ನಾನೀಗ ಹಿಂದಿನದು ಮಾತಾಡಲೋ ಅಥವಾ ಈಗಲದು ಮಾತಾಡಲೋ ಗೊಂದಲದಲ್ಲಿದ್ದೇನೆ. ಹಿಂದಿನದನ್ನು ಹೇಳದಿದ್ದರೆ ಈಗಲದು ಸ್ಪಷ್ಟವಾಗುವುದಿಲ್ಲ. ಹಾಗಾಗಿ 2006ನೆಯ ಇಸವಿಯಲ್ಲಿ ಕುಮಾರಸ್ವಾಮಿಯವರು ಕಾಂಗ್ರೆಸ್‍ನಿಂದ ಜೆಡಿಎಸ್ ಸಖ್ಯವನ್ನು ಮುರಿದು ಹಾಕಿ ಬಿಜೆಪಿ ಜೊತೆ ಸೇರಿ ಮುಖ್ಯಮಂತ್ರಿಯಾಗುತ್ತಾರಲ್ಲ...
ಹಿಂದೂ- ಮುಸ್ಲಿಂ ಸೌಹಾರ್ದತೆಗೆ ಭಂಗ ತರುವ ರೀತಿಯಲ್ಲಿ ಪ್ರಚೋದನಕಾರಿ ಭಾಷಣ ಮಾಡುವುದನ್ನೇ ವೃತ್ತಿ ಮಾಡಿಕೊಂಡ ಚಕ್ರವರ್ತಿ ಸೂಲಿಬೆಲೆ, ಶಾಸಕ ಬಸನಗೌಡ ಯತ್ನಾಳ್ ಮುಂತಾದವರು ನೇಹಾ ಮನೆಗೆ ಧಾವಿಸಿ ರಾಜಕೀಯ ಬಣ್ಣ ಕೊಡಲು ಯತ್ನಿಸಿದ್ದಾರೆ.
ನಮ್ಮ...
ಹುಬ್ಬಳ್ಳಿಯ ಘಟನೆಯಲ್ಲಿ ಎರಡು ಯುವ ಜೀವಗಳು ತಮ್ಮ ಬದುಕನ್ನು ಕಳೆದುಕೊಂಡಿವೆ. ಕೊಲೆಗಾರ ಬದುಕಿದ್ದೂ ಸತ್ತಂತೆ. ಆತನಿಗೆ ಶಿಕ್ಷೆಯಾಗುತ್ತದೆ; ಆದರೆ, ಆತನ ಕುಟುಂಬಕ್ಕೆ ನಿತ್ಯ ಅವಮಾನದ ಸಾವು. ನೇಹಾ ಮನೆಯವರ ಸಂಕಟ ಕಳೆಯುವಂತದ್ದಲ್ಲ. ಈ...
ನೋಟಾ ಅಭಿಯಾನ ನಡೆಸುತ್ತಿರುವವರು ಸೌಜನ್ಯಪರ ಹೋರಾಟಗಾರರು. ಇವರೆಲ್ಲರೂ ಬಿಜೆಪಿ,ಆರೆಸ್ಸೆಸ್, ಭಜರಂಗದಳ, ವಿಎಚ್‌ಪಿ ಮುಂತಾದ ಸಂಘಟನೆಗಳಲ್ಲಿ ದುಡಿದವರು. ಆದರೆ ಸೌಜನ್ಯಳ ಕುಟುಂಬಕ್ಕೆ ನ್ಯಾಯ ಕೊಡಿಸಲು ಜಿಲ್ಲೆಯಲ್ಲಿ ಎರಡೆರಡು ಬಾರಿ ಗೆದ್ದು ಬಂದಿರುವ ಬಿಜೆಪಿ ಶಾಸಕರು,...
