ಶಿವಮೊಗ್ಗ

ತುಂಗಭದ್ರಾ ಕ್ರಸ್ಟ್‌ಗೇಟ್ | ಕಳಪೆ ನಿರ್ವಹಣೆಗೈದ ಅಧಿಕಾರಿಗಳ ಮೇಲೆ ಸೂಕ್ತ ಕ್ರಮ ಕೈಗೊಳ್ಳಿ: ರೈತ ಮುಖಂಡ ಬಸವರಾಜಪ್ಪ

ವಿಜಯನಗರ ಜಿಲ್ಲೆಯ ಹೊಸಪೇಟೆಯ ತುಂಗಭದ್ರಾ ಅಣೆಕಟ್ಟಿನ ಹಾನಿಗೊಳಗಾದ 19ನೇ ಗೇಟನ್ನು ತಕ್ಷಣವೇ ದುರಸ್ತಿ ಮಾಡಬೇಕು, ಕ್ರಸ್ಟ್‌ಗೇಟ್ ಕಳಪೆ ನಿರ್ವಹಣೆ ಮಾಡಿರುವ ಅಧಿಕಾರಿಗಳ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಕರ್ನಾಟಕ ರಾಜ್ಯ...

ಶಿವಮೊಗ್ಗ | ಮಕ್ಕಳಿಗೆ ಶೈಕ್ಷಣಿಕ ಹಂತದಲ್ಲೇ ಪರಿಸರ ಪ್ರಜ್ಞೆ ಮೂಡಿಸಬೇಕು: ರೋಟರಿ ಕ್ಲಬ್ ಅಧ್ಯಕ್ಷ ಅನಿಲ್ ಕುಮಾರ್

ಮುಂದಿನ ಪೀಳಿಗೆಗೆ ನಾವು ಕೊಡುಗೆ ನೀಡುವುದಾದರೆ ಪರಿಸರ ಉಳಿಸಬೇಕು. ಹಾಗಾಗಿ ಮಕ್ಕಳಿಗೆ ಶೈಕ್ಷಣಿಕ ಹಂತದಲ್ಲಿಯೇ ಪರಿಸರ ಪ್ರಜ್ಞೆ ಮೂಡಿಸಬೇಕು ಎಂದು ರೋಟರಿ ಕ್ಲಬ್ ಅಧ್ಯಕ್ಷ ಅನಿಲ್ ಕುಮಾರ್ ತಿಳಿಸಿದರು. ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲೂಕಿನ...

ಶಿವಮೊಗ್ಗ | ಕೊಲೆ ಪ್ರಕರಣ; ಎಂಟು ಮಂದಿಗೆ ಜೀವಾವಧಿ ಶಿಕ್ಷೆ

2021ರಲ್ಲಿ ತುಂಗಾ ನಗರ ಠಾಣೆ ವ್ಯಾಪ್ತಿಯಲ್ಲಿ ನಡೆದ ಗಾಂಜಾ ಪೆಡ್ಲರ್‌ ಟ್ವಿಸ್ಟ್ ಕೊಲೆ ಪ್ರಕರಣದ ಎಂಟು ಮಂದಿಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ. ಗಾಂಜಾ ಮಾಹಿತಿಯನ್ನು ಪೊಲೀಸರಿಗೆ ನೀಡುತ್ತಾನೆಂಬ ಕಾರಣಕ್ಕೆ 2021ರ ಸಮಯದಲ್ಲಿ...

ಹೊಸನಗರ | ಇಬ್ಬರು ಮಕ್ಕಳೊಂದಿಗೆ ಬಾವಿಗೆ ಹಾರಿ ತಾಯಿ ಆತ್ಮಹತ್ಯೆ

ಎರಡು ಪುಟ್ಟ ಮಕ್ಕಳನ್ನು ಬಾವಿಗೆ ಎಸೆದು ತಾಯಿ ಕೂಡ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಹೃದಯ ವಿದ್ರಾವಕ ಘಟನೆ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಮತ್ತಿಕೈ ವ್ಯಾಪ್ತಿಯಲ್ಲಿ ನಡೆದಿದೆ. ಮತ್ತಿಕೈ ಸಮೀಪದ ಚಂಪಕಾಪುರ ಗ್ರಾಮದ...

ತೀರ್ಥಹಳ್ಳಿ | ಅಕ್ರಮ ರೆಸಾರ್ಟ್‌ ಬಗ್ಗೆ ವರದಿ ಕೊಟ್ಟ ಬೆನ್ನಲ್ಲೇ ವರ್ಗಾವಣೆ; ನ್ಯಾಯಾಲಯದ ಮೆಟ್ಟಿಲೇರಿದ ವಲಯ ಅರಣ್ಯಾಧಿಕಾರಿ

ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿಯಲ್ಲಿ ಅಕ್ರಮವಾಗಿ ಕಾರ್ಯಾಚರಿಸುತ್ತಿದ್ದ ವಿಹಂಗಮ ಹಾಲಿಡೇ ರಿಟ್ರೀಟ್ ಎಂಬ ಖಾಸಗಿ ರೆಸಾರ್ಟ್‌ನ ಸ್ಥಳ ಪರಿಶೀಲನೆ ನಡೆಸಿ ವರದಿ ನೀಡಿದ್ದ ವಲಯ ಅರಣ್ಯಾಧಿಕಾರಿ(ಆರ್‌ಎಫ್‌ಒ) ಲೋಕೇಶ್ ಅವರನ್ನು ಎರಡು ದಿನಗಳಲ್ಲಿಯೇ ವರ್ಗಾವಣೆ ಮಾಡಲಾಗಿದೆ....

ಶಿವಮೊಗ್ಗ | ತೀರ್ಥಹಳ್ಳಿ ತಾಲೂಕಿನ ಹಲವು ಅರಣ್ಯ ಅಧಿಕಾರಿಗಳ ವರ್ಗಾವಣೆ

ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಹಲವು ಅರಣ್ಯ ಅಧಿಕಾರಿಗಳನ್ನು ವರ್ಗಾವಣೆ ಮಾಡಲಾಗಿದೆ. ಕಳೆದ ಮೂರು ವರ್ಷಗಳಿಂದ ಮಂಡಗದ್ದೆ ಮತ್ತು ಮೇಗರವಳ್ಳಿ (ಆಗುಂಬೆ) ವಲಯ ಅರಣ್ಯ ಅಧಿಕಾರಿಗಳಾಗಿ ಅರಣ್ಯ ರಕ್ಷಣೆ , ಅರಣ್ಯದಲ್ಲಿನ ಅಕ್ರಮಗಳ ನಿಯಂತ್ರಣ,...

ಶಿವಮೊಗ್ಗ | ಗುಂಡಿಮಯವಾದ ಅನುಪಿನಕಟ್ಟೆ ಗ್ರಾಮದ ರಸ್ತೆ : ಹೈರಾಣಾದ ವಾಹನ ಸವಾರರು!

ಶಿವಮೊಗ್ಗ ಗ್ರಾಮಾಂತರದ ಅನುಪಿನಕಟ್ಟೆ ಗ್ರಾಮದ ಸೇತುವೆಯ ಸಮೀಪದ ರಸ್ತೆ ಗುಂಡಿಮಯವಾಗಿದ್ದು, ಸಂಪೂರ್ಣ ಹಾಳಾಗಿದೆ. ಅಧಿಕಾರಿಗಳೇ ಈ ರಸ್ತೆಯಾಗಿ ಓಡಾಡುತ್ತಿದ್ದರೂ ಕೂಡ ಏನೂ ತಿಳಿಯದವರಂತೆ ವರ್ತಿಸುತ್ತಿದ್ದಾರೆ ಎಂಬ ಆರೋಪ ಸಾರ್ವಜನಿಕರಿಂದ ಕೇಳಿಬಂದಿದೆ. ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಈ...

ಸಾಗರ | ಚಲಿಸುತ್ತಿದ್ದ ಸಾರಿಗೆ ಬಸ್‌ನಲ್ಲಿ ದಿಢೀರ್ ಬೆಂಕಿ; ಪ್ರಯಾಣಿಕರು ಅಪಾಯದಿಂದ ಪಾರು

ಶಿವಮೊಗ್ಗ ಜಿಲ್ಲೆಯ ಸಾಗರ ನಗರದ ಕಾಲೇಜೊಂದರ ಬಳಿ ಕೆಎಸ್ಆರ್‌ಟಿಸಿ ಬಸ್‌ನಲ್ಲಿ ದಿಢೀರ್ ಬೆಂಕಿ ಕಾಣಿಸಿಕೊಂಡ ಘಟನೆ ನಡೆದಿದೆ. ತಾಂತ್ರಿಕ ದೋಷದಿಂದಾಗಿ ಚಲಿಸುತ್ತಿದ್ದ ವೇಳೆ ಈ ಅವಘಡ ಸಂಭವಿಸಿದೆ. ಯಾರಿಗೂ ಏನು ಅಪಾಯ ಸಂಭವಿಸಿಲ್ಲ ಎಂದು...

ಈ ದಿನ ಇಂಪ್ಯಾಕ್ಟ್ | ಭಾರತೀಪುರ ಕಿರು ಅರಣ್ಯ ಪ್ರದೇಶ ಒತ್ತುವರಿ ಆರೋಪ; ವಿಹಂಗಮ ಹಾಲಿಡೇ ರಿಟ್ರೀಟ್ ವಿರುದ್ಧ ಕ್ರಮ

ಭಾರತೀಪುರ ಕಿರು ಅರಣ್ಯ ಪ್ರದೇಶ ಒತ್ತುವರಿ ಮಾಡಿ ಅರಣ್ಯ ಕಾಯ್ದೆ ಉಲ್ಲಂಘಿಸಿರುವ ವಿಹಂಗಮ ಹಾಲಿಡೇ ರಿಟ್ರೀಟ್ ವಿರುದ್ಧ ಕ್ರಮ ಕೈಗೊಂಡು ಅಕ್ರಮ ಮಂಜೂರಾತಿ/ಪರವಾನಿಗೆ ರದ್ದುಗೊಳಿಸುವಂತೆ ಕೋರಿ ಶಿವಮೊಗ್ಗದ ಉಪ ವಿಭಾಗಾಧಿಕಾರಿ ಕಚೇರಿಗೆ ಕಡತ...

ಶಿವಮೊಗ್ಗ | ಬೊಮ್ಮನಕಟ್ಟೆ ವಾರ್ಡ್‌ಗೆ ಆಧುನಿಕ ಚಿತಾಗಾರ ವ್ಯವಸ್ಥೆ ಕಲ್ಪಿಸಿಕೊಡಲು ಮನವಿ

ಶಿವಮೊಗ್ಗ ನಗರದ ಬೊಮ್ಮನಕಟ್ಟೆ ವಾರ್ಡ್‌ಗೆ ಆಧುನಿಕ ಚಿತಾಗಾರ ವ್ಯವಸ್ಥೆ ಕಲ್ಪಿಸಿಕೊಡುವಂತೆ ಆಗ್ರಹಿಸಿ ಎಸ್ ಬಂಗಾರಪ್ಪ ಅಭಿಮಾನಿಗಳ ಸಂಘವು ಮನವಿ ಸಲ್ಲಿಸಿದೆ. ಶಿವಮೊಗ್ಗ ನಗರದ ವಾರ್ಡ್ ನಂಬರ್ 1 ಮತ್ತು 2 ಬೊಮ್ಮನಕಟ್ಟೆ ಸರ್ವೇ ನಂಬರ್...

ಮದುವೆಯಾಗುವುದಾಗಿ ಅತ್ಯಾಚಾರ, ವಂಚನೆ: ಶಿವಮೊಗ್ಗದ ಬಿಜೆಪಿ ಮಾಧ್ಯಮ ಪ್ರಮುಖ್ ಶರತ್ ವಿರುದ್ಧ ಪ್ರಕರಣ ದಾಖಲು

ಮದುವೆಯಾಗುವುದಾಗಿ ನಂಬಿಸಿ ದೈಹಿಕ ಸಂಪರ್ಕ ಬೆಳೆಸಿದ್ದಲ್ಲದೆ ಸಂತ್ರಸ್ತೆಯಿಂದಲೇ ನಾಲ್ಕು ಲಕ್ಷ ರೂ. ಪಡೆದು ವಂಚಿಸಿದ ಆರೋಪದಲ್ಲಿ ಬಿಜೆಪಿ ಮಾಧ್ಯಮ ಪ್ರಮುಖ ಶರತ್ ಕಲ್ಯಾಣಿ ಎಂಬಾತನ ಎಂಬಾತನ ವಿರುದ್ಧ ಅತ್ಯಾಚಾರ ಹಾಗೂ ವಂಚನೆ ಪ್ರಕರಣ...

ಶಿವಮೊಗ್ಗ | ಪ್ರವಾಹದಿಂದ ಮಸೀದಿಯ ಪ್ರದೇಶಕ್ಕೆ ಹಾನಿ; ಸ್ಥಳಕ್ಕೆ ಸಚಿವ ಮಧು ಬಂಗಾರಪ್ಪ ಭೇಟಿ

ಶಿವಮೊಗ್ಗ ಜಿಲ್ಲೆಯಲ್ಲಿ ಪ್ರವಾಹದಿಂದ ಹಲವು ಕಡೆಗಳಲ್ಲಿ ಹಾನಿಯುಂಟಾದ ವಿವಿಧ ಪ್ರದೇಶಗಳಿಗೆ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಭೇಟಿ ನೀಡಿ, ಪರಿಶೀಲನೆ ನಡೆಸಿದರು. ನಗರದ ತುಂಗಾ ನದಿಯ ಹೊಸ ಸೇತುವೆ ಸವಾಯಿಪಾಳ್ಯ ತಡೆಗೋಡೆ ನಿರ್ಮಾಣ...

ಈ ಹೊತ್ತಿನ ಪ್ರಮುಖ ಸುದ್ದಿ