ಹೊಲ ಮಾದಿಗರು ಕಟ್ಟಿದ ಸಾಮ್ರಾಜ್ಯ ಬುದ್ಧ ಹೇಳಿದ ಆಸೆಯ ನಿರಾಕರಿಸಿದ ಸಾಮ್ರಾಜ್ಯ - ಬಸವ ಹೇಳಿದ ಕಾಯಕವೇ ಕೈಲಾಸದ ಸಾಮ್ರಾಜ್ಯ ಹಾಗೂ ಬಾಬಾ ಸಾಹೇಬರು ಹೇಳಿದ ಸರ್ವರಿಗೂ ಸಮಪಾಲು ಸರ್ವರಿಗೂ ಸಮ ಬಾಳು...
ಎರಡು ವರ್ಷಗಳ ಹಿಂದೆ ರೈತರ ಹೋರಾಟದಲ್ಲಿ ಸುಮಾರು ಏಳುನೂರು ಮಂದಿ ಗತಿಸಿದರು. ಅವರ ಕುಟುಂಬಸ್ಥರು ಸ್ವಾತಂತ್ರ್ಯವನ್ನು ಹೇಗೆ ಬಗೆಯಬಹುದು? ಇತ್ತೀಚೆಗೆ ಮಣಿಪುರದಲ್ಲಿ ಜರುಗಿದ ಹಿಂಸೆಯಲ್ಲಿ ಇಬ್ಬರು ಕುಕಿ ಮಹಿಳೆಯರನ್ನು ಬೆತ್ತಲು ಮಾಡಿ, ಅವರ...
ಸಾರ್ವಜನಿಕ ಆರೋಗ್ಯ ವ್ಯವಸ್ಥೆ ವಿಚಾರದಲ್ಲಿ ತಮಿಳುನಾಡು ಮೊದಲಿನಿಂದಲೂ ಪ್ರಗತಿಪರ ಮಾದರಿಗಳನ್ನು ಆಳವಡಿಸಿಕೊಂಡಿದೆ. ಅಲ್ಲಿ ವೈದ್ಯರು ರೋಗಿಗಳಿಗೆ ಹೊರಗೆ ಔಷಧಿ ತೆಗೆದುಕೊಳ್ಳುವಂತೆ ಚೀಟಿ ಬರೆದುಕೊಡುವುದನ್ನು ಕಡ್ಡಾಯವಾಗಿ ನಿಷೇಧಿಸಲಾಗಿದೆ. ನಿಯಮ ಮೀರಿ ಹಾಗೆ ಬರೆದುಕೊಟ್ಟ ವೈದ್ಯರ...
ಜನ ಆರೋಗ್ಯದ ಮೇಲೆ ಖರ್ಚು ಮಾಡುವ ಹಣದಲ್ಲಿ ಶೇ.70ರಷ್ಟು ಔಷಧಿಗಳಿಗೇ ವೆಚ್ಚವಾಗುತ್ತಿದೆ. ಔಷಧಿಗಳ ಬೆಲೆ ಹಾಗೂ ರೋಗನಿರ್ಣಯದ ವೆಚ್ಚ ಕಡಿಮೆಯಾದರೆ, ಆರೋಗ್ಯ ವ್ಯವಸ್ಥೆ ಕೊಂಚ ಸುಧಾರಿಸುತ್ತದೆ. ಆದರೆ, ಔಷಧಿಗಳ ಬೆಲೆಗಳು ವರ್ಷದಿಂದ ವರ್ಷಕ್ಕೆ ವಿಪರೀತ...
ಕೋವಿಡ್ ಕಾರಣದಿಂದ ಉಂಟಾದ ಸಮಸ್ಯೆಗಳಲ್ಲಿ ಇದೂ ಒಂದು ಗಂಭೀರ ಸಮಸ್ಯೆಯಾಗಿದೆ. ಹದಿಹರೆಯದಲ್ಲಿ ಗರ್ಭಧಾರಣೆ ಮತ್ತು ಅದರ ಸಮಸ್ಯೆಯ ಬಗ್ಗೆ ಜನರಿಗೆ ತಿಳಿವಳಿಕೆ ನೀಡುವ ಅಗತ್ಯ ಹೆಚ್ಚಿದೆ ಎಂಬುದಕ್ಕೆ ಈ ಅಂಕಿ-ಅಂಶಗಳೇ ಸಾಕ್ಷಿ. ಅಚ್ಚರಿಯೆಂದರೆ...
ಸೇವಾ ಹಿರಿತನಕ್ಕಿಂತ ವಿಷಯದ ಮೇಲಿನ ತಜ್ಞತೆ ಹಾಗು ಹೊಣೆಗಾರಿಕೆಗಳು ಅಕಾಡೆಮಿಕ್ ಬಾಡಿಗಳನ್ನು ರೂಪಿಸುವಲ್ಲಿ ಪ್ರಮುಖ ಪಾತ್ರ ವಹಿಸಬೇಕಾಗಿದೆ. ಡಿಗ್ರಿಗಿಂತ ಹೆಚ್ಚು ಕ್ರಿಯೇಟಿವ್, ಕ್ರಿಟಿಕಲ್ ಹಾಗು ಮುನ್ನುಗುವ ಛಾತಿಯುಳ್ಳ ಮಾನವ ಸಂಪನ್ಮೂಲ ಸೃಷ್ಟಿಗೆ ಒತ್ತು...