ಹೆಬ್ಬಾರ್ ಒಬ್ಬರೇ ಅಲ್ಲ, ಬೆಂಗಳೂರಿನ ಬಸವನಗುಡಿಯ ಬ್ರಾಹ್ಮಣರೆಲ್ಲರೂ ಗುರುರಾಘವೇಂದ್ರ ಬ್ಯಾಂಕಿನ ಗ್ರಾಹಕರೇ ಆಗಿದ್ದರು. ಆಡಳಿತ ಮಂಡಳಿಗೆ ಆಯ್ಕೆಯಾಗಿ ಬಂದ ಕೆಲ ಬ್ರಾಹ್ಮಣರೇ ಬ್ಯಾಂಕನ್ನು ಮುಳುಗಿಸಿದರು. ಈ ಬ್ಯಾಂಕ್ ಮುಳುಗಿದ್ದು ರಾಜ್ಯ ಮತ್ತು ಕೇಂದ್ರದಲ್ಲಿ...
ಆರಂಭದಲ್ಲಿ ನೆಪ ಹೇಳುತ್ತಿದ್ದ ಪಿಡಿಓಗೆ, ಜನರ ಜೈಭೀಮ್ ಘೋಷಣೆಗಳು ಅಪ್ಪಳಿಸಿದವು...
ಡಾ.ಬಿ.ಆರ್.ಅಂಬೇಡ್ಕರ್ ಜಯಂತಿಯಂದು ಎಲ್ಲೆಡೆಯೂ ಅದ್ಧೂರಿ ಸಂಭ್ರಮಾಚರಣೆ. ಇತ್ತೀಚೆಗೆ ಅಂಬೇಡ್ಕರ್ ವಿಚಾರಗಳಿಗೆ ತೆರೆದುಕೊಳ್ಳುವವರ ಸಂಖ್ಯೆಯೂ ದ್ವಿಗುಣ. ನಗರ, ಪಟ್ಟಣ, ಹಳ್ಳಿಗಳೆಡೆಯಲ್ಲೂ ಅಂಬೇಡ್ಕರ್ ಹಬ್ಬದ ಉತ್ಸವ....
ರಾಜಕೀಯ ಸ್ವಾತಂತ್ರ್ಯಕ್ಕಿಂತ ಸ್ವತಂತ್ರ ಭಾರತದಲ್ಲಿ ಸಾಮಾಜಿಕ ಪ್ರಜಾಸತ್ತೆ ಮತ್ತು ಆರ್ಥಿಕ ಪ್ರಜಾಸತ್ತೆಗಳನ್ನು ಬಲಪಡಿಸಿ ಪ್ರಬುದ್ಧ ಭಾರತ ನಿರ್ಮಾಣ ಮಾಡುವುದು ಬಹುದೊಡ್ಡ ಅವಶ್ಯಕತೆಯೆಂದು ಅಂಬೇಡ್ಕರ್ ಮನಗಂಡಿದ್ದರು.
ಬಾಬಾಸಾಹೇಬ್ ಅಂಬೇಡ್ಕರ್ ಜಗತ್ತಿನ ಮಹಾನ್ ಪ್ರತಿಭೆ, ನೇತಾರ, ಮಾನವತಾವಾದಿ...
ಬಿಜೆಪಿ ಮತ್ತು ಸಂಘಪರಿವಾರದಲ್ಲಿ ಕುಂಬಾರ/ಕುಲಾಲ್/ಮೂಲ್ಯ ಸಮುದಾಯಗಳ ಯುವಕರು ಇದ್ದರೂ ಅವರಿಗೆ ರಾಜಕೀಯ ಪ್ರಾತಿನಿಧ್ಯ ಸಿಗುತ್ತಿಲ್ಲ. ಸಾಮಾಜಿಕವಾಗಿ ಹಿಡಿತ ಹೊಂದಿರುವ ಬಂಟರು, ಜನಸಂಖ್ಯೆಯಲ್ಲಿ ದೊಡ್ಡದಾಗಿರುವ ಬಿಲ್ಲವರು, ಸಂಘಪರಿವಾರವನ್ನು ನಡೆಸುತ್ತಿರುವ ಬ್ರಾಹ್ಮಣರು ಮಾತ್ರ ಈ ಹಿಂದುತ್ವ...
