ವಿಜಯಪುರ

ವಿಜಯಪುರ | ಅ. 6ಕ್ಕೆ ಜನಕಲಾ ಸಾಂಸ್ಕೃತಿಕ ಮೇಳ: ಪರಿಶಿಷ್ಟ ಜಾತಿ ಮತ್ತು ಪಂಗಡ‌ ಸಮಿತಿ ಬೆಂಬಲ

ವಿಜಯಪುರ ಜಿಲ್ಲೆಯಲ್ಲಿ ಪ್ರಪ್ರಥಮ ಬಾರಿಗೆ ಹೋರಾಟದ ಹಾಡುಗಳು ರಿಂಗಣಿಸಲಿದ್ದು, ಜೊತೆಗೆ ಕೋಮುವಾದಿ ಹಂತಕರ ಗುಂಡಿಗೆ ಬಲಿಯಾದ ಚಿಂತಕ ಎಂ.ಎಂ.ಕಲಬುರ್ಗಿಯವರ ಜೀವನಾಧಾರಿತ ನಾಟಕ ಪ್ರದರ್ಶನಗೊಳ್ಳಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಮೇ ಸಾಹಿತ್ಯ ಬಳಗ, ಲಡಾಯಿ ಪ್ರಕಾಶನ,...

ವಿಜಯಪುರ | ಬೈಕ್ ಮತ್ತು ಲಾರಿ ನಡುವೆ ಅಪಘಾತ: ಸ್ಥಳದಲ್ಲೇ ಇಬ್ಬರ ಸಾವು

ಬೈಕ್ ಹಾಗೂ ಲಾರಿ ಮಧ್ಯೆ ಅಪಘಾತ ಸಂಭವಿಸಿ ಬೈಕ್ ನಲ್ಲಿದ್ದ ಇಬ್ಬರು ಸವಾರರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಶುಕ್ರವಾರ ಜಿಲ್ಲೆಯ ಬಸವನ ಬಾಗೇವಾಡಿ ತಾಲೂಕಿನ ಮನಗೂಳಿ ಬಳಿಯ ರಾಷ್ಟ್ರೀಯ ಹೆದ್ದಾರಿ 50ರಲ್ಲಿ ನಡೆದಿದೆ. ಮೃತರನ್ನು...

ವಿಜಯಪುರ | ಬೆಳೆವಿಮೆ ಪರಿಹಾರ ನೀಡುವಂತೆ ರೈತ ಸಂಘ ಆಗ್ರಹ

ವಿಮೆಯಲ್ಲಿ ಆಗಿರುವ ಮೋಸವನ್ನು ಸರಿಪಡಿಸಿ, 2023-24ರಲ್ಲಿ ವಿಜಯಪುರ ಜಿಲ್ಲೆಯ ನಷ್ಟಗೊಂಡ ಎಲ್ಲ ರೈತರಿಗೂ ಬೆಳೆವಿಮೆ ಪರಿಹಾರ ನೀಡಬೇಕೆಂದು ರೈತ ಸಂಘದ ಜಿಲ್ಲಾಧ್ಯಕ್ಷ ಸಂಗಮೇಶ ಸಗರ ಪ್ರತಿಭಟನೆಯಲ್ಲಿ ಆಗ್ರಹಿಸಿದರು. ಫಸಲ್ ಭೀಮಾ ಯೋಜನೆಯಡಿ ಸಾಕಷ್ಟು ಅವ್ಯವಹಾರ...

ವಿಜಯಪುರ | ಗಾಂಧೀಜಿ ಪ್ರತಿಪಾದಿಸಿದ ಅಭಿವೃದ್ಧಿ ಮಾದರಿ ವಿಕಸಿತ ಭಾರತದ ಗುರಿ ಸಾಧಿಸಲು ಸಾಧ್ಯ: ಕುಲಪತಿ ಬಿ ಕೆ ತುಳಸಿಮಾಲ

ಮಹಾತ್ಮಾ ಗಾಂಧೀಜಿ ಪ್ರತಿಪಾದಿಸಿದ ಅಭಿವೃದ್ಧಿ ಮಾದರಿಗಳನ್ನು ದೇಶದಲ್ಲಿ ಅನುಷ್ಠಾನಗೊಳಿಸಿದಲ್ಲಿ ಸುಸ್ಥಿರ ಅಭಿವೃದ್ಧಿ ಮತ್ತು ವಿಕಸಿತ ಭಾರತದ ಗುರಿಗಳನ್ನು ಸುಲಭವಾಗಿ ಸಾಧಿಸಲು ಸಾಧ್ಯವಿದೆ ಎಂದು ಕುಲಪತಿ ಬಿ ಕೆ ತುಳಸಿಮಾಲ ಅವರು ಪ್ರತಿಪಾದಿಸಿದರು. ವಿಜಯಪುರ ನಗರದ...

ವಿಜಯಪುರ | ಸಾಹಿತ್ಯವು ಸಮಾನತೆ ವ್ಯಕ್ತಪಡಿಸುವ ಮಾಧ್ಯಮವಾಗಿದೆ: ಮೆಹಬೂಬಸಾಬ.ವೈ.ಜೆ

ಸಾಹಿತ್ಯ ಪ್ರತಿಯೊಬ್ಬರಿಗೂ ಆತ್ಮ ಚಿಂತನೆ ಮಾಡಲು ಪ್ರೇರೇಪಿಸುವ ಹಾಗೂ ಸಹಜ ಮಾನವ ಪ್ರೀತಿಯನ್ನು ಹೆಚ್ಚಿಸಿ, ಸಮಾನತೆಯನ್ನು ವ್ಯಕ್ತಪಡಿಸುವ ಮಾಧ್ಯಮವಾಗಿದೆ ಎಂದು ಸಿಂದಗಿಯ ಗಜಲ್ ಸಾಹಿತಿ ಮೆಹಬೂಬಸಾಬ್ ವೈ ಜೆ ಹೇಳಿದರು. ಪ್ರಭಾವತಿ ಎಸ್. ದೇಸಾಯಿ...

ವಿಜಯಪುರ | ಸಮಾಜದ ಅಭಿವೃದ್ಧಿಯಲ್ಲಿ ಯುವಜನರ ಪಾತ್ರ ಬಹುಮುಖ್ಯ: ಆಂತೋನಿ ಸಿ

ಸಮಾಜದ ಅಭಿವೃದ್ಧಿಯಲ್ಲಿ ಯುವಕರ ಪಾತ್ರ ಬಹುಮುಖ್ಯವಾದ್ದುದು. ಅವರು ಮನಸು ಮಾಡಿದರೆ ದೇಶವನ್ನೆ ಆಳಬಲ್ಲರು ಆದರೆ ಈಗಿನ ಯುವಕರು ತಮ್ಮ ಯೌವನಾವಸ್ಥೆಯಲ್ಲಿ ಮೊಬೈಲ್ ಬಳಕೆಯಲ್ಲಿ ಹೆಚ್ಚಿನ ಸಮಯ ಕಳೆಯುತ್ತಿದ್ದಾರೆ ಎಂದು ಮುಧೋಳದ ಅಂತ್ಯೋದಯ ಸಂಸ್ಥೆ...

ವಿಜಯಪುರ | ಅ.6ರಂದು ಜನಕಲ ಸಾಂಸ್ಕೃತಿಕ ಮೇಳ

ಕವಿ ಪ್ರಕಾಶನದ ಮೇ ಬಳಗ ಹಾಗೂ ಲಡಾಯಿ ಪ್ರಕಾಶನದ ಚಿತ್ತಾರ ಕಲಾ ಬಳಗ ಸಂಯುಕ್ತ ಆಶ್ರಯದಲ್ಲಿ ವಿಜಯಪುರ ನಗರದ ಕಂದಗಲ್ ಶ್ರೀ ಹನುಮಂತರಾಯ ರಂಗಮಂದಿರದಲ್ಲಿ ಅಕ್ಟೋಬರ್‌ 6ರಂದು ಜನಕಲ ಸಾಂಸ್ಕೃತಿಕ ಮೇಳ ಕಾರ್ಯಕ್ರಮ...

ವಿಜಯಪುರ | ಶೋಷಿತರನ್ನು ಶೋಷಣೆಯಿಂದ ಮುಕ್ತಗೊಳಿಸುವುದು ಜನಪರ ಚಳವಳಿಗಾರರ ಜವಾಬ್ದಾರಿ: ಡಾ. ಭೀಮಪ್ಪ

ಮೂಢನಂಬಿಕೆಗೆ ಬಲಿಯಾಗಿ ಶೋಷಣೆಗೆ ಒಳಗಾಗುತ್ತಿರುವ ಬಹುಸಂಖ್ಯಾತ ಬಡವರು ಮತ್ತು ಕೆಳವರ್ಗದ ಜನರನ್ನು ಶೋಷಣೆಯಿಂದ ಮುಕ್ತಗೊಳಿಸುವ ಜವಾಬ್ದಾರಿ ಜನಪರ ಚಳವಳಿಗಾರರ ಮೇಲಿದೆ. ಆ ನಿಟ್ಟಿನಲ್ಲಿ ಜನಪರ ಗಾಯಕರು ಮತ್ತಷ್ಟು ಕೆಲಸ ಮಾಡಬೇಕು ಎಂದು ಕೃಷಿ...

ವಿಜಯಪುರ | ಮೂಲಸೌಕರ್ಯಗಳಿಲ್ಲದೆ ಸೊರಗುತ್ತಿದೆ ಸೋಮನಾಳ; ಅಧಿಕಾರಿಗಳ ನಿರ್ಲಕ್ಷ್ಯ

ವಿಜಯಪುರ ಜಿಲ್ಲೆ ಮುದ್ದೇಬಿಹಾಳ ತಾಲೂಕಿನ ಸೋಮನಾಳ ಗ್ರಾಮದಲ್ಲಿ 13 ಮನೆಗಳ ಮುಂದೆ 200 ಮಿಟರ್ ರಸ್ತೆ ಉದ್ದಕ್ಕೂ ನೀರು ಸಂಗ್ರಹವಾಗುತ್ತದೆ. ರಸ್ತೆ ದುರಸ್ತಿ ಹಾಗೂ ಮೂಲಸೌಕರ್ಯಗಳಿಲ್ಲದೆ ಸ್ಥಳೀಯರು ನಲುಗುತ್ತಿದ್ದಾರೆ. ರಸ್ತೆಯಲ್ಲಿ ಯಾವಾಗಲೂ ನೀರು ಸಂಗ್ರಹವಾಗುವುದರಿಂದ...

ವಿಜಯಪುರ ಜಿಲ್ಲೆ ಸೂಫಿ ಸಂತ ಶರಣರ ನಾಡಾಗಿದೆ: ಜಿಲ್ಲಾಧಿಕಾರಿ ಟಿ ಭೂಬಾಲನ್

ವಿಜಯಪುರ ಜಿಲ್ಲೆ ಸೂಫಿ ಸಂತ ಶರಣರ ನಾಡಾಗಿದೆ. ಎಲ್ಲರನ್ನೂ ಸರಿಸಮಾನರಾಗಿ ಕಾಣುವ ಮಾತೃ ಸ್ವರೂಪಿ ಜಿಲ್ಲೆಯಾಗಿದ್ದರ ಹಿನ್ನಲೆ ಇಂದು ವಿಜಯಪುರ ಐತಿಹಾಸಿಕ ಪಾರಂಪರಿಕವಾಗಿ ಗುರುತಿಸಿಕೊಂಡಿದ್ದು, ಇಡೀ ದೇಶಕ್ಕೆ ಮಾದರಿಯಾಗಿದೆ ಎಂದು ಜಿಲ್ಲಾಧಿಕಾರಿ ಟಿ...

ವಿಜಯಪುರ | ಭಾರೀ ಮಳೆಗೆ ನಲುಗಿದ ಗುಮ್ಮಟ ನಗರಿ; ಜನ-ಜೀವನ ಅಸ್ತವ್ಯಸ್ತ

ಗುಮ್ಮಟ ನಗರಿ ವಿಜಯಪುರ ನಗರ ಮತ್ತು ಜಿಲ್ಲೆಯಲ್ಲಿ ಭಾರೀ ಮಳೆಯಾಗಿದೆ. ಸೋಮವಾರ ರಾತ್ರಿ ಸುರಿದ ಧಾರಾಕಾರ ಮಳೆಗೆ ಇಡೀ ಜಿಲ್ಲೆ ನಲುಗಿಹೋಗಿದೆ. ಜನ-ಜೀವನ ಅಸ್ತವ್ಯಸ್ತವಾಗಿದೆ. ವಿಜಯಪುರ ಜಿಲ್ಲೆಯಲ್ಲಿ ಕಳೆದ ಮೂರು ದಿನಗಳಿಂದ ಮಳೆ...

ವಿಜಯಪುರ | ಅಕ್ರಮವಾಗಿ ಮದ್ಯ ಮಾರಾಟ; ಕಡಿವಾಣಕ್ಕೆ ಕೆಆರ್‌ಎಸ್ ಪಕ್ಷ ಆಗ್ರಹ

ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನಾದ್ಯಂತ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿರುವುದು ಭರದಿಂದ ನಡೆಯುತ್ತಿದ್ದು, ಅಪರಾಧ‌ವೆಂದು ತಿಳಿದಿದ್ದರೂ ಮದ್ಯ ಮಾರಾಟಗಾರರಿಗೆ ಕಾನೂನಿನ ಭಯವೇ ಇಲ್ಲ. ಇದಕ್ಕೆಲ್ಲ ಅಬಕಾರಿ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿ ವರ್ಗದವರೇ...

ಈ ಹೊತ್ತಿನ ಪ್ರಮುಖ ಸುದ್ದಿ