ಅನಿವಾಸಿ ಕನ್ನಡಿಗ

ಯುಎಇಯಾದ್ಯಂತ ಮುಂದುವರಿದ ಗುಡುಗು ಸಹಿತ ಭಾರೀ ಮಳೆ: ಜನಜೀವನ ಅಸ್ತವ್ಯಸ್ತ; ಕೇರಳದ ಯುವಕ ಮೃತ್ಯು

ತೀವ್ರ ಹವಾಮಾನ ವೈಪರೀತ್ಯದಿಂದಾಗಿ ಪ್ರಮುಖ ನಗರಗಳಾದ ದುಬೈ, ಶಾರ್ಜಾ ಸೇರಿದಂತೆ ಯುಎಇಯಾದ್ಯಂತ ಗುಡುಗು ಸಹಿತ ಭಾರೀ ಮಳೆಯಾಗುತ್ತಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ. ಮಳೆಯ ನಡುವೆಯೇ ಅವಘಡವೊಂದು ಸಂಭವಿಸಿದ ಪರಿಣಾಮ ಭಾರತೀಯ ಯುವಕನೋರ್ವ ಮೃತಪಟ್ಟಿರುವ ಬಗ್ಗೆ...

ಅನಿವಾಸಿ ಉದ್ಯಮಿ ರೊನಾಲ್ಡ್ ಕೊಲಾಸೊ ಅವರಿಗೆ ಮಾತೃ ವಿಯೋಗ

ಅನಿವಾಸಿ ಭಾರತೀಯ ಉದ್ಯಮಿ ಡಾ.ರೊನಾಲ್ಡ್ ಕೊಲಾಸೊ ಅವರ ತಾಯಿ ಆಲಿಸ್ ಕೊಲಾಸೊ (97) ಅವರು ಅಲ್ಪಕಾಲದ ಅಸೌಖ್ಯದಿಂದ ಶನಿವಾರ ಮಧ್ಯಾಹ್ನ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಆಲಿಸ್ ಕೊಲಾಸೊ ಅವರು ದಿವಂಗತ ಸಂತಾನ್ ಪಿರೇರಾ,...

ಸೌದಿ ಅರೇಬಿಯಾ | ನ.27ರಂದು ಜುಬೈಲ್‌ನಲ್ಲಿ ಸೂಪರ್ ಸಿಕ್ಸ್ ಕ್ರಿಕೆಟ್ ಟೂರ್ನಮೆಂಟ್

ಸಮಾಜ ಸೇವೆಯ ಉದ್ದೇಶಕ್ಕಾಗಿ ನಝಾಫಾ ಸಂಸ್ಥೆಯ ವತಿಯಿಂದ ಸೂಪರ್ ಸಿಕ್ಸ್ ಕ್ರಿಕೆಟ್ ಟೂರ್ನಮೆಂಟ್ ಅನ್ನು ನವೆಂಬರ್ 27ರ ಗುರುವಾರದಂದು ಸೌದಿ ಅರೇಬಿಯಾದ ಜುಬೈಲ್‌ನ ಅಲ್ ಫಲಾ ಅರೇನಾದಲ್ಲಿ ಆಯೋಜಿಸಲಾಗಿದೆ. 7ಆಟಗಾರರ ಸಾಲಿನ ತಂಡ, ಸ್ಟ್ರೈಟ್...

‘ದುಬೈ ರನ್’ನಲ್ಲಿ ಮಿಂಚಿದ ಬ್ಯಾರಿಗಳು: ಅತಿ ಉದ್ದನೆಯ ಯುಎಇ ಧ್ವಜದ ದೃಶ್ಯ ಹಂಚಿಕೊಂಡ ರಾಜಕುಮಾರ ಶೇಖ್ ಹಮ್ದಾನ್

ಆರೋಗ್ಯ, ಫಿಟ್‌ನೆಸ್ ಮತ್ತು ಮನರಂಜನೆಗೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಭಾನುವಾರ ದುಬೈನ ಶೇಖ್ ಝಾಯೆದ್ ರಸ್ತೆಯಲ್ಲಿ ನಡೆದ ಐತಿಹಾಸಿಕ 'ದುಬೈ ರನ್–2025' ಕಾರ್ಯಕ್ರಮದಲ್ಲಿ ಯುಎಇಯಲ್ಲಿ ನೆಲೆಸಿರುವ ಬ್ಯಾರಿ ಅನಿವಾಸಿ ಸಮುದಾಯವು ಎಲ್ಲರ ಗಮನ...

