ವಿದೇಶ

ಅನಿವಾಸಿ ಉದ್ಯಮಿ ಝಕರಿಯಾ ಜೋಕಟ್ಟೆಗೆ ರಾಜ್ಯೋತ್ಸವ ಪ್ರಶಸ್ತಿ: ಡಾ. ಆರತಿ ಕೃಷ್ಣರಿಂದ ಅಭಿನಂದನೆ

ಕರ್ನಾಟಕ ರಾಜ್ಯೋತ್ಸದ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರದಿಂದ ಕೊಡಮಾಡುವ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಗೆ ಈ ಬಾರಿ ಅನಿವಾಸಿ ಕನ್ನಡಿಗ ವಿಭಾಗದಲ್ಲಿ ಅನಿವಾಸಿ ಭಾರತೀಯ ಉದ್ಯಮಿ, ಸಮಾಜ ಸೇವಕ ಬಿ. ಝಕರಿಯಾ ಜೋಕಟ್ಟೆ ಅವರನ್ನು ಆಯ್ಕೆ...

ಸೌದಿ ಅರೇಬಿಯಾ | ಪೊಲೀಸ್-ಕಳ್ಳರ ಗುಂಡಿನ ಚಕಮಕಿಯಲ್ಲಿ ಜಾರ್ಖಂಡ್ ಯುವಕ ಸಾವು

ಸೌದಿ ಅರೇಬಿಯಾದ ಜಿದ್ದಾದಲ್ಲಿ ಕಳೆದ ತಿಂಗಳು ನಡೆದ ಪೊಲೀಸ್ ಮತ್ತು ಮದ್ಯ ಕಳ್ಳ ಸಾಗಾಣಿಕೆದಾರರ ನಡುವಿನ ಗುಂಡಿನ ಚಕಮಕಿಯಲ್ಲಿ ಜಾರ್ಖಂಡ್‌ನ ಗಿರಿಡಿ ಜಿಲ್ಲೆಯ ದುಧಾಪಾನಿಯಾ ಗ್ರಾಮದ 27 ವರ್ಷದ ವಿಜಯ್ ಕುಮಾರ್ ಮಹತೋ...

ಅನಿವಾಸಿ ಕನ್ನಡಿಗ ಝಕರಿಯಾ ಜೋಕಟ್ಟೆ ಅವರಿಗೆ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ

ರಾಜ್ಯ ಸರಕಾರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕೊಡಮಾಡುವ 2025-26ನೇ ಸಾಲಿನ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪ್ರಕಟವಾಗಿದ್ದು, ಸೌದಿ ಅರೇಬಿಯಾ ಜುಬೈಲ್‌ನ ಅಲ್ ಮುಝೈನ್ ಕಂಪೆನಿ ಸಂಸ್ಥಾಪಕ ಹಾಗೂ ಮಂಗಳೂರಿನ ಪ್ರತಿಷ್ಠಿತ ಸಂಸ್ಥೆ...

ಸುಡಾನ್‌ | ಆರ್‌ಎಸ್‌ಎಫ್‌ನಿಂದ ಭೀಕರ ನರಮೇಧ: ಮೂರು ದಿನಗಳಲ್ಲಿ 1,500ಕ್ಕೂ ಹೆಚ್ಚು ಮಂದಿ ಹತ್ಯೆ

ಸುಡಾನ್‌ ದೇಶದ ಉತ್ತರ ದಾರ್ಫರ್ ರಾಜ್ಯದ ರಾಜಧಾನಿ ಅಲ್- ಫಾಶೆರ್‌ ಅನ್ನು ವಶಪಡಿಸಿಕೊಂಡ ಬಳಿಕ, ಕಳೆದ ಮೂರು ದಿನಗಳಲ್ಲಿ ಅರೆ ಸೈನಿಕ ಪಡೆ ರ‍್ಯಾಪಿಡ್ ಸಪೋರ್ಟ್ ಫೋರ್ಸಸ್ (ಆರ್‌ಎಸ್‌ಎಫ್) ಕನಿಷ್ಠ 1,500 ಜನರನ್ನು...

