ರಾಯಚೂರು

ರಾಯಚೂರು | ಬೀಡಾಡಿ ದನಗಳ ಹಾವಳಿ; ಸ್ಥಳೀಯರಿಗೆ ಕಿರಿಕಿರಿ

ರಾಯಚೂರು ನಗರದಲ್ಲಿ ಬೀಡಾಡಿ ದನಗಳ ಹಾವಳಿ ಹೆಚ್ಚಾಗಿದ್ದು, ಅಡ್ಡಾದಿಡ್ಡಿಯಾಗಿ ತಿರುಗಾಡುವುದರಿಂದ ತರಕಾರಿ ವ್ಯಾಪಾರಿಗಳಿಗೆ, ಹಣ್ಣು ಹಂಪಲ ವ್ಯಾಪಾರಸ್ಥರಿಗೆ ಹಾಗೂ ವಾಹನ ಸವಾರರಿಗೆ ತೀವ್ರ ಸಮಸ್ಯೆ ಎದುರಾಗಿದೆ. "ನಗರದ ಮುಖ್ಯ ರಸ್ತೆಗಳಲ್ಲಿ, ಕೇಂದ್ರ ಬಸ್ ನಿಲ್ದಾಣದಿಂದ...

ರಾಯಚೂರು | ಕೆರೆಯಲ್ಲಿ ದಿಢೀರ್ ಪ್ರತ್ಯಕ್ಷವಾದ ಮೊಸಳೆ; ಅರಣ್ಯ ಇಲಾಖೆಯಿಂದ ಕಾರ್ಯಾಚರಣೆ

ರಾಯಚೂರು ನಗರದ ಮಾವಿನಕೆರೆಯಲ್ಲಿ ದಿಢೀರ್ ಮೊಸಳೆ ಕಾಣಿಸಿಕೊಂಡಿದ್ದು, ಅರಣ್ಯ ಇಲಾಖೆಯ ಅಧಿಕಾರಿಗಳು ಕಾರ್ಯಾಚರಣೆ ನಡೆಸುವ ಮೂಲಕ ಮೊಸಳೆಯನ್ನು ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ. ನಂದೀಶ್ವರ ದೇವಸ್ಥಾನಕ್ಕೆ ತೆರಳುವ ರಸ್ತೆಯಲ್ಲಿ ಕೆರೆಯ ದಡದಲ್ಲಿ ಬುಧವಾರ ಬೆಳಿಗ್ಗೆ ಬೃಹದಾಕಾರದ ಮೊಸಳೆ...

ರಾಯಚೂರು | ರಾಮಕೃಷ್ಣ ಆಶ್ರಮದಲ್ಲಿ ಮತ್ತೊಬ್ಬ ಬಾಲಕನ ಮೇಲೆ ಹಲ್ಲೆ; ವೇಣುಗೋಪಾಲ ಎಂಬಾತನ ವಿಚಾರಣೆ

ರಾಯಚೂರಿನ ಉದಯನಗರದಲ್ಲಿನ ರಾಮಕೃಷ್ಣ ಆಶ್ರಮದಲ್ಲಿ ಬಾಲಕನ ಮೇಲೆ ಗಂಭೀರ ಹಲ್ಲೆ ಮಾಡಿದ್ದ ಆಶ್ರಮದ ಉಸ್ತುವಾರಿ ವೇಣುಗೋಪಾಲ ಇಬ್ಬರು ಮಕ್ಕಳ ಮೇಲೆ ಹಲ್ಲೆ ಮಾಡಿದ ವಿಷಯ ತಡವಾಗಿ ಬೆಳಕಿಗೆ ಬಂದಿದೆ. ಪೆನ್ನು ಕದ್ದ ಆರೋಪದ ಮೇಲೆ...

ರಾಯಚೂರು | ಪೆನ್ನು ಕದ್ದ ಆರೋಪ; ಬಾಲಕನನ್ನು ಕೋಣೆಯಲ್ಲಿ ಕೂಡಿಟ್ಟು ಚಿತ್ರಹಿಂಸೆ ನೀಡಿದ ರಾಮಕೃಷ್ಣ ಆಶ್ರಮದ ಗುರೂಜಿ!

ರಾಯಚೂರಿನ ರಾಮಕೃಷ್ಣ ಆಶ್ರಮದಲ್ಲಿ ಅಮಾನವೀಯ ಘಟನೆಯೊಂದು ನಡೆದಿದ್ದು, ಪೆನ್ನು ಕದ್ದ ಆರೋಪದಲ್ಲಿ ಬಾಲಕನೋರ್ವನಿಗೆ ಮಠದ ಗುರೂಜಿ ಮೂರು ದಿನ ಕತ್ತಲೆ ಕೋಣೆಯಲ್ಲಿ ಕೂಡಿಟ್ಟು, ಚಿತ್ರಹಿಂಸೆ ನೀಡಿರುವ ಘಟನೆ ಬೆಳಕಿಗೆ ಬಂದಿದೆ. ವಿದ್ಯಾರ್ಥಿಯೋರ್ವ ಪೆನ್ನು ಕದ್ದಿದ್ದಾನೆ...

ರಾಯಚೂರು | ಎಸ್‌ಸಿ ಸಮುದಾಯಕ್ಕೆ ರುದ್ರಭೂಮಿ ಮಂಜೂರು; ಜಿಲ್ಲಾಧಿಕಾರಿ ಸೂಚನೆ

ಪರಿಶಿಷ್ಟ ಜಾತಿ(ಎಸ್‌ಸಿ) ಸಮುದಾಯಕ್ಕೆ ರುದ್ರಭೂಮಿ ಮಂಜೂರು ಮಾಡುವಂತೆ ರಾಯಚೂರು ಜಿಲ್ಲಾಧಿಕಾರಿ ಸಂಬಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ರಾಯಚೂರು ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ನಡೆದ ಅನುಸೂಚಿತ ಜಾತಿ ಮತ್ತು ಅನುಸೂಚಿತ ಪಂಗಡಗಳ(ದೌರ್ಜನ್ಯ...

ರಾಯಚೂರು | ಒಂದೇ ಕುಟುಂಬದ ನಾಲ್ವರು ಸಾವು; ವಿಷಾಹಾರ ಸೇವಿಸಿರುವ ಶಂಕೆ

ಒಂದೇ ಕುಟುಂಬದ ನಾಲ್ವರು ಮೃತಪಟ್ಟಿರುವ ಘಟನೆ ರಾಯಚೂರು ಜಿಲ್ಲೆಯ ಸಿರವಾರ ತಾಲೂಕಿನ ಕಲ್ಲೂರ ಗ್ರಾಮದಲ್ಲಿ ನಡೆದಿದೆ. ರಾತ್ರಿ ಮಾಂಸಾಹಾರ ಸೇವಿಸಿದ ಬಳಿಕ ಅಸ್ವಸ್ಥಗೊಂಡಿದ್ದರಿಂದ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಭೀಮಣ್ಣ62), ಪತ್ನಿ ಈರಮ್ಮ(58), ಮಗ ಮಲ್ಲೇಶ್(23),...

ರಾಯಚೂರು | ಸಿರವಾರ ತಹಶೀಲ್ದಾರ್ ಕಚೇರಿಗೆ ತಾಡಪತ್ರಿ ಮೇಲ್ಛಾವಣಿ

ರಾಯಚೂರು ಜಿಲ್ಲೆ ಸಿರವಾರ ತಾಲೂಕು ಘೋಷಣೆಯಾಗಿ ಸುಮಾರು 7ವರ್ಷ ಗತಿಸಿದರೂ ತಹಶೀಲ್ದಾರ್ ಕಚೇರಿ ತಾಡಪತ್ರಿ ಮೇಲ್ಛಾವಣಿಯಿಂದ ಕೂಡಿರುವುದನ್ನು ಕಂಡ ಸ್ಥಳೀಯರು, ದನದ ಕೊಟ್ಟಿಗೆಯಂತೆ ಮೇಲ್ಛಾವಣಿಗೆ ತಾಡಪತ್ರಿ ಹಾಕಿದ್ದು, ಇದು ತಹಶೀಲ್ದಾರ್‌ ಕಚೇರಿಯೋ ಇಲ್ಲವೇ...

ರಾಯಚೂರು | ಸ್ಲಂಗಳ ಮೂಲ ಸೌಲಭ್ಯಕ್ಕೆ ಅನುದಾನ ಮಂಜೂರು ಮಾಡುವಂತೆ ಆಗ್ರಹ

ಕಲ್ಯಾಣ ಕರ್ನಾಟಕ ಭಾಗದ ಜಿಲ್ಲೆಗಳಲ್ಲಿ ಬರುವ ಸ್ಲಂಗಳ ಮೂಲ ಸೌಲಭ್ಯ ಮತ್ತು ಮನೆಗಳ ಕಾಮಗಾರಿಗೆ ಕೆಕೆಆರ್‌ಡಿಬಿಯಲ್ಲಿ ₹1000 ಕೋಟಿ ಅನುದಾನ ಮಂಜೂರು ಮಾಡಲು ಸರ್ಕಾರಕ್ಕೆ ಸ್ಲಂ ನಿವಾಸಿಗಳ ಕ್ರಿಯಾ ವೇದಿಕೆಒತ್ತಾಯಿಸಿದೆ. ರಾಯಚೂರು ಸ್ಲಂ ನಿವಾಸಿಗಳ...

ರಾಯಚೂರು | ದರ್ವೇಶ್ ಗುಂಪಿನಿಂದ ಅವ್ಯವಹಾರ; ವಿಚಾರಣೆ ಮುಂದೂಡಿಕೆ

ದರ್ವೇಶ್ ಗುಂಪಿನಿಂದ ಅವ್ಯವಹಾರ ನಡೆಸಿದ್ದ ಮೂರು ಮಂದಿ ಆರೋಪಿಗಳನ್ನು ಎರಡನೇ ಹೆಚ್ಚುವರಿ ನ್ಯಾಯಾಧೀಶರ ಮುಂದೆ ಹಾಜರುಪಡಿಸಲಾಗಿದ್ದು, ವಿಚಾರಣೆ ಮುಂದೂಡಲಾಗಿದೆ ಎಂದು ರಾಯಚೂರು ಪೊಲೀಸರು ತಿಳಿಸಿದ್ದಾರೆ. ದರ್ವೇಶ್‌ ಗುಂಪಿನಲ್ಲಿ ಹಣ ಹೂಡಿದ್ದ ವ್ಯಕ್ತಿಗೆ ವಂಚನೆ ಮಾಡಿರುವ...

ರಾಯಚೂರು | ಸಾಗುವಳಿ ಭೂಮಿಯಲ್ಲಿ ಬೆಳೆನಾಶ ಮಾಡಿದ ಅರಣ್ಯ ಇಲಾಖೆ; ಒಕ್ಕಲೆಬ್ಬಿಸುವ ಹುನ್ನಾರದ ಆರೋಪ

ಸಾಗುವಳಿ ಭೂಮಿಯಲ್ಲಿ ಬೆಳೆನಾಶ ಮಾಡಿರುವ ಅರಣ್ಯ ಇಲಾಖೆ ಸಣ್ಣ ಹಿಡುವಳಿ ರೈತರನ್ನು ಒಕ್ಕಲೆಬ್ಬಿಸುವ ಹುನ್ನಾರ ನಡೆಸುತ್ತಿದೆ ಎಂದು ಸ್ಥಳೀಯ ರೈತರು ಆರೋಪಿಸಿದ್ದಾರೆ. ರಾಯಚೂರು ತಾಲೂಕಿನ ಬಾಪುರ ಗ್ರಾಮದ ಅರಣ್ಯ ಭೂಮಿಯಲ್ಲಿ ಅರವತ್ತು ವರ್ಷಗಳಿಂದ ಸಾಗುವಳಿ...

ರಾಯಚೂರು | ಪಂಪ್‌ಸೆಟ್ ಮುಳುಗುವ ಭೀತಿಯಲ್ಲಿ ರೈತರು; ಬ್ಯಾರೇಜ್ ಗೇಟ್ ತೆರೆಯಲು ರೈತರಿಂದ ದಿಢೀರ್ ಪ್ರತಿಭಟನೆ

ರಾಯಚೂರು ಜಿಲ್ಲೆಯ ನಾರಾಯಣಪುರದ ಬಸವಸಾಗರ ಜಲಾಶಯದಿಂದ ಈಗಾಗಲೇ ಭಾರೀ ಪ್ರಮಾಣದಲ್ಲಿ ಕೃಷ್ಣಾ ನದಿಗೆ ನೀರನ್ನು ಬಿಡುಗಡೆ ಮಾಡಲಾಗಿದ್ದು, ಇದರಿಂದ ನದಿ ಪಾತ್ರದ ರೈತರಿಗೆ ಸಂಕಷ್ಟ ಎದುರಾಗಿದೆ. ಅಲ್ಲದೇ, ಪಂಪ್‌ಸೆಟ್ ಮುಳುಗುವ ಭೀತಿಯಲ್ಲಿದ್ದು, ಬ್ಯಾರೇಜ್...

ರಾಯಚೂರು | ಕೇಂದ್ರ ಬಜೆಟ್‌ನಲ್ಲಿ ರಾಜ್ಯಕ್ಕೆ ಅನ್ಯಾಯ; ಕಾಂಗ್ರೆಸ್ ಕಾರ್ಯಕರ್ತರಿಂದ ಪ್ರತಿಭಟನೆ

ಕೇಂದ್ರ ಸರಕಾರವು ಎರಡು ಬಾರಿ ಕರ್ನಾಟಕ ರಾಜ್ಯಕ್ಕೆ ಬಜೆಟ್‌ನಲ್ಲಿ ಮಲತಾಯಿ ಧೋರಣೆ ಅನುಸರಿಸಿದೆ ಎಂದು ಆರೋಪಿಸಿ ರಾಯಚೂರು ಜಿಲ್ಲಾ ಕಾಂಗ್ರೆಸ್ ಸಮಿತಿಯ ವತಿಯಿಂದ ಪ್ರತಿಭಟನೆ ನಡೆಸಲಾಯಿತು. ರಾಯಚೂರು ನಗರದ ಡಾ.ಬಿ.ಆರ್.ಅಂಬೇಡ್ಕರ್ ವೃತ್ತದಲ್ಲಿ ಒಟ್ಟುಗೂಡಿದ ಜಿಲ್ಲಾ...

ಈ ಹೊತ್ತಿನ ಪ್ರಮುಖ ಸುದ್ದಿ