ಹಿಂಸಾಚಾರದಲ್ಲಿ ಭಾಗಿಯಾದ ಅಪರಾಧಿಗಳನ್ನು ಪತ್ತೆಹಚ್ಚುವ ಬದಲಿಗೆ ಬೇಕಾಬಿಟ್ಟಿಯಾಗಿ ಜನರನ್ನು ಬಂಧಿಸಲಾಯಿತು ಹಾಗೂ ತದನಂತರ ಕಾನೂನನ್ನು ಬದಿಗಿಟ್ಟು, ಮನೆ ಮತ್ತು ಅಂಗಡಿಗಳನ್ನು ಅತಿಕ್ರಮಣದ ಹೆಸರಿನಲ್ಲಿ ಕೆಡವಲಾಯಿತು. ಕೊನೆಗೆ ಹೈಕೋರ್ಟ್ ಇದನ್ನು ನಿಲ್ಲಿಸಿತು. ಇವೆಲ್ಲ ಶಾಂತಿ...
ಗದ್ದರ್ ಅವರನ್ನು ನಾನು ಭೇಟಿಯಾಗಿದ್ದು ಕೆಲವೇ ಬಾರಿಯಾದರೂ ಅಷ್ಟಕ್ಕೇ ಬರೆಯಲು ಬಹಳಷ್ಟಿದೆ. ಅವರ ಪ್ರತಿಯೊಂದು ಹಾಡೂ ಒಂದೊಂದು ಸಂದರ್ಭವನ್ನು ಪ್ರತಿನಿಧಿಸುತ್ತಿತ್ತು ಮತ್ತು ಆ ಸಂದರ್ಭವನ್ನು ಕಣ್ಣ ಮುಂದೆ ತಂದು ನಿಲ್ಲಿಸುತ್ತಿತ್ತು. ಪ್ರತಿಯೊಂದು ಹಾಡಿಗೂ...
ಜಮೀನ್ದಾರಿಕೆ, ದಮನಿತರ ಮೇಲಿನ ದೌರ್ಜನ್ಯ, ಫ್ಯಾಸಿಸಂ, ಬಂಡವಾಳಶಾಹಿಗಳ ವಿರುದ್ಧ ಮತ್ತು ತಮ್ಮ ಹೋರಾಟದ ಪ್ರತಿಫಲವಾದ ತೆಲಂಗಾಣದ ಮುಖ್ಯಮಂತ್ರಿ ಕೆ.ಸಿ.ಆರ್ ವಿರುದ್ದ ನಿರಂತರ ಜಗಳಕ್ಕೆ ಬಿದ್ದ ಗದ್ದರ್, 2010ರ ನಂತರ ಹೆಚ್ಚಾಗಿ ಅಂಬೇಡ್ಕರ್ ವಿಚಾರಗಳೆಡೆ...
ತೆಲುಗು ಕ್ರಾಂತಿಕಾರಿ ಕವಿ ಹಾಗೂ ಗಾಯಕ ಗದ್ದರ್ ಅವರ ಧ್ವನಿ ಈಗ ಸ್ತಬ್ಧವಾಗಿರಬಹುದು. ಆದರೆ, ಅವರು ಕಾಲಿಗೆ ಗೆಜ್ಜೆ ಕಟ್ಟಿಕೊಂಡು, ನೊಂದವರ ಮತ್ತು ಬೆಂದವರ ಕಥೆಯನ್ನು ಹಾಡಾಗಿಸಿ ರಚಿಸಿದ ದುರಂತ ಕಾವ್ಯಗಳು ಅವಿಭಜಿತ...
ಸೌಜನ್ಯ ಪ್ರಕರಣದ ಮರು ತನಿಖೆಗೆ ರಾಜ್ಯದೆಲ್ಲೆಡೆ ಹೋರಾಟ ತೀವ್ರಗೊಳ್ಳುತ್ತಿದ್ದಂತೆ ಧರ್ಮಸ್ಥಳದ ಪರವಾಗಿ ಪ್ರತಿ ಹೋರಾಟ ಶುರುವಾಗಿದೆ. ಆದರೆ ಭಕ್ತರ ಮಿತಿ ಮೀರಿದ ಗೂಂಡಾ ವರ್ತನೆ ಸೌಜನ್ಯ ಕುಟುಂಬವನ್ನು ಜೀವ ಭಯಕ್ಕೆ ದೂಡಿದೆ. ಮಹಾವೀರ...
ನಕ್ಸಲ್ ಎಂಬ ಆರೋಪದಡಿ ಮಹಾರಾಷ್ಟ್ರ ಪೊಲೀಸರಿಂದ ಬಂಧಿತರಾಗಿದ್ದ ಸಾಮಾಜಿಕ ಕಾರ್ಯಕರ್ತ ಅರುಣ್ ಫೆರೈರಾ ಜೈಲಿನಿಂದ ಬಿಡುಗಡೆಯಾಗಿದ್ದಾರೆ. ಅರುಣ್, ತಮ್ಮ ಸಂಗಾತಿಗೆ ಬರೆದ ಪತ್ರದ ರೂಪದಲ್ಲಿರುವ ಬರೆಹದಲ್ಲಿ ನಾಗಪುರದ ಜೈಲಿನಲ್ಲಿ ತಾವು ಕಳೆದ ದಿನಗಳನ್ನು...