ತಾಲಿಬಾನ್ ಆಡಳಿತವನ್ನು ನಾಶಗೊಳಿಸುತ್ತೇವೆ: ಪಾಕಿಸ್ತಾನ ಎಚ್ಚರಿಕೆ

ಇಸ್ತಾಂಬುಲ್‌ನಲ್ಲಿ ನಡೆದ ಶಾಂತಿ ಮಾತುಕತೆ ವಿಫಲಗೊಂಡ ಬೆನ್ನಲ್ಲೇ ಪಾಕಿಸ್ತಾನವು ಅಫ್ಘಾನಿಸ್ತಾನದ ತಾಲಿಬಾನ್ ಆಡಳಿತಕ್ಕೆ ಕಠಿಣ ಎಚ್ಚರಿಕೆಯನ್ನು ನೀಡಿದೆ. ಪಾಕಿಸ್ತಾನದ ರಕ್ಷಣಾ ಸಾಮರ್ಥ್ಯವನ್ನು ಒತ್ತಿಹೇಳಿದ ರಕ್ಷಣಾ ಸಚಿವ ಖವಾಜಾ ಆಸಿಫ್, “ನಮ್ಮ ಸಂಪೂರ್ಣ ಶಸ್ತ್ರಾಗಾರದ...

ಆರು ವರ್ಷಗಳ ಬಳಿಕ ಟ್ರಂಪ್–ಕ್ಸಿ ಜಿನ್‌ಪಿಂಗ್ ಭೇಟಿ: ದಕ್ಷಿಣ ಕೊರಿಯಾದ ಎಪಿಇಸಿ ಶೃಂಗಸಭೆಯಲ್ಲಿ ಭಾಗಿ

ಆರು ವರ್ಷಗಳ ಬಳಿಕ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹಾಗೂ ಚೀನಾದ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಗುರುವಾರ ದಕ್ಷಿಣ ಕೊರಿಯಾದಲ್ಲಿ ನಡೆಯುತ್ತಿರುವ ಏಪೆಕ್ ಶೃಂಗಸಭೆಯ ಸಂದರ್ಭದಲ್ಲಿ ಮುಖಾಮುಖಿಯಾಗಿದ್ದಾರೆ. “ನಾವು ಒಬ್ಬರನ್ನೊಬ್ಬರು ಚೆನ್ನಾಗಿ ತಿಳಿದಿದ್ದೇವೆ, ನಮ್ಮ...

ಯುಎಇ | ಮೊದಲ ಬಾರಿ 240₹ ಕೋಟಿ ಮೌಲ್ಯದ ‘ಯುಎಇ ಲಾಟರಿ’ ಗೆದ್ದ ಭಾರತೀಯ ಯುವಕ

ಅಬುಧಾಬಿಯಲ್ಲಿ ಉದ್ಯೋಗದಲ್ಲಿರುವ 29 ವರ್ಷದ ಭಾರತೀಯ ಯುವಕ ಅನಿಲ್ ಕುಮಾರ್ ಬೊಲ್ಲ ಮೊದಲ ಬಾರಿ 240 ಕೋಟಿ ಮೌಲ್ಯದ 100 ಮಿಲಿಯನ್ ಯುಎಇ ಲಾಟರಿ ಜಾಕ್‌ಪಾಟ್ ಗೆದ್ದಿದ್ದಾನೆ. ಲಾಟರಿಯೊಂದರಲ್ಲಿ ಇಷ್ಟು ದೊಡ್ಡ ಪ್ರಮಾಣದ ಮೊತ್ತ...

7 ಯುದ್ಧ ವಿಮಾನಗಳನ್ನು ಹೊಡೆದುರುಳಿಸಲಾಗಿತ್ತು; ಮತ್ತೆ ಭಾರತ – ಪಾಕ್‌ ಯುದ್ಧ ನಿಲ್ಲಿಸಿದ್ದು ನಾನೇ ಎಂದ ಟ್ರಂಪ್

ಭಾರತ-ಪಾಕಿಸ್ತಾನ ಸಂಘರ್ಷದ ಸಮಯದಲ್ಲಿ "ಏಳು ಹೊಚ್ಚ ಹೊಸ" ವಿಮಾನಗಳನ್ನು ಹೊಡೆದುರುಳಿಸಲಾಗಿತ್ತು ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ. ಆದರೆ ಆ ವಿಮಾನಗಳು ಯಾವ ದೇಶಕ್ಕೆ ಸೇರಿದವು ಎಂಬುದನ್ನು ಅವರು ದೃಢಪಡಿಸಿಲ್ಲ. ಆದರೆ...

ಪುಟ್ಟ ವೆನೆಜುವೆಲಾ ಮೇಲೆ ದೈತ್ಯರ ದಾಳಿ: ಕೊಕೇನ್‌ಗಾಗಿಯಲ್ಲ, ಕ್ರೂಡ್ ಆಯಿಲ್‌ಗಾಗಿ!