ಸೌದಿ ಅರೇಬಿಯಾ | ಕೋವಿಡ್ ಬೂಸ್ಟರ್ ಡೋಸ್ ಲಸಿಕೆ ಪೂರ್ಣಗೊಳಿಸಲು ಆರೋಗ್ಯ ಸಚಿವಾಲಯ ಸೂಚನೆ

ಕೋವಿಡ್-19 ನಿಂದ ತಮ್ಮನ್ನು ರಕ್ಷಿಸಿಕೊಳ್ಳಲು ಎಲ್ಲ ವಯಸ್ಸಿನ ನಿವಾಸಿಗಳು ಮತ್ತು ವಲಸಿಗರು ಲಸಿಕೆ ಬೂಸ್ಟರ್ ಡೋಸ್ ಅನ್ನು ಪೂರ್ಣಗೊಳಿಸಲು ಸೌದಿ ಆರೋಗ್ಯ ಸಚಿವಾಲಯ ಕರೆ ನೀಡಿದೆ. ಕೋವಿಡ್-19 ಲಸಿಕೆಯ ಸುಧಾರಿತ ಡೋಸ್ 12 ವರ್ಷ...

ಕನ್ನಡಿಗರ ಕೂಟ ದುಬೈ-ಗಲ್ಫ್ ಕನ್ನಡ ಮೂವೀಸ್‌ನಿಂದ ಇಂದು ಕರ್ನಾಟಕ ರಾಜ್ಯೋತ್ಸವ ಕಾರ್ಯಕ್ರಮ

ಕನ್ನಡಿಗರ ಕೂಟ ದುಬೈ ಯುಎಇ ಮತ್ತು ಗಲ್ಫ್ ಕನ್ನಡ ಮೂವೀಸ್ ಜಂಟಿಯಾಗಿ 'ಕರ್ನಾಟಕ ರಾಜ್ಯೋತ್ಸವ -2025' ಕಾರ್ಯಕ್ರಮವು ಇಂದು(ನವೆಂಬರ್ 8) ದುಬೈಯ ಕಿಸೀಸ್ ನ ಜೆಮ್ಸ್ ಕೇಂಬ್ರಿಜ್ ಅಂತಾರಾಷ್ಟ್ರೀಯ ಶಾಲೆಯ ಸಭಾಂಗಣದಲ್ಲಿ ನಡೆಯಲಿದೆ. ಸಮಾರಂಭದಲ್ಲಿ...

ಅನಿವಾಸಿ ಕನ್ನಡಿಗರಿಗೆ ‘ಪ್ರತ್ಯೇಕ ಸಚಿವಾಲಯ’ ಗ್ಯಾರಂಟಿ ಯಾವಾಗ? ರಾಜ್ಯ ಸರ್ಕಾರವನ್ನು ಪ್ರಶ್ನಿಸಿದ ಅನಿವಾಸಿ ಉದ್ಯಮಿ ಡಾ.ರೊನಾಲ್ಡ್ ಕೊಲಾಸೊ

ಅನಿವಾಸಿ ಕನ್ನಡಿಗರ ರಕ್ಷಣೆ, ಸಾಮಾಜಿಕ ಭದ್ರತೆ ದೃಷ್ಟಿಯಿಂದ ಕರ್ನಾಟಕ ರಾಜ್ಯ ಸರಕಾರ ಚುನಾವಣೆಯ ವೇಳೆ ಅನಿವಾಸಿ ಕನ್ನಡಿಗರಿಗಾಗಿ ಘೋಷಿಸಿದ್ದ 'ಪ್ರತ್ಯೇಕ ಸಚಿವಾಲಯ' ಗ್ಯಾರಂಟಿಯನ್ನು ಯಾವಾಗ ಆರಂಭಿಸುತ್ತೀರಿ ಎಂದು ರಾಜ್ಯ ಸರ್ಕಾರವನ್ನು ಖ್ಯಾತ ಅನಿವಾಸಿ...

ಅನಿವಾಸಿ ಉದ್ಯಮಿ ಝಕರಿಯಾ ಜೋಕಟ್ಟೆಗೆ ರಾಜ್ಯೋತ್ಸವ ಪ್ರಶಸ್ತಿ: ಡಾ. ಆರತಿ ಕೃಷ್ಣರಿಂದ ಅಭಿನಂದನೆ

ಕರ್ನಾಟಕ ರಾಜ್ಯೋತ್ಸದ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರದಿಂದ ಕೊಡಮಾಡುವ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಗೆ ಈ ಬಾರಿ ಅನಿವಾಸಿ ಕನ್ನಡಿಗ ವಿಭಾಗದಲ್ಲಿ ಅನಿವಾಸಿ ಭಾರತೀಯ ಉದ್ಯಮಿ, ಸಮಾಜ ಸೇವಕ ಬಿ. ಝಕರಿಯಾ ಜೋಕಟ್ಟೆ ಅವರನ್ನು ಆಯ್ಕೆ...

ಅನಿವಾಸಿ ಕನ್ನಡಿಗ ಝಕರಿಯಾ ಜೋಕಟ್ಟೆ ಅವರಿಗೆ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ

ರಾಜ್ಯ ಸರಕಾರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕೊಡಮಾಡುವ 2025-26ನೇ ಸಾಲಿನ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪ್ರಕಟವಾಗಿದ್ದು, ಸೌದಿ ಅರೇಬಿಯಾ ಜುಬೈಲ್‌ನ ಅಲ್ ಮುಝೈನ್ ಕಂಪೆನಿ ಸಂಸ್ಥಾಪಕ ಹಾಗೂ ಮಂಗಳೂರಿನ ಪ್ರತಿಷ್ಠಿತ ಸಂಸ್ಥೆ...

ಅ.25 | ದುಬೈನಲ್ಲಿ ಗಡಿನಾಡ ಸಾಹಿತ್ಯ ಸಾಂಸ್ಕೃತಿಕ ಅಕಾಡೆಮಿಯಿಂದ ‘ಗಡಿನಾಡ ಉತ್ಸವ -2025’ ಕಾರ್ಯಕ್ರಮ

ಗಡಿನಾಡ ಸಾಹಿತ್ಯ ಸಾಂಸ್ಕೃತಿಕ ಅಕಾಡೆಮಿ (ರಿ) ಯುಎಇ ಘಟಕ ದುಬೈ ಮತ್ತು ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಜಂಟಿ ಆಶ್ರಯದ 4ನೇ ವರ್ಷದ ದುಬೈ "ಗಡಿನಾಡ ಉತ್ಸವ -2025" ಕಾರ್ಯಕ್ರಮವು ದುಬೈಯ...

ಅಬುಧಾಬಿ | ಬದ್ರಿಯಾ ಹಿದಾಯತುಲ್ ಇಸ್ಲಾಮ್ ಮದ್ರಸ ಜಾರಿಗೆಬೈಲು ಗಲ್ಫ್ ಸಮಿತಿ: ನೂತನ ಪದಾಧಿಕಾರಿಗಳ ಆಯ್ಕೆ

ಬದ್ರಿಯಾ ಹಿದಾಯತುಲ್ ಇಸ್ಲಾಮ್ ಮದರಸ(ರಿ)ಪರಿಮ, ಜಾರಿಗೆಬೈಲು ಗಲ್ಫ್ ಸಮಿತಿಯ 2025-26ನೇ ಮಹಾಸಭೆಯು ಅ.20,202ರಂದು ಅಬುಧಾಬಿಯಲ್ಲಿರುವ ಖಾಲಿದಿಯ್ಯಾ ಇಮ್ರಾನ್ ಎನ್‌ಪಿ ನಾಳ ಅವರ ಮನೆಯಲ್ಲಿ ನಡೆಯಿತು. ಮಹಾಸಭೆಗೆ ಗಲ್ಫ್ ಸಮಿತಿಯ ಸದಸ್ಯರು ಪಾಲ್ಗೊಂಡಿದ್ದರು. ಉಸ್ತಾದ್ ಹಸನ್...

ಅಮೆರಿಕ | 88 ಲಕ್ಷ ರೂ. H-1B ವೀಸಾ ಶುಲ್ಕ: ಯಾರಿಗೆ ವಿನಾಯಿತಿ, ಅನ್ವಯ?

ಎಚ್‌1-ಬಿ ವೀಸಾ (H-1B) ಹೊಂದಲು $100,000 ಅಂದರೆ 88 ಲಕ್ಷ ರೂಪಾಯಿ ಶುಲ್ಕ ಪಾವತಿಸಬೇಕು ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸೆಪ್ಟೆಂಬರ್ 19ರಂದು ಘೋಷಣೆ ಮಾಡಿದ್ದರು. ಇದೀಗ ಈ ಶುಲ್ಕವನ್ನು ಯಾರು...

ಈ ಹೊತ್ತಿನ ಪ್ರಮುಖ ಸುದ್ದಿ