ಶಿವಮೊಗ್ಗ

ಯಡಿಯೂರಪ್ಪ ಲಿಂಗಾಯತರೋ, ಹಿಂದುವೋ; ಆಯನೂರು ಮಂಜುನಾಥ್ ಪ್ರಶ್ನೆ

ಜಾತಿಗಣತಿ ವೇಳೆ ಅರ್ಜಿಯ ಧರ್ಮದ ಕಾಲಂನಲ್ಲಿ 'ವೀರಶೈವ-ಲಿಂಗಾಯತ' ಎಂದೂ, ಜಾತಿ ಕಾಲಂನಲ್ಲಿ 'ಒಳಪಂಗಡಗಳ' ಹೆಸರನ್ನೂ ಉಲ್ಲೇಖಿಸಬೇಕು ಎಂದು ವೀರಶೈವ-ಲಿಂಗಾಯತ ಮಹಾಸಭಾ ತನ್ನ ಅಧಿವೇಶನದಲ್ಲಿ ನಿರ್ಣಯ ಕೈಗೊಂಡಿದೆ. ಈ ನಿರ್ಣಯದ ಬಗ್ಗೆ ತಮ್ಮ ಬದ್ದತೆ...

ಶಿವಮೊಗ್ಗ | ಕೇಂದ್ರ ಸರ್ಕಾರ ಸಂಸತ್ತನ್ನು ಸ್ಮಶಾನವಾಗಿಸಿದೆ: ಕಾಂಗ್ರೆಸ್‌

ಕೇಂದ್ರ ಬಿಜೆಪಿ ಸರ್ಕಾರ ಸಂಸತ್ತಿನ ಉಭಯಸದನಗಳಲ್ಲಿ ಒಟ್ಟು 142 ಸಂಸದರನ್ನು ಅಮಾನತುಗೊಳಿಸಿ ಪ್ರಜಾಪ್ರಭುತ್ವದ ಕತ್ತು ಹಿಸುಕಿದೆ. ಸಂಸತ್ತನ್ನು ಸ್ಮಶಾನವನ್ನಾಗಿ ಮಾಡಿದೆ ಎಂದು ಶಿವಮೊಗ್ಗ ಕಾಂಗ್ರೆಸ್ ಮುಖಂಡ ಎಚ್‌.ಎಸ್‌ ಸುಂದರೇಶ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಶಿವಮೊಗ್ಗದಲ್ಲಿ ಕೇಂದ್ರ...

ಶಿವಮೊಗ್ಗ | ಗುತ್ತಿಗೆದಾರರಿಂದ ಲಂಚ; ಲೋಕಾಯುಕ್ತ ಬಲೆಗೆ ಮೆಸ್ಕಾಂ ಎಇಇ

ಶಿವಮೊಗ್ಗ ಜಿಲ್ಲೆ ಸೊರಬ ತಾಲೂಕಿನ ಆನವಟ್ಟಿಯಲ್ಲಿ ಮೆಸ್ಕಾಂನ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ (ಎಇಇ) ಜಿ ರಮೇಶ್ ಗುತ್ತಿಗೆದಾರರೊಬ್ಬರಿಂದ ₹20,000 ಲಂಚ ಪಡೆಯುವಾಗ ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದಿದ್ದಾರೆ. ಅಕ್ರಮ–ಸಕ್ರಮ ಯೋಜನೆಯಡಿ ಕೃಷಿ ಪಂಪ್‌ಸೆಟ್‌ಗೆ ವಿದ್ಯುತ್...

ಶಿವಮೊಗ್ಗ | ಎನ್.ಡಿ ಸುಂದರೇಶ್‌ ನೆನೆಪಿನ ಸಭೆ – ರಕ್ತದಾನ ಶಿಬಿರ

ಒಬ್ಬ ವ್ಯಕ್ತಿ ರಕ್ತ ಕೊಡುವುದರಿಂದ 4 ವ್ಯಕ್ತಿಗಳ ಜೀವ ಉಳಿಸಬಹುದು. ಆದ್ದರಿಂದ ಜನರು ರಕ್ತದಾನ ಮಾಡಿ ಪ್ರಾಣ ಉಳಿಸಲು ನೆರವಾಗಬೇಕು ಎಂದು ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆಯ ನಾಯಕ...

