ವಿದೇಶ

ಅಮೆರಿಕಾ| ಮತ್ತೋರ್ವ ಭಾರತೀಯ ವಿದ್ಯಾರ್ಥಿ ಮೃತ್ಯು; ಈ ವರ್ಷದಲ್ಲಿ ಹತ್ತನೇ ಘಟನೆ

ಅಮೆರಿಕಾರದ ಓಹಿಯೋ ರಾಜ್ಯದಲ್ಲಿ ಭಾರತೀಯ ವಿದ್ಯಾರ್ಥಿ ಮೃತರಾಗಿದ್ದು, ಸಾವಿನ ಕಾರಣವನ್ನು ಪತ್ತೆಹಚ್ಚಲು ತನಿಖೆ ನಡೆಯುತ್ತಿದೆ ಎಂದು ನ್ಯೂಯಾರ್ಕ್‌ನಲ್ಲಿರುವ ಭಾರತೀಯ ರಾಯಭಾರಿ ಕಚೇರಿ ಶುಕ್ರವಾರ ತಿಳಿಸಿದೆ. ಉಮಾ ಸತ್ಯ ಸಾಯಿ ಗದ್ದೆ ಎಂಬ ವಿದ್ಯಾರ್ಥಿ ಮೃತರಾಗಿದ್ದು,...

ಅಮೆರಿಕ | ಮಗನಿಗೆ ಅಚ್ಚೆ ಹಾಕಿದ್ದಕ್ಕೆ ದೇವಸ್ಥಾನದ ವಿರುದ್ಧ 10 ಲಕ್ಷ ಡಾಲರ್ ದಾವೆ

ತಮ್ಮ 11 ವರ್ಷದ ಮಗನಿಗೆ ಕಬ್ಬಿಣದ ಕಾದ ಸಲಾಕೆಯಿಂದ ಅಚ್ಚೆ ಹಾಕಿದ ದೇವಸ್ಥಾನದ ಮಂಡಳಿಯ ವಿರುದ್ಧ ಭಾರತೀಯ ಮೂಲದ ವ್ಯಕ್ತಿಯೊಬ್ಬರು10 ಲಕ್ಷ ಡಾಲರ್ ಪರಿಹಾರ ಕೋರಿ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿರುವ ಘಟನೆ ಅಮೆರಿಕ...

ಗಾಜಾದಲ್ಲಿ ತಕ್ಷಣವೇ ಕದನ ವಿರಾಮ ಘೋಷಿಸಿ: ಇಸ್ರೇಲ್ ಪ್ರಧಾನಿಗೆ ಅಮೆರಿಕ ಅಧ್ಯಕ್ಷರ ಕರೆ

ಪ್ಯಾಲಿಸ್ತೀನ್‌ನ ಗಾಜಾ ಪಟ್ಟಿಯಲ್ಲಿ ಹಾಮಸ್ ಹೋರಾಟಗಾರರೊಂದಿಗೆ ಇಸ್ರೇಲ್‌ ನಡೆಸುತ್ತಿರುವ ಯುದ್ಧವನ್ನು ತಕ್ಷಣ ನಿಲ್ಲಿಸಿ ಕದನ ವಿರಾಮವನ್ನು ಘೋಷಿಸುವಂತೆ ಅಮೆರಿಕ ಅಧ್ಯಕ್ಷ ಜೋ ಬೈಡನ್‌ ಅವರು ಇಸ್ರೇಲ್‌ ಪ್ರಧಾನಿ ಬೆಂಜಮಿನ್‌ ನೆತನ್ಯಾಹು ಅವರಿಗೆ ಆಗ್ರಹಿಸಿದ್ದಾರೆ. ಗಾಜಾದ...

12 ವರ್ಷದ ಬಾಲಕಿಯನ್ನು ವಿವಾಹವಾದ 63 ವರ್ಷದ ಪಾದ್ರಿ; ವ್ಯಾಪಕ ಆಕ್ರೋಶ

ಘಾನಾ ರಾಷ್ಟ್ರದಲ್ಲಿರುವ ಅಕ್ರಾದ ನುಂಗುವಾ ಪ್ರದೇಶದಲ್ಲಿ 63 ವರ್ಷದ ಪಾದ್ರಿಯೊಬ್ಬರು 12 ವರ್ಷದ ಬಾಲಕಿಯನ್ನು ವಿವಾಹವಾಗಿದ್ದಾರೆ. ಈ ಮದುವೆ ಲೈಂಗಿಕ ಸಂಬಂಧದ ಕಾರಣಕ್ಕಲ್ಲ. ಆಧ್ಯತ್ಮಿಕ ಕರ್ತವ್ಯಗಳಲ್ಲಿ ಸಹಾಯ ಮಾಡುವುದಕ್ಕಾಗಿ ಎಂದು ಆ ವಿವಾಹವನ್ನು...

