನಸಿಕ ಆರೋಗ್ಯ ಸಲಹೆಗಾರರ ನೇಮಕಾತಿಗೆ ನಿರ್ಧರಿಸಿರುವುದನ್ನು ಕರ್ನಾಟಕ ರಾಜ್ಯ...

ಅಭಿವೃದ್ದಿ ವಿಚಾರದಲ್ಲಿ ರಾಜಕೀಯ ಬೇಡ : ಶಾಸಕ ಕೊತ್ತೂರು ಮಂಜುನಾಥ್

ಕೋಲಾರ: ಯುವಜನ ಮತ್ತು ಕ್ರೀಡಾ ಇಲಾಖೆ ವತಿಯಿಂದ ನಿರ್ಮಿಸಿರುವ ಬ್ಯಾಸ್ಕೆಟ್ ಬಾಲ್ ಸಿಂಥೆಟಿಕ್ ಟ್ಯ್ರಾಕ್ ಸೇರಿದಂತೆ ವಿವಿಧ ಅಭಿವೃದ್ದಿ ಕಾರ್ಯಕ್ರಮಗಳ ಉದ್ಘಾಟನೆ ಹಾಗೂ 4.80 ಕೋಟಿ ವೆಚ್ಚದ ಅಭಿವೃದ್ದಿ ಕಾಮಗಾರಿಗಳಿಗೆ ಶಾಸಕ ಕೊತ್ತೂರು...

ಬೆಳಗಾವಿ | ವಾಹನ ಕಳವು ಗ್ಯಾಂಗ್ ಬಂಧನ : ₹95.50 ಲಕ್ಷ ಮೌಲ್ಯದ 21 ವಾಹನ ಜಪ್ತಿ

ರಾಜ್ಯದ ವಿವಿಧ ಜಿಲ್ಲೆಗಳು ಹಾಗೂ ಹೊರರಾಜ್ಯಗಳಲ್ಲಿ ವಾಹನ ಕಳವು ಮಾಡುತ್ತಿದ್ದ ಗ್ಯಾಂಗನ್ನು ಬೆಳಗಾವಿ ಜಿಲ್ಲೆಯ ಮಾರಿಹಾಳ ಠಾಣೆ ಪೊಲೀಸರು ಶುಕ್ರವಾರ ಬಂಧಿಸಿದ್ದಾರೆ. ಆರೋಪಿಗಳಿಂದ ಒಟ್ಟು ₹95.50 ಲಕ್ಷ ಮೌಲ್ಯದ 21 ವಾಹನಗಳನ್ನು ಜಪ್ತಿ...

ವಿಜಯಪುರ | ಹೆಚ್ಚುತ್ತಿರುವ ತಾಪಮಾನ: ಮುನ್ನೆಚ್ಚರಿಕಾ ಕ್ರಮಕ್ಕೆ ಜಿಲ್ಲಾಧಿಕಾರಿ ಡಾ. ಆನಂದ ಕೆ ಸಲಹೆ

ಅತಿಹೆಚ್ಚು ತಾಪಮಾನ ಸಮಯದಲ್ಲಿ ಪ್ರತಿಕೂಲ ಪರಿಣಾಮವನ್ನು ಕಡಿಮೆ ಮಾಡಲು ವಿಪತ್ತು ನಿರ್ವಹಣಾ ಪ್ರಾಧಿಕಾರದಿಂದ ನೀಡಲಾದ ಸಲಹೆ ಸೂಚನೆಗಳನ್ನು ಪಾಲಿಸುವ ನಿಟ್ಟಿನಲ್ಲಿ ಸಾರ್ವಜನಿಕರು ಮುನ್ನೆಚ್ಚರಿಕಾ ಕ್ರಮ ವಹಿಸುವಂತೆ ವಿಜಯಪುರ ಜಿಲ್ಲಾಧಿಕಾರಿ ಡಾ. ಆನಂದ ಕೆ...

ಹಾಸನ ಮಹಿಳಾ ದಿನಾಚರಣೆ | ಹೆಣ್ಣಿನ ಆತ್ಮಗೌರವದ ದಾಖಲೀಕರಣದ ಅನನ್ಯತೆ

'ಕರ್ನಾಟಕ ರಾಜ್ಯ ಮಹಿಳಾ ದೌರ್ಜನ್ಯ ವಿರೋಧಿ ಒಕ್ಕೂಟ, ಹಾಸನ'ವು 2026ರ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಈ ಬಾರಿ ಹಾಸನದಲ್ಲಿ 'ಮಹಿಳಾ ಚೈತನ್ಯ ದಿನ'ವಾಗಿ ಆಚರಿಸುತ್ತಾ, ಮಹಿಳಾ ಜಾಗೃತಿ ಸಮಾವೇಶವನ್ನು ನಡೆಸಲಾಗುತ್ತಿದೆ. ಈ ಸಂದರ್ಭದಲ್ಲಿ...

ವಿಜಯಪುರ | ಮಾ.9ರಂದು ಡಾ.ಬಾಬಾಸಾಹೇಬ್ ಅಂಬೇಡ್ಕರ್ ಕುರಿತ ʼಭೀಮ ಗಾಯನʼ

ವಿಜಯಪುರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಸಹಯೋಗದೊಂದಿಗೆ ನಗರದ ಕಂದಗಲ್ ಶ್ರೀ ಹನುಮಂತರಾಯ ರಂಗಮಂದಿರದಲ್ಲಿ ಮಾರ್ಚ್ 9ರ ಸೋಮವಾರ ಸಂಜೆ 4ಕ್ಕೆ ʼಭೀಮ ಗಾಯನʼ ಕಾರ್ಯಕ್ರಮ...

ಬೀದರ್ | ಒಳ ಮೀಸಲಾತಿ ಅನ್ಯಾಯ ಸರಿಪಡಿಸದಿದ್ದರೆ ಹೋರಾಟ : ಬಲಗೈ ಸಮುದಾಯ ಎಚ್ಚರಿಕೆ

ಒಳ ಮೀಸಲಾತಿಯಲ್ಲಿ ಬಲಗೈ ಸಮುದಾಯಕ್ಕೆ ಆಗಿರುವ ಅನ್ಯಾಯ ಸರಿಪಡಿಸುವಂತೆ ಆಗ್ರಹಿಸಿ ಬಲಗೈ ಮೀಸಲಾತಿ ಹೋರಾಟ ಸಮಿತಿಯಿಂದ ಶುಕ್ರವಾರ ಔರಾದ್ ಬಂದ್‌ ಹೋರಾಟ ನಡೆಯಿತು. ಬೆಳಿಗ್ಗೆ ಬೈಕ್ ರ‍್ಯಾಲಿ ನಡೆಸಿದ ಕಾರ್ಯಕರ್ತರು ಒಳ ಮೀಸಲಾತಿ ಅನ್ಯಾಯ...

ಈ ಹೊತ್ತಿನ ಪ್ರಮುಖ ಸುದ್ದಿ