ಶಿವಮೊಗ್ಗ | ಆಧಾರ್‌ ತಿದ್ದುಪಡಿಗೆ ಒಂದೇ ಕೇಂದ್ರ; ನಿತ್ಯವು ಪರದಾಡುತ್ತಿರುವ ಜನ

ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿಯಲ್ಲಿನ ಕೇಂದ್ರ ಮುಖ್ಯ ಅಂಚೆ ಕಚೇರಿ ಎದುರು ಪ್ರತಿದಿನ ಆಧಾರ್‌ ತಿದ್ದುಪಡಿಗಾಗಿ ಜನರು ಸರತಿ ಸಾಲಲ್ಲಿ ನಿಂತಿರುವುದು ಸಾಮಾನ್ಯವೆಂಬಂತಾಗಿದೆ. ಸರ್ಕಾರದ ವಿವಿಧ ಸೌಲಭ್ಯ ಪಡೆಯಲು ಆಧಾರ್ ತಿದ್ದುಪಡಿ ಕಡ್ಡಾಯವಾಗಿದೆ. ಆದರೆ,...

ನಿಷ್ಕಪಟ ಮನಸಿನ ಜನನಾಯಕ ಎನ್.ಡಿ ಸುಂದರೇಶ್ – ಒಂದು ನೆನಪು

ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲ್ಲೂಕಿನ ನಂಬಳ ಗ್ರಾಮದ ಶ್ರೀಮಂತ ಕುಟುಂಬದ ಸಿದ್ದಮ್ಮ, ದುಗ್ಗಪ್ಪಗೌಡ ಅವರ ಮಗನಾದ ಎನ್.ಡಿ ಸುಂದರೇಶ್ ದಿನಾಂಕ 24-08- 1938ರಲ್ಲಿ ಜನ್ಮ ತಾಳಿದವರು. ಇವರು ದಿನಾಂಕ 21-12-1992ರಂದು ಹೃದಯಾಘಾತಕ್ಕೊಳಗಾಗಿ ಅಸುನೀಗಿದರು....

ಶಿವಮೊಗ್ಗ | ಮಲೆನಾಡು ಕರಾವಳಿ ಜನಪರ ಒಕ್ಕೂಟ ಆಯೋಜಿಸಿದ್ದ ಎರಡು ದಿನಗಳ ಶಿಬಿರ ಯಶಸ್ವಿ

ನಮ್ಮ ರಾಜಕೀಯ ಮತ್ತು ಸಾಮಾಜಿಕ ಜೀವನದಲ್ಲಿ ಗಾಢವಾದ ವೈಚಾರಿಕ ಮತ್ತು ಸಾಂವಿಧಾನಿಕ ಹಿನ್ನೆಲೆ, ನಿರ್ಧಿಷ್ಟ ಗುರಿ ಹಾಗೂ ಸ್ಪಷ್ಟತೆ ಇರಬೇಕು ಎಂದು ಮಲೆನಾಡು ಕರಾವಳಿ ಜನಪರ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಸುಧೀರ್ ಕುಮಾರ್...

ಶಿವಮೊಗ್ಗದಿಂದ ಗೋವಾಕ್ಕೆ ಹಾರದೆ ನಿಂತ ವಿಮಾನ; ಪ್ರಯಾಣಿಕರ ಆಕ್ರೋಶ

ಶಿವಮೊಗ್ಗದಿಂದ ಗೋವಾಕ್ಕೆ ತೆರಳಬೇಕಿದ್ದ ಸ್ಟಾರ್ ಏರ್​ಲೈನ್ಸ್​ ಸಂಸ್ಥೆಯ ವಿಮಾನ ಕೊನೆ ಹಂತದಲ್ಲಿ ರದ್ದಾಗಿದೆ. ಹೀಗಾಗಿ 50ಕ್ಕೂ ಹೆಚ್ಚು ಪ್ರಯಾಣಿಕರು ಶಿವಮೊಗ್ಗ ವಿಮಾನ ನಿಲ್ದಾಣದಲ್ಲಿ ಪರದಾಡಿದ್ದಾರೆ. ತಾಂತ್ರಿಕ ಸಮಸ್ಯೆ ನೆಪ ಹೇಳಿ ಇಂದು ಸ್ಟಾರ್...