ಬಾಬಾ ಸಾಹೇಬ್ ಅವರಲ್ಲದೆ ಬೇರೆಯವರು ನಮ್ಮ ಸಂವಿಧಾನ ರಚಿಸಿದ್ದರೆ ಭಾರತ ಹೇಗಿರುತ್ತಿತ್ತು ಊಹಿಸಿ ನೋಡಿ. ಬಹುಶಃ ಈಗಿನಷ್ಟು ಸಾಮಾಜಿಕ ನೆಮ್ಮದಿ ಸಿಗುತ್ತಿರಲಿಲ್ಲ. ಆದ್ದರಿಂದ ಎಲ್ಲಾ ಭಾರತೀಯರು ಗೌರವಿಸಲೇಬೇಕಾದ ಮೇರುವ್ಯಕ್ತಿತ್ವ ಎಂದರೆ ಅದು ಬಾಬಾ...
ಆನೆಗಳ ಸಾಗಾಟ ಮತ್ತು ಸಾಕಾಣಿಕೆಗೆ ಸಂಬಂಧಿಸಿದ ಹೊಸ ನಿಯಮ(ಕ್ಯಾಪ್ಟಿವ್ ಎಲಿಫೆಂಟ್) ಮತ್ತು ವನತಾರದಲ್ಲಿ ಆನೆಗಳನ್ನು ಸಾಕುವ ಕುರಿತು ಭಾರತದ ಪ್ರಮುಖ ಆನೆ ತಜ್ಞರಲ್ಲಿ ಒಬ್ಬರಾಗಿರುವ ಪ್ರೊ. ರಾಮನ್ ಸುಕುಮಾರ್, ಇಲ್ಲಿ ವಿಸ್ತಾರವಾಗಿ ಮಾತನಾಡಿದ್ದಾರೆ...
ಅನಂತ...
ಕೊಲೆ ಮಾಡುವ ತಲವಾರಿಗೆ ಬಂಟ-ಬಿಲ್ಲವ ಎಂಬುದು ಗೊತ್ತಾಗುತ್ತೋ ಇಲ್ವೋ ! ಬಂಟ- ಬಿಲ್ಲವರನ್ನು ಬಳಸಿಕೊಳ್ಳುವ ಹಿಂದುತ್ವ ರಾಜಕಾರಣಕ್ಕಂತೂ ಸ್ಪಷ್ಟವಾಗಿ ಜಾತಿ ಗೊತ್ತಾಗುತ್ತದೆ. ಹಾಗಾಗಿ ಹಿಂದುತ್ವದಲ್ಲಿ ಬದುಕಿದ್ದಾಗಲೂ ಬಂಟ-ಬಿಲ್ಲವರಿಗೆ ಒಂದೇ ರೀತಿಯ ಪ್ರಾತಿನಿಧ್ಯ ಸಿಗುವುದಿಲ್ಲ....
ಜಾತಿವಾದವನ್ನು ಸದಾ ಪ್ರಶ್ನಿಸುವ ಪೆರಿಯಾರ್ ಅವರ ಚಿಂತನೆಯ ಇರುವಿಕೆ ಮತ್ತು ಪ್ರಗತಿಪರ ಬ್ರಾಹ್ಮಣರು ಪೆರಿಯಾರ್ ಅವರ ಚಿಂತನೆಗಳಿಗೆ ಬೆಂಬಲ ನೀಡುತ್ತಿರುವ ಬೆಳವಣಿಗೆ ಮೇಲರಿಮೆಯನ್ನು ಉಳಿಸಿಕೊಳ್ಳುವ ಉದ್ದೇಶವನ್ನು ಹೊಂದಿರುವ ಬ್ರಾಹ್ಮಣರಲ್ಲಿ ದುಃಖವನ್ನುಂಟು ಮಾಡಿದೆ ಎನ್ನುವುದು...