ತೈವಾನ್‌ | ಭೂಕಂಪಕ್ಕೆ 9 ಬಲಿ, ಇಬ್ಬರು ಭಾರತೀಯರು ನಾಪತ್ತೆ

ತೈವಾನ್‌ನಲ್ಲಿ ಬುಧವಾರ 7.4 ತೀವ್ರತೆಯ ಭೂಕಂಪ ಸಂಭವಿಸಿದ್ದು, ಈವರೆಗೆ ಸುಮಾರು 9 ಮಂದಿ ಪ್ರಾಣ ಕಳೆದುಕೊಂಡಿದ್ದರೆ, ಇಬ್ಬರು ಭಾರತೀಯರು ಸೇರಿದಂತೆ 50ಕ್ಕೂ ಅಧಿಕ ಮಂದಿ ನಾಪತ್ತೆಯಾಗಿದ್ದಾರೆ. ಇನ್ನು ನಾಪತ್ತೆಯಾದ ಭಾರತೀಯರಲ್ಲಿ ಓರ್ವ ಮಹಿಳೆ ಎಂಬ...

ತೈವಾನ್‌ | 25 ವರ್ಷಗಳಲ್ಲೇ ಅತ್ಯಂತ ಪ್ರಬಲ ಭೂಕಂಪ; ನಾಲ್ವರು ಸಾವು, ಸುನಾಮಿ ಎಚ್ಚರಿಕೆ

ತೈವಾನ್‌ನಲ್ಲಿ ಬುಧವಾರ 7.2 ತೀವ್ರತೆಯ ಭೂಕಂಪ ಸಂಭವಿಸಿದ್ದು ಸುನಾಮಿ ಎಚ್ಚರಿಕೆಯನ್ನು ನೀಡಲಾಗಿದೆ. 25 ವರ್ಷಗಳಲ್ಲೇ ಅತ್ಯಂತ ಪ್ರಬಲ ಭೂಕಂಪ ಇದಾಗಿದ್ದು ಕಟ್ಟಡಗಳ ಅಡಿಪಾಯ ಅಲ್ಲಾಡಿದೆ, ಕೆಲವು ಕಟ್ಟಡಗಳು ಕುಸಿದಿದೆ. ದಕ್ಷಿಣ ಜಪಾನ್ ಮತ್ತು...

ಕಚ್ಚತೀವು ವಿವಾದ | ಮೋದಿ ಆರೋಪಕ್ಕೆ ಶ್ರೀಲಂಕಾ ಮತ್ತು ಕಾಂಗ್ರೆಸ್‌ ಹೇಳಿದ್ದಿಷ್ಟು!

ಲೋಕಸಭಾ ಚುನಾವಣೆಯ ಸಮಯದಲ್ಲಿ ಕೇಂದ್ರದ ಆಡಳಿತಾರೂಢ ಬಿಜೆಪಿ, ಶ್ರೀಲಂಕಾದ ಭಾಗವಾಗಿರುವ ಕಚ್ಚತೀವು ದ್ವೀಪದ ಬಗ್ಗೆ ಮಾತನಾಡುತ್ತಿದೆ. ಕಾಂಗ್ರೆಸ್‌ಅನ್ನು ವಿರುದ್ಧ ವಾಗ್ದಾಳಿ ನಡೆಸುತ್ತಿದೆ. 1974ರಲ್ಲಿ ಶ್ರೀಲಂಕಾಗೆ ಸಣ್ಣ ದ್ವೀಪವಾದ 'ಕಚ್ಚತೀವು'ಅನ್ನು ಬಿಟ್ಟುಕೊಟ್ಟಿದೆ ಎಂದು ಕಾಂಗ್ರೆಸ್‌ಅನ್ನು ಬಿಜೆಪಿ...

ಯುದ್ಧದಲ್ಲಿ ಹೋರಾಡಲು ಭಾರತೀಯ ಕಾರ್ಮಿಕರಿಗೆ ರಷ್ಯಾ ಒತ್ತಾಯ; ಪ್ರಧಾನಿ ಮೋದಿ ಮೌನವೇಕೆ?

ಪ್ರಧಾನಿ ನರೇಂದ್ರ ಮೋದಿ ಪ್ರಚಾರದ ಜಾಹೀರಾತು ವಿಡಿಯೋದಲ್ಲಿ ವಿದ್ಯಾರ್ಥಿಯೊಬ್ಬಳು, ‘ಯುದ್ಧ ಪೀಡಿತ ಉಕ್ರೇನ್‌ನಿಂದ ತಾವು ಸುರಕ್ಷಿತವಾಗಿ ಭಾರತಕ್ಕೆ ಮರಳುವಂತೆ ಮಾಡಲು ಮೋದಿ ಅವರು ಯುದ್ಧವನ್ನೇ ನಿಲ್ಲಿಸಿದರು, ಪಪ್ಪಾ’ ಎಂದು ಹೇಳುತ್ತಾರೆ. ಆ ವಿಡಿಯೋವನ್ನು...

ದಕ್ಷಿಣ ಆಫ್ರಿಕಾ | ಸೇತುವೆಯಿಂದ ಕಂದಕಕ್ಕೆ ಬಸ್‌ ಬಿದ್ದು 45 ಮಂದಿ ಸಾವು; ಬದುಕುಳಿದ ಏಕೈಕ ಮಗು!

ಈಸ್ಟರ್ ಹಬ್ಬಕ್ಕೆ ಜನರನ್ನು ಹೊತ್ತು ಸಂಚರಿಸುತ್ತಿದ್ದ ಬಸ್ಸೊಂದು ಭೀಕರ ರಸ್ತೆ ಅಪಘಾತಕ್ಕೊಳಗಾದ ಘಟನೆ ದಕ್ಷಿಣ ಆಫ್ರಿಕಾದ ಕೇಪ್‌ಟೌನ್‌ನಲ್ಲಿ ಗುರುವಾರ ಸಂಭವಿಸಿದೆ. ಇಲ್ಲಿನ ಮಮಟ್ಲಕಲಾ ಸೇತುವೆಯಿಂದ ಸುಮಾರು 164 ಅಡಿಗಳಷ್ಟು ಆಳದಲ್ಲಿರುವ ಕಂದಕಕ್ಕೆ ಬಸ್ ಉರುಳಿ...

ಅರವಿಂದ್ ಕೇಜ್ರಿವಾಲ್ ಬಂಧನದ ಬಗ್ಗೆ ವಿಶ್ವಸಂಸ್ಥೆ ಪ್ರತಿಕ್ರಿಯೆ

ವಿಶ್ವಸಂಸ್ಥೆ ಯ ಪ್ರಧಾನ ಕಾರ್ಯದರ್ಶಿ ಆನ್‌ಟೊನಿಯೋ ಗುಟೆರ್ರಸ್ ಅವರ ವಕ್ತಾರರು ಅರವಿಂದ್‌ ಕೇಜ್ರಿವಾಲ್‌ ಬಂಧನದ ನಂತರ ಭಾರತದಲ್ಲಿ ಉಂಟಾಗುತ್ತಿರುವ ಬೆಳವಣಿಗೆಗಳ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ. “ಭಾರತದಲ್ಲಿ ನಾವು ಏನು ಆಶಿಸುತ್ತೇವೆ ಎಂದರೆ ಚುನಾವಣೆಗಳನ್ನು ಹೊಂದಿರುವ...

ಗಾಜಾದ ಮನೆಗಳಲ್ಲಿ ಇಸ್ರೇಲಿ ಸೈನಿಕರ ವಿಕೃತಿಯಾಟಕ್ಕೆ ಎಲ್ಲೆಡೆ ಆಕ್ರೋಶ

ಇಸ್ರೇಲ್‌ ಸೈನಿಕರು ಗಾಜಾದಲ್ಲಿರುವ ಖಾಲಿಯಿರುವ ಪ್ಯಾಲಿಸ್ತೇನ್‌ ಮನೆಗಳಲ್ಲಿ ಮಹಿಳೆಯರ ಒಳ ಉಡುಪುಗಳೊಂದಿಗೆ ಫೋಟೋ - ವಿಡಿಯೋ ಶೂಟ್‌ ಮಾಡಿಕೊಂಡು ಆಟವಾಡುತ್ತಿರುವ ವಿಡಿಯೋಗಳು ಹಾಗೂ ಫೋಟೋಗಳು ಎಲ್ಲಡೆ ವೈರಲ್‌ ಆಗಿದ್ದು, ಸೈನಿಕರ ನಡೆಗೆ ಆಕ್ರೋಶ...

ಅಮೆರಿಕ | ಬಾಲ್ಟಿಮೋರ್ ಸೇತುವೆ ಕುಸಿತ: ಇಬ್ಬರ ಮೃತದೇಹ ಪತ್ತೆ

ಸಿಂಗಾಪುರಕ್ಕೆ ಸೇರಿದ ಸರಕು ಸಾಗಣೆ ಮಾಡುತ್ತಿದ್ದ ಹಡಗು ಡಿಕ್ಕಿ ಹೊಡೆದ ಪರಿಣಾಮ ಅಮೆರಿಕದ ಬಾಲ್ಟಿಮೋರ್‌ನಲ್ಲಿರುವ 2.6 ಕಿಮೀ ಉದ್ದದ ಪ್ರಮುಖ ಸೇತುವೆಯೊಂದು ಮಂಗಳವಾರ ಕುಸಿದುಬಿದ್ದಿದ್ದು ರಕ್ಷಣಾ ಕಾರ್ಯಾಚರಣೆ ವೇಳೆ ಎರಡು ಮೃತದೇಹ ಪತ್ತೆಯಾಗಿದೆ. ಮೃತ...

ಈ ಹೊತ್ತಿನ ಪ್ರಮುಖ ಸುದ್ದಿ