ಅಮೆರಿಕ ಟ್ರಂಪ್ ಮತ್ತು ಮಾಧ್ಯಮಗಳು ವೆನೆಜುವೆಲಾ ಎಂದರೆ, ಡ್ರಗ್ ಕ್ಯಾಪಿಟಲ್ ಎಂದು ಬ್ರಾಂಡ್ ಮಾಡಿ, ಅಧ್ಯಕ್ಷ ಮದುರೋರನ್ನು ನಾರ್ಕೋಟೆರರಿಸ್ಟ್ ಎಂದು ಕರೆದು ಯುದ್ಧಕ್ಕೆ ಸಜ್ಜಾಗಿವೆ. ಅಸಲಿಗೆ, ಇದು ಕೊಕೇನ್‌ ನಿಯಂತ್ರಣಕ್ಕಾಗಿಯಲ್ಲ, ಕ್ರೂಡ್ ಆಯಿಲ್...

ಬ್ರೆಜಿಲ್‌ | ಡ್ರಗ್‌ ಮಾಫಿಯಾ ಗ್ಯಾಂಗ್‌ ವಿರುದ್ಧ ಪೊಲೀಸ್ ಕಾರ್ಯಾಚರಣೆ; 64 ಮಂದಿ ಸಾವು

ಬ್ರೆಜಿಲ್‌ನ ಇತಿಹಾಸದಲ್ಲೇ ಅತಿದೊಡ್ಡ ಡ್ರಗ್ ವಿರೋಧಿ ಕಾರ್ಯಾಚರಣೆಯೊಂದರಲ್ಲಿ ರಿಯೊ ಡಿ ಜನೈರೊದ ಉತ್ತರ ಭಾಗದ ಅಲೆಮಾವೊ ಮತ್ತು ಪೆನ್ಹಾ ಪ್ರದೇಶಗಳಲ್ಲಿ ನಡೆದ ಘರ್ಷಣೆಯಲ್ಲಿ ಕನಿಷ್ಠ 64 ಜನರು ಮೃತಪಟ್ಟಿದ್ದಾರೆ, ಇದರಲ್ಲಿ ನಾಲ್ಕು ಪೊಲೀಸ್...

ಗಾಜಾದಲ್ಲಿ ಶಾಂತಿ ಒಪ್ಪಂದ ಉಲ್ಲಂಘನೆ: ಇಸ್ರೇಲ್‌ನ ವೈಮಾನಿಕ ದಾಳಿಯಲ್ಲಿ 30 ಮಂದಿ ಸಾವು

ಅಮೆರಿಕದ ಮಧ್ಯಸ್ಥಿಕೆಯಿಂದ ಜಾರಿಯಲ್ಲಿದ್ದ ಕದನ ವಿರಾಮದ ನಡುವೆಯೂ ಮಂಗಳವಾರ ಇಸ್ರೇಲ್ ಗಾಜಾದಲ್ಲಿ ವಾಯುದಾಳಿ ನಡೆಸಿದೆ ಎಂದು ಗಾಜಾದ ನಾಗರಿಕ ರಕ್ಷಣಾ ಇಲಾಖೆ ತಿಳಿಸಿದೆ. ಈ ದಾಳಿಯಲ್ಲಿ ಕನಿಷ್ಠ 30 ಮಂದಿ ಸಾವನ್ನಪ್ಪಿದ್ದಾರೆ. ಹಮಾಸ್‌ನಿಂದ ಇಸ್ರೇಲ್...

ಕೆನ್ಯಾ | ವಿಮಾನ ಅಪಘಾತ: 10 ವಿದೇಶಿಯರು ಸೇರಿ 11 ಮಂದಿ ಸಾವು

ವಿಮಾನ ಅಪಘಾತ ಸಂಭವಿಸಿ 10 ವಿದೇಶಿಯರು ಸೇರಿದಂತೆ ಒಟ್ಟು 11 ಮಂದಿ ಸಾವನ್ನಪ್ಪಿರುವ ಘಟನೆ ಮಂಗಳವಾರ ಮುಂಜಾನೆ ಕೆನ್ಯಾದ ಮಸಾಯಿ ಮಾರಾ ರಾಷ್ಟ್ರೀಯ ಅಭಯಾರಣ್ಯಕ್ಕೆ ಹೋಗುವ ಮಾರ್ಗದಲ್ಲಿ ಸಂಭವಿಸಿದೆ. ಎಂಟು ಹಂಗೇರಿಯನ್ ಮತ್ತು ಇಬ್ಬರು...

ಈ ಹೊತ್ತಿನ ಪ್ರಮುಖ ಸುದ್ದಿ