ಶಿವಮೊಗ್ಗ | ಸಮಸ್ಯೆಗಳ ಆಗರವಾಗಿದೆ ತೇವರೇಚಟ್ನಳ್ಳಿ ವಾರ್ಡ್‌; ಅಳಲು ಕೇಳುವವರೇ ಇಲ್ಲ

ಶಿವಮೊಗ್ಗ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿರುವ ತೇವರೇಚಟ್ನಳ್ಳಿಯ ಸೇತುವೆ ನಿರ್ಮಾಣವಾಗಿ ನಾಲ್ಕೇ ವರ್ಷಕ್ಕೆ ಶಿಥಿಲಗೊಂಡಿದೆ. ಸೇತುವೆಯ  ತಡೆಗೋಡೆಗಳು ಬಿರುಕು ಬಿಟ್ಟಿವೆ. ಸೇತುವೆ ಯಾವಾಗ ಕುಸಿಯಾತ್ತದೋ ಎಂಬ ಆತಂಕದಲ್ಲೇ ಸಾರ್ವಜನಿಕರು ಸೇತುವೆಯನ್ನು ಬಳಸುತ್ತಿದ್ದಾರೆ. ಸೇತುವೆಯು ತೇವರೇಚಟ್ನಳ್ಳಿಯಿಂದ ರಾಗಿಗುಡ್ಡ, ನವುಲೇ...

ಶಿವಮೊಗ್ಗ | ಅಕ್ರಮ ಕಟ್ಟಡ ಜಾಗ ಮಂಜೂರಿ ಹಕ್ಕುಪತ್ರ ನಕಲಿ; ಎಎಪಿ ಆರೋಪ

ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನಲ್ಲಿ ಇರುವ ಸರ್ಕಾರಿ ಜಾಗಗಳು, ಜಮೀನುಗಳು ಹಾಗೂ ಯಾರದ್ದೋ ಜಮೀನನ್ನು ಇನ್ನಾರಿಗೋ ಬರೆದುಕೊಡಲಾಗುತ್ತಿದೆ. ಹೊಸನಗರ ಕಂದಾಯ ಇಲಾಖೆಯ ಕೆಲವು ಸಿಬ್ಬಂದಿಗಳು ಅವ್ಯವಹಾರ ನಡೆಸುತ್ತಿದ್ದಾರೆ ಎಂದು ಎಎಪಿ ಆರೋಪಿಸಿದೆ. ಶಿವಮೊಗ್ಗದಲ್ಲಿ ಪತ್ರಿಕಾಗೋಷ್ಠಿ...

ಶಿವಮೊಗ್ಗ | ಆ್ಯಂಬುಲೆನ್ಸ್‌ ವ್ಯವಸ್ಥೆ ಇಲ್ಲದೆ ಹೆರಿಗೆ ನೋವಿನಿಂದ ಒದ್ದಾಡಿದ ಗರ್ಭಿಣಿ

ಆ್ಯಂಬುಲೆನ್ಸ್‌ ವ್ಯವಸ್ಥೆ ಇಲ್ಲದೆ ಗರ್ಭಿಣಿಯೊಬ್ಬರು ಹೆರಿಗೆ ನೋವಿನಿಂದ ಒದ್ದಾಡಿರುವ ಘಟನೆ ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನಲ್ಲಿ ನಡೆದಿದೆ. ತಾಲೂಕಿನ ಬ್ಯಾಕೊಡು ಪ್ರಾಥಮಿಕ ಆರೋಗ್ಯ ಕೇಂದ್ರದ ವ್ಯಾಪ್ತಿಯಲ್ಲಿ ಗರ್ಭಿಣಿಯೊಬ್ಬರಿಗೆ ಹೆರಿಗೆ ನೋವು ಕಾಣಿಸಿತ್ತು. ಆದರೆ, ಅವರನ್ನು...

ಶಿವಮೊಗ್ಗ | ರಾಜ್ಯ ಸರ್ಕಾರದ ವಿರುದ್ದ ಹೋರಾಟ ನಡೆಸಲಾಗುವುದು; ಜೆಡಿಎಸ್‌ ಎಚ್ಚರಿಕೆ

ರಾಜ್ಯ ಸರ್ಕಾರದ ವಿರುದ್ದ ಮುಂದಿನ ದಿನಗಳಲ್ಲಿ ಹೋರಾಟ ನಡೆಸಲಾಗುವುದು ಎಂದು ಜೆಡಿಎಸ್ ಮುಖಂಡ ಕೆಬಿಪಿ ಶಿವಮೊಗ್ಗ ಜಿಲ್ಲೆಯ ಸೊರಬದಲ್ಲಿ ಹೇಳಿಕೆ ನೀಡಿದ್ದಾರೆ. ಸೊರಬ ಪಟ್ಟಣದ ಅಲೇಕಲ್ ಸಭಾಂಗಣದಲ್ಲಿ ಬುಧವಾರ ಕರೆದಿದ್ದ ಜಾತ್ಯತೀತ ಜನತಾದಳದ ತಾಲೂಕು...

ಈ ಹೊತ್ತಿನ ಪ್ರಮುಖ ಸುದ್ದಿ