ದೇಶ

ಇರಾನ್ ಯುದ್ಧದ ಪ್ರಭಾವ: ರೂಪಾಯಿ ಮೌಲ್ಯ 92 ರೂ.ಗೆ ಕುಸಿತ; 9.7 ಲಕ್ಷ ಕೋಟಿ ರೂ. ನಷ್ಟ

ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಇರಾನ್ ಮತ್ತು ಅಮೆರಿಕ-ಇಸ್ರೇಲ್ ನಡುವಿನ ಯುದ್ಧವು ಆ ರಾಷ್ಟ್ರಗಳ ಮೇಲೆ ಮಾತ್ರವಲ್ಲದೆ, ಜಾಗತಿಕವಾಗಿಯೂ ಭಾರೀ ಪರಿಣಾಮ ಬೀರುತ್ತಿದೆ. ಈಗಾಗಲೇ, ತೈಲ ಸೇರಿದಂತೆ ಹಲವು ವಹಿವಾಟುಗಳ ಮೇಲೆ ಗಂಭೀರ ಪ್ರಭಾವ ಬೀರಿದೆ....

ತೆಲಂಗಾಣ | ಸರ್ಕಾರಿ ಆಸ್ಪತ್ರೆಯ ಶವಾಗಾರದಲ್ಲಿ ಮೃತದೇಹ ಕಚ್ಚಿ ಎಳೆದಾಡಿದ ನಾಯಿ

ತೆಲಂಗಾಣದ ಮೆಹಬೂಬ್‌ನಗರ ಜಿಲ್ಲೆಯ ಸರ್ಕಾರಿ ಆಸ್ಪತ್ರೆಯ ಶವಾಗಾರದಲ್ಲಿ ನಾಯಿಯೊಂದು ಮೃತದೇಹದ ಭಾಗವನ್ನು ಕಚ್ಚಿ ಎಳೆದಾಡಿದೆ. ಆಘಾತಕಾರಿ ಘಟನೆಗೆ ಕಾರಣರಾದ ನಾಲ್ವರು ಅಧಿಕಾರಿಗಳನ್ನು ಅಮಾನತುಗೊಳಿಸಿ ಸರ್ಕಾರ ಆದೇಶಿಸಿದೆ. ನದಿಯಲ್ಲಿ ಮುಳುಗಿ ಮೃತಪಟ್ಟಿದ್ದ ವ್ಯಕ್ತಿಯ ಶವವನ್ನು ಸೋಮವಾರ...

ಜೆಡ್ಡಾದಲ್ಲಿ ಸಿಲುಕಿರುವ ಭಾರತೀಯರನ್ನು ಮರಳಿ ಕರೆತರಲು ಇಂಡಿಗೋದಿಂದ 10 ವಿಶೇಷ ವಿಮಾನಗಳು

ಗಲ್ಫ್ ಸಂಘರ್ಷಗಳಿಂದಾಗಿ ಸಿಲುಕಿರುವ ಭಾರತೀಯರನ್ನು ಮರಳಿ ಕರೆತರಲು ಇಂಡಿಗೋ ಜೆಡ್ಡಾದಿಂದ ವಿಶೇಷ ವಿಮಾನಗಳ ವ್ಯವಸ್ಥೆ ಮಾಡಲಿದೆ. ಮಾರ್ಚ್ 3 ರಂದು ಜೆಡ್ಡಾದಿಂದ ವಿವಿಧ ಭಾರತೀಯ ನಗರಗಳಿಗೆ 10 ವಿಶೇಷ ಪರಿಹಾರ ವಿಮಾನಗಳನ್ನು ನಿರ್ವಹಿಸಲು...

ಹಿಂದೂ ರುದ್ರಭೂಮಿಯಿಂದ ಮುಸ್ಲಿಂ ವ್ಯಕ್ತಿಯ ಮೃತದೇಹ ಹೊರತೆಗೆಯಲು ಬಾಂಬೆ ಹೈಕೋರ್ಟ್ ಆದೇಶ

ಸಾಂವಿಧಾನಿಕ ರಕ್ಷಣೆಗಳು ಸಾವಿನೊಂದಿಗೆ ಕೊನೆಗೊಳ್ಳುವುದಿಲ್ಲ ಎನ್ನುವುದನ್ನು ಪುಷ್ಟೀಕರಿಸುವ ಮಹತ್ವದ ತೀರ್ಪೊಂದನ್ನು ಬಾಂಬೆ ಹೈಕೋರ್ಟ್‌ನ ನಾಗ್ಪುರ ಪೀಠವು ನೀಡಿದೆ. ಸಂವಿಧಾನದ ವಿಧಿ 21ರಡಿ ವ್ಯಕ್ತಿಯ ಸಾವಿನ ನಂತರವೂ ಘನತೆಯ ಹಕ್ಕು ಅಬಾಧಿತವಾಗಿರುತ್ತದೆ ಎಂದು ಅದು...

ಭಾರತಕ್ಕೆ ಎದುರಾಗಲಿದೆಯೇ ತೈಲ ಕ್ಷಾಮ? ಸದ್ಯಕ್ಕಿದೆ 50 ದಿನಗಳಿಗಾಗುವಷ್ಟು ಇಂಧನ ಸಂಗ್ರಹ

ಭಾರತವು ಸದ್ಯ 50 ದಿನಗಳ ಬಳಕೆಗೆ ಸಾಕಾಗುವಷ್ಟು ಕಚ್ಚಾ ತೈಲ ಮತ್ತು ಸಂಸ್ಕರಿಸಿದ ಇಂಧನ ಸಂಗ್ರಹವನ್ನು ಹೊಂದಿದೆ ಎಂದು ಸರ್ಕಾರಿ ಮೂಲಗಳು ತಿಳಿಸಿವೆ. ಇದರ ಬೆನ್ನಲ್ಲೇ, ಮಧ್ಯಪ್ರಾಚ್ಯದಲ್ಲಿ ಉದ್ವಿಗ್ನತೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಕಚ್ಚಾ...

ಅಪ್ರಾಪ್ತ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ: ಅಪರಾಧಿಗೆ 50 ವರ್ಷ ಕಠಿಣ ಜೈಲು ಶಿಕ್ಷೆ

ಅಪ್ರಾಪ್ತ ಬಾಲಕಿ ಮೇಲೆ ಪದೇ-ಪದೇ ಲೈಂಗಿಕ ದೌರ್ಜನ್ಯ ಎಸಗಿದ್ದ ಅಪರಾಧಿಗೆ ಕೇರಳದ ನ್ಯಾಯಾಲಯವು 50 ವರ್ಷಗಳ ಕಠಿಣ ಜೈಲು ಶಿಕ್ಷೆ ವಿಧಿಸಿ ತೀರ್ಪು ನೀಡಿದೆ. ಕೇರಳದ ತಿರುವಳ್ಳಂಬನ ವೆಟ್ಟಕಲ್ಲು ನಿವಾಸಿ ಶೈನು (37)...

ʼPM CARESʼ ಎಂಬ ದೊಡ್ಡ ದೋಖಾ ನಿಧಿ: ಸರ್ಕಾರೀ ಮುಸುಕಿನಲ್ಲೊಂದು ಖಾಸಗಿ ಅವಘಡ

ಟ್ರಸ್ಟ್ ಡೀಡ್‌ನಲ್ಲಿ ಉಲ್ಲೇಖಿಸಿರುವಂತೆ, PM CARES ಟ್ರಸ್ಟ್‌ನ ಆಡಳಿತ ಮಂಡಳಿಯ ಅಧ್ಯಕ್ಷರು ಭಾರತದ ಪ್ರಧಾನಮಂತ್ರಿಯೇ ಆಗಿರುತ್ತಾರೆ. ಅಲ್ಲದೆ, ಇನ್ನೂ ಮೂವರು ಟ್ರಸ್ಟಿಗಳನ್ನು ನಾಮನಿರ್ದೇಶನ ಮಾಡುವ ಸಂಪೂರ್ಣ ಅಧಿಕಾರವೂ ಪ್ರಧಾನಮಂತ್ರಿಯವರಿಗಿರುತ್ತದೆ. ಈ ಟ್ರಸ್ಟ್‌ನ ಕಡ್ಡಾಯ...

ಒತ್ತಡದಲ್ಲಿ ರೂಪಾಯಿ ಮೌಲ್ಯ: $1 = ₹91.47; ತಿಂಗಳಲ್ಲೇ ಅತ್ಯಂತ ತೀವ್ರ ಕುಸಿತ

ಡಾಲರ್‌ ಎದುರು ರೂಪಾಯಿ ಮೌಲ್ಯವು ತೀವ್ರವಾಗಿ ಕುಸಿತ ಕಂಡಿದ್ದು, ಒಂದು ಡಾಲರ್‌ಗೆ 91.47 ರೂಪಾಯಿಗೆ ಬಂದು ನಿಂತಿದೆ. ಇದು, ಒಂದು ತಿಂಗಳಲ್ಲೇ ಅತ್ಯಂತ ತೀವ್ರ ಕುಸಿತವಾಗಿದೆ. ರಾಯಿಟರ್ಸ್ ವರದಿಯ ಪ್ರಕಾರ, "ಡಾಲರ್ ಎದುರು...

ರಾಜಸ್ಥಾನ | ಜಾನುವಾರು ಸಾಗಣೆ ಆರೋಪ; ಹಿಂದುತ್ವ ಪುಂಡರಿಂದ ಯುವಕನ ಹತ್ಯೆ

ಹಸುಗಳನ್ನು ಸಾಗಿಸುತ್ತಿದ್ದಾರೆ ಎಂಬ ಕಾರಣಕ್ಕಾಗಿ ಹಿಂದುತ್ವ ಕೋಮುವಾದಿ ಪುಂಡರ ಗುಂಪು ದಾಳಿ ನಡೆಸಿದ್ದು, ಘರ್ಷಣೆಯಲ್ಲಿ ಯುವಕನೊಬ್ಬ ಹತ್ಯೆಗೀಡಾಗಿರುವ ಘಟನೆ ರಾಜಸ್ಥಾನದ ಭಿವಾಡಿಯಲ್ಲಿ ನಡೆದಿದೆ. ಯುವಕನನ್ನು ಗುಂಡಿಕ್ಕಿ ಕೊಲ್ಲಲಾಗಿದೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ. ಆದರೆ,...

ಬಿಹಾರ ಸಿಎಂ ನಿತೀಶ್‌ ಪುತ್ರ ರಾಜಕೀಯಕ್ಕೆ ಎಂಟ್ರಿ

ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರ ಪುತ್ರ ನಿಶಾಂತ್ ಕುಮಾರ್ ಅವರ ರಾಜಕೀಯ ಪ್ರವೇಶ ಅಂತಿಮಗೊಂಡಿದೆ. ಈ ಬಗ್ಗೆ ಜೆಡಿಯು ಶೀಘ್ರದಲ್ಲೇ ಅಧಿಕೃತ ಘೋಷಣೆ ಮಾಡಲಿದೆ. ಅಂದೇ, ಪಕ್ಷದಲ್ಲಿ ಅವರು ನಿಭಾಯಿಸುವ ಜವಾಬ್ದಾರಿಯ...

ಹಾರ್ಮುಜ್‌ನಲ್ಲಿ 700 ಟ್ಯಾಂಕರ್‌ಗಳ ಸಂಚಾರ ಸ್ಥಗಿತ: 10 ದಿನಗಳಲ್ಲಿ ಭಾರತಕ್ಕೆ ಇಂಧನ ಅಭಾವ?

ಒಂದು ವೇಳೆ, ಹಾರ್ಮುಜ್ ಜಲಸಂಧಿಯಲ್ಲಿನ ಸಂಚಾರ ಸ್ಥಗಿತವು ಕೆಲವು ದಿನಗಳ ಕಾಲ ಮುಂದುವರಿದರೆ, ಟ್ಯಾಂಕರ್‌ಗಳ ಸಾಲು ಮತ್ತಷ್ಟು ಬೆಳೆಯಲಿದೆ. ಮಾತ್ರವಲ್ಲದೆ, ತೈಲ ವಿತರಣಾ ವ್ಯವಸ್ಥೆಯು ಸಂಪೂರ್ಣವಾಗಿ ಕುಸಿಯಲಿದೆ. ಪರಿಣಾಮಗಳು ಭೀಕರವಾಗಿರಲಿವೆ. ಇರಾನ್  ಮತ್ತು...

ಯುದ್ಧಕೋರರ ಪರ ನಿಲುವುಳ್ಳ ಮೋದಿ ಸರ್ಕಾರಕ್ಕೆ ಬೊಮ್ಮಾಯಿ ಮಾತಿನ ಎಚ್ಚರಿಕೆ ಘಂಟೆ!

ಇರಾನ್‌ ಮೇಲೆ ಯುದ್ಧದಾಹಿ ಅಮೆರಿಕ ಮತ್ತು ಅದರ ಬಾಲಂಗೋಚಿ ಇಸ್ರೇಲ್ ಯುದ್ಧ ಸಾರಿವೆ. ಇರಾನ್‌ನ ಸರ್ವೋಚ್ಛ ನಾಯಕ ಖಮೇನಿ ಅವರನ್ನು ಹತ್ಯೆಗೈದಿವೆ. ತೈಲ ಸಂಪತ್ತನ್ನು ಹೊಂದಿರುವ ಇರಾನ್‌ಅನ್ನು ತಮ್ಮ ನಿಯಂತ್ರಣಕ್ಕೆ ತೆಗೆದುಕೊಳ್ಳಬೇಕೆಂದು ಹವಣಿಸುತ್ತಿವೆ....

ಈ ಹೊತ್ತಿನ ಪ್ರಮುಖ ಸುದ